ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಏಳುಜನ್ಮದಲ್ಲಿ ಮಾಡಿದ ಪಾಪ, ಎಂತು ಕೆಡುವುದೆಂದು ಚಿಂತಿಸಬೇಡ. ಭಾಳದಲ್ಲಿ ಭಸಿತವನಿಟ್ಟು, ಲಾಲನೆಯಿಂದ ಭಾಳಲೋಚನನ ನೋಡಿದಾಕ್ಷಣ, ಏಳುಜನ್ಮದ ಪಾಪಂಗಳು ಹರಿದು ಹೋಹವು ನೋಡಿರಣ್ಣ. ಕೀಳು ಮೇಲಹನು. ಮೇಲೆ ಶಿವಲೋಕವಹುದು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಸನ್ನಿಧಿಯಲ್ಲಿ ಸುಖವಹುದು ಕೇಳಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಏನೆಂದರಿಯರು, ಎಂತೆಂದರಿಯರು, ಹಗರಣದ ಹಬ್ಬಕ್ಕೆ ಜಗದ ಜನರೆಲ್ಲ ನೆರೆದು, ಗೊಂದಣಗೊಳುತ್ತಿದ್ದರಲ್ಲ. ತ್ರಿಭಂಗಿಯ ತಿಂದು, ಅದು ತಲೆಗೇರಿ ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು. ಶಿವ ಶಿವಾ, ಮಾಯಾಜಾಲದಲ್ಲಿ ಸಿಕ್ಕಿದ ಮರುಳು ಜನರು, ಮುಕ್ಕಣ್ಣನಿಕ್ಕಿದ ಛತ್ರದಲುಂಡು ಸೊಕ್ಕಿ, ಸಲಹುವ ಕರ್ತನನರಿಯದವರಿಗೆನ್ನೆತ್ತಣ ಮುಕ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಏಳುನೆಲೆಯಲ್ಲಿ ಹೂಳಿದ ನಿಧಾನವ ಸಾಧಿಸಹೋದರೆ ಸಾಧಕನನದು ನುಂಗಿತ್ತು ನೋಡಾ. ಸಾಧಿಸಹೋದ ಕಲಿಗಳೆಲ್ಲಾ ನಿಧಾನವ ಸಾಧಿಸಹೋಗಿ ತಾವೆ ನಿಧಾನಕ್ಕೆ ಬಲಿಯಾದರು. ಬಲ್ಲಿದರೆಲ್ಲರ ನುಂಗಿ, ಬಡವರನುಳುಹಿತ್ತು. ಇಂತಪ್ಪ ನಿಧಾನವ ಕಂಡರಿಯೆವು, ಕೇಳಿ ಅರಿಯೆವು ಎಂದು ಸಾಧಕನೊಡನಿದ್ದ ಸಾಹಸಿಗಳೆಲ್ಲಾ ಬೆರಗಾಗಿ ನಿಂದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಧಾನವ ಸಾಧಿಸಿ, ನಾನು ಬದುಕಿದೆನು.
--------------
ಸ್ವತಂತ್ರ ಸಿದ್ಧಲಿಂಗ
ಏನ ಮಾಡುವೆನಯ್ಯ? ಈ ಮನವೆಂಬ ಮರ್ಕಟನ ಸಂಗದಿಂದ, ಮರ್ಕಟವಿಧಿಯಾಯಿತ್ತಯ್ಯ. ತನುವೆಂಬ ವೃಕ್ಷದಲ್ಲಿ ಇಂದ್ರಿಯಂಗಳೆಂಬ ಶಾಖೋಪಶಾಖೆಗಳಿಗೆ ಲಂಘಿಸುತ್ತಿದೆ ನೋಡಯ್ಯ. ಸಜ್ಜನರಿಗೆ ದುರ್ಜನರ ಸಂಗದಿಂದ ದುರ್ಜನಿಕೆ ಬಂದಂತಾಯಿತ್ತಯ್ಯ. ಈ ಮನದ ಮರ್ಕಟತನವ ಮಾಣಿಸಿ ನಿಮ್ಮಲ್ಲಿ ಕಟ್ಟಿ ಬಂಧವಾಗಿರಿಸೀಮನವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ