ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ಷುತ್ಪಿಪಾಸೆ ಶೋಕ ಮೋಹ ಜನನ ಮರಣ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಂ ಬಿಟ್ಟು ಅಷ್ಟವಿಧಾರ್ಚನೆ, ಷೋಡಶೋಪಚಾರವಿಲ್ಲದಿರುವ ಕ್ಷೀರದೊಳಗಣ ಘೃತದಂತೆ, ತಿಲದೊಳಗಣ ತೈಲದಂತೆ, ಪುಷ್ಪದೊಳಗಣ ಪರಿಮಳದಂತೆ, ಉಪ್ಪು ಉದಕವ ಕೂಡಿದಂತೆ, ವಾರಿಕಲ್ಲು ವಾರಿಯ ಕೂಡಿದಂತೆ, ಕರ್ಪುರವು ಜ್ಯೋತಿಯ ಕೂಡಿದಂತೆ, ಮನ ಲಿಂಗದಲ್ಲಿ ಲೀಯವಾಗಿಹುದೀಗ ಐಕ್ಯಸ್ಥಲ ನೋಡಾ, ಇದಕ್ಕೆ ಈಶ್ವರ್ದೋವಾಚ : ``ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಅಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಯೋಗವತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಲು ಕೈ ನಡುವೆಲ್ಲ ತಾವರೆಯ ತಂತಿನಂತೆ ಎಂಬತ್ತುನಾಲ್ಕುನೂರುಸಾವಿರ ಸಂದುಗಳ ಬಂದ್ಥಿಸಿಕೊಂಡಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ , ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಲಾಗ್ನಿಯನೆಬ್ಬಿಸಿ, ಕಮಲನಾಳದ ತುದಿಯನಡರಿ, ಕರ್ಮಂಗಳ ಸುಟ್ಟು, ಮಹಾಜ್ಯೋತಿ ಪ್ರಕಾಶದಲ್ಲಿ ಬಯಲಾದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕೃತಯುಗದಲ್ಲಿ ಅಖಂಡಾತ್ಮನೆಂಬ ಗಣೇಶ್ವರನಾಗಿದ್ದಂದು, ಸದ್ಗುರುಸ್ವಾಮಿ ತಮ್ಮ ಕೃಪಾಕಟಾಕ್ಷದೃಷ್ಟಿಯಿಂ ನೋಡಿ, ಎನ್ನ ಮಸ್ತಕದಮೇಲೆ ತಮ್ಮ ಹಸ್ತ ಕಮಲವನಿರಿಸಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂಬ ಲಿಂಗವ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷೆ*ಯ ಮಾಡಿದನಯ್ಯಾ ಎನ್ನ ಗುರು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿದ್ದಂದು ಸದ್ಗುರುಸ್ವಾಮಿ ತಮ್ಮ ಕೃಪಾಕಟಾಕ್ಷದೃಷ್ಟಿಯಿಂ ನೋಡಿ, ಎನ್ನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ `ನಿಶ್ಶಬ್ದಂ ಪರಬ್ರಹ್ಮ ಉಚ್ಯತೇ' ಎಂಬ ನಾದಬಿಂದುಕಲಾತೀತ ಲಿಂಗಮಂ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷೆ*ಯಂ ಮಾಡಿದನಯ್ಯ ಎನ್ನ ಗುರು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿದ್ದಂದು ಸದ್ಗುರುಸ್ವಾಮಿ ತಮ್ಮ ಕೃಪಾದೃಷ್ಟಿಯಿಂ ನೋಡಿ, ಎನ್ನ ಮಸ್ತಕದಮೇಲೆ ತಮ್ಮ ಹಸ್ತಕಮಲವನಿರಿಸಿ `ಓಂಕಾರೇಭ್ಯೋ ಜಗತ್ರಾಣ ಜಗತಾಂ ಪತಯೇ ನಮೋ ನಮೋ' ಎಂಬ ಪ್ರಣವಲಿಂಗವ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷೆ*ಯಂ ಮಾಡಿದನಯ್ಯ ಎನ್ನ ಗುರು. ಕಲಿಯುಗದಲ್ಲಿ ಅಪ್ರಮಾಣಗಣೇಶ್ವರನಾಗಿದ್ದಂದು ಎನ್ನ ಸದ್ಗುರುಸ್ವಾಮಿ ತಮ್ಮ ಕೃಪಾದೃಷ್ಟಿಯಿಂ ನೋಡಿ, ಎನ್ನ ಮಸ್ತಕದಮೇಲೆ ತಮ್ಮ ಹಸ್ತಕಮಲಮಂ ತಂದಿರಿಸಿ `ಅಣೋರಣೀಯಾನ್ ಮಹತೋ ಮಹೀಯಾನ್' ಎಂಬ ಅಖಂಡಪರಿಪೂರ್ಣಲಿಂಗವಂ ತೆಗೆದೆನ್ನ ಕರಸ್ಥಲದಲ್ಲಿ ಪ್ರತಿಷೆ*ಯಂ ಮಾಡಿದನಯ್ಯ ಎನ್ನ ಗುರು. ಆ ಲಿಂಗ ಸ್ಪರ್ಶನವ ಮಾಡಲು ಎನ್ನ ಸ್ಪರ್ಶನವಳಿದು ಲಿಂಗಸ್ಪರ್ಶನವಾಯಿತ್ತು. ಆ ಲಿಂಗವ ನೋಡಲು ಎನ್ನ ನೇತ್ರವಳಿದು ಲಿಂಗನೇತ್ರವಾಯಿತ್ತು. ಆ ಲಿಂಗವ ಸ್ತೋತ್ರವ ಮಾಡಲು ಎನ್ನ ಜಿಹ್ವೆಯಳಿದು ಲಿಂಗಜಿಹ್ವೆಯಾಯಿತ್ತು. ಆ ಲಿಂಗಸ್ತೋತ್ರವ ಕೇಳಲು ಎನ್ನ ಶ್ರೋತ್ರವಳಿದು ಲಿಂಗಶ್ರೋತ್ರವಾಯಿತ್ತು. ಆ ಲಿಂಗಪ್ರಸಾದವ ಘ್ರಾಣಿಸಲು ಎನ್ನ ಘ್ರಾಣವಳಿದು ಲಿಂಗಘ್ರಾಣವಾಯಿತ್ತು. ಆ ಲಿಂಗವ ನೆನನೆನದು ಎನ್ನ ಮನವಳಿದು ಮನವೆಲ್ಲ ಲಿಂಗದ ಮನವಾಯಿತ್ತು. ಎನ್ನ ಸರ್ವಾಂಗವೆಲ್ಲ ಮಹಾಲಿಂಗವಾಯಿತ್ತು. ಇನ್ನು ಮರಳಿ ಮರ್ತ್ಯಲೋಕಕ್ಕೆ ಬಂದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ