ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೋಹ ವಾಯುವಂ ಹೋಗಲೀಯದೆ ನಿಲಿಸಿ, ಇಡಾ ಪಿಂಗಳನಾಳದಲ್ಲಿ ಸೂಸಲೀಯದೆ ಸುಷುಮ್ನ ಗಮ್ಯವ ಮಾಡಿದರೆ ಆ ವಾಯುವಿಂಗೆ ಪರಮಪದವಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೀಂಗೆ ಅರಿದು ಅರ್ಚಿಸಿ ವಂದಿಸಿ ಆರಾಧನೆಯಂ ಮಾಡಿ ತನುಕ್ರಿಯಾಮಾರ್ಗದಿಂದ ಶುದ್ಧ ಪವಿತ್ರಚರಿತನಾಗಿ, ಮಹಾಜ್ಞಾನವರ್ತಕನಾಗಿ, ಶ್ರೀಗುರುವಾಜ್ಞೆಯಂ ಮೀರದೆ ನಡೆವುದೀಗ ಗುರುಪೂಜೆಯ ಇರವು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೊನ್ನು ಹೆಣ್ಣು ಮಣ್ಣು ಹಿಡಿವನ್ನಕ್ಕ ಗುರುವಲ್ಲ. ಆ ಗುರುವಿನ ಬೆಂಬಳಿ ಲಿಂಗವಿಲ್ಲ. ಆ ಲಿಂಗಪೂಜೆಯ ಮಾಡುವಾತ ಶಿಷ್ಯನಲ್ಲ. ಆ ಗುರು ಶಿಷ್ಯರಿಬ್ಬರಿಗೆಯೂ ಕುಂಭೀಪಾತಕ ತಪ್ಪದೆಂದು ಶ್ರುತಿ ಸಾರುತ್ತಿದೆ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೀಗೆಂದು ಆ ಶಿಷ್ಯಂಗೆ ಬೋಧಿಸಿ, ಕೃತಾರ್ಥನ ಮಾಡಿದ ಸದ್ಗುರುಲಿಂಗಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೊನ್ನು ಬಿಡದೆ ಹಿರಿಯರೆಂಬರು ; ಅಲ್ಲಲ್ಲ ನೋಡಾ. ಹೆಣ್ಣು ಬಿಡದೆ ಹಿರಿಯರೆಂಬರು ; ಅಲ್ಲಲ್ಲ ನೋಡಾ. ಮಣ್ಣು ಬಿಡದೆ ಹಿರಿಯರೆಂಬರು ; ಅಲ್ಲಲ್ಲ ನೋಡಾ. ಈ ತ್ರಿವಿಧವನತಿಗಳೆಯದೆ ಹಿರಿಯರೆಂಬ ನುಡಿಗೆ ನಾಚರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೃದಯಕಮಲಮಧ್ಯದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ, ಭ್ರೂಮಧ್ಯದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ಬ್ರಹ್ಮರಂಧ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ನಾಸಿಕಾಗ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಸ್ವಯಂಭುಲಿಂಗವ ತಾನೆಂದರಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೆಣ್ಣೆಂಬ ಭೂತವ ಸೋಂಕಿ ಹೆಣನಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು, ಹೊನ್ನೆಂಬ ಭೂತವ ಸೋಂಕಿ ಹೊಲೆಯನಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಕಾಮವೆಂಬ ಭೂತವ ಸೋಂಕಿ ಕರ್ಮಿಯಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಪಾಶವೆಂಬ ಭೂತವ ಸೋಂಕಿ ಪಾಪಿಯಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಈ ಪಂಚಭೂತಂಗಳನತಿಗಳದು ಮಹಾಘನದಲ್ಲಿ ನಿಂದ ಮನವು ನಿಜಗುರುವಿಂಗೆ ನಮೋ ನಮೋ ಎನುತಿದ್ದುದು ನೋಡಾ ಶ್ರುತಿಗಳು, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ