ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸುಕರ್ಮದಿಂದ ದೇವತಾಯೋನಿಯಲ್ಲಿ ಜನಿಸುವನು. ದುಷ್ಕರ್ಮದಿಂದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳ ಕ್ರೂರಯೋನಿಯಲ್ಲಿ ಜನಿಸುವನು. ಸುಕರ್ಮ ದುಷ್ಕರ್ಮ ಎರಡರ ಮಿಶ್ರಣದಿಂದ ಮನುಜಯೋನಿಯಲ್ಲಿ ಜನಿಸುವನು. ಇಂತಪ್ಪ ಸುಕರ್ಮ ದುಷ್ಕರ್ಮಗಳು ಪೂರ್ವಕರ್ಮವಶದಿಂದ ಬಹವು ನೋಡಾ. ಇದಕ್ಕೆ ಸೂತಸಂಹಿತಾಯಾಂ : ``ಪುಣ್ಯಾದ್ದೇವತ್ವಮಾಪ್ನೋತಿ ಪಾಪಾತ್ ಸ್ಥಾವರತಾಮಿಯಾತ್ | ಸಮಾಭ್ಯಾಂ ಪಾಪಪುಣ್ಯಾಭ್ಯಾಂ ಮಾನುಷ್ಯೇ ಪರಿರ್ವರ್ತತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ವಾಧಿಷಾ*ನಚಕ್ರದ ಷಡುದಳಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಮನ ಪವನ ಬಿಂದುವಂ ಏಕೀಕರಿಸಿ ನಾಭಿಚಕ್ರಕ್ಕೆ ನೆಗೆದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಧಾತುಗಳಿಂದ ದೇಹವಾಗಿ ಬೆಳೆದ ಪಿಂಡ ಅಪಾದಮಸ್ತಕವೆಲ್ಲ ಬ್ರಹ್ಮಾಂಡಸಂಗ್ರಹಮಾಗಿ ತೋರ್ಪುದದೆಂತೆಂದಡೆ : ಪಾದತಳದಲ್ಲಿ ಅತಳಲೋಕ, ಪಾದೋಧ್ರ್ವದಲ್ಲಿ ವಿತಳಲೋಕ, ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ನಿತಳಲೋಕ, ಊರುದ್ವಯದಲ್ಲಿ ತಳಾತಳಲೋಕ, ಗುಹ್ಯಸ್ಥಾನದಲ್ಲಿ ರಸಾತಳಲೋಕ, ಕಟಿಯಲ್ಲಿ ಪಾತಾಳಲೋಕ. ಆ ಕಟಿಸ್ಥಾನದ ಪಾತಾಳಲೋಕದ ಮೇಲೆ ಅಧೋಬ್ರಹ್ಮರಂಧ್ರ ವಳಯಾಕೃತವಾಗಿಹುದು. ಆ ಅಧೋಬ್ರಹ್ಮರಂಧ್ರದ ವಳಯಾಕೃತದೊಳು ಅಮೃತವೆಂಬ ಮಹಾಜಲವಿಹುದು. ಅಮೃತವೆಂಬ ಮಹಾಜಲದಮೇಲೆ ಅಧೋಜ್ಯೋತಿಪ್ರಣಮಲಿಂಗವೆಂಬ ಮಹಾಕಮಠನಿಹುದು. ಆ ಮಹಾಕಮಠನ ಮೇಲೆ ಅಧೋಕುಂಡಲಿಯ ಸರ್ಪನೆಂಬ ಮಹಾವಾಸುಗಿ ಇಹುದು. ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳೆಂಬ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು. ಆ ಭೂಲೋಕ ನಾಭಿಸ್ಥಾನಂಗಳಲ್ಲಿಹುದು. ಕುಕ್ಷಿಯಲ್ಲಿ ಭುವರ್ಲೋಕವಿಹುದು. ಹೃದಯಸ್ಥಾನದಲ್ಲಿ ಸ್ವರ್ಲೋಕವಿಹುದು. ವಕ್ಷದಲ್ಲಿ ಮಹರ್ಲೋಕವಿಹುದು. ಕಂಠಸ್ಥಾನದಲ್ಲಿ ಜನರ್ಲೋಕವಿಹುದು. ಲಲಾಟದಲ್ಲಿ ತಪರ್ಲೋಕವಿಹುದು. ಶಿರಸ್ಥಾನದಲ್ಲಿ ಸತ್ಯರ್ಲೋಕವಿಹುದು. ಬ್ರಹ್ಮರಂಧ್ರದಲ್ಲಿ ಮಹಾಪ್ರಳಯಜಲವಿಹುದು. ಶಿಖಾಚಕ್ರದಲ್ಲಿ ಶಿವಾಂಡವಿಹುದು. ಪಶ್ಚಿಮಚಕ್ರದಲ್ಲಿ ಚಿದ್ಬ್ರಹ್ಮಾಂಡವಿಹುದು. ಇದಕ್ಕೆ ಶ್ರೀ ಮಹಾದೇವ ಉವಾಚ : ``ಪಾದಸ್ವತಲಂ ವಿದ್ಯಾತ್ ಪಾದೋಧ್ರ್ವಂ ವಿತಲಂ ಭವೇತ್ | ಸುತಲಂ ಜಂಘದೇಶೇಷು ನಿತಲಂ ಜಾನುನೋದಯೇ || ತಲಾತಲಂ ಚ ಉಭ್ಯಾಗಂ ಗುಹ್ಯಸ್ಥಾನೇ ರಸಾತಲಂ | ಪಾತಾಲಂ ಕಟಿರಿತ್ಯುಕ್ತಂ ಸಪ್ತಮಂ ಪರಿಕೀರ್ತಿತಂ || ಭೂಲೋಕಂ ನಾಭಿಮಧ್ಯಸ್ಥಂ ಭುವರ್ಲೋಕಂತು ಕುಕ್ಷಿಗಂ | ಹೃದಿಸ್ಥಂ ಸ್ವರ್ಲೋಕಂತು ಮಹರ್ಲೋಕಂತು ವಕ್ಷಸಿ || ಕಂಠಸ್ಥಂ ಜನರ್ಲೋಕಂತು ತಪರ್ಲೋಕಂ ಲಲಾಟಕೇ | ಸತ್ಯರ್ಲೋಕಮೂದ್ರ್ಧನ್ಯಸ್ತಿಂ ಭುವನಾನಿ ಚತುರ್ದಶ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಕೋಟಿ ಮಹಾಮಂತ್ರ ವಿಶಾಲವಾಗದಂದು, ತೊಂಬತ್ತುನಾಲ್ಕು ಪದ ವಿಶಾಲವಾಗದಂದು, ವರ್ಣ ಐವತ್ತೆರಡು ವಿಶಾಲವಾಗದಂದು, ಇನ್ನೂರಾ ಇಪ್ಪತ್ತುನಾಲ್ಕು ಭುವನ ವಿಶಾಲವಾಗದಂದು, ತೊಂಬತ್ತಾರುತತ್ವ ವಿಶಾಲವಾಗದಂದು, ಅರುವತ್ತುನಾಲ್ಕು ಕಲೆಜ್ಞಾನ ವಿಶಾಲವಾಗದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳೆಲ್ಲ ಸಂಕಲ್ಪವಿಕಲ್ಪ ಭ್ರಾಂತುಭ್ರಮೆಯ ಕೆಡಿಸಲಲ್ಲದೆ ವಾಯುವಶವಾದಡೆ ಬೇರೆ ಬ್ರಹ್ಮವನರಸಲುಂಟೆ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸರ್ವೇಂದ್ರಿಯಂಗಳಿಗೆ ಒಡೆಯನಹಂತಾ ಮನಸ್ಸು, ಆ ಮನಸ್ಸಿಗೊಡೆಯನಹಂತಾ ಪವನ, ಆ ಮನ ಪವನಂಗಳು ಸಮಾನಂಗೊಂಡು ಇಂದ್ರಿಯಂಗಳನು ಸೂಸಲೀಯದೆ ಸ್ಥಿರಚಿತ್ತನಾಗಿಹುದೆ ಪ್ರತ್ಯಾಹಾರಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಂಸಾರವೆಂಬ ಅರಣ್ಯದೊಳು ಬಿದ್ದೆನು. ಆಸೆಯೆಂಬ ಹುಲಿ ಬಂದು ಹಿಡಿಯಿತ್ತಯ್ಯ ಎನ್ನ. ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿ ಆಸೆಯೆಂಬ ಹುಲಿಯ ಕೊಂದು ನಿಮ್ಮತ್ತ ತೆಗೆದುಕೊಳ್ಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸೂರ್ಯನ ಗ್ರಹಣದಂತೆ ಸರ್ವಗ್ರಹಣವಾಯಿತ್ತಯ್ಯಾ ಎನಗೆ. ಸಂಸಾರವೆಂಬ ರಾಹು ಸರ್ವಗ್ರಹಣವಾಗಿ ಹಿಡಿದು ನುಂಗಿತ್ತಯ್ಯಾ ಎನ್ನ. ಈ ಬೆಂದ ಸಂಸಾರ ಎಂದು ಸಮನಾಗಿ ಮೋಕ್ಷವಹುದೋ ? ಇನ್ನೆಂದಿಂಗೆ ಪರಮಪದವಹುದೊ ಅಯ್ಯಾ ಅಪ್ರಮಾಣಕೂಡಲಸಂಗಮದೇವಾ ?
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಕೋಟಿ ಮಹಾಮಂತ್ರಂಗಳು ತಾನಿರ್ದಲ್ಲಿ, ತೊಂಬತ್ತುನಾಲ್ಕು ವ್ಯೋಮವ್ಯಾಪಿಪದಂಗಳು ತಾನಿರ್ದಲ್ಲಿ, ಅಕಾರಾದಿ ಕ್ಷಕಾರಾಂತವಾದ ಐವತ್ತೆರಡು ಅಕ್ಷರಂಗಳು ತಾನಿರ್ದಲ್ಲಿ, ಇನ್ನೂರ ಇಪ್ಪತ್ತುನಾಲ್ಕು ಭುವನಂಗಳು ತಾನಿರ್ದಲ್ಲಿ, ಮೂವತ್ತಾರು ತತ್ವಂಗಳು ತಾನಿರ್ದಲ್ಲಿ, ಷಟ್ಕಲೆ ದ್ವಾದಶಕಲೆ ಷೋಡಶಕಲೆಗಳು ತಾನಿರ್ದಲ್ಲಿ, ಅರುವತ್ತುನಾಲ್ಕು ಕಲೆಯ ಜ್ಞಾನಂಗಳು ತಾನಿರ್ದಲ್ಲಿ, ಇವೆಲ್ಲವು ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಾದ ಕಾರಣ ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ, ತಾನೆ ಪರಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ವಪ್ನವಾವುದು ? ಶ್ರೋತ್ರಾದಿಗಳೈದು, ವಾಗಾದಿಗಳೈದು -ಈ ಹತ್ತು ಕರಣಂಗಳು ಭ್ರೂಮಧ್ಯದಲ್ಲಿ ನಿಂದು ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು , ಕರಣ ನಾಲ್ಕು, ಪುರುಷನೊಬ್ಬ- ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು ಗಗನಕ್ಕೆ ಹಾರುವ ಹಾಂಗೆ, ಮುಗಿಲಹತ್ತುವ ಹಾಂಗೆ, ನಾನಾ ವ್ಯಾಪಿಯಂ ಕಂಡ ಅವರ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ಥೂಲಕಾಯ ಶರೀರ ಶುಕ್ಲಶೋಣಿತದಿಂದ ಎರಡಕ್ಕೆ ಎರಡು ಕಾಲು, ಬ್ರಹ್ಮಗ್ರಂಥಿ ಏಳು, ವಿಷ್ಣುಗ್ರಂಥಿ ಏಳು, ರುದ್ರಗ್ರಂಥಿ ಏಳು, ಮೂರೇಳು ಇಪ್ಪತ್ತೊಂದು ಗ್ರಂಥಿಯನುಳ್ಳ ಕಂಕಾಳದಂಡವು. ಆ ಕಂಕಾಳದಂಡದ ದ್ವಾರದಲ್ಲಿ ಷೋಡಶಕಳೆಯನ್ನುಳ್ಳ ವೀಣಾದಂಡವು. ಮೂರುಗೇಣು ಎಲುವು, ಮೂರುಗೇಣು ಮಾಂಸವು, ಮೂವತ್ತೆರಡು ಪಕ್ಕದೆಲುವು, ನಾಲ್ಕುಗೇಣು ಗಾತ್ರವು, ಎಂಟು ಗೇಣು ಉದ್ದವು. ಆದಿ ನಾಲ್ಕು ಬಾಗಿಲನುಳ್ಳುದಾಗಿ, ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳಿಂದ ದೇಹವಾಗಿ ಬೆಳೆಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲತತ್ವವಿಲ್ಲದಂದು, ನಿಷ್ಕಲತತ್ವವಿಲ್ಲದಂದು, ಸಕಲನಿಷ್ಕಲತತ್ವವಿಲ್ಲದಂದು, ಪರಶಿವತತ್ವವಿಲ್ಲದಂದು, ನಿರಂಜನತತ್ವವಿಲ್ಲದಂದು, ಈ ತತ್ವಗಳೇನೂ ಎನಲಿಲ್ಲದಂದು, ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ಥೂಲತನುವಿನಲ್ಲಿ ಇಷ್ಟಲಿಂಗ ಸ್ವಾಯತವಾಗಿಹುದು. ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗ ಸ್ವಾಯತವಾಗಿಹುದು. ಕಾರಣತನುವಾದ ಆತ್ಮಾಂಗದಲ್ಲಿ ಭಾವಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಮಹಾಲಿಂಗಾಗಮೇ : ``ಇಷ್ಟಲಿಂಗಂತು ಬಾಹ್ಯಾಂಗೇ ಪ್ರಾಣಲಿಂಗಂ ತಥಾýಂತರೇ | ಭಾವಲಿಂಗಂ ಸದೈವಾತ್ಮಾ ಸ್ವಾಂಗೇýಸ್ಮಿನ್ ಸುಪ್ರತಿಷಿ*ತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಂಸಾರವೆಂಬ ಸಾಗರದೊಳು ಬಿದ್ದು ಮುಳುಗಿದೆನಯ್ಯ. ತಲೆಯುದ್ದವೆಂಬೆನೆ ? ತಲೆಯುದ್ದವಲ್ಲ. ಉರದುದ್ದವೆಂಬೆನೆ ? ಉರದುದ್ದವಲ್ಲ. ಕೊರಳುದ್ದವೆಂಬೆನೆ ? ಕೊರಳುದ್ದವಲ್ಲ. ಶಿರದುದ್ದವೆಂಬೆನೆ ?ಶಿರದುದ್ದವಲ್ಲ. ಮುಗಿಲುದ್ದವಾದ ಬಳಿಕ ಇನ್ನೇವೆ ಇನ್ನೇವೆನಯ್ಯಾ ? ಸಂಸಾರಸಾಗರದೊಳು ಬಿದ್ದು ಮುಳುಗಿಹನ ತೆಗೆದು ಕಾಯಯ್ಯ ಕಾಯಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲಾಗಮ ಶಿಖಾಮಣಿಯನು, ಅಪ್ರಮಾಣ ಕೂಡಲಸಂಗಯ್ಯನ ನಿರೂಪದಿಂದ ಪರ ಮೊದಲಾಗಿ ಬ್ರಹ್ಮ ಕಡೆಯಾಗಿ ಸೃಷ್ಟಿ ಮಾರ್ಗವ ನಿರೂಪಿಸಿಹೆನು, ಚಿತ್ತೈಸುವದು ಶರಣಜನಂಗಳು. ಪರಾಪರವಾಗಿಹ ಪರಬ್ರಹ್ಮ ಲೋಕಾದಿ ಲೋಕಗಳ ಸೃಜಿಸಬೇಕೆಂದು ನೆನಹುಮಾತ್ರದಲ್ಲಿಯೇ ಆ ಪರಾಪರವಾಗಿಹ ಪರಬ್ರಹ್ಮದಲ್ಲಿ ಪರ ಉತ್ಪತ್ಯವಾಯಿತ್ತು, ಆ ಪರದಲ್ಲಿ ಶಿವನುತ್ಪತ್ಯವಾದನು, ಆ ಶಿವನಲ್ಲಿ ಶಕ್ತಿ ಉತ್ಪತ್ಯವಾದಳು, ಆ ಶಕ್ತಿಯಲ್ಲಿ ಬಿಂದು ಉತ್ಪತ್ಯವಾಯಿತ್ತು. ಆ ಬಿಂದುವಿನಲ್ಲಿ ನಾದ ಉತ್ಪತ್ಯವಾಯಿತ್ತು. ಆ ನಾದದಲ್ಲಿ ಸದಾಶಿವನುತ್ಪತ್ಯವಾದನು. ಆ ಸದಾಶಿವನ ಗೌಪ್ಯವಕ್ತ್ರದಲ್ಲಿ ಆತ್ಮನುತ್ಪತ್ಯವಾದನು. ಆ ಸದಾಶಿವನ ಈಶಾನವಕ್ತ್ರದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷವಕ್ತ್ರದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವವಕ್ತ್ರದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತವಕ್ತ್ರದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಹೃದಯದಲ್ಲಿ ಚಂದ್ರನುತ್ಪತ್ತಿಯಾದನು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ತಿಯಾದನು. ಆ ಸದಾಶಿವನು ಆಕಾಶಕ್ಕೆ ಅಧಿದೇವತೆಯಾಗಿಹನು. ಆ ಸದಾಶಿವನಲ್ಲಿ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಗಧಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ರುದ್ರನುತ್ಪತ್ತಿಯಾಗಿ ಅಗ್ನಿಗಧಿದೇವತೆಯಾಗಿಹನು. ಆ ರುದ್ರನಲ್ಲಿ ವಿಷ್ಣು ಉತ್ಪತ್ತಿಯಾಗಿ ಅಪ್ಪುವಿಗಧಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಬ್ರಹ್ಮನುತ್ಪತ್ತಿಯಾಗಿ ಪೃಥ್ವಿಗಧಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜಗಂಗಳು ಉತ್ಪತ್ಯವಾಯಿತ್ತು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಚ್ಚಿದಾನಂದ ಪರಮಾನಂದವಿಲ್ಲದತ್ತತ್ತ , ಚಿದಾತ್ಮ ಪರಮಾತ್ಮವಿಲ್ಲದತ್ತತ್ತ , ಚಿನ್ಮಯ ಚಿದ್ರೂಪ ಚಿತ್ಪ್ರಕಾಶವಿಲ್ಲದತ್ತತ್ತ , ಶಿವಜ್ಞಾನ ಮಹಾಜ್ಞಾನವಿಲ್ಲದತ್ತತ್ತ , ಶಿವನೆಂಬ ನಾಮಸೀಮೆ ಏನೂ ಏನೂ ಎನಲಿಲ್ಲದತ್ತತ್ತ ಕಲಾಪ್ರಣವವಾಗಿದ್ದನಯ್ಯ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಚ್ಚಿದಾನಂದಸ್ವರೂಪವಾಗಿಹ ಪರಬ್ರಹ್ಮನೆ ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು. ಅದೆಂತೆಂದಡೆ : ಸತ್ತೇ ಭಾವಲಿಂಗ, ಚಿತ್ತೇ ಪ್ರಾಣಲಿಂಗ, ಆನಂದವೇ ಇಷ್ಟಲಿಂಗ ನೋಡಾ. ಇದಕ್ಕೆ ಈಶ್ವರೋýವಾಚ : ``ಸಚ್ಚಿದಾನಂದರೂಪಂ ಚ ಇಷ್ಟಪ್ರಾಣಂತು ಭಾವಕಂ | ಸತ್ತು ಸದ್ಭಾವಲಿಂಗಂ ಚ ಚಿತ್ತು ಚಿತ್ಪ್ರಾಣಲಿಂಗಕಂ | ಆನಂದಂ ಇಷ್ಟಲಿಂಗಂ ಚ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸುಷುಪ್ತಿ ಯಾವುದು ? ವಚನಾದಿಗಳೈದು, ಶಬ್ದಾದಿಗಳೈದು, ಕರಣದಲ್ಲಿ ಚಿತ್ತವಲ್ಲದೆ ಮೂರು. ದಶವಾಯುಗಳಲ್ಲಿ ಪ್ರಾಣವಾಯುವಲ್ಲದೆ, ವಾಯು ಒಂಬತ್ತು. ಈ ಇಪ್ಪತ್ತುಮೂರು ಕರಣಂಗಳು ಕಂಠಸ್ಥಾನದಲ್ಲಿ ನಿಂದು ಚಿತ್ತವನು, ಪ್ರಾಣವಾಯುವನು, ಪುರುಷನನು ಈ ಮೂರು ಕರಣಂಗಳೊಡನೆ ಹೃದಯಸ್ಥಾನದಲ್ಲಿ ನಿಂದು, ಅನೇಕ ಚಿಂತನೆಯ ಮಾಡುವುದು, ಜಾಗ್ರದಲ್ಲಿ ನಿಂದರೆ ಹೇಳಲರಿಯದಿಪ್ಪುದು ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ