ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಂಗಾಧರ ಗೌರೀಶ ದೇವರಲ್ಲ, ಶಂಕರ ಶಶಿಧರ ದೇವರಲ್ಲ, ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ, ತ್ರಿಶೂಲ ಖಟ್ವಾಂಗಧರರು ದೇವರಲ್ಲ, ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಹಿಡಿದ ಪ್ರಳಯಕಾಲರುದ್ರ ದೇವರಲ್ಲ, ನಿರಾಳಸ್ವಯಂಭುಲಿಂಗವ ತಾನೆಂದರಿದಡೆ ತಾನೆ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುದ ಘ್ರಾಣ ಚಿತ್ತ ಗಂಧ ಪೃಥ್ವಿ ಬ್ರಹ್ಮ ಆ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಧಾತಾ ಧಾತ್ರೀಚ ಗಂಧಂ ಚ ಚಿತ್ತಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮಣಿ ಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುಕಾರವೇ ನಿರ್ಗುಣಾತ್ಮನು, ರುಕಾರವೇ ಪರಮಾತ್ಮನು. ಗುಕಾರವೇ ಶಿವ, ರುಕಾರವೇ ಶಿವಾತ್ಮನು. ಈ ಉಭಯ ಸಂಗವೇ ಗುರುರೂಪ ನೋಡಾ. ಇದಕ್ಕೆ ಈಶ್ವರೋýವಾಚ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇದೇವ ಗುರುರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇದಕ್ಕೆ ವೀರಾಗಮೇ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋತ್ಸದದ್ಯಾತ್ಸ ಗುರುಸ್ಮೃತಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಯೋ ಗುರುಃ ಸ ಶಿವಃ ಪ್ರೋಕ್ತಃ ಯೋ ಶಿವಸ್ಸಗುರುಸ್ಮøತಃ | ಭುಕ್ತಿ ಮುಕ್ತಿ ಪ್ರದಾತಾ ಚ ಮಮ ರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇಂಥ ಮಹಾಮಹಿಮನೆ ಗುರುವಲ್ಲದೆ ಮಿಕ್ಕಿನ ನಾಮಧಾರಕ ಗುರುಗಳೆಲ್ಲ ಗುರುವಲ್ಲ ; ಆ ಗುರುವಿನ ಬೆಂಬಳಿಯವರೆಲ್ಲ ಶಿಷ್ಯರಲ್ಲ. ಆ ಗುರುಶಿಷ್ಯರಿಬ್ಬರಿಗೂ ಕುಂಭೀಪಾತಕವೆಂದುದು ನೋಡಾ. ಇದಕ್ಕೆ ಉತ್ತರವೀರಾಗಮೇ : ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಃ ಸದಾ | ಅಂಧಕಾಂಧಕರಾಯುಕ್ತಂ ದ್ವಿವಿಧಂ ಪಾತಕಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಕರುಣದಿಂದ ವಿಭೂತಿಯ ಪಟ್ಟವಂ ಕಟ್ಟಿ ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಬ್ರಹ್ಮರಂಧ್ರ ಶಿಖಾಚಕ್ರ ಪಶ್ಚಿಮಚಕ್ರ ನಾದಚಕ್ರ ಬಿಂದುಚಕ್ರ ಕಲಾಚಕ್ರವೆಂಬ ದ್ವಾದಶಚಕ್ರಂಗಳ ದಳ-ವರ್ಣ-ಅಕ್ಷರಂಗಳಂ ನ್ಯಾಸವಮಾಡಿ ತೋರಿದಬಳಿಕ ಆ ಶಿವಭಕ್ತನೆ ಶಿವನು, ಆತನ ಮತ್ರ್ಯನೆಂದರೆ ನಾಯಕನರಕ ತಪ್ಪದು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತನು ಈ ಆರು ಯೋಗಾಂಗವು ಆದಿಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಗಂಧಂ ಚ ರಸರೂಪಂ ಚ ಸ್ಪರ್ಶನಂ ಶಬ್ದಮೇವ ಹಿ | ಕರ್ತಾರಂ ಚೇತಿ ಯೋಗಾಂಗಂ ಆದಿಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ