ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಸವ ಮಾಡಿಹನೆಂದು ಬಾಯಲ್ಲಿ ಬಸಿವ ಲೊಳೆಯನರಿಯದೆ ಎಸಕದಿಂದ ಮಾಡುವ ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಬಂಧವಿಲ್ಲದ ಭಾವವಿಲ್ಲದ ಸಂದಿಲ್ಲದ ಸಮರಸವಿಲ್ಲದ, ಸಾಧ್ಯವಿಲ್ಲದ ಭೇದ್ಯವಿಲ್ಲದ ಬೆಳಗಾದಿ ಬೆಳಗುಗಳೇನೊ ಇಲ್ಲದ, ಉಳಿದ ಉಳುಮೆಯೆಂಬ ಹುಟ್ಟು ಹೊಂದಿಲ್ಲದ ನಿರಾಳಸುರಾಳವಿಲ್ಲದ ಇವೇನೂ ಏನೂ ಇಲ್ಲದ ಏಕೋಭರಿತ ತಾನೆಯಾಯಿತ್ತಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು.
--------------
ಘಟ್ಟಿವಾಳಯ್ಯ
ಬಯಲೊಳಗುಣ ಬಯಲು ನಿರ್ವಯಲ ನುಂಗಿತ್ತು. ಬಯಲ ಬಯಲ ನಿರ್ವಯಲು; ಮಹಾಬಯಲೊಳಗೆ ಬಯಲಾಗಿ ನಿರವಯಲಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಬಾಯಕ್ಕಿಯ ಬೇಡುವರೆಲ್ಲರು ಬಡಪಾಯಿವಂತರ ನೋವ ಬಲ್ಲರೆ? ಹಿಡಿದ ವಿಹಂಗೆ ಪಶುವಿನ ನೋವ ಬಲ್ಲದೆ? ಇಂತೀ ದೆಸೆಯ ಕಂಡು ನಾನಂಜಿದೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ