ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ ಸಂಭ್ರಮಿಸುತ್ತದೆ ಸಂಸಾರದಲ್ಲಿ. ಕುಂಭದೊಳಗಣ ಸುಧೆಯನುಂಬ ಭೇದವನರಿಯದೆ ಸುಂಬಳಗುರಿಯಂತಾದವು ಜಗವೆಲ್ಲವು. ಒಂಭತ್ತುನಾಳದೊಳಗಣ ಮಧ್ಯನಾಳದ ಬೆಂಬಳಿಯಲ್ಲಿ ಎಯ್ದಿದಾತಗೆ ಸುಧೆ ಸಾಧ್ಯವು. ತೊಂಬತ್ತಾರು ಅಂಗುಲ ದೇಹವೆಲ್ಲವನೂ ತುಂಬುವುದು. ಮತ್ತಂತು ಆ ಸುಧೆಯನು ಹಂಬಲಿಸಲೇಕೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಹಂಬಲವನು ಬಿಡದಿರ್ದಡಾತ ಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಇದ ಮಾಡಬಹುದೆಂಬ, ಇದ ಮಾಡಬಾರದೆಂಬ ಪುಣ್ಯ ಪಾಪ ರೂಪಾದ, ವಿಧಿ ನಿಷೇಧಂಗಳಿಂದಾದ, ಶುಭಾಶುಭಂಗಳನು ಮೀರಿದ, ಭಕ್ತಿ ಮುಕ್ತಿಗಳೆರಡೂ ಲಿಂಗಾರ್ಪಿತವಾಗಿ, ತಾ ಲಿಂಗದೊಳಗಡಗಿದ ಬಳಿಕ, ಪುಣ್ಯ ಪಾಪದ ಫಲಭೋಗಂಗಳು ತನಗೆ ಮುನ್ನವೇ ಇಲ್ಲ, ಇಂತಪ್ಪ ಸ್ವತಂತ್ರ ಶರಣನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ.
--------------
ಸ್ವತಂತ್ರ ಸಿದ್ಧಲಿಂಗ
ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ, ಭ್ರಮೆಗೊಂಡು ಬಳಲಬೇಡ ಮರುಳೇ. ಎಂಬತ್ತುನಾಲ್ಕುಲಕ್ಷ ಯೋನಿಯೊಳಗಾದ ಸಮಸ್ತ ಜೀವರಿಗೆ, ಭೋಗವನೂ, ಭೋಗವಿಷಯಜ್ಞಾನವನೂ, ಕೊಟ್ಟು ಸಲಹುವ ದೇವನು, ತನ್ನ ಸಲಹಲಾರನೆ? ಇದನರಿದು ಮತ್ತೇಕೆ ಚಿಂತಿಸುವೆ ಮರುಳೇ? ಹುಟ್ಟಿಸಿದ ದೇವನು ರಕ್ಷಿಸುವನಲ್ಲದೆ ಮಾಣನೆಂಬುದನರಿಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಕರುಣಿ ಕೃಪಾಳುವೆಂಬುದನರಿಯ ಮರುಳೇ.
--------------
ಸ್ವತಂತ್ರ ಸಿದ್ಧಲಿಂಗ
ಇಂದು ಭಾನುವನೊಂದುಗೂಡಿಸಿ, ಬಿಂದು ನಾದವನೊಂದುಮಾಡಿ, ಅವರಲ್ಲಿ ತಂದಿರಿಸಿದ ಜೀವ ಪ್ರಾಣಂಗಳನು. ಅವರೊಳಗೆ ಕರಣೇಂದ್ರಿಯಗಳ ಹುರಿಗೊಳಿಸಿ, ನಾಡಿ ಚಕ್ರಂಗಳಿಂದ ಜಂತ್ರವ ಹೂಡಿ ನಿಲಿಸಿ, ತಾಯಿ ಉಂಡ ಅನ್ನರಸವ ನಾಭಿಸೂತ್ರದಲ್ಲಿ ಶಿಶುವಿಗೆ ಊಡಿಸಿ, ಜೀವಿಸಿದ ಶಿಶುವ ಯೋನಿಮುಖದಿಂ ಹೊರವಡಿಸಿ, ತಾಯಿಯ ಸ್ತನದಲ್ಲಿ ಅಮೃತವ ತುಂಬಿ ಊಡಿಸಿ, ಸಲಹುವ ದೇವನ ಮರೆವ ಜೀವರಿಗೆ ಇನ್ನಾವಗತಿಯೂ ಇಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ. ಒಬ್ಬನೇ ದೇವ ಕಾಣಿರಣ್ಣ. ``ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ ಇತಿ ಯತ್ಮ ನಿಶ್ಚಿತಾ ಧೀಃ ಸ ವೈ ಮಾಹೇಶ್ವರಃ ಸ್ಮøತಃ||' ಎಂದವಾಗಮಂಗಳು. `ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು. ಇದು ಕಾರಣ, ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ