ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘ್ರಾಣ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಜಿಹ್ವೆ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ನೇತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ತ್ವಕ್ಕು ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಶ್ರೋತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಮನ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು. ಇಂತು ಸರ್ವೇಂದ್ರಿಯಂಗಳು ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಘಟಮಠೋಪಾಧಿಯೊಡನೆ ಕೂಡಿ, ಆಕಾಶವಿದ್ದಿತ್ತೆಂದೊಡೆ ಆ ಘಟಮಠದಂತೆ ಖಂಡಿತವಹುದೆ ಅಖಂಡಬಯಲು? ಪಿಂಡದೊಳಗಾತ್ಮನಿದ್ದನೆಂದೊಡೆ, ಆ ಪಿಂಡದಂತೆ ಖಂಡಿತನಹನೆ? ಪರಿಪೂರ್ಣ ಪರಂಜ್ಯೋತಿ ಪರಮಾತ್ಮನು ಷಟ್ತ್ರಂಶತ್ ತತ್ತ್ವಂಗಳಿಂದ ಕೂಡಿದ ಜ್ಞಾನಪಿಂಡದೊಳಗೆ, ಹೃದಯಕಮಲಸಿಂಹಾಸನದ ಮೇಲೆ ಮೂರ್ತಿಗೊಂಡಿದ್ದನಯ್ಯಾ. ಜಲದೊಳಗೆ ಹೊಳೆವಾಗಸದಂತೆ, ಮನದೊಳಗೆ ಮನರೂಪನಾಗಿ ಬೆಳಗುತ್ತಿದ್ದನಯ್ಯ ಪರಶಿವನು. ಇಂತಾದ ಕಾರಣ, ಸಪ್ತಧಾತು ಸಮೇತವಾದ ಶರಣನ ಕಾಯವೇ ಕೈಲಾಸವಾಯಿತ್ತು, ಮನ ಸಿಂಹಾಸನವಾಯಿತ್ತು. ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ. ಅಲ್ಲಿ ನಿವೃತ್ತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ ಆಚಾರಲಿಂಗವ ಧರಿಸಿದಾತ ಭಕ್ತನು. ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ. ಅಲ್ಲಿ ಪ್ರತಿಷೆ* ಎಂಬ ಕಲೆಯಿಹುದು. ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ ಗುರುಲಿಂಗವ ಧರಿಸಿದಾತ ಮಾಹೇಶ್ವರನು. ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ. ಅಲ್ಲಿ ವಿದ್ಯೆ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ. ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ. ಅಲ್ಲಿ ಶಾಂತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ. ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು. ಆತ್ಮಾಂಗಕ್ಕೆ ಮನ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ ಮಹಾಲಿಂಗವ ಧರಿಸಿಕೊಂಡಾತ ಐಕ್ಯನು. ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ ನಿರಾಳಲಿಂಗಾರ್ಚನೆಯ ಮಾಡುತ್ತಿಹರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಪ್ರಭುವೇ.
--------------
ಸ್ವತಂತ್ರ ಸಿದ್ಧಲಿಂಗ