ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚೌಪೀಠದ ಮಂಟಪದಲ್ಲಿ ಗುರು ಕುಳ್ಳಿರ್ದು, ದ್ವಿದಳಮಂಟಪದಲ್ಲಿರ್ದ ಶಿಷ್ಯಂಗೆ, ತ್ರಿಕೂಟಸ್ಥಾನದ ಲಿಂಗವನುಪದೇಶಿಸಿ ತೋರಿ, ಗುರುಲಿಂಗದೊಳಗಾದನು. ಇದು ಕರಚೋದ್ಯ ನೋಡಾ. ಶಿಷ್ಯ ಲಿಂಗವ ಗ್ರಹಿಸಿ ಲಿಂಗವಾದ ಪರಿಯನು ಇತರರ್ಗರಿಯಬಹುದೇ?, ಜ್ಞಾನೋಪದೇಶದ ಬಗೆಯನು, ನಿಜಗುರು ಸಿದ್ಧಲಿಂಗೇಶ್ವರ ನಿಮ್ಮ ಶರಣ ಬಲ್ಲನು.
--------------
ಸ್ವತಂತ್ರ ಸಿದ್ಧಲಿಂಗ
ಚಿತ್ತೆಂಬ ಬಿತ್ತು ಬಲಿದು ಕಲೆಯಂಕುರಿಸಿದಲ್ಲಿ, ನಿಮಗೆ ತ್ರಿವಿಧನಾಮ ಸೂಚನೆಯಾಯಿತ್ತು. ನಿಮ್ಮ ನಾಮದ ಬೆಂಬಳಿಯಲ್ಲಿ ನಿಮ್ಮ ಶಕ್ತಿ. ಇಚ್ಛಾ ಜ್ಞಾನ ಕ್ರಿಯಾಶಕ್ತಿ ರೂಪಾದ ನಾನಾಶಕ್ತಿ ಭೇದವಾಗಿ, ಅಂದು ನಿಮಗೆ ಚಂದ್ರಧರಾದಿ ಸ್ಥಾಣು ಕಡೆಯಾದ ನಾನಾ ಲೀಲೆಗಳಾದವು. ಆ ನಿಮ್ಮಿಬ್ಬರಿಂದ ರುದ್ರಾವತಾರಗಳಾದವು. ನಿಮ್ಮ ಬೆರಗಿನ ಲೀಲೆಯ ಬಲ್ಲವರಾರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಚಂದ್ರಕಾಂತದ ಶಿಲೆಯಲ್ಲಿ ಉದಕವೊಸರದಿಪ್ಪಂತೆ, ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿ ಸ್ಫುರಿಸದಿಪ್ಪಂತೆ, ಬೀಜದೊಳಗಣ ವೃಕ್ಷ ಅಂಕುರಿಸದಿಪ್ಪಂತೆ, ಇಪ್ಪನಯ್ಯ ಶಿವನು ಪಿಂಡದೊಳಗೆ ಪಿಂಡರೂಪಾಗಿ. ಈ ಪರಿಯಲ್ಲಿ ಗೋಪ್ಯವಾಗಿರ್ದೆನ್ನಲ್ಲಿ ಕಾಣಿಸಿಕೊಳ್ಳದಿದ್ರ್ದಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಚಂದ್ರಸೂರ್ಯರ ಹಿಡಿದೆಳೆತಂದು ಒಂದೇ ಠಾವಿನಲ್ಲಿ ಬಂಧಿಸಿ, ನಿಲಿಸಿದೆ. ಸಂದಿಗೊಂದಿಯ ಹೋಗಲೀಯದೆ ಒಂದೇ ಠಾವಿನಲ್ಲಿ ನಿಲಿಸಿದೆನು. ಚಂದ್ರಸೂರ್ಯರು ಒಂದಾಗಿ ಮಹಾ ಮಾರ್ಗದಲ್ಲಿ ನಡೆದರಯ್ಯ. ಬಂಧಿಸಿದ ಮೇಲಣ ಕದಹು ತೆರಹಿತ್ತು. ಇಂದ್ರನ ವಾಹನವಳಿಯಿತ್ತು. ಮುಂದೆ ಹೋಗಿ ಹೊಕ್ಕೆನು ಕೈಲಾಸವ. ಅಲ್ಲಿರ್ದ ಅಮರಗಣಂಗಳು, ಉಘೇ ಎನಲು ಕೇಳಿ ತ್ರಿಬಂಧದ ಕೀಲು ಕಳೆಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನೊಳಗೆನ್ನನು ಇಂಬಿಟ್ಟುಕೊಂಡನು.
--------------
ಸ್ವತಂತ್ರ ಸಿದ್ಧಲಿಂಗ
ಚಂದ್ರ ಚಂದ್ರಿಕೆಯಂತೆ, ಅಗ್ನಿ ಉಷ್ಣದಂತೆ, ರತ್ನ ಕಾಂತಿಯಂತೆ, ಬ್ರಹ್ಮವ ಬಿಡದೆ ತೋರುವ ಬ್ರಹ್ಮಶಕ್ತಿ ಬ್ರಹ್ಮದ ಅಂತಃಕರಣವಾದ ಕಾರಣ ವಿಶ್ವಭಾಜನವೆನಿಸಿತ್ತು. ಬೀಜದಲ್ಲಿ ವೃಕ್ಷ ಪತ್ರೆ ಫಲಂಗಳು ತೋರುವಂತೆ, ಬ್ರಹ್ಮದ ಹೃದಯಬೀಜದಲ್ಲಿ ವಿಶ್ವವು ತೋರುವುದಾಗಿ, ಆ ವಿಶ್ವಭಾಜನವಾದ ಚಿತ್ತೇ ತನ್ನ ಸ್ವರೂಪವೆಂದು ಕಂಡ ಜೀವನ್ಮುಕ್ತಂಗೆ ವಿಧಿ-ನಿಷೇಧ, ಸಂಕಲ್ಪ- ವಿಕಲ್ಪ, ಪ್ರಕೃತಿ-ವಿಕೃತಿ ಮೊದಲಾದ ಜಗದ್ವಾಪಾರವೆಂಬುದೇನೂ ಇಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣ ನಿಮ್ಮ ಕೂಡಿ ನಿಮ್ಮಂತಹನು.
--------------
ಸ್ವತಂತ್ರ ಸಿದ್ಧಲಿಂಗ
ಚಂದ್ರನಿಲ್ಲದ ರಾತ್ರಿ, ಸೂರ್ಯನಿಲ್ಲದ ದಿವಸವೇತಕ್ಕೆ ಬಾತೆ? ಅಂತರಂಗ ಸನ್ನಿಹಿತವಾದ ಪರಶಿವನೆಂಬ ಗುರುವಿಲ್ಲದವನ, ಅರಿವು ಆಚಾರ ಕ್ರಿಯೆ ಭಕ್ತಿ ವಿರಕ್ತಿ ಏತಕ್ಕೆ ಬಾತೆ? ಇದು ಕಾರಣ, ಸ್ವಾನುಭಾವಿ ಗುರುವಿನ ಅನುವಿನಲ್ಲಿದ್ದು ಆಚರಿಸುವ, ಭಕ್ತನ ಆಚಾರ ಶುದ್ಧ, ಆತನ ಭಕ್ತಿ ಜ್ಞಾನ ವೈರಾಗ್ಯ ಶುದ್ಧ. ಆತನೇ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ