ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿನ್ನಾದ ಬಿದ್ಬಿಂದು ಚಿತ್ಕಳೆ ತಲೆದೋರದಂದು, ಪರನಾದ ಪರಬಿಂದು ಪರಕಲೆ ಇಲ್ಲದಂದು, ಅನಾದಿ ನಾದ ಅನಾದಿ ಬಿಂದು ಅನಾದಿ ಕಲೆ ತಲೆದೋರದಂದು, ಆದಿ ನಾದ ಆದಿ ಬಿಂದು ಆದಿ ಕಲೆ ಇಲ್ಲದಂದು, ನಾದ ಬಿಂದು ಕಲಾತೀತವಿಲ್ಲದಂದು, ನಿರಂಜನ ಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ ಈ ಆರು ಕಾಮಾಂಗವು ಇಚ್ಛಾಶಕ್ತಿಯೆ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಚಿತ್ತಂ ಬುದ್ಧಿರಹಂಕಾರಂ ಮನೋಜ್ಞಾನಂ ಚ ಭಾವಕಂ | ಷಡ್ಭಿಃ ಕಾಮಾಂಗದಂ ಪ್ರೋಕ್ತಂ ಇಚ್ಛಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚಿತ್ಕಲಾಪ್ರಣವ ಉಪಮಿಸಬಾರದ ಉಪಮಾತೀತವು ಮನಾತೀತವು ವರ್ಣಾತೀತವು ತತ್ವಾತೀತವು ಜ್ಞಾನಾತೀತವು. ನಿರಂಜನಕಲಾಪ್ರಣವವು ಅತ್ಯಂತ ಸೂಕ್ಷ್ಮವಾಗಿಹುದು. ಇದಕ್ಕೆ ಈಶ್ವರೋýವಾಚ : ``ವಾಚಾತೀತಂ ಮನೋýತೀತಂ ವರ್ಣಾತೀತಂ ಚ ತತ್ಪದಂ | ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮ ಭಾವಯೇತ್''|| ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚಿಚ್ಛಕ್ತಿ ಪರಾಶಕ್ತಿ ಆದಿಶಕ್ತಿ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಈ ಷಡುಶಕ್ತಿಗಳು ಸರ್ವತತ್ವಕ್ಕೂ ಕಾರಣವಾಗಿಹವು ನೋಡಾ. ಇದಕ್ಕೆ ಉತ್ತರವಾತುಲಾಗಮೇ : ``ಚಿಚ್ಛಕ್ತಿಃ ಪರಾಶಕ್ತಿ ಆದಿಶಕ್ತಿ ಸ್ತಥೈವ ಚ | ಇಚ್ಛಾಜ್ಞಾನಕ್ರಿಯಾಶಕ್ತಿ ಸರ್ವತತ್ವಂತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ