ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ತಂ, ಆ ಶಿಷ್ಯನ ಪ್ರಳಾಪವೆಂತೆಂದಡೆ : ಅಯ್ಯಾ, ಅನಂತ ಜನ್ಮದಲ್ಲಿ ಮಾಡಿದ ಪಾಪಂಗಳೆಂಬ ಪಂಕವ ನಿಮ್ಮ ಚಿದ್ವಾಕ್ಯಪ್ರಭೆಯಲ್ಲಿ ಮುಳುಗಿಸುವುದಯ್ಯ. ಎನ್ನ ಭವಾರಣ್ಯವ ನಿಮ್ಮ ಮಹಾಜಾÕನ ಶಸ್ತ್ರದಲ್ಲಿರಿದು ಖಂಡಿಸುವುದಯ್ಯ. ಎನ್ನ ಭವರೋಗಂಗಳೆಂಬ ಕಾಷ್ಠಂಗಳ ನಿಮ್ಮ ಮಹಾಜಾÕನಾಗ್ನಿಯಲ್ಲಿ ದಹಿಸುವುದಯ್ಯ. ಅಪ್ರಮಾಣಕೂಡಲಸಂಗಮದೇವಾ ಶಿವಧೋ ಶಿವಧೋ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತಂ, ಆ ಶಿಷ್ಯನ ಸ್ತೋತ್ರ: ಶ್ರೀಗುರುವೆ ಮಹಾದೇವ, ಮಹಾಗುರುವೆ ಸದಾಶಿವನು, ಶ್ರೀಗುರುವೆ ಪರತತ್ವ, ಶ್ರೀಗುರುವೆ ಪರಬ್ರಹ್ಮವೆಂದರಿದು ನಿಮ್ಮ ಮೊರೆಹೊಕ್ಕೆನು, ಎನ್ನ ಭವಸಾಗರವ ದಾಂಟಿಸಿ, ಎನ್ನ ಕರಕಮಲಕ್ಕೆ ಇಷ್ಟಲಿಂಗವ ಕರುಣಿಸಿ ರಕ್ಷಿಸಾ ಶ್ರೀಗುರುವೆ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತಂ, ಆ ಶಿಷ್ಯನು ಶ್ರೀ ಗುರುವೆ ಶರಣು, ಸರ್ವಚೈತನ್ಯಾತ್ಮಗುರುವೆ ಶರಣು, ನಿತ್ಯನಿರಂಜನಗುರುವೆ ಶರಣು, ಶಾಂತ ಉಪಶಾಂತಗುರುವೇ ಶರಣು, ವ್ಯೋಮಾತೀತಗುರುವೆ ಶರಣು, ನಾದ ಬಿಂದು ಕಲಾತೀತಗುರುವೆ ಶರಣು, ನಿಮ್ಮ ಭವರೋಗವೈದ್ಯನೆಂದು ಶ್ರುತಿಗಳು ಸಾರುತಿರಲು ನಾನು ಭವರೋಗಿ ಬಂದು ನಿಮ್ಮ ಮೊರೆಹೊಕ್ಕೆನು, ಎನ್ನ ಭವರೋಗಂಗಳ ಕಳದು ನಿಮ್ಮ ಕರುಣಪ್ರಸಾದವನಿಕ್ಕಿ ಸಲಹಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹಾವಾಯುವಂ ಪಿಡಿದು ಬಹುಮೂಲಜ್ವಾಲೆಯನೆಬ್ಬಿಸಿ, ಮೇಲಣ ಬಯಲ ಬಾಗಿಲ ತೆಗೆದು ಒಳಹೊಕ್ಕು ಮಹಾಜ್ಯೋತಿರ್ಮಯಲಿಂಗದಲ್ಲಿ ಬಯಲಾದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮೂಲಾಧಾರವನೊತ್ತಿ ಮೂಲಾಗ್ನಿಯನೆಬ್ಬಿಸಿ, ಮೂರಕ್ಷರವಂ ತಟ್ಟೆಯ ಮಾಡಿ, ಭಕ್ತಿಯೆಂಬ ಬತ್ತಿಯ ತೀವಿ, ಅಮೃತವೆಂಬ ತುಪ್ಪವನೆರದು, ಪರಮಾನಂದವೆಂಬ ಜ್ಯೋತಿಯ ಮುಟ್ಟಿಸಿ, ಆ ಪರಮಾನಂದಪ್ರಭೆಯೊಳೋಲಾಡುತ್ತಿರ್ದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ರ್ಯಲೋಕದ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ನಾಗಲೋಕದ ನಾಗಗಣಂಗಳೆಲ್ಲ ತಾನಿರ್ದಲ್ಲಿ, ದೇವಲೋಕದ ದೇವಗಣಂಗಳೆಲ್ಲ ತಾನಿರ್ದಲ್ಲಿ, ರುದ್ರಲೋಕದ ರುದ್ರಗಣಂಗಳೆಲ್ಲ ತಾನಿರ್ದಲ್ಲಿ, ಭೃಂಗಿ ವೀರೇಶ್ವರ ನಂದಿ ಮಹಾಕಾಳರೆಂಬ ಮಹಾಗಣಂಗಳೆಲ್ಲ ತಾನಿರ್ದಲ್ಲಿ, ತನ್ನಿಂದದ್ಥಿಕವಪ್ಪ ಪರತತ್ವವಿಲ್ಲವಾಗಿ ತಾನೆ ಸ್ವಯಂಭು ನಿರಾಳ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಣಿಪೂರಕಚಕ್ರದ ದಶದಳ ಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕೃಷ್ಣವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಧೋಮುಖವಾಗಿಹ ಕುಂಡಲಿಯ ಸರ್ಪನ ಬಾಲವಂ ಮೆಟ್ಟಿ ಊಧ್ರ್ವಮುಖವಂ ಮಾಡಿ, ಪಶ್ಚಿಮವಾಯು ತಿರುಗಿ ಅನಿಲಾಗ್ನಿಯ ದೆಸೆಯಿಂದ ಗ್ರಂಥಿಗಳು ಕರಗಿ ಮನಪವನಬಿಂದು ಸಂಯೋಗದಿಂದೇಕಾಗ್ರ ಚಿತ್ತದಿಂ ಅನಾಹತಚಕ್ರದ ದ್ವಾದಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತಂ,ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ ಭಯ ಭಕ್ತಿಯಿಂದ `ಎಲೆ ಸದ್ಗುರುಸ್ವಾಮಿ ಆದಿಮೂಲ ಆನಾದಿಮೂಲಂಗಳಿಗತ್ತತ್ತವಾಗಿಹ ಚಿದ್ಬ ್ರಹ್ಮಾಂಡ ಮೊದಲಾಗಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಬ್ರಹ್ಮಾಂಡಗಳೇನೂ ಇಲ್ಲದಂದು, ಇನ್ನೂರಿಪ್ಪತ್ನಾಲ್ಕು ಭುವನಂಗಳು ಮೊದಲಾಗಿ ಮಹಾಭುವನ, ಅತಿಮಹಾಭುವನಂಗಳು ಕಡೆಯಾಗಿ, ಅತಿಮಹಾತೀತ ಮಹಾ ಅನಂತಕೋಟಿ ಭುವನಾದಿಭುವನಂಗಳೇನೂ ಎನಲಿಲ್ಲದಂದು, ಆದಿಮೂಲ ಆನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲ ಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳು ಹೇಗಿರ್ದವೆಂಬುದನು, ನಿರಂಜನಾತೀತ ಪ್ರಣವದುತ್ಪತ್ಯವನು, ಅವಾಚ್ಯ ಪ್ರಣವದುತ್ಪತ್ಯವನು ಕಲಾಪ್ರಣವದುತ್ಪತ್ಯದ ಭೇದವನು, ಅನಾದಿಪ್ರಣವದುತ್ಪತ್ಯದ ಭೇದವನು, ಅನಾದಿ ಅಕಾರ ಉಕಾರ ಮಕಾರದುತ್ಪತ್ಯವನು, ಆದಿಪ್ರಣವದುತ್ಪತ್ಯದ ಭೇದವನು, ಆದಿ ಅಕಾರ ಉಕಾರ ಮಕಾರಂಗಳುತ್ಪತ್ಯವನು, ನಾದ ಬಿಂದುಕಳೆಗಳ ಭೇದವನು, ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದುತ್ಪತ್ಯ ಲಯದ ಭೇದವನು, ಅದಕ್ಕೆ ಅಧಿದೇವತೆಯನು, ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಕಾರ ಉಕಾರ ಮಕಾರದಲ್ಲಿ ಅಡಗಿದ ಭೇದವನು, ಅಕಾರ-ಉಕಾರ-ಮಕಾರ-ನಾದ-ಬಿಂದು-ಕಳೆ-ಪ್ರಕೃತಿ-ಪ್ರಾಣ ಆಧಾರಂಗಳ ಭೇದವನು, ನಾದಬಿಂದುಕಳೆ ಪ್ರಕೃತಿ ಪ್ರಾಣಂಗಳ ಆಧಾರಂಗಳ ಭೇದವನು, ನಾದ-ಬಿಂದು-ಕಳೆ-ಅಕಾರ-ಉಕಾರ-ಮಕಾರವು ಕೂಡಿ ಓಂಕಾರದುತ್ಪತ್ಯವನು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದುತ್ಪತ್ಯದ ಭೇದವನು, ಅಖಂಡ ಸ್ವಯಂಭುಲಿಂಗದುತ್ಪತ್ಯವನು, ಅನಾದಿ ಸದಾಶಿವದುತ್ಪತ್ಯದ ಭೇದವನು, ಅನಾದಿ ಈಶ್ವರತತ್ವದುತ್ಪತ್ಯವನು, ಅನಾದಿ ಮಹೇಶ್ವರತತ್ವದುತ್ಪತ್ಯದ ಭೇದವನು, ಆದಿ ಸದಾಶಿವತತ್ವದುತ್ಪತ್ಯದ ಭೇದವನು, ಆದಿ ಈಶ್ವರತತ್ವದುತ್ಪತ್ಯದ ಭೇದವನು, ಆದಿ ಮಹೇಶ್ವರತತ್ವದುತ್ಪತ್ಯದ ಭೇದವನು, ದಶಚಕ್ರದ ಉತ್ಪತ್ಯಭೇದವನು, ದಶಚಕ್ರದ ನ್ಯಾಸವನು, ದಶಚಕ್ರದ ನಿವೃತ್ತಿಯನು, ನವಪದ್ಮದ ನಿವೃತ್ತಿಯನು, ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು, ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರದುತ್ಪತ್ಯವನು, ಆ ಅಕಾರ ಉಕಾರ ಮಕಾರದಲ್ಲಿ ಪೃಥ್ವಿ ಅಗ್ನಿ ಋಗ್ವೇದ ಭೂಲೋಕ ಬ್ರಹ್ಮಾಂಡ ಅಂತರೀಕ್ಷ ಯಜುರ್ವೇದ ವಾಯು ಭುವರ್ಲೋಕ, ವಿಷ್ಣು ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯವನು, ಆ ಅಕಾರ ಉಕಾರ ಮಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾದ ಭೇದವನು, ಆ ಓಂಕಾರ ತಾರಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದ ಕಾಂತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು, ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು, ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಕಾಂತಿಯನು, ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು, ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು, ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು, ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು, ಸಹಸ್ರಾಕ್ಷರದ ನಿವೃತ್ತಿಯನು, ಷಡ್ವಿಧಮುಖಂಗಳುತ್ಪತ್ಯವನು, ಷಡ್ವಿಧಮುಖಂಗಳ ನೆಲೆಯನು, ಷಡ್ವಿಧಮುಖಂಗಳ ನಿವೃತ್ತಿಯನು, ಷಡ್ವಿಧಭೂತಂಗಳುತ್ಪತ್ಯವನು, ಷಡ್ವಿಧಭೂತಂಗಳ ನೆಲೆಯನು, ಷಡ್ವಿಧಭೂತಂಗಳ ನಿವೃತ್ತಿಯನು, ಷಡ್ವಿಧಲಿಂಗದುತ್ಪತ್ಯವನು, ಷಡ್ವಿಧಲಿಂಗಗಳ ನೆಲೆಯನು, ಷಡ್ವಿಧಲಿಂಗಗಳ ನಿವೃತ್ತಿಯನು, ಷಡ್ವಿಧಕಲೆಗಳುತ್ಪತ್ಯವನು, ಷಡ್ವಿಧಕಲೆಗಳ ನೆಲೆಯನು, ಷಡ್ವಿಧಕಲೆಗಳ ನಿವೃತ್ತಿಯನು, ಷಡ್ವಿಧಸಾದಾಖ್ಯದುತ್ಪತ್ಯವನು, ಷಡ್ವಿಧಸಾದಾಖ್ಯದ ನೆಲೆಯನು, ಷಡ್ವಿಧಸಾದಾಖ್ಯದ ನಿವೃತ್ತಿಯನು, ಷಡ್ವಿಧಹಸ್ತಂಗಳುತ್ಪತ್ಯವನು, ಷಡ್ವಿಧಹಸ್ತಂಗಳ ನೆಲೆಯನು, ಷಡ್ವಿಧಹಸ್ತಂಗಳ ನಿವೃತ್ತಿಯನು, ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು, ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು, ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು, ಅಷ್ಟನಾದದುತ್ಪತ್ಯವನು, ಅಷ್ಟನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು, ಷಡ್ವಿಧಭಕ್ತಿಯ ಉತ್ಪತ್ಯವನು, ಷಡ್ವಿಧಭಕ್ತಿಯ ನೆಲೆಯನು, ಷಡ್ವಿಧಭಕ್ತಿಯ ನಿವೃತ್ತಿಯನು, ಷಡ್ವಿಧಪರಿಣಾಮದುತ್ಪತ್ಯವನು, ಷಡ್ವಿಧಪರಿಣಾಮದ ನೆಲೆಯನು, ಷಡ್ವಿದ ಪರಿಣಾಮದ ನಿವೃತ್ತಿಯನು, ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು, ಚತುರ್ವೇದದ ನಿವೃತ್ತಿಯನು, ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು, ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು, ಮಿಶ್ರಾರ್ಪಣ ಷಡುಸ್ಥಲ ಭೇದವನು, ಇಷ್ಟ-ಪ್ರಾಣ-ಭಾವಲಿಂಗದ ಭೇದವನು, ಇಷ್ಟ-ಪ್ರಾಣ-ಭಾವಲಿಂಗದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಡಗಿಹ ಭೇದವನು ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿ ಅಖಂಡಜ್ಯೋತಿರ್ಮಯಲಿಂಗವಾದ ಭೇದವನು. ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನೆಲೆಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನಿವೃತ್ತಿಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು, ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು, ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು, ನಿರಾಮಯಾತೀತ ಷಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು, ಆ ಷಟ್ಸ್ಥಲಬ್ರಹ್ಮದಲ್ಲಿ ಮೂವತ್ತಾರು ತತ್ತ್ವಂಗಳುತ್ಪತ್ಯವನು, ಷಡುಶಕ್ತಿಗಳುತ್ಪತ್ಯವನು, ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು, ಪ್ರೇರಕಾವಸ್ಥೆಯ ದರ್ಶನದ ಭೇದವನು, ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು, ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು, ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನದ ಭೇದವನು, ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು, ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು, ಜ್ಞಾನವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು, ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು, ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು, ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು, ತತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು, ಕಲಾಧ್ವದುತ್ಪತ್ಯವನು, ಕಲಾಧ್ವದ ವರ್ತನೆಯನು, ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ, ತಾಮಸನಿರಸನವ ಮಾಡಿ ನುಡಿದ ವಚನದ ಭೇದವನು, ತತ್‍ಪದ ತ್ವಂಪದ ಅಸಿಪದಂಗಳ ಭೇದವನು, ಆ ತ್ವಂಪದ ತತ್ಪದ ಅಕಾರ ಉಕಾರ ಮಕಾರಂಗಳಲ್ಲಿ ಅಡಗಿಹ ಭೇದವನು, ಆ ಆಕಾರ ಉಕಾರ ಮಕಾರ ಏಕವಾಗಿ ಷಟ್ಸ್ಥಲಬ್ರಹ್ಮವಾದ ಭೇದವನು, ವಚನಾನುಭಾವದ ಭೇದವನು ಅರಿಯೆನು, ಎಲೆ ಸದ್ಗುರುಸ್ವಾಮಿ ನಿರೂಪಿಸೆಂದು, ಆ ಶಿಷ್ಯನು ಬಿನ್ನವಿಸಲು ಆ ಸದ್ಗುರುಸ್ವಾಮಿ ನಿರೂಪಿಸಿದ ವಚನವೆಂತೆಂದಡೆ : ಅನಂತಕೋಟಿ ಮಹಾಬ್ರಹ್ಮಾಂಡ ಮೊದಲಾಗಿ ಅನಂತಕೋಟಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಅತಿಮಹಾಬ್ರಹ್ಮಾಂಡಂಗಳೇನೂಯೇನೂ ಎನಲಿಲ್ಲದಂದು, ಅನಂತಕೋಟಿ ಮಹಾಬ್ರಹ್ಮಾಂಡಂಗಳನೊಳಕೊಂಡು ಇನ್ನೂರಿಪ್ಪತ್ನಾಲ್ಕು ಮಹಾಭುವನ ಮೊದಲಾಗಿ ಅತಿಮಹಾಭುವನಂಗಳು ಅತಿಮಹಾತೀತವೆಂಬ ಮಹಾಭುವನಂಗಳು ಕಡೆಯಾಗಿ ಅನಂತಕೋಟಿ ಅತಿಮಹಾತೀತ ಭುವನಂಗಳು ಏನೂಯೇನೂ ಇಲ್ಲದಂದು ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಮಹಾಘನವ ಮೀರಿದತ್ತತ್ತವಾಗಿಹ ಅಖಂಡ ಅಖಂಡಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ರುದ್ರ ಈಶ್ವರ ಸದಾಶಿವ ಬ್ರಹ್ಮ ನಾರಾಯಣರಳಿದುಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ದೇವರ್ಕಳಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳನರಿಯದೆ ಅನಂತಕೋಟಿ ವೇದಂಗಳು, ಅನಂತಕೋಟಿ ಮುನಿಗಳು, ಅನಂತಕೋಟಿ ಲೋಕಾದಿಲೋಕಂಗಳೆಲ್ಲ ಪ್ರಳಯಕ್ಕೊಳಗಾದರು ನೋಡಾ. ಆ ಅಖಂಡಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ಈ ಲೋಕದ ಜಡರುಗಳೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತಂ, ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನ್ಯಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಸದ್ಯೋಜಾತಮುಖ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಓಂಕಾರ ತಾರಕಾರೂಪೇ ಸದ್ಯೋಜಾತಂ ಚ ಜಾಯತೇ | ಓಂಕಾರ ದಂಡರೂಪೇ ಚ ವಾಮದೇವಂ ಚ ಜಾಯತೇ || ಓಂಕಾರ ಕುಂಡಲಾಕಾರೇ ಅಘೋರಂ ಚಾಪಿ ಜಾಯತೇ | ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ || ಓಂಕಾರ ದರ್ಪಣಾಕಾರೇ ಈಶಾನಂ ಚ ಜಾಯತೇ | ಇತಿ ಪಂಚಮುಖಂ ದೇವೀ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮುಂದೆ ಹೇಳಿದ ಪ್ರೇರಕಾವಸ್ಥೆಯಲ್ಲಿ ಹೇಳಿದ ಕರಣಂಗಳು ಹದಿನೆಂಟರೊಡನೆ ಕೂಡಿ ಇವನ ನಾಮ ಜಾತಿ ಗುಣತ್ರಯಂಗಳೆಲ್ಲವನು ವಿಚಾರಿಸಿ ಅರಿದು ಸಂದೇಹವಳಿದು ತಿಳಿವುದೇ ಪ್ರೇರಕಾವಸ್ಥೆಯೆಂದರಿವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮನವ ಸಕಲೇಂದ್ರಿಯಂಗಳ ಕೇರಿಗಳಲ್ಲಿ ಸೂಸಲೀಯದೆ ಧರಿಸಿಕೊಂಡಿಹುದೇ ಧಾರಣಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮುಂದೆ ಅನಂತಕೋಟಿ ಕಾಲ ತಪವ ಮಾಡಿದಾತಂಗಲ್ಲದೆ ಈಗ ಅರಿವಿಲ್ಲ ನೋಡಾ. ಮುಂದೆ ಅನಂತಕೋಟಿ ಕಾಲ ತಪವ ಮಾಡಿ ಈಗ ಅರಿವನರಿದು ಅನುಭವಿಸುವುದೆ ಅರಿವು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮನು ಮುನಿ ಯತಿ ಸನ್ಯಾಸಿಗಳ ಮಾಯೆ ಕೊಂಡು ಕೂಗುವಂದು ಮಾಯಾಸಂಹಾರನೆಂಬ ಗಣೇಶ್ವರನಾಗಿದ್ದೆನಯ್ಯಾ. ದೇವ-ದಾನ-ಮಾನವರೆಲ್ಲರ ಮಾಯೆ ಕಾಲಲ್ಲಿ ಕಟ್ಟಿ ಎಳೆವಂದು ಮಾಯನಾಶನೆಂಬ ಗಣೇಶ್ವರನಾಗಿದ್ದೆನಯ್ಯಾ. ಮನು ಮುನಿ ಯತಿ ಬ್ರಹ್ಮಚಾರಿಗಳ ಮಾಯೆ ಕೊಂದು ಕೋಳಾಹಳವ ಮಾಡುವಂದು ಮಾಯಾತೀತನೆಂಬ ಗಣೇಶ್ವರನಾಗಿದ್ದೆನಯ್ಯಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತಂ, ಆ ಶಿಷ್ಯನು ತನ್ನ ಪೂರ್ವಾಪರಸಂಬಂಧವ ವಿವೇಕಿಸಿ ನುಡಿದ ಪ್ರಸ್ತಾವದ ವಚನವೆಂತೆಂದಡೆ : ಅನಾದಿಯೆಂಬ ಯುಗದಲ್ಲಿ ಅನಾದಿಕಾಯನೆಂಬ ಒಡಲುವಿಡಿದು ನಿರಂಜನಪ್ರಣವವ ಧ್ಯಾನಿಸುತಿರ್ದೆನು. ಆದಿಯೆಂಬ ಯುಗದಲ್ಲಿ ಆದಿಕಾಯನೆಂಬ ಒಡಲುವಿಡಿದು ಅವಾಚ್ಯಪ್ರಣವವ ಧ್ಯಾನಿಸುತಿರ್ದೆನು. ಅನಾಗತವೆಂಬ ಯುಗದಲ್ಲಿ ಅನಂತಕಾಯನೆಂಬ ದೇಹದೊಳು ಚಿನ್ನಾದಪ್ರಣವವ ಧ್ಯಾನಿಸುತಿರ್ದೆನು. ಅನಂತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಚಿದ್ಬಿಂದುಪ್ರಣವವ ಧ್ಯಾನಿಸುತಿರ್ದೆನು. ಅದ್ಭುತವೆಂಬ ಯುಗದಲ್ಲಿ ಸೂಕ್ಷ್ಮಕಾಯನೆಂಬ ಒಡಲುವಿಡಿದು ಚಿತ್ಕಲಾಪ್ರಣವವ ಧ್ಯಾನಿಸುತಿರ್ದೆನು. ತಮಂಧವೆಂಬ ಯುಗದಲ್ಲಿ ಜ್ಞಾನಕಾಯನೆಂಬ ಒಡಲುವಿಡಿದು ಕಲಾಪ್ರಣವವ ಧ್ಯಾನಿಸುತಿರ್ದೆನು. ತಾರಜವೆಂಬ ಯುಗದಲ್ಲಿ ಸಕಲಕಾಯನೆಂಬ ಒಡಲುವಿಡಿದು ಅನಾದಿಪ್ರಣವವ ಧ್ಯಾನಿಸುತಿರ್ದೆನು. ತಂಡಜವೆಂಬ ಯುಗದಲ್ಲಿ ಪ್ರಚಂಡಕಾಯನೆಂಬ ಒಡಲುವಿಡಿದು ಅನಾದಿ ಅಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಜವೆಂಬ ಯುಗದಲ್ಲಿ ಭಿನ್ನಜ್ಞಾನನೆಂಬ ಒಡಲುವಿಡಿದು ಅನಾದಿ ಉಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಾಯುಕ್ತವೆಂಬ ಯುಗದಲ್ಲಿ ಅಭಿನ್ನಕಾಯನೆಂಬ ಒಡಲುವಿಡಿದು ಅನಾದಿ ಮಕಾರಪ್ರಣವವ ಧ್ಯಾನಿಸುತಿರ್ದೆನು. ಅವ್ಯಕ್ತವೆಂಬ ಯುಗದಲ್ಲಿ ಅವಿರಳಕಾಯನೆಂಬ ಒಡಲುವಿಡಿದು ಆದಿಪ್ರಣವವ ಧ್ಯಾನಿಸುತಿರ್ದೆನು. ಅಮದಾಯುಕ್ತವೆಂಬ ಯುಗದಲ್ಲಿ ಅಖಂಡಿತಜ್ಞಾನಕಾಯನೆಂಬ ಒಡಲುವಿಡಿದು ಶಿವಪ್ರಣವವ ಧ್ಯಾನಿಸುತಿರ್ದೆನು. ಮಣಿರಣವೆಂಬ ಯುಗದಲ್ಲಿ ಮನೋನ್ಮಯನೆಂಬ ಒಡಲುವಿಡಿದು ಪರಮೋಂಕಾರವ ಧ್ಯಾನಿಸುತಿರ್ದೆನು. ಮಾನ್ಯರಣವೆಂಬ ಯುಗದಲ್ಲಿ ಮಹಾಕಾಯನೆಂಬ ಒಡಲುವಿಡಿದು ಮಹದೋಂಕಾರವ ಧ್ಯಾನಿಸುತಿರ್ದೆನು. ವಿಶ್ವಾರಣವೆಂಬ ಯುಗದಲ್ಲಿ ವಿಶ್ವಕಾಯನೆಂಬ ಒಡಲುವಿಡಿದು ವಿಶ್ವಾಧಿಕಮಹಾಲಿಂಗವ ಧ್ಯಾನಿಸುತಿರ್ದೆನು. ವಿಶ್ವಾವಸುವೆಂಬ ಯುಗದಲ್ಲಿ ವಿಶ್ವಕಾರಣನೆಂಬ ದೇಹವಿಡಿದು ವಿಶ್ವರೂಪಲಿಂಗವ ಧ್ಯಾನಿಸುತಿರ್ದೆನು. ಅಲಂಕೃತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಅಖಂಡಲಿಂಗವ ಧ್ಯಾನಿಸುತಿರ್ದೆನು. ಕೃತಯುಗದಲ್ಲಿ ಅಖಂಡಾತ್ಮಕನೆಂಬ ಗಣೇಶ್ವರನಾಗಿರ್ದಂದು ಅನಾದಿಲಿಂಗವ ಧ್ಯಾನಿಸುತಿರ್ದೆನು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿರ್ದಂದು ಆದಿಲಿಂಗವ ಧ್ಯಾನಿಸುತಿರ್ದೆನು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿರ್ದಂದು `ಓಂಕಾರೇಭ್ಯೋ ಜಗದ್ರಕ್ಷಾಯ ಜಗತಾಂ ಪತಯೇ ನಮೋ ನಮಃ' ಎಂಬ ಪ್ರಣವಲಿಂಗವ ಧ್ಯಾನಿಸುತಿರ್ದೆನು. ಕಲಿಯುಗದಲ್ಲಿ ಅಪ್ರಮಾಣಗಣೇಶ್ವರನಾಗಿ ಬಂದು ಅಪ್ರಮಾಣ ಅಗೋಚರಲಿಂಗವ ಧ್ಯಾನಿಸುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮನು ಮುನಿ ಯತಿ ಸನ್ಯಾಸಿಗಳೆಲ್ಲರು ಮಾಯೆಗೊಳಗಾಗಿ ಭವಸಾಗರದೊಳು ಬಿದ್ದರು ನೋಡಾ. ದೇವದಾನಮಾನವರೆಲ್ಲರು ಮಾಯೆಗೊಳಗಾಗಿ ನಾನಾ ಯೋನಿಯಲ್ಲಿ ಬಂದರು ನೋಡಾ, ಬ್ರಹ್ಮ ವಿಷ್ಣ್ವಾದಿ ದೇವರ್ಕಳೆಲ್ಲರು ಮಾಯೆಗೊಳಗಾಗಿ ಭವಾರಣ್ಯವ ಹೊಕ್ಕರು ನೋಡಾ. ಮಾಯೆಯನತಿಗಳವ ನಿರ್ಮಾಯಂಗಲ್ಲದೆ ಭವಮಾಲೆ ಹಿಂಗದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ