ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜೀವನೆಂಬ ಶಿವಾಲಯದೊಳು ಶಿವನೆಂಬ ಲಿಂಗವ ನೆಲೆಗೊಳಿಸಿ ಅಜ್ಞಾನವೆಂಬ ನಿರ್ಮಾಲ್ಯವಂ ಕಳೆದು ಸೋಹಂಭಾವದಲ್ಲಿ ಪೂಜಿಸುತ್ತಿರಲು ಎನ್ನ ಭವರೋಗಂಗಳು ಬಯಲಾಗಿ ಭವರಹಿತನಾದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜ್ಞಾನಜಾಗ್ರ ಜ್ಞಾನಸ್ವಪ್ನವಿಲ್ಲದ ಮುನ್ನ, ಜ್ಞಾನಸುಷುಪ್ತಿ ಜ್ಞಾನತೂರ್ಯವಿಲ್ಲದ ಮುನ್ನ, ಜ್ಞಾನವ್ಯೋಮ ಜ್ಞಾನವ್ಯೋಮಾತೀತವಿಲ್ಲದ ಮುನ್ನ, ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜ್ಞಾನೇಂದ್ರಿಯವೆಂಬ ಅಂಗಂಗಳಲ್ಲಿ ಲಿಂಗಸ್ವಾಯತವಾಗಿಹುದು. ಆ ಕ್ರಮದಿಂದವೆ, ಆ ಕರ್ಮೇಂದ್ರಿಯಂಗಳೆಂಬ ಅಂಗಂಗಳಲ್ಲಿಯೂ ಲಿಂಗಸ್ವಾಯತವಾಗಿಹುದು ನೋಡಾ. ಇದಕ್ಕೆ ಶಿವಲಿಂಗಾಗಮೇ : ``ಯಥಾ ಜ್ಞಾನೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷಿ*ತಂ | ತಥಾ ಕರ್ಮೇಂದ್ರಿಯಾಂಗೇಷು ಕ್ರಮಾಲ್ಲಿಂಗಂ ಪ್ರತಿಷಿ*ತಂ ||'' ಇಂತೆಂದುದಾಗಿ, ಅಪ್ರಮಾಣಕೂಡಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಗತ್ ಸೃಷ್ಟಾ ್ಯರ್ಥಕಾರಣವಾಗಿ ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ದೆಸೆಯಿಂದ ಷಟ್‍ಶಕ್ತಿಗಳುತ್ಪತ್ಯವಾದವು. ಆ ಷಟ್‍ಶಕ್ತಿಯೇ ಕಾರಣವಾಗಿ ಷಡಂಗಗಳು ಉತ್ಪತ್ಯವಾದವು. ಆ ಷಡಂಗದಲ್ಲಿ ಲೋಕಾದಿಲೋಕ ಸಚರಾಚರಂಗಳ ಉತ್ಪತ್ಯ ಲಯವು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಾಗ್ರದಲ್ಲಿಯ ಸುಷುಪ್ತಿ ಯಾವುದು ? ಪುರುಷ ಪ್ರಾಣವಾಯು ಚಿತ್ತದೊಡನೆ ಕೂಡಿ ಅವರ ಕಂಡ ಠಾವ ಹೇಳುವುದು ಜಾಗ್ರದಲ್ಲಿಯ ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ. || 665 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜ್ಞಾತೃ ಜ್ಞಾನಂಗಳಿಲ್ಲದಂದು, ಜ್ಞಾನತ್ರಯಂಗಳಿಲ್ಲದಂದು, ಜೀವಾತ್ಮ ಅಂತರಾತ್ಮ ಪರಮಾತ್ಮರಿಲ್ಲದಂದು, ತ್ರೈಲೋಕ್ಯ ಸಚರಾಚರರೆಲ್ಲ ರಚನೆಗೆ ಬಾರದಂದು ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಮಹಾಘನ ಚೈತನ್ಯನಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಾಗ್ರದಲ್ಲಿಯ ಜಾಗ್ರವಾವುದು ? ಪುರುಷನೊಬ್ಬ, ವಾಯು ಹತ್ತು, ನಾಡಿ ನಾಲ್ಕು, ಶಬ್ದಾದಿಗಳೈದು, ವಚನಾದಿಗಳೈದು, ಶ್ರೋತ್ರಾದಿಗಳೈದು, ವಾಗಾದಿಗಳೈದು- ಈ ಮೂವತ್ತೈದು ಕಾರಣಂಗಳೊಡನೆ ಕೂಡಿ ಇವನ ತಬ್ಬಿಕೊಳ್ಳುತ್ತ ಪ್ರಿಯವ ಮಾಡುವದು ಜಾಗ್ರದಲ್ಲಿಯ ಜಾಗ್ರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜ್ಞಾನಸ್ವರೂಪವಾಗಿ ಮಹಾಜ್ಯೋತಿರ್ಮಯಲಿಂಗವೆಂಬ ಅಮೃತವನುಂಡಡೆ, ಹಸಿವು ತೃಷೆಗಳಡಗಿ ಆನಂದಸ್ವರೂಪವಾಗಿ ಅನಂತಕಲ್ಪವಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಾಗ್ರದಲ್ಲಿಯ ಸ್ವಪ್ನವಾವುದು ? ಶಬ್ದಾದಿಗಳೈದು, ಶ್ರೋತ್ರಾದಿಗಳೈದು, ವಚನಾದಿಗಳೈದು, ವಾಗಾದಿಗಳೈದು, ಕರಣ ನಾಲ್ಕು, ಪುರುಷನೊಬ್ಬ, ಇಂತೀ ಇಪ್ಪತ್ತೈದು ಕರಣಂಗಳೊಡನೆ ಕೂಡಿ ಅವನನು ಅವನಕಂಡ ಠಾವನು ಹೇಳುವುದು ಜಾಗ್ರದಲ್ಲಿಯ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ