ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ತಮ್ಮ ಮಲವ ತಾವು ಮುಟ್ಟವು ಆವ ಜಾತಿಯು. ತ್ರಿವಿಧ ಮಲಕ್ಕೆ ಹೊರಗಾಗಿ ಮತ್ತೆ ಮಲತ್ರಯಕ್ಕೆ ಬೀಳುವ ಮಲಭಾಂಡದೇಹಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಒಲವರವಿಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ತಾನೆಂದಲ್ಲಿ ಓಯೆಂದುದದೇನೊ! ಎಂದ ಸಂಕಲ್ಪವೆಲ್ಲಿಯಡಗಿತ್ತೊ! ತಾನೆಂದು ಜಡವಿಡಿದ ಭೂತಪ್ರಾಣಿಗಳಿಗೆ ಲಿಂಗವೆಲ್ಲಿಯದೊ? ಪೂಜಿಸಿ ಪೂಜಿಸಿ ಗತಿಗೆಟ್ಟರೆಲ್ಲರು. ಗತಿಗೆಡದಲ್ಲಿಯೇ ಅಡಗಿತ್ತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ತೋರದೆ ತೋರಿದ ನೆಳಲಿನ ಬಿಂದುವ ನುಂಗಿ ಬಾರದ ಬಯಲುವ ಕೂಡಿದ ಕಾರಣವೇನೊ? ಬಂದುದ ಅಳಿದುದರಂದವ ಬಿಂದು ತಾನರಿಯದು. ಅದು ಭೂತಪ್ರಭೆಯಲ್ಲಿ ನಿಃಪತಿಯೆಂಬುದರಿಯ ಬಂದು, ಆಶ್ರಯವಿಲ್ಲದೆ ನಿಂದುದು ನಿರವಯವು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ!
--------------
ಘಟ್ಟಿವಾಳಯ್ಯ
ತನ್ನಿಂದ ಬಿಟ್ಟು ಗುರುವಿಲ್ಲ, ತನ್ನಿಂದ ಬಿಟ್ಟು ಲಿಂಗವಿಲ್ಲ, ತನ್ನಿಂದ ಬಿಟ್ಟು ಜಂಗಮವಿಲ್ಲ, ತನ್ನಿಂದ ಬಿಟ್ಟು ಪ್ರಸಾದವಿಲ್ಲ, ತನ್ನಿಂದ ಬಿಟ್ಟು ಪಾದೋಕವಿಲ್ಲ, ತನ್ನಿಂದ ಬಿಟ್ಟು ಪರವಿಲ್ಲ, ತನ್ನಿಂದ ಬಿಟ್ಟು ಇನ್ನೇನೂ ಇಲ್ಲ. ಅನಾದಿಯೊಳಗಿಲ್ಲ, ಭೇದಾಭೇದದೊಳಗಿಲ್ಲ, ಅದು ಇದು ಎಂಬುದಿಲ್ಲ, ಇದಿರೆಂಬ ಬಯಕೆಯಿಲ್ಲ, ಆದ್ಯರ ಸಂಗವು ಇಲ್ಲ. ಸುರಾಳ ನಿರಾಳವೆಂಬವು ತಾನೆ, ತಾನೆ ಪರವಸ್ತುವೆಂಬುದಕ್ಕೆ ಮುನ್ನವೆಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ತನು ತನ್ನ ಕಾಣದು, ಮನ ತನ್ನನರಿಯದು. ಏನಯ್ಯ ತನು ಕೆಟ್ಟು ಮನ ನಷ್ಟವಾಯಿತ್ತು. ಅನಾಗತವೆಂದಡೆ ಅನಾಹತವಾಯಿತ್ತು. ಜೀವರಾಶಿಗಳೆಲ್ಲಾ ನಡೆಗೆಟ್ಟುಹೋದವು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಇಲ್ಲೆಂಬೆನು.
--------------
ಘಟ್ಟಿವಾಳಯ್ಯ
ತಪವೆಂಬುದು ಬಂಧನ. ನೇಮವೆಂಬುದು ತಗಹು. ಶೀಲವೆಂಬುದು ಸೂತಕ. ಕಟ್ಟಿನ ವ್ರತದ ಭಾಷೆಯೆಂಬುದು ನಗೆಗೆಡೆಯಾಯಿತ್ತು ನೋಡಾ! ನಗೆಹೊಗೆವಣ್ಣಿದಲ್ಲಿ ಹೊಗೆ ಜಗವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು! ಮಾಣು!
--------------
ಘಟ್ಟಿವಾಳಯ್ಯ