ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘನಕ್ಕೆ ಘನವಾದ ಮಹಾಘನದೋಂಕಾರವಿಲ್ಲದಂದು, ಪರಮ ಅಕಾರ ಪರಮ ಉಕಾರ ಪರಮ ಮಕಾರವಿಲ್ಲದಂದು, ಅನಾದಿ ಅಕಾರ ಅನಾದಿ ಉಕಾರ ಅನಾದಿ ಮಕಾರವಿಲ್ಲದಂದು, ಆದಿ ಅಕಾರ ಆದಿ ಉಕಾರ ಆದಿ ಮಕಾರ, ಅಕಾರ ಉಕಾರ ಮಕಾರವಿಲ್ಲದಂದು, ಪ್ರಕೃತಿ ಪ್ರಣವ ಓಂಕಾರ ಉತ್ಪತ್ಯವಾಗದಂದು, ನಿರಂಜನ ಪ್ರಣವವಾಗಿರ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಚೇತನ ಈ ಆರು ವಿದ್ಯಾಂಗವು ಜ್ಞಾನಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಘ್ರಾಣಂ ಜಿಹ್ವಾ ಚ ನೇತ್ರಂ ಚ ತ್ವಕ್ ಶ್ರೋತ್ರಂ ಚೇತನಂ ವಿದುಃ | ಷಟ್ಕಂ ವಿದ್ಯಾಂಗಮೇವೇತಿ ಜ್ಞಾನಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಘ್ರಾಣ ಪೃಥ್ವಿಯಾಶ್ರಯವಾಗಿಹುದು. ಜಿಹ್ವೆ ಅಪ್ಪುವಾಶ್ರಯವಾಗಿಹುದು. ನೇತ್ರ ತೇಜವಾಶ್ರಯವಾಗಿಹುದು. ತ್ವಕ್ಕು ವಾಯುವಾಶ್ರಯವಾಗಿಹುದು. ಶ್ರೋತ್ರ ಆಕಾಶವಾಶ್ರಯವಾಗಿಹುದು. ಮನ ಆತ್ಮಾಶ್ರಯವಾಗಿಹುದು ನೋಡಾ. ಇದಕ್ಕೆ ಜ್ಯೋತಿಪ್ರಕಾಶೇ : ``ಘ್ರಾಣಂ ಪೃಥ್ವೀಮಾಶ್ರಿತ್ಯ ಜಿಹ್ವಾ ಚ ಜಲಮಾಶ್ರಿತಾ | ನೇತ್ರಂ ಚ ತೇಜವಾಶ್ರಿತ್ಯ ತ್ವಕ್ ಚೈವ ವಾಯುಮಾಶ್ರಿತಾ || ಶ್ರೋತ್ರಂ ಚಾಕಾಶಮಾಶ್ರಿತ್ಯ ಮನಃ ಸ್ಯಾದಾತ್ಮಾಶ್ರಯಂ | ಇತಿ ಷಷ*ಮುಖಂ ದೇವೀ ಸ್ಥಾನ ಸ್ಥಾನೇ ಸಮಾಚರೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ