ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉರಗನ ಫಣಾಮಣಿಯ ಬೆಳಗನರಿ ಕಂಡಾ. ಉರವಣಿಸಿ ಮೇಲಕ್ಕೆ ಹಾರುವ ಹದ್ದಿನ ಪರಿಯನರಿ ಕಂಡಾ. ಸರಸ್ವತಿ ಸಿರಿಯೊಡನೇಕಾಂತದಲ್ಲಿಹ ಪರಿಯನರಿ ಕಂಡಾ. ಹರಿಯಜರುದ್ರರ ಕರ್ಮವನಳಿದ ಪರಿಯನರಿ ಕಂಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ತಾನೆಂದರಿ ಕಂಡಾ.
--------------
ಸ್ವತಂತ್ರ ಸಿದ್ಧಲಿಂಗ
ಉದಯಾಸ್ತಮಯವೆಂಬೆರಡಿಲ್ಲದ ಚಿದಾದಿತ್ಯನ ಬೆಳಗು ಮೂರುಲೋಕವ ಬೆಳಗಲು ಅಜ್ಞಾನವೆಂಬ ಕತ್ತಲೆ ಹರಿದು, ಬೆಳಗೇ ಅವರಿಸಿತ್ತು. ಆ ಬೆಳಗಿನೊಳಗಣ ಬೆಳಗು ತಾನೆಂದರಿದ ಕಾರಣ ಬೆಳಗು ಬೆಳಗ ಹಳಚಿ ಎರಡೊಂದಾದ ಘನವನೇನೆಂದುಪಮಿಸುವೆನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅವಿರಳ ಲಿಂಗೈಕ್ಯವನು.
--------------
ಸ್ವತಂತ್ರ ಸಿದ್ಧಲಿಂಗ