ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರುದ್ಥಿರದಲ್ಲಿ ಆಚಾರಲಿಂಗವಿಹುದು. ಮಾಂಸದಲ್ಲಿ ಗುರುಲಿಂಗವಿಹುದು. ಮೇದಸ್ಸಿನಲ್ಲಿ ಶಿವಲಿಂಗವಿಹುದು. ಅಸ್ಥಿಯಲ್ಲಿ ಚರಲಿಂಗವಿಹುದು. ಮಜ್ಜೆಯಲ್ಲಿ ಪ್ರಸಾದಲಿಂಗವಿಹುದು. ಶುಕ್ಲದಲ್ಲಿ ಮಹಾಲಿಂಗವಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ರುದ್ಥಿರಾಂಗೇತು ಮಾಂಸಾಂಗೇ ಗುರುಲಿಂಗಕಂ | ಮೇಧಾಂಗೇ ಶಿವಲಿಂಗಂ ಚ ಅಸ್ಥ್ಯಂಗೇ ಚರಂ ತಥಾ || ಮಜ್ಜೇ ಪ್ರಸಾದಲಿಂಗಂ ಚ ಶುಕ್ಲಾಂಗೇ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರೇಚಕ ಪೂರಕಮಂ ಬಿಟ್ಟು ಕುಂಭಕವಾಗಿ ಆ ಕುಂಭಕದೊಳು ಸುಸ್ಥಿರವಾಗಿ ನಿಂದಡಾತನೆ ಪರಮಯೋಗಿ. ಆತನೆ ದಿವ್ಯಯೋಗಿ. ಇದಕ್ಕೆ ಶ್ರುತಿ : `ಕುಂಭಕಂ ಪರಮಂ ಪದಂ' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರೂಪಿಲ್ಲದ ಪುಸ್ತಕದ ಬರಹವ ಕಣ್ಣಿಲ್ಲದ ಕುರುಡನು ಕಂಡು ತೋರಿದನು, ಬಾಯಿಲ್ಲದ ಮೂಗನು ಓದಿದನು, ಕಿವಿಯಿಲ್ಲದ ಕಿವುಡ ಕೇಳಿ ಪರಿಣಾಮಿಸಿದ, ತಲೆಯಿಲ್ಲದ ಮೋಟನು ನಿಶ್ಚೈಯಿಸಿದನೆಂದು ನೆಲೆಯಿಲ್ಲದವ ಹೇಳಿದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರೇಚಿಸಿ ರೇಚಿಸಿ ಪೂರಿಸಲು ವಾಯು ಆಶ್ರಯವಂ ಕಂಡು ಆ ವಾಯು ಕುಂಭಕವಾಗಿ ನಿಂದು ತುಂಬಿ ತುಳುಕದಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ