ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರಿಪುರಂಗಳ ಸಂಹಾರವ ಮಾಡಿ, ಉದಯಕ್ಕೆ ಹುಟ್ಟಿದಾತನೆ ದಿವ್ಯಯೋಗಿ. ಅಸ್ತಮಾನಕ್ಕೆ ಅಳಿದಾತನೆ ಪರಮಯೋಗಿ. ಈ ಎರಡರ ಭೇದವನರಿದು ಅನುಭಾವಿಸಬಲ್ಲಾತನೆ ಪರಮಾನಂದಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂಬ ಆರು ಸ್ಥಲವ ಮೀರಿದ ಅಖಂಡನಿರ್ವಯಲು ನೋಡಾ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಮೊದಲಾಗಿ ಆಚಾರಾದಿ ಮಹಾಲಿಂಗ ಕಡೆಯಾಗಿ ನವನಾದಬ್ರಹ್ಮಲಿಂಗವ ಮೀರಿದ ಮಹಾಘನಲಿಂಗೈಕ್ಯ ತಾನಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತೂರ್ಯಾತೀತವಾವುದು ? ನಾಭಿಸ್ಥಾನದಲ್ಲಿ ಪ್ರಾಣವಾಯು ನಿಂದು ಪುರುಷನನು ಸುಖಸ್ವರೂಪನಾಗಿ, ಆ ಸುಖಸ್ವರೂಪನಾಗಿ ಕಂಡೆನೆಂಬುದು ಕೆಟ್ಟು ಮೂಲಾಧಾರದಲ್ಲಿಹುದು ತೂರ್ಯಾತೀತ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತ್ರಿಕಲೆ ದ್ವಾದಶಕಲೆ ಷೋಡಶಕಲೆಗಳೆಂಬ ಕಲಾಬ್ರಹ್ಮದ ಮಧ್ಯದಲ್ಲಿಹ ಪ್ರಣವಕಲಶದಮೃತವನುಂಡರೆ ಹಸಿವು ತೃಷೆಯಡಗಿ ಕಾಲಕಲ್ಪಿತವಿಲ್ಲದೆ ಬ್ರಹ್ಮಸ್ವರೂಪನಹ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತನ್ನಲ್ಲಿ ಅನಂತಕೋಟಿ ಬ್ರಹ್ಮರುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ವಿಷ್ಣ್ವಾದಿಗಳುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ಇಂದ್ರಾದಿಗಳುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ದೇವರ್ಕಳುತ್ಪತ್ಯ ಸ್ಥಿತಿ ಲಯ ನೋಡಾ. ತಾನೆ ಅಖಂಡ ಅಪ್ರಮೇಯ ಅಗಮ್ಯ ಅಗೋಚರಕ್ಕತ್ತತ್ತಲಾದ ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತೂರ್ಯವಡಗಿ ಹೇಳಬಾರದ ಹಾಳವರಿದುದ ಪರಾಪರವೆಂಬರು ನೋಡಾ. ವಿವರಿಸದಾದ ಪರಾಪರವೆಂಬುದಿದು ಅಗೋಚರವೆಂಬುದನಾರು ಅರಿಯರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಿಲದೊಳಗಣ ತೈಲದಂತೆ, ಕ್ಷೀರದೊಳಗಣ ಘೃತದಂತೆ, ಪುಷ್ಪದೊಳಗಣ ಪರಿಮಳದಂತೆ, ತುಪ್ಪದೊಳಗಣ ರುಚಿಯಂತೆ, ಎಪ್ಪತ್ತೆರಡುಸಾವಿರ ನಾಡಿಗಳೆಲ್ಲವ ಶಿವನು ಬೆರೆಸಿ ಭೇದವಿಲ್ಲದಿಹನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಚಿನ್ನಾದ, ತಾನೆ ಚಿದ್ಬಿಂದು, ತಾನೆ ಚಿತ್ಕಲೆ ತಾನೆ ಚಿತ್ಕಲಾತೀತ ನೋಡಾ. ತನ್ನಿಂದಧಿಕವಾದ ದೇವರಿಲ್ಲವಾಗಿ ತಾನೆ ಚಿದಾನಂದಸ್ವರೂಪವಾಗಿಹ ಚಿಲ್ಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಚಿತ್ಪ್ರಕಾಶ ತಾನೆ ಚಿದಾಕಾಶ ತಾನೆ ಬಿಂದ್ವಾಕಾಶ ನೋಡಾ. ತಾನೆ ಮಹದಾಕಾಶ ತಾನೆ ಪರಾಕಾಶ ನೋಡಾ. ತನ್ನಿಂದಧಿಕವಾಗಿಹ ಪರಶಿವತತ್ವವಿಲ್ಲವಾಗಿ ತಾನೆ ಪರಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತೂರ್ಯವಾವುದು ? ಚಿತ್ತವೊಂದು ಹೃದಯಸ್ಥಾನದಲ್ಲಿ ನಿಂದು ಪುರುಷನನು ಪ್ರಾಣವಾಯುವನು ನಾಭಿಸ್ಥಾನದಲ್ಲಿ ನಿಂದು ಶರೀರಕ್ಕೆ ಕಾವಲಾಗಿ ನಿಂದು, ಸಂಧಿಸಿಹುದು ತೂರ್ಯ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಇಷ್ಟಲಿಂಗ ತಾನೆ ಪ್ರಾಣಲಿಂಗ ತಾನೆ ಭಾವಲಿಂಗ ನೋಡಾ. ತಾನೆ ಆಚಾರಲಿಂಗ ತಾನೆ ಗುರುಲಿಂಗ ತಾನೆ ಶಿವಲಿಂಗ ನೋಡಾ. ತಾನೆ ಜಂಗಮಲಿಂಗ ತಾನೆ ಪ್ರಸಾದಲಿಂಗ ತಾನೆ ಮಹಾಲಿಂಗ ನೋಡಾ. ತನ್ನಿಂದಧಿಕವಪ್ಪ ಲಿಂಗವಿಲ್ಲವಾಗಿ ತಾನೆ ಸ್ವಯಲಿಂಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತತ್ವಮೂರರಾದಿಯನರಿದು, ಮೂರರೊಳಗೆ ಮೂವತ್ತಾರುತತ್ತ್ವವ ಭೇದಿಸಿ, ಆ ಮೂವತ್ತಾರುತತ್ತ್ವದೊಳಗೆ ತ್ವಂಪದ ತತ್ಪದ ಅಸಿಪದಂಗಳನರಿದು, ಅಕಾರ ಉಕಾರ ಮಕಾರವ ತಿಳಿದು, ತ್ವಂಪದ ತತ್ಪದ ಅಸಿಪದಂಗಳ ಅಕಾರ ಉಕಾರ ಮಕಾರದಲ್ಲಿ ಅಡಗಿಸಿ, ಆ ಪ್ರಣವದ ಶಿರೋಮಧ್ಯದಲ್ಲಿಹುದೆ ಜ್ಯೋತಿರ್ಮಯಲಿಂಗ. ಆ ಜ್ಯೋತಿರ್ಮಯಲಿಂಗವನರಿದ ಶರಣ ಜ್ಞಾನಿಯೆಂಬೆನೆ ಜ್ಞಾನಿಯಲ್ಲ, ಅಜ್ಞಾನಿಯೆಂಬೆನೆ ಅದಕ್ಕೆ ಮುನ್ನವೆ ಅಲ್ಲ , ದ್ವೈತಿಯೆಂಬೆನೆ ದ್ವೈತಿಯಲ್ಲ, ಅದ್ವೈತಿಯೆಂಬೆನೆ ಅದ್ವೈತಿಯಲ್ಲ, ಶೂನ್ಯನೆಂಬೆನೆ ಶೂನ್ಯನಲ್ಲ, ನಿಶ್ಶೂನ್ಯನೆಂಬೆನೆ ನಿಶ್ಶೂನ್ಯನಲ್ಲ. ನಿಮ್ಮ ಶರಣನ ನಿಲವ ನೀನೆ ಬಲ್ಲೆಯಯ್ಯಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಶಿವಪ್ರಣವ, ತಾನೆ ಶಕ್ತಿಪ್ರಣವ, ತಾನೆ ಶಿವಶಕ್ತಿರಹಿತವಾಗಿಹ ಮಹಾಪ್ರಣವ ನೋಡಾ. ತಾನೆ ಆದಿಪ್ರಣವ, ತಾನೆ ಅನಾದಿಪ್ರಣವ, ತಾನೆ ಕಲಾಪ್ರಣವ ನೋಡಾ. ತಾನೆ ಅವಾಚ್ಯಪ್ರಣವ, ತಾನೆ ನಿರಂಜನಪ್ರಣವ, ತಾನೆ ನಿರಾಮಯಪ್ರಣವ ನೋಡಾ, ತನ್ನಿಂದಧಿಕವಾದ ಪ್ರಣವವೊಂದಿಲ್ಲವಾಗಿ ತಾನೇ ನಿರಂಜನಾತೀತಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತ್ರಿಮಾಸಕ್ಕೆ ಮಜ್ಜೆ ಅಸ್ಥಿ ಪುಟ್ಟುವುದು. ಚತುರ್ಮಾಸಕ್ಕೆ ಕೇಶ ಗುಹ್ಯ ಪುಟ್ಟುವುದು. ಪಂಚಮಾಸಕ್ಕೆ ಕರ್ಣ ಅಕ್ಷಿ ನಾಸಿಕಾದಿ ರಂಧ್ರಂಗಳು ಪುಟ್ಟುವವು ನೋಡಾ. ಇದಕ್ಕೆ ಈಶ್ವರ ಉವಾಚ : ``ಮಜ್ಜಾಸ್ಥೀನಿಸ್ತ್ರೀ ತ್ರಿಮಾಸೈಃ ಕೇಶಗುಹ್ಯಚತುರ್ಥಕೇ | ಕರ್ಣಾಕ್ಷಿ ನಾಸಿಕಸ್ಯಾದಿ ರಂಧ್ರಾದಿ ಮಾಸಪಂಚಕೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಭಕ್ತ ತಾನೆ ಮಾಹೇಶ್ವರನು ತಾನೆ ಪ್ರಸಾದಿ ತಾನೆ ಪ್ರಾಣಲಿಂಗಿ ತಾನೆ ಶರಣ ತಾನೆ ಐಕ್ಯ ನೋಡಾ. ತನ್ನಿಂದಧಿಕವಪ್ಪ ಘನವಿಲ್ಲವಾಗಿ ತಾನೆ ಷಟ್ಸ್ಥಲಬ್ರಹ್ಮ ತಾನೆ ನಾದಬಿಂದುಕಲಾತೀತವಹ ಮಹಾಘನಲಿಂಗೈಕ್ಯ. ತಾನಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ