ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನಲ್ಲಿಯ ಐಕ್ಯಂಗೆ ಪೃಥ್ವಿಯಲ್ಲಿಯ ಆತ್ಮನೆ ಅಂಗ, ಆ ಅಂಗಕ್ಕೆ ಸುಚಿತ್ತದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗಮುಖದಲ್ಲಿ ಎಲ್ಲಾ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಲ್ಲಿಯ ಪ್ರಸಾದಿಗೆ ಪೃಥ್ವಿಯಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ನಿರಹಂಕಾರವೇ ಹಸ್ತ, ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗಮುಖದಲ್ಲಿ ಚಿಗುರು ಮೊದಲಾದ ಪತ್ರೆಯ ಗಂಧದ್ರವ್ಯಮಂ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಾನುಕಿರಣಂಗಳು ಸರ್ವರ್ಲೋಕಂಗಳ ತುಂಬಿಕೊಂಡಿಹುದು. ಅದರ ಹಾಂಗೆ ಬ್ರಹ್ಮನಾಡಿ ಸರ್ವಾಂಗವೆಲ್ಲವ ತುಂಬಿ ಆಧಾರಚಕ್ರಂಗಳಾರನು ಹಾಯ್ದು, ಬ್ರಹ್ಮರಂಧ್ರವ ಮುಟ್ಟಿ, ನಾದ ಬಿಂದುಗಳಿಗೆ ಆಶ್ರಯವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಲ್ಲಿಯ ಪ್ರಾಣಲಿಂಗಿಗೆ ಪೃಥ್ವಿಯಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗಮುಖದಲ್ಲಿ ಮೊಗ್ಗೆ ಮೊದಲಾದ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಲ್ಲಿಯ ಶರಣಂಗೆ ಪೃಥ್ವಿಯಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಕಾಯಿ ಮೊದಲಾದ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಾಚಾರಲಿಂಗದಲ್ಲಿ ಭೋಜ್ಯ ಸಮರ್ಪಣವು. ಭಕ್ತನಲ್ಲಿಯ ಮಹೇಶ್ವರನ ಗುರುಲಿಂಗದಲ್ಲಿ ಪಾನೀಯ ಸಮರ್ಪಣವು. ಭಕ್ತನಲ್ಲಿಯ ಪ್ರಸಾದಿಯ ಶಿವಲಿಂಗದಲ್ಲಿ ಭಕ್ಷ್ಯ ಸಮರ್ಪಣವು. ಭಕ್ತನಲ್ಲಿಯ ಪ್ರಾಣಲಿಂಗಿಯ ಜಂಗಮಲಿಂಗದಲ್ಲಿ ಚೋಹ್ಯ ಸಮರ್ಪಣವು. ಭಕ್ತನಲ್ಲಿಯ ಶರಣನ ಪ್ರಸಾದಲಿಂಗದಲ್ಲಿ ಲೇಹ್ಯ ಸಮರ್ಪಣವು. ಭಕ್ತನಲ್ಲಿಯ ಐಕ್ಯನ ಮಹಾಲಿಂಗದಲ್ಲಿ ಭೋಜ್ಯ ಪಾನೀಯ ಭಕ್ಷ್ಯ ಚೋಹ್ಯ ಲೇಹ್ಯವೆಂಬ ಎಲ್ಲಾ ರುಚಿದ್ರವ್ಯಂಗಳನು ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭೂಚರಿಯಮುದ್ರೆಯ ದೇವರೆಂಬರು, ಆ ಭೂಚರಿಯಮುದ್ರೆಯು ದೇವರಲ್ಲ. ಖೇಚರಿಯಮುದ್ರೆಯ ದೇವರೆಂಬರು, ಆ ಖೇಚರಿಯಮುದ್ರೆಯು ದೇವರಲ್ಲ. ಶಾಂಭವಮುದ್ರೆಯ ದೇವರೆಂಬರು, ಆ ಶಾಂಭವಮುದ್ರೆಯು ದೇವರಲ್ಲ ನೋಡಾ. ಸ್ವಸ್ಥಪದ್ಮಾಸನದಲ್ಲಿ ಕುಳ್ಳಿರ್ದು ಶ್ರೋತ್ರ ನೇತ್ರ ಜಿಹ್ವೆ ಘ್ರಾಣವೆಂಬ ಸಪ್ತದ್ವಾರಂಗಳನೊತ್ತಿ ನೋಡಲು ಆ ಒತ್ತಿದ ಪ್ರಭೆಯಿಂದ ಕುಂಬಾರನ ಚಕ್ರದ ಹಾಂಗೆ ಶ್ವೇತ ಪೀತ ಕಪೋತ ಹರಿತ ಮಾಂಜಿಷ* ವರ್ಣವಾಗಿ ತೋರುವ ಷಣ್ಮುಖೀಮುದ್ರೆಯ ದೇವರೆಂಬರು ; ಅಲ್ಲಲ್ಲ ನೋಡಾ. ಇವೆಲ್ಲಕ್ಕೂ ಉತ್ಪತ್ತಿ ಸ್ಥಿತಿ ಲಯ ಉಂಟಾಗಿ ದೇವರಲ್ಲ ನೋಡಾ. ದೇವರಿಗೆ ಉತ್ಪತ್ತಿ ಸ್ಥಿತಿ ಲಯ ಉಂಟೆ ಹೇಳಾ ? ಈ ಉತ್ಪತ್ತಿ ಸ್ಥಿತಿ ಲಯವಿಲ್ಲದ ಪರಾಪರತತ್ವ ತಾನೆಂದರಿದಡೆ, ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭೂಮಿಯೆ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವನೆ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರೋýವಾಚ : ``ಚಿತ್ತಹಸ್ತೇ ಚ ಭೂಮ್ಯಾಂಗೌ ಭಕ್ತಶ್ಚಾಚಾರಲಿಂಗಕಂ | ಘ್ರಾಣೀ ಚ ತನ್ಮುಖೇ ಗಂಧಂ ಅರ್ಪಿತಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಾವಲಿಂಗದಲ್ಲಿ ಪ್ರಾಜ್ಞಾತ್ಮನೆಂಬ ಯೋಗಾಂಗವೈಕ್ಯವಾಯಿತ್ತು. ಪ್ರಾಣಲಿಂಗದಲ್ಲಿ ತೈಜಸಾತ್ಮವೆಂಬ ಭೋಗಾಂಗವೈಕ್ಯವಾಯಿತ್ತು. ಇಷ್ಟಲಿಂಗದಲ್ಲಿ ವಿಶ್ವಾತ್ಮವೆಂಬ ತ್ಯಾಗಾಂಗವೈಕ್ಯವಾಯಿತ್ತು. ಇದಕ್ಕೆ ಶ್ರೀ ಮಹಾದೇವ ಉವಾಚ : ``ಅಂಗಂ ತ್ವಂ ಪದಮಾಖ್ಯಾತಂ ಲಿಂಗಂ ತತ್ಪದಮೇವ ಚ | ಅನಯೋರೈಕ್ಯಬಾಹೋಯಂ ಸಂಬಂಧೋýಸಿಪದಾವಪಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಾವಲಿಂಗದಲ್ಲಿ ಐಕ್ಯ-ಶರಣಸ್ಥಲವೆಂಬ ಯೋಗಾಂಗವೈಕ್ಯವಾಯಿತ್ತು. ಪ್ರಾಣಲಿಂಗದಲ್ಲಿ ಪ್ರಾಣಲಿಂಗಿ-ಪ್ರಸಾದಿಸ್ಥಲವೆಂಬ ಭೋಗಾಂಗವೈಕ್ಯವಾಯಿತ್ತು. ಇಷ್ಟಲಿಂಗದಲ್ಲಿ ಮಹೇಶ್ವರ-ಭಕ್ತಸ್ಥಲವೆಂಬ ತ್ಯಾಗಾಂಗವೈಕ್ಯವಾಯಿತ್ತು ನೋಡಾ. ಇದಕ್ಕೆ ಈಶ್ವರ ಉವಾಚ : ``ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗವಿೂರಿತಂ | ಅನಯೋರೈಕ್ಯೇ ಬಾಹೋಯಂ ಸಂಬಂಧೋýಸಿಪದೇವಪಿ || ಸವಿತುಃ ಪದಮಂಗಸ್ಯಾತ್ ಭರ್ಗೋಲಿಂಗಮುದಾಹೃತಂ | ಧೀಮಹೀ ಪದಮಿತ್ಯೇಷಾಂ ಗಾಯತ್ರೀಂಹ್ಯಾಂಗಲಿಂಗವತ್ || ತಚ್ಛಬ್ದಂ ಲಿಂಗಮಿತ್ಯಾಹುಃ ಸವಿತುಃ ಅಂಗಮೇವಚ | ತತ್ಸವಿತುದ್ರ್ವಯೋರೈಕ್ಯಂ ಧೀಮಹೀ ಕಮಲೋದ್ಭವಾ ||'' ಇಂತೆಂದುದಾಗಿ, ಇದಕ್ಕೆ ಶ್ರುತಿ : ``ಸವಿತು ಪದಮೇ ಅಂಗಃ ಭರ್ಗೋ ತದಸ್ಯ ವರಣಿಯಾ | ಅನಯೋರೈಕ್ಯಂ ಧೀಮಹಿ ಪದಮಿತ್ಯೇಷಾಂ | ಪ್ರಾಹುರ್ಜೀವಪರಮೈಕ್ಯಂ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ