ಓ ಪದದಿಂದ ಪ್ರಾರಂಭವಾಗುವ ವಚನಗಳು:
ಓಂಕಾರವೆಂಬ ಬಾವಿಯೊಳಗೆ ಒಂದು ಮರ ಹುಟ್ಟಿತ್ತು ನೋಡಾ.ಆ ಮರಕ್ಕೆ ಮೂರೇಳು ಸಾವಿರದರುನೂರು ಕೊಂಬೆಗಳಾದವು ನೋಡಾ.ಏಳುಸಾವಿರದಿನ್ನೂರು ಕೊಂಬೆ ಮುರಿದು ಬಿದ್ದವು ನೋಡಾ.ಪೃಥ್ವಿ ಜಲದಲ್ಲಿ ಮುದ್ದೆಯಾಯಿತ್ತು ;ಆ ಹಣ್ಣ ಸವಿಯಬಲ್ಲಾತನು ಮಹಾಶರಣ ನೋಡಾಅಪ್ರಮಾಣಕೂಡಲಸಂಗಮದೇವಾ.
ಓಂಕಾರವೇ ಪೀಠ, ಅಕಾರವೇ ಕಂಠ,ಉಕಾರವೆ ಮೇಗಣಪೀಠವಾಗಿ,ಆ ಮೇಗಣಪೀಠದ ಮೇಲಿಹ ಬಟುವೇ ಮಕಾರ,ಆ ಬಟುವಿನೊಳಗಣ ಗುಣಿಯ ಬಿಂದು,ಆ ಬಿಂದುವಿನೊಳಗಣ ನಾದವೆ ಲಿಂಗವಾಗಿ ಅರ್ಚಿಸುವುದುನಿರಾಧಾರಯೋಗ ನೋಡಾಅಪ್ರಮಾಣಕೂಡಲಸಂಗಮದೇವಾ.
ಓಂಕಾರದ ಪೀಠದ ಮೇಲೆನಿಶ್ಶಬ್ದವೆಂಬ ಲಿಂಗವ ನೆಲೆಗೊಳಿಸಿ,ನಿರಾಮಯದಲ್ಲಿ ನಿಂದುನಿರಾಳನಾಗಿಹುದೇ ನಿರಾಧಾರಪೂಜೆ ನೋಡಾಅಪ್ರಮಾಣಕೂಡಲಸಂಗಮದೇವಾ.