ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿರಂಜನಾತೀತಷಟ್‍ಸ್ಥಲಬ್ರಹ್ಮ ಅಂಗವಾಗಿ ಆ ನಿರಂಜನಾತೀತ ಷಟ್‍ಸ್ಥಲಬ್ರಹ್ಮವನೊಡಗೂಡಿದ ಮಹಾಶರಣಂಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ. || 661 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿವೈತ್ತಿ ಕಲೆ ಪ್ರತಿಷ್ಠಾಕಲೆ ತಾನಿರ್ದಲ್ಲಿ, ವಿದ್ಯಾಕಲೆ ಶಾಂತಿಕಲೆ ತಾನಿರ್ದಲ್ಲಿ, ಶಾಂತ್ಯತೀತಕಲೆ ಶಾಂತ್ಯತೀತೋತ್ತರಕಲೆ ತಾನಿರ್ದಲ್ಲಿ, ಕರ್ಮಸಾದಾಖ್ಯ ಕರ್ತೃಸಾದಾಖ್ಯ ತಾನಿರ್ದಲ್ಲಿ, ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯ ತಾನಿರ್ದಲ್ಲಿ , ಶಿವಸಾದಾಖ್ಯ ತಾನಿರ್ದಲ್ಲಿ, ಮಹಾಸಾದಾಖ್ಯ ತಾನಿರ್ದಲ್ಲಿ . ಇವೆಲ್ಲಾ ತನ್ನ ಮೂರ್ತಿಯಿಂದಾದುದಲ್ಲದೆ ಮತ್ತೊಂದು ಮೂರ್ತಿಯಿಂದಾದುದಿಲ್ಲ. ತಾನೆ ಶಿವತತ್ವ ತಾನೆ ಪರತತ್ವ ತಾನೆ ಪರಾತ್ಪರತತ್ವ ತನ್ನಿಂದದ್ಥಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಲಂಬ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನವಮಾಸಕ್ಕೆ ಶ್ರೋತ್ರಾದಿಗಳೈದು, ಶಬ್ದಾದಿಗಳೈದು, ಮಂಡಲಮೂರು, ಗುಣಮೂರು, ವ್ಯಾದ್ಥಿಮೂರು, ಈಷಣಮೂರು, ನಾಡಿಹತ್ತು, ವಾಯುಹದಿನಾಲ್ಕು, ಕ್ಲೇಷಂಗಳೈದು, ಧಾತುಗಳೇಳು, ಮದವೆಂಟು, ಸುಖದುಃಖಂಗಳೆರಡು, ಎಪ್ಪತ್ತೆರಡುಸಾವಿರ ನಾಡಿಗಳು, ಎಂಬತ್ತೆಂಟುಕೋಟಿ ರೋಮದ್ವಾರಂಗಳು, ಎಂಬತ್ನಾಲ್ಕುನೂರುಸಾವಿರ ಸಂದುಗಳು, ಇಪ್ಪತ್ತೊಂದುಸಾವಿರದಾರುನೂರು ಶ್ವಾಸಂಗಳು, ಮೂವತ್ತೆರಡು ಲಕ್ಷಣಂಗಳು, ಐವತ್ತಾರಕ್ಷರಂಗಳು, ಅರುವತ್ನಾಲ್ಕು ಕಲೆ, ಜ್ಞಾನಂಗಳು ಕೂಡಿ ಸುಜ್ಞಾನಸಂಪನ್ನನಾಗಿ ಪೂರ್ವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರ ಜನ್ಮದಲ್ಲಿ ಬಂದ ಜನ್ಮವ ವಿವೇಕಿಸುತ್ತಿಹುದು ನೋಡಾ. ಅದೆಂತೆಂದಡೆ: ಮಾನವಜನ್ಮ ಒಂಬತ್ತುಸಾವಿರ ಜನ್ಮ. ಉರುವ ಜೀವಜನ್ಮ ಹನ್ನೊಂದುಸಾವಿರಜನ್ಮ. ಜಲಚರ ಜೀವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರಜನ್ಮದಲ್ಲಿ ಹತ್ತುಸಾವಿರ ಜನ್ಮ. ಹಾರುವ ಪಕ್ಷಿಗಳ ಜೀವಜನ್ಮದಲ್ಲಿ ಹತ್ತುಸಾವಿರಜನ್ಮ. ಚತುಷ್ಪಾದಜೀವರಾಶಿಗಳ ಜನ್ಮದಲ್ಲಿ ಹತ್ತುಸಾವಿರಜನ್ಮ. ದೈತ್ಯ ಜೀವಜನ್ಮದಲ್ಲಿ ಹದಿನಾರುಸಾವಿರಜನ್ಮ. ಸ್ಥಾವರಂಗಳ ಜನ್ಮದಲ್ಲಿ ಹದಿನೆಂಟುಸಾವಿರಜನ್ಮ. ಇಂತು ಎಂಬತ್ನಾಲ್ಕುನೂರುಜನ್ಮ ಅಂಡಜ ಸ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ಯೋನಿಯಲ್ಲಿ ಜನಿಸಿದನು. ಇನ್ನು ಹುಟ್ಟಿದಾಕ್ಷಣದಲ್ಲಿಯೆ ಮರಣ, ಮರಣದಾಕ್ಷಣದಲ್ಲಿಯೇ ಜನನವೆಂದರಿದು ಸ್ಮರಿಸುತ್ತಿಹುದು ನೋಡಾ. ಇದಕ್ಕೆ ಈಶ್ವರ ಉವಾಚ : ``ಮಾಸೇಕಂ ನವಮೇ ಪ್ರಾಪ್ತೇ ಗರ್ಭೇತ ತತ್‍ಸ್ಮರತಿ ಸ್ವಯಂ | ಮೃತಸ್ಯಾಹಂ ಪುನರ್ಜಾತಃ ಜಾತಸ್ಯಾಹಂ ಮೃತಃ ಪುನಃ | ನಾನಾಯೋನಿಸಹಸ್ರೇಷು ಮಯಾ ದೃಷ್ಟಮನೇಕಶಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಜಾಗ್ರದಲ್ಲಿನಿಂದಡೆ ಭಕ್ತನೆಂಬೆ. ನಿರಂಜನಸ್ವಪ್ನದಲ್ಲಿನಿಂದಡೆ ಮಹೇಶ್ವರನೆಂಬೆ ನಿರಂಜನಸುಷುಪ್ತಿಯಲ್ಲಿ ನಿಂದಡೆ ಪ್ರಸಾದಿಯೆಂಬೆ. ನಿರಂಜನತೂರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ. ನಿರಂಜನವ್ಯೋಮದಲ್ಲಿ ನಿಂದಡೆ ಶರಣನೆಂಬೆ. ನಿರಂಜನವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ. ನಿರಂಜನವ್ಯೋಮಾತೀತಕತ್ತತ್ತವಾಗಿಹ ಮಹಾಘನ ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವಹಿಂಗಿತ್ತಾಗಿ, ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾದ ಬಿಂದು ಸಾದಾಖ್ಯ ಈಶ್ವರ ಇಂಬಾಗಿ ನಿಂದು, ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು, ವಾಯು ಹತ್ತು, ಪುರುಷನೊಬ್ಬ- ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು ದರ್ಶನವಂ ಮಾಡುವುದು ಪರಮಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾಮರೂಪಕ್ರಿಯಾತ್ಮಕವಾಗಿಹ ಪರವಸ್ತುಲಿಂಗ ತಾನೆ ತನ್ನ ಲೀಲಾವಿನೋದಕ್ಕೆ ಅಂಗಸ್ಥಲದಲ್ಲಿ ನಾಮ-ರೂಪ-ಕ್ರಿಯಾತ್ಮನಾಗಿ ಪ್ರತಿಷ್ಠಿಸಲುಪಟ್ಟುದಾಗಿ ಎಲ್ಲಾ ಮುಖಂಗಳೂ ತನ್ನ ಮುಖಂಗಳುಳ್ಳದಾಗಿ ತೋರುತ್ತಿಹುದು ನೋಡಾ. ಇದಕ್ಕೆ ಶಿವಲಿಂಗಾಗಮೇ : ``ಏಕಮೇವ ಪರಂ ಲಿಂಗಂ ಅಂಗ್ದೇಸ್ಮಿನ್ ಸುಪ್ರತಿಷ್ಠಿತಂ | ಸರ್ವತೋ ಮುಖಮಾಭಾತಿ ನಾಮರೂಪಕ್ರಿಯಾತ್ಮನಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಭಕ್ತ, ನಿರಾಮಯ ಮಹೇಶ್ವರ, ನಿರಾಮಯ ಪ್ರಸಾದಿ, ನಿರಾಮಯ ಪ್ರಾಣಲಿಂಗಿ, ನಿರಾಮಯ ಶರಣ, ನಿರಾಮಯ ಐಕ್ಯನೆಂದು ಆರು ಪ್ರಕಾರವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರ್ಮಲಜಾಗ್ರ ನಿರ್ಮಲಸ್ವಪ್ನವಿಲ್ಲದಂದು, ನಿರ್ಮಲಸುಷುಪ್ತಿ ನಿರ್ಮಲತೂರ್ಯವಿಲ್ಲದಂದು, ನಿರ್ಮಲವ್ಯೋಮ ನಿರ್ಮಲವ್ಯೋಮಾತೀತವಿಲ್ಲದಂದು ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಾತೀತಐಕ್ಯಂಗೆ ನಿರಂಜನಾತೀತವೇ ಅಂಗ, ನಿರಂಜನಾತೀತವೇ ಹಸ್ತ, ನಿರಂಜನಾತೀತವೆ ಮಹಾಲಿಂಗ. ನಿರಂಜನಾತೀತವೆಂಬ ಮುಖದಲ್ಲಿ ನಿರಂಜನಾತೀತಾನಂದವೆಂಬ ಸುಖವ ಸಮರ್ಪಣಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಐಕ್ಯಂಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಮಹಾಲಿಂಗ, ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವನು ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ. ಭೋಗಿಸಿ ನಿರಾಮಯಾತೀತವೆಂಬ ನಿರ್ವಯಲನೈದಿದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿ ಹುಟ್ಟಿದಳು. ಆ ಚಿತ್‍ಶಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಹುಟ್ಟಿದಳು. ಆ ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಹುಟ್ಟಿದಳು. ಆ ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಹುಟ್ಟಿದಳು. ಆ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಹುಟ್ಟಿದಳು. ಆ ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಹುಟ್ಟಿದಳು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಚಿಂತಾಶಕ್ತಿಸಹಸ್ರಾಂಶೇ ಚಿಚ್ಛಕ್ತಿಶ್ಚ ಸಮುದ್ಭವಃ | ಚಿಚ್ಛಕ್ತಿಶ್ಚ ಸಹಸ್ರಾಂಶೇ ಪರಶಕ್ತಿಶ್ಚ ಸಮುದ್ಭವಃ || ಪರಶಕ್ತಿ ಸಹಸ್ರಾಂಶೇ ಆದಿಶಕ್ತಿ ಸಮುದ್ಭವಾಃ | ಆದಿಶಕ್ತಿಶ್ಚ ಸಹಸ್ರಾಂಶೇ ಇಚ್ಛಾಶಕ್ತಿ ಸಮುದ್ಭವಃ | ಇಚ್ಛಾಶಕ್ತಿ ಸಹಸ್ರಾಂಶೇ ಜ್ಞಾನಶಕ್ತಿಶ್ಚ ಸಮುದ್ಭವಃ | ಏಕೈಕಂ ಪ್ರಣವಾಖ್ಯಾತಂ ಏಕೈಕಂ ಕುಸುಮಾಹಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನ ಪ್ರಣವದ ನೆನಹುಮಾತ್ರದಿಂದ ಅವಾಚ್ಯ ಪ್ರಣವದುತ್ಪತ್ಯವಾಯಿತ್ತು. ಇನ್ನು ಅವಾಚ್ಯ ಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ : ``ಸತ್ಯಂ ಜ್ಞಾನಮನಂತಂ ಬ್ರಹ್ಮ ಏಕಮೇವ ನ ದ್ವಿತೀಯಂ ಬ್ರಹ್ಮಂ'' ಎಂಬ ಪರಬ್ರಹ್ಮವಿಲ್ಲದಂದು, ``ಏಕಏವೋ ರುದ್ರೋ ಮಹೇಶ್ವರಃ'' ಎಂಬ ಮಹೇಶ್ವರತತ್ವವಿಲ್ಲದಂದು, ವಿಶ್ವರೂಪರುದ್ರ ವಿಶ್ವಾದ್ಥಿಕಮಹಾರುದ್ರರಿಲ್ಲದಂದು, ಕೋಟಿ ಶತಕೋಟಿ ಸಾವಿರ ಜಡೆಮುಡಿ ಗಂಗೆ ಗೌರಿಯರಿಲ್ಲದಂದು, ಕೋಟಾನುಕೋಟಿ ಕಾಲರುದ್ರರಿಲ್ಲದಂದು, ಅಸಂಖ್ಯಾತ ಪ್ರಳಯ ಕಾಲರುದ್ರರಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಪ್ರಸಾದಿಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಶಿವಲಿಂಗ. ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಳಜಾಗ್ರ ನಿರಾಳಸ್ವಪ್ನವಿಲ್ಲದತ್ತತ್ತ , ನಿರಾಳಸುಷುಪ್ತಿ ನಿರಾಳತೂರ್ಯವಿಲ್ಲದತ್ತತ್ತ , ನಿರಾಳವ್ಯೋಮ ನಿರಾಳವ್ಯೋಮಾತೀತವಿಲ್ಲದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾದ ಬಿಂದು ಸಾದಾಖ್ಯ ಇಂಬಾಗಿ ನಿಂದು ಪುರುಷನನು, ಪ್ರಾಣವಾಯುವನು, ಚಿತ್ತವನು ಹೃದಯಸ್ಥಾನದಲ್ಲಿ ದರ್ಶನವಂ ಮಾಡುವುದು ಪರಮಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಆಚಾರಲಿಂಗಸಂಬಂಧಿಯೆಂಬೆ ? ಮಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಗುರುಲಿಂಗಸಂಬಂಧಿಯೆಂಬೆ ? ಶಿಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಶಿವಲಿಂಗಸಂಬಂಧಿಯೆಂಬೆ ? ವಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಜಂಗಮಲಿಂಗಸಂಬಂಧಿಯೆಂಬೆ ? ಯಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಪ್ರಸಾದಲಿಂಗಸಂಬಂಧಿಯೆಂಬೆ ? ಓಂಕಾರದೊಳಗೆ ಐವತ್ತೊಂದಕ್ಷರವನರಿಯದೆ ? ಎಂತು ಮಹಾಲಿಂಗಸಂಬಂಧಿಯೆಂಬೆ ? ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀರಿ ನಿರ್ವಯಲನರಿಯದೆ, ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಶರಣಂಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಪ್ರಸಾದಲಿಂಗ, ನಿರಾಮಯವೆಂಬ ಮುಖದಲ್ಲಿ, ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಪ್ರಾಣಲಿಂಗಿಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಜಂಗಮಲಿಂಗ. ನಿರಾಮಯವೆಂಬ ಮುಖದಲ್ಲಿ, ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಾತೀತ ಮಹೇಶ್ವರಂಗೆ ನಿರಂಜನಾತೀತವೇ ಅಂಗ, ನಿರಂಜನಾತೀತವೆ ಹಸ್ತ, ನಿರಂಜನಾತೀತವೆ ಗುರುಲಿಂಗ. ನಿರಂಜನಾತೀತವೆಂಬ ಮುಖದಲ್ಲಿ, ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ. || 656 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಳ ಷಡುಚಕ್ರಂಗಳ ಮೇಲೆ ನಾಲ್ಕು ಚಕ್ರಂಗಳುಂಟು. ಆ ಚಕ್ರಂಗಳು ಗೋಪ್ಯಕ್ಕೂ ಅತ್ಯಂತ ಗೋಪ್ಯ, ಸೂಕ್ಷ್ಮಕ್ಕೂ ಅತ್ಯಂತ ಸೂಕ್ಷ್ಮ, ಶೂನ್ಯಕ್ಕೂ ಅತ್ಯಂತ ಶೂನ್ಯ, ಅಮಲಕ್ಕೂ ಅಮಲಾತೀತವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾಡಿಧಾರಣ ವಾಯುಧಾರಣ ಅಗ್ನಿಧಾರಣ ಅಮೃತಧಾರಣ ಆಧಾರಧಾರಣ ನಿರಾಧಾರಧಾರಣ ಷಷಿ*ಧಾರಣವಂ ಮಾಡಿ, ಇನ್ನು ಆತ್ಮಯೋಗಿಯಾಗಿರಬಾರದೆಂದು ನಿಂದು, ತಾನೆ ತಿಳಿದು, ವಿಚಾರಿಸಿಕೊಂಡು ಅನಂತದೇಶಗಳಂ ತಿರುಗಿ ಸದ್ಗುರುಸ್ವಾಮಿಯನರಸಿ, ಅವರ ಕಾರುಣ್ಯಪಡೆವೆನೆಂದು ಬಾಹಾಗ ಸದ್ಗುರುಸ್ವಾಮಿ ಕಂಡನು. ಇದಕ್ಕೆ ಈಶ್ವರ ಉವಾಚ : ``ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪವಿಹೀನತ್ವಂ ಗುರುರಿತ್ಯಭಿಧೀಯತೇ || ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇ ದೇವಾಃ ಗುರುರೂಪೋ ಮಹೇಶ್ವರಃ || ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋ ದದ್ಯಾತ್ ಸ ಗುರುಸ್ಮೃತಃ || ಯೋ ಗುರುಃ ಸ ಶಿವಃ ಪ್ರೋಕ್ತಃ ಶಿವಸ್ಯ ಏವ ಗುರುಸ್ಮೃತಃ | ಭುಕ್ತಿಮುಕ್ತಿಪ್ರದಾತಾ ಚ ಮಮರೂಪೋ ಮಹೇಶ್ವರಃ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ : ``ಪರಶಿವೋ ಗುರೋಮೂರ್ತಿ ಶಿಷ್ಯದೀಕ್ಷಾದಿಕಾರಣಾತ್ |'' ಇಂತೆಂದುದಾಗಿ, ಪರಶಿವ ತಾನೇ ಗುರುವಾಗಿ ಬಂದನಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಮಯ ಮಹೇಶ್ವರಂಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಗುರುಲಿಂಗ, ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ, ತೃಪ್ತಿಯ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಪ್ರಣವ ಅವಾಚ್ಯಪ್ರಣವ ಉತ್ಪತ್ಯವಾಗದತ್ತತ್ತ , ಕಲಾಪ್ರಣವ ಅನಾದಿಪ್ರಣವ ಉತ್ಪತ್ಯವಾಗದತ್ತತ್ತ , ಅಕಾರ ಉಕಾರ ಮಕಾರವೆಂಬ ಬೀಜ ಉತ್ಪತ್ಯವಾಗದತ್ತತ್ತ , ನಾದ ಬಿಂದು ಕಳೆ ಉತ್ಪತ್ಯವಾಗದತ್ತತ್ತ , ಪ್ರಕೃತಿ ಪ್ರಾಣ ಓಂಕಾರ ಉತ್ಪತ್ಯವಾಗದತ್ತತ್ತ , ಲೋಕಾದಿಲೋಕಂಗಳೇನೂ ಉತ್ಪತ್ಯವಾಗದತ್ತತ್ತ , ನಿರಂಜನಪ್ರಣವಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಪ್ರಣವದ ನೆನಹುಮಾತ್ರದಿಂದ ಅವಾಚ್ಯಪ್ರಣವ ಉತ್ಪತ್ಯವಾಯಿತ್ತು. ಇನ್ನು ಅವಾಚ್ಯಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ : ನಿರಾಳಶಾಂತ್ಯತೀತೋತ್ತರಕಲೆ, ನಿರಾಳ ಶಾಂತ್ಯತೀತ ಕಲೆಗಳಿಲ್ಲದಂದು, ನಿರಾಳಶಾಂತಿಕಲೆ ನಿರಾಳವಿದ್ಯಾಕಲೆಗಳಿಲ್ಲದಂದು, ನಿರಾಳಪ್ರತಿಷಾ*ಕಲೆ ನಿರಾಳನಿವೃತ್ತಿಕಲೆಗಳಿಲ್ಲದಂದು, ನಿರಾಳಮಹಾಸಾದಾಖ್ಯ ನಿರಾಳಮೂರ್ತಿಸಾದಾಖ್ಯವಿಲ್ಲದಂದು, ನಿರಾಳಕರ್ತೃಸಾದಾಖ್ಯ ನಿರಾಳಕರ್ಮಸಾದಾಖ್ಯವಿಲ್ಲದಂದು, ಅವಾಚ್ಯ ಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಳ ನಿರಂಜನವಿಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಅತ್ಯತಿಷ್ಟದ್ಧಶಾಂಗುಲವೆಂಬ ವಿರಾಟ್ಪುರುಷನುತ್ಪತ್ಯವಾಗದಂದು, ಮಹಾಜ್ಯೋತಿರ್ಮಯಲಿಂಗವೆಂಬ ನಾಮ ತಲೆದೋರದಂದು, ಕುಳ ನಿರಾಕುಳ ಅಪ್ರಮಾಣ ಅಗೋಚರ ವಾಚಾತೀತ ಮನೋತೀತವೆಂಬ ಶಬ್ದಸಂದಣಿ ನಾಮಸೀಮೆಗಳೇನೂ ಎನಲಿಲ್ಲದಂದು, ಬ್ರಹ್ಮ ಪರಬ್ರಹ್ಮವೆಂಬ ಭಿನ್ನನಾಮ ತಲೆದೋರದಂದು, ಅಖಂಡ ಗೋಳಕಾಕಾರಲಿಂಗ ಉತ್ಪತ್ಯವಾಗದಂದು, ಆ ಲಿಂಗದ ಪಂಚಸಂಜ್ಞೆ ತಲೆದೋರದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತದೇವರ್ಕಳಿಗೂ ಜನನಸ್ಥಲವಾದ ನಿರ್ವಾಣಪದವಿಲ್ಲದಂದು, ಶಿವಸಂಬಂಧ ಶಕ್ತಿ ಸಂಬಂಧವಾಗಿಹ ಓಂಕಾರ ಉತ್ಪತ್ಯವಾಗದಂದು, ಶಿವಶಕ್ತಿರಹಿತವಾಗಿಹ ಮಹದೋಂಕಾರ ಉತ್ಪತ್ಯವಾಗದಂದು, ಅತಿಸೂಕ್ಷ್ಮ ಪಂಚಾಕ್ಷರ, ಪ್ರಣವಪಂಚಾಕ್ಷರ ಉತ್ಪತ್ಯವಾಗದಂದು, ನಿರಂಜನಾತೀತಪ್ರಣವವಾಗಿದ್ದನಯ್ಯಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...