ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವ್ಯೋಮವೇ ಅಂಗವಾದ ಶರಣನ ಸುಜ್ಞಾನಹಸ್ತದಲ್ಲಿಹ ಪ್ರಸಾದಲಿಂಗವು ಪರಂಜ್ಯೋತಿಸ್ವರೂಪವಾಗಿ, ನಿತ್ಯವಾಗಿ, ಪರಿಪೂರ್ಣವಾಗಿ ಇಂದ್ರಿಯಾರ್ಥಂಗಳೆಂದು ವಿಷಯಂಗಳು ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ವಿಷಯಂಗಳನು ಮೀರಿ ವರ್ತಿಸುವುದಾಗಿ, ಜ್ಞಾನದಿಂದ ಹಡೆಯಲ್ಪಟ್ಟಂಥಾ ಮೋಕ್ಷಸ್ವರೂಪವಾಗಿ, ಪರಿಣಾಮಪ್ರಪಂಚಕ್ಕೆ ಕಾರಣವಾದುದಾಗಿ, ಸ್ವಾದವೆಂಬ ನಾಮವನುಳ್ಳ ತತ್ವವನು ಪರೆಯೆಂಬ ತನ್ನ ಶಕ್ತಿಯಿಂದುದಯಿಸಿದುದಾಗಿ ನಾಮರೂಪಗಳಿಲ್ಲದಂಥಾ ಪ್ರಸಾದವೆಂಬ ಮಹಾಘನಲಿಂಗವಾಗಿ ಹೇಳುತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ :ವೃತ್ತ- ``ಜ್ಯೋತಿಃಪರಂ ನಿಜಮುಖಂಡಮತೀಂದ್ರಿಯಾರ್ಥಂ ಜ್ಞಾನೋಪಲಬ್ಧಮಮೃತಂ ಪರಿಣಾಮಬೀಜಂ | ಸಾದಾಖ್ಯತತ್ವಮುದಿತಂ ಪರಯಾ ಸ್ವಶಕ್ತಾ ಪ್ರಾಹುಃ ಪ್ರಸಾದಘನಲಿಂಗಮುಪಾಧಿಹೀನಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವೇದಾಂತತತ್ವವೆಂಬ ಅಷ್ಟವಿಂಶತಿತತ್ವವನೊಳಕೊಂಡು ಮಾಹೇಶ್ವರತತ್ವ, ಸದಾಶಿವತತ್ವ, ಶಿವತತ್ವವೆಂಬ ಏಕತ್ರಿಂಶತತ್ವವನೊಳಕೊಂಡು ತ್ವಂಪದ ತತ್‍ಪದ ಅಸಿಪದವೆಂಬ ಮೂವತ್ತಾರುತತ್ವವನೊಳಕೊಂಡು ವೇದಾಂತಿಯ ಮನವಾರ್ತೆ. ತ್ವಂಪದ ತತ್‍ಪದ ಅಸಿಪದವೆಂಬ ತ್ರಿವಿಧ ಪದಂಗಳನೊಳಕೊಂಡು, ತೊಂಬತ್ತಾರುತತ್ವವನೊಳಕೊಂಡು, ಷಡಂಗವನೊಳಕೊಂಡು, ಷಟ್‍ಶಕ್ತಿಗಳನೊಳಕೊಂಡು, ಸ್ವರಾಕ್ಷರ ಕಲಾಕ್ಷರ ಏಕಾಕ್ಷರವನೊಳಕೊಂಡು, ಅನೇಕಕೋಟಿ ವೇದಂಗಳನೊಳಕೊಂಡು, ಅನೇಕಕೋಟಿ ಚಂದ್ರಾದಿತ್ಯರನೊಳಕೊಂಡು, ತ್ರೈಲೋಕ್ಯ ಸಚರಾಚರಂಗಳನೊಳಕೊಂಡು, ತಿರುತಿರುಗಿ ಬಹ ಅನೇಕಕೋಟಿ ಕಲ್ಪಾಂತರವನೊಳಕೊಂಡು, ಷಟ್‍ಸ್ಥಲಬ್ರಹ್ಮವ ಗರ್ಭೀಕರಿಸಿಕೊಂಡು, ಆದಿ ಮಧ್ಯ ಅವಸಾನವಿಲ್ಲದೆ, ಅಖಂಡಮಹಾಜ್ಯೋತಿರ್ಮಯಲಿಂಗವಾಗಿದ್ದುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿಹ ಚರಲಿಂಗವು ಅಂತರಂಗದೊಡನೆ ಕೂಡಿ ವರ್ತಿಸುವುದಾಗಿ, ಬಹಿರಂಗಸಹಿತವಾಗಿ, ಅಮೂರ್ತನಹ ವಸ್ತು ತತ್ವವಾಗಿ, ಅಕ್ಷರವಪ್ಪ ಪ್ರಕೃತಿಗಿಂದಲು ಪರತತ್ವವೆಂಬ ಹೆಸರುಳ್ಳ ಜ್ಯೋತಿಸ್ವರೂಪನಪ್ಪ, ಪುರುಷನಹನು, ತನ್ನ ಆತ್ಮಮೂರ್ತಿಯಹಂಥ ಆದಿಶಕ್ತಿಯೊಡನೆ ಕೂಡಿದಂತಾಗಿ ಮನಸ್ಸಿನಿಂದವೆ ಎಲ್ಲಾಗಳೂ ಧ್ಯಾನವಮಾಡಲು ತಕ್ಕಂಥಾ ಚರಲಿಂಗವೆಂದು ಆಪ್ತವಾದ ಬುದ್ಧಿಯನುಳ್ಳ ಮಹಾತ್ಮರು ಹೇಳುತ್ತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ :ವೃತ್ತ - ``ಸಾಭ್ಯಾಂತರಂ ಸಬಹಿರಂಗಮಮೂರ್ತಿತತ್ವಂ ಜ್ಯೋತಿರ್ಮಯಂ ಪುರುಷಮಕ್ಷರತಃ ಪರಾಖ್ಯಂ ಸ್ವಾತ್ಮಾದಿ ಶಕ್ತಿಘಟಿತಂ ಮನಸೈೀವ ನಿತ್ಯಂ ಧ್ಯಾತವ್ಯರೂಪಮಿತಿಂ ಯರಲಿಂಗಮಾಹುಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಜ್ರಾಸನ, ಪದ್ಮಾಸನ, ಸ್ವಸ್ತಿಕಾಸನ, ಗೋಮುಖಾಸನ, ಕುಕ್ಕುಟಾಸನ, ಅರ್ಧಾಸನ, ಮಂಡೂಕಾಸನ, ಸಿಂಹಾಸನ, ಭದ್ರಾಸನ, ಸುಖಾಸನ ಇವು ಹತ್ತು ಆಸನಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಾಯುವೆ ಅಂಗವಾದ ಪ್ರಾಣಲಿಂಗಿ ಸುಮನವೆಂಬ ಹಸ್ತದಲ್ಲಿ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನವ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಶ್ರೀಮಹಾದೇವೋýವಾಚ : ``ಮನೋ ಹಸ್ತೇನ ವಾಯ್ವಂಗಂ ಪ್ರಾಣಲಿಂಗೀ ತಥೈವ ಚ | ಜಂಗಮೇ ತ್ವಙ್ಮುಖಂಚೈವ ಅರ್ಪಿತಂ ಸ್ಪರ್ಶಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ