ಉಪ್ಪು ಉದಕವ ಬೆರೆಸಿದಂತೆ
ವಾರಿಕಲ್ಲು ವಾರಿಯ ಬೆರಸಿದಂತೆ
ಕರ್ಪೂರ ಅಗ್ನಿಯ ಬೆರಸಿದಂತೆ
ಮನ ಲಿಂಗದಲ್ಲಿ ಲೀಯವಾಗಿಹುದೆ ಭಾವಲಿಂಗದ ಪೂಜೆ.
ಇದಕ್ಕೆ ಈಶ್ವರೋýವಾಚ :
``ಮನೋಲಯ ನಿರಂಜನ್ಯಂ ಭಾವಲಿಂಗಸ್ಯ ಪೂಜನಂ |
ಯತ್ತೇ ಲಿಂಗಾರ್ಚನಂ ಜ್ಞಾದ್ವಿಶೇಷಂ ಶ್ರುಣು ಪಾರ್ವತಿ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.