ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು, ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು, ಆಕಾಶದಲ್ಲಿ ಶಬ್ದವಿಹುದು, ತೃಪ್ತಿಯಲ್ಲಿ ಆತ್ಮನೆಂಬ ಮಹಾಭೂತಾಶ್ರಯವಾಗಿಹುದು ನೋಡಾ. ಇದಕ್ಕೆ ಶಿವಪ್ರಕಾಶಾಗಮೇ : ``ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಾಃ | ರೂಪ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ || ಶಬ್ದಮಾಕಾಶಮಾಶ್ರಿತ್ಯ ಆತ್ಮಾ ಚ ತೃಪ್ತಿ ಆಶ್ರಯಾಃ | ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ . ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ . ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ . ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ . ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಪೃಥ್ವಿಯೆಂದು, ಪರತತ್ತ್ವದ ಅಪ್ಪುವೆಂದು, ಪರತತ್ತ್ವದ ತೇಜವೆಂದು, ಪರತತ್ತ್ವದ ವಾಯುವೆಂದು, ಪರತತ್ತ್ವದ ಆಕಾಶವೆಂದು, ಪರತತ್ತ್ವದ ಹೃದಯವೆಂದು ಆರು ಪ್ರಕಾರವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ವಾಯುವಿನ ಮೇಲೆ ನಿರಂಜನ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರ ಎಪ್ಪತ್ತುದಳದಪದ್ಮ. ಆ ಪದ್ಮದ ವರ್ಣ ತೊಂಬತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಇನ್ನೂರ ಎಪ್ಪತ್ತಕ್ಷರ : ಆ ಅಕ್ಷರ ತತ್ತಾ ್ವತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದವೆಂಬ ಮಹಾಶಕ್ತಿ. ವಿಮಲಾನಂದಬ್ರಹ್ಮವೆ ಅದ್ಥಿದೇವತೆ. ಅಲ್ಲಿಯ ನಾದ ನಿರಾಳನಾದ. ಅಲ್ಲಿಯ ಬೀಜಾಕ್ಷರ ಕಲಾಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಂಚವಿಂಶತಿರಾತ್ರಿಗೆ ಪಂಚಾಂಕುರ ಸಂಪೂರ್ಣವಹುದು. ಏಕಮಾಸಕ್ಕೆ ಪಂಚತತ್ವ ಸಂಪೂರ್ಣವಾಗಿ ಧರಿಸೂದು. ದ್ವಿಮಾಸಕ್ಕೆ ಮಾಂಸ ಮೇದಸ್ಸು ಜನಿಸುವುದು. ಇದಕ್ಕೆ ಶ್ರೀಗರ್ಭ ಉವಾಚ : ``ಪಂಚವಿಂಶತಿ ಸಂಪೂರ್ಣೇ ಫಲಪಂಚಾಂಕುರಾಯತೇ | ಮಾಸೇನೈಕೇನ ಸಂಪೂರ್ಣಂ ಪಂಚತತ್ವಾನಿ ಧಾರಯೇತ್ | ಮಾಸದ್ವಯೇನ ಸಂಪೂರ್ಣಂ ಮಾಂಸಮೇದಃ ಪ್ರಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಂಚಾಕ್ಷರಿ ಪಂಚವಕ್ತ್ರಂಗಳ ನೆಲೆಯನರಿಯರು ಅಕಾರ ಉಕಾರ ಮಕಾರ ನಾದ ಬಿಂದು ಕಲೆಯನರಿಯರು ಪ್ರಣವಸ್ವರೂಪವನರಿಯರು ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ, ಗುರುಲಿಂಗಜಂಗಮವೆಂದು ಸುಳಿದಡೆ ಪಂಚಮಹಾಪಾತಕ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಂಚಮುಖ ದಶಭುಜವನುಳ್ಳ ಸದಾಶಿವನ ನಿರ್ಭಾವಮುಖದಲ್ಲಿ ಆತ್ಮನುತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷಮುಖದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವಮುಖದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತಮುಖದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಮನಸ್ಸಿನಲ್ಲಿ ಚಂದ್ರನುತ್ಪತ್ಯವಾಯಿತ್ತು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ಯವಾದನು ನೋಡಾ. ಇದಕ್ಕೆ ಈಶ್ವರೋsವಾಚ : ``ಸದ್ಯೋಜಾತಸ್ತಥಾಭೂಮಿ ವಾಮದೇವೋದ್ಭವೇ ಜಲಂ | ಅಘೋರಾದ್ವಹ್ನಿರಿತ್ಯುಕ್ತಂ ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಚಂದ್ರಮಾ ಮನಸೋಃ ಜಾತ ಚಕ್ಷುಃ ಸೂರ್ಯೋ ಅಜಾಯತ | ಆತ್ಮಾ ಗುಹ್ಯಮುಖಾಜ್ಜಾತಃ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಶ್ರೀಮಹಾದೇವ ಉವಾಚ : ``ಭೂಜಲಾಗ್ನಿ ಮರುದ್ವ್ಯೋಮ ಭಾಸ್ಕರೋ ಶಶಿಶೇಖರಃ | ದಿವಿಪ್ರಕಾಶತೇ ಸೂರ್ಯಃ ರಾತ್ರೌ ಚಂದ್ರಃಪ್ರಕಾಶತೇ | ಸರ್ವಚೈತನ್ಯಮಾತ್ಮಾನಂ ಶಿವಾಂಶೋsಷ್ಟಮೂರ್ತಯಃ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಹೃದಯದ ಮೇಲೆ ನಿರಂಜನ ಆಜ್ಞಾಚಕ್ರ. ಅಲ್ಲಿಯ ಪದ್ಮ ವಿಶ್ವತೋದಳಪದ್ಮ. ಆ ಪದ್ಮದ ವರ್ಣ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರಂಗಳು ವಿಶ್ವತೋ ಅಕ್ಷರಂಗಳು. ಆ ಅಕ್ಷರಂಗಳು ವಿಶ್ವಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದಾತೀತವೆಂಬ ಮಹಾಶಕ್ತಿ. ನಿರಂಜನಾತೀತವೆಂಬ ಮಹಾಘನಲಿಂಗವೆ ಅಧಿದೇವತೆ. ಅಲ್ಲಿಯ ನಾದ ಮಹಾಗುಹ್ಯನಾದ. ಅಲ್ಲಿಯ ಬೀಜಾಕ್ಷರ ನಿರಂಜನಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯೆಂಬ ಮಹಾಭೂತದಲ್ಲಿ ಆಚಾರಲಿಂಗವಿಹುದು. ಅಪ್ಪುವೆಂಬ ಮಹಾಭೂತದಲ್ಲಿ ಗುರುಲಿಂಗವಿಹುದು. ತೇಜವೆಂಬ ಮಹಾಭೂತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೆಂಬ ಮಹಾಭೂತದಲ್ಲಿ ಚರಲಿಂಗ ನ್ಯಾಸವಾಗಿಹುದು. ಆಕಾಶವೆಂಬ ಮಹಾಭೂತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮನೆಂಬ ಮಹಾಭೂತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಶಿವಲಿಂಗಸೂತ್ರೇ : ``ಆಚಾರಂ ಪೃಥ್ವಿಭೂತೇ ಚ ಜಲೇ ಚ ಗುರುಲಿಂಗಕಂ | ತೇಜಸ್ಯಪಿ ಶಿವಲಿಂಗಕಂ ವಾಯೌ ಚ ಚರಲಿಂಗಕಂ || ಪ್ರಸಾದಲಿಂಗಂ ಚಾಕಾಶೇ ಆತ್ಮನ್ಯಪಿ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಅಪ್ಪುವಿನ ಮೇಲೆ ನಿರಂಜನ ಸ್ವಾಧಿಷಾ*ನಚಕ್ರ. ಅಲ್ಲಿಯ ಪದ್ಮ ನಾನೂರಐವತ್ತು ದಳದಪದ್ಮ. ಆ ಪದ್ಮದ ವರ್ಣ ಎಪ್ಪತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ನಾನೂರಐವತ್ತಕ್ಷರ, ಆ ಅಕ್ಷರ ಮನಾತೀತವಾಗಿಹುದು. ಅಲ್ಲಿಯ ಶಕ್ತಿ ಆನಂದಶಕ್ತಿ , ಅಚಲಾನಂದ ಬ್ರಹ್ಮವೇ ಅಧಿದೇವತೆ. ಅಲ್ಲಿಯ ನಾದ ಪರನಾದ. ಅಲ್ಲಿಯ ಬೀಜಾಕ್ಷರ ಪರಬ್ರಹ್ಮಸ್ವರೂಪವಾಗಿಹ ಪರಮೋಂಕಾರ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೈಥ್ವಿ ಅಪ್ಪು ತೇಜ ವಾಯುವಾಕಾಶ ಚಂದ್ರ ಸೂರ್ಯ ಆತ್ಮರೆಂಬೀ ಅಷ್ಟತನುಮೂರ್ತಿಗಳು ತಾನಿರ್ದಲ್ಲಿ. ಹಿಮ, ಮಲಯ, ಶಕ್ತಿ, ವಿಂಧ್ಯ, ಮಹೇಂದ್ರ, ರುಕ್ಷವಂತ, ಸಹ್ಯವೆಂಬ ಸಪ್ತಕುಲಪರ್ವತಂಗಳು ತಾನಿರ್ದಲ್ಲಿ, ಲವಣ ಇಕ್ಷು ಸುರೆ ಅಮೈತ ದಧಿ ಕ್ಷೀರ ಶುದ್ಧಜಲವೆಂಬ ಸಪ್ತಸಮುದ್ರಂಗಳು ತಾನಿರ್ದಲ್ಲಿ, ಜಂಬುದ್ವೀಪ ಪ್ಲಕ್ಷದೀಪ ಕುಶದ್ವೀಪ ಶಾಕದ್ವೀಪ ಶಾಲ್ಮಲೀದ್ವೀಪ ಪುಷ್ಕರದ್ವೀಪ ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳು ತಾನಿರ್ದಲ್ಲಿ, ಸವಸ್ತಗ್ರಹರಾಶಿ ತಾರಾಪಥಂಗಳೆಲ್ಲ ತಾನಿರ್ದಲ್ಲಿ, ಪಿಂಡ ಬ್ರಹ್ಮಾಂಡಂಗಳು ತನ್ನಲ್ಲಿಯೆ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ ?
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪ್ರಾಣವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ ನೋಡಾ. ಇದಕ್ಕೆ ಈಶ್ವರೋýವಾಚ : ``ತಥಾ ಪ್ರಾಣೇ ಗುಣೇ ಲಿಂಗೇ ಲಿಂಗಪ್ರಾಣಸಮಾಹಿತಃ | ಸುಖದುಃಖೇ ಭಯಂ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಆತ್ಮನು ಈ ಪ್ರಕಾರವು ಅತ್ಯಂತ ಗೋಪ್ಯ, ಅತ್ಯಂತ ಸೂಕ್ಷ್ಮ, ಅತ್ಯಂತ ರಹಸ್ಯವಾಗಿಹುದು. ಈ ಆರನು ಗುರುಮುಖದಲಿ ಕೇಳಿಕೊಂಬುದು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಆಕಾಶದ ಮೇಲೆ ನಿರಂಜನ ವಿಶುದ್ಧಿಚಕ್ರ. ಅಲ್ಲಿಯ ಪದ್ಮ ನೂರಾ ಎಂಬತ್ತುದಳದಪದ್ಮ. ಆ ಪದ್ಮದ ವರ್ಣ ನೂರುಸಾವಿರದಾರುನೂರು ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ನೂರಾ ಎಂಬತ್ತಕ್ಷರ ; ಆ ಅಕ್ಷರ ಜ್ಞಾನಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯವೆಂಬ ಮಹಾಶಕ್ತಿ. ಆನಂದಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ನಿರಾಳಾನಂದವೆಂಬ ಮಹಾನಾದ. ಅಲ್ಲಿಯ ಬೀಜಾಕ್ಷರ ಅವಾಚ್ಯಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ. || 650 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ತೇಜದ ಮೇಲೆ ನಿರಂಜನ ಮಣಿಪೂರಕಚಕ್ರ. ಅಲ್ಲಿಯ ಪದ್ಮ ಮೂರುನೂರರುವತ್ತುದಳದಪದ್ಮ. ಆ ಪದ್ಮದ ವರ್ಣ ಎಂಬತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಮೂರುನೂರರುವತ್ತಕ್ಷರ ; ಆ ಅಕ್ಷರ ವರ್ಣಾತೀತವಾಗಿಹುದು. ಅಲ್ಲಿಯ ಶಕ್ತಿ ನಿತ್ಯಾನಂದಶಕ್ತಿ ; ವಿಮಲಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ಅಮಲಾನಂದವೆಂಬ ಮಹಾನಾದ. ಅಲ್ಲಿಯ ಬೀಜಾಕ್ಷರ ಅಖಂಡಮಹಾಜ್ಯೋತಿಪ್ರಣಮ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿಹ ಆಚಾರಲಿಂಗವು ಸಮಸ್ತವಾದ ತತ್ವಂಗಳ ನಿವಾಸಕ್ಕೋಸುಗ ಆಧಾರವಾದುದಾಗಿ, ಕರ್ಮರೂಪವಾದ ಕ್ರಿಯೆಯೆಂಬ ತನ್ನ ಶಕ್ತಿಯಿಂದ ಸರಿಯಿಲ್ಲದುದಾಗಿ ಚಿತ್ತದಿಂದ ಧರಿಸಲು ತಕ್ಕಂಥಾದುದಾಗಿ ಆಶ್ರಯಿಸಲು ಪಟ್ಟ ಮೋಕ್ಷಮಾರ್ಗ ಉಳ್ಳುದಾಗಿ ಇದ್ದುದು ನೋಡಾ ಆಚಾರಲಿಂಗ. ಇದಕ್ಕೆ ಮಹಾವಾತುಲಾಗಮೇ :ವಸಂತತಿಲಕವೃತ್ತ- ``ಕರ್ಮಾತ್ಮನಾ ಸಕಲತತ್ವ ನಿವಾಸಹೇತೋ ರಾಧಾರಭೂತಮತುಲಂ ಕ್ರಿಯಯಾ ಸ್ವ ಶಕ್ತ್ಯಾ | ಚಿತ್ತೇನ ಧಾರ್ಯಮತಿರೂಢ ನಿವೃತ್ತಿಮಾರ್ಗಂ ಆಚಾರಲಿಂಗಮಿತಿ ವೇದವಿದೋ ವದಂತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರಾಪರವಿಲ್ಲದಂದು ಆ ಪರಾಪರಕ್ಕಪರವಾಗಿಹ ಪರಬ್ರಹ್ಮವಿಲ್ಲದಂದು, ಪರಶಿವವಿಲ್ಲದಂದು, ಶೂನ್ಯ ನಿಃಶೂನ್ಯ ಮಹಾಶೂನ್ಯ ಅತಿಮಹಾಶೂನ್ಯ ಎಂಬ ಮಹಾಘನವಸ್ತುವಿಲ್ಲದಂದು, ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯವಾಗಿಹ ನಿರಾಮಯಬ್ರಹ್ಮವಿಲ್ಲದಂದು, ಶಂಕರ ಶಶಿಧರ ಗಂಗಾಧರ ಗೌರೀಶ ವೃಷಭವಾಹನರಿಲ್ಲದಂದು, ಉಮಾಪತಿಯಿಲ್ಲದಂದು, ಸುರಾಳ-ನಿರಾಳ, ಹಮ್ಮು-ಬಿಮ್ಮು ಮದಹಂಕಾರವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು, ಪೃಥ್ವಿ ಅಪ್ಪು ತೇಜ ವಾಯು ಆಕಾಶವಿಲ್ಲದಂದು, ಚಂದ್ರಸೂರ್ಯಾತ್ಮರಿಲ್ಲದಂದು, ಇವೇನೂ ಎನಲಿಲ್ಲದಂದು, ನಿರಂಜನಾತೀತನಾಗಿರ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ ದೇಹವ ದೇವರೆಂಬರು ; ಆ ದೇಹವು ದೇವರಲ್ಲ ನೋಡಾ. ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು ; ಆ ಮನ ದೇವರಲ್ಲ ನೋಡಾ. ಆ ಮನದಿಂದಾದ ಬುದ್ಧಿಯ ದೇವರೆಂಬರು ; ಆ ಬುದ್ಧಿ ದೇವರಲ್ಲ ನೋಡಾ. ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು ; ಆ ಚಿತ್ತ ದೇವರಲ್ಲ ನೋಡಾ. ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು ; ಆ ಅಹಂಕಾರ ದೇವರಲ್ಲ ನೋಡಾ. ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು ; ಆ ಅಳಿವ ಜೀವ ದೇವರಲ್ಲ ನೋಡಾ. ಇವೆಲ್ಲ ಅಳಿವವಲ್ಲದೆ ಉಳಿವವಲ್ಲ ; ದೇವರಿಗೆ ಅಳುವುಂಟೆ ? ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ, ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರಸ್ತ್ರೀ ಪರಧನದಾಸೆಯ ಬಿಟ್ಟು ಶುದ್ಧವಾಗಿ ಲಿಂಗನಿಷೆ*ಯುಳ್ಳುದೀಗ ಮಾಹೇಶ್ವರಸ್ಥಲ ನೋಡಾ. ಇದಕ್ಕೆ ಮಹಾದೇವೋýವಾಚ : ``ಪರಸ್ತ್ರಿಯಂ ಪರಾರ್ಥಂ ಚ ವರ್ಜಿತ್ವಾಭವ ಶುದ್ಧಿಮಾನ್ | ಲಿಂಗನಿಷಾ*ನಿಯುಕ್ತಾ ಚ ಮಾಹೇಶ್ವರಸ್ಥಲಮುತ್ತಮಂ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞನು ಈ ಆರು ಭೂತಾಂಗವು ಪರಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಭೂಜಲಾಗ್ನಿಮರುದ್ಯೋಮ ಕ್ಷೇತ್ರಜ್ಞಾನಶ್ಚ ದೇವ ಹಿ | ಭೂತಾಂಗಂ ಚ ಮಿದಂ ಪ್ರೋಕ್ತಂ ಪರಾಶಕ್ತಿಶ್ಚ ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರದಲ್ಲಿ ಮನವ ಶಿಲ್ಕಿಸಿ ನಾಶಿಕಾಗ್ರದ ಮೇಲೆ ನಯನಾಂಬುಧಿಗಳಂ ತುಂಬಿ, ಮೂಲಜ್ವಾಲೆಯ ಸುಷುಮ್ನನಾಳದ ಬಟ್ಟೆಯತುದಿಯನಡರಿ, ಬ್ರಹ್ಮರಂಧ್ರವ ಮುಟ್ಟಿ, ಮೂಲಾಧಾರಮಂಡಲ ನಿಶ್ವಾಸಮಂ ಪಿಡಿದು, ಹೊರಡದೆ ಸಾಧಿಸುವ ಯೋಗಿಗಳಿಗೆ ಮೇಲೆ ಕೊಡನುಕ್ಕಿತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಸರ ಪಸರ ತಪ್ಪದಿಹ ಗಾಜುಗಳೆಲ್ಲ ರತ್ನವಾಗಬಹುದೆ ಅಯ್ಯಾ ? ಕೇರಿ ಕೇರಿ ತಪ್ಪದಿಹ ಶ್ವಾನವೆಲ್ಲ ಸಿಂಹವಾಗಬಹುದೆ ಅಯ್ಯಾ ? ಧರೆಯೊಳಗೆ ಬಿದ್ದು ಹೊರಳುವ ನಾಮಧಾರಕಗುರುಗಳೆಲ್ಲ ಸದ್ಗುರುವಾಗಬಲ್ಲರೆ ಅಯ್ಯಾ ? ಇದು ಕಾರಣ ಮನವು ಮಹದಲ್ಲಿ ನಿಂದು ಪರಿಣಾಮ ನೆಲೆಗೊಂಡ ಮಹಾನುಭಾವ ಸದ್ಗುರು ಕೋಟಿಗೊಬ್ಬರು ಇಲ್ಲವೆಂಬೆನು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಭೂತದಲ್ಲಿ ಸುಚಿತ್ತಹಸ್ತವಿಹುದು, ಅಪ್ಪುಭೂತದಲ್ಲಿ ಸುಬುದ್ಧಿಹಸ್ತವಿಹುದು, ತೇಜಭೂತದಲ್ಲಿ ನಿರಹಂಕಾರಹಸ್ತವಿಹುದು, ವಾಯುಭೂತದಲ್ಲಿ ಸುಮನಹಸ್ತವಿಹುದು, ಆಕಾಶಭೂತದಲ್ಲಿ ಸುಜ್ಞಾನಹಸ್ತವಿಹುದು, ಆತ್ಮಭೂತದಲ್ಲಿ ಭಾವಹಸ್ತವಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಪೃಥ್ವೀ ಚ ಚಿತ್ತಮಾಶ್ರಿತ್ಯ ಹಸ್ತೇ ಬುದ್ಧಿಃ ಸಮಾಚರೇತ್ | ಅಹಂಕಾರಶ್ಚ ತೇಜಶ್ಚ ಮಾರುತಂ ಚ ಮನಃ ಶ್ರಿತಾ || ಆಕಾಶೋ ಜ್ಞಾನಮಾಶ್ರಿತ್ಯ ಆತ್ಮಾ ಚ ಭಾವಮಾಶ್ರಿತಃ | ಇತಿ ಹಸ್ತಸ್ಯಹನ್ಯಾಸಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಿಂಗಳನಾಳವಮುಚ್ಚಿ ಇಡಾನಾಳದಲ್ಲಿ ತೆಗೆದು, ಪಿಂಗಳನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು. ಇಡಾನಾಳವ ಮುಚ್ಚಿ ಪಿಂಗಳನಾಳದಲ್ಲಿ ತೆಗೆದು, ಇಡಾನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು. ಹೀಂಗೆ ಪೂರಿಸಿ ಪೂರಿಸಿ ರೇಚಿಸಲು ಉಕ್ಕುವದು ನೋಡಾ ಪೂರಕದೊಳು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ

ಇನ್ನಷ್ಟು ...