ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎರವಿನ ಬದುಕು ಸ್ಥಿರವಲ್ಲ. ಅಭ್ರಛಾಯದಂತೆ ನಿಮುಷದಲ್ಲಿ ತೋರಿಯಡಗಲು, ಈ ಸಂಸಾರದಲ್ಲೇನು ಲೇಸು ಕಂಡು ನಚ್ಚುವೆ? ನಚ್ಚದಿರು. ನಚ್ಚಿದವರ ಕೆಟ್ಟ ಕೇಡಿಂಗೆ ಕಡೆಯಿಲ್ಲ. ಬರಿಯ ಬಯಲ ಭ್ರಮೆ ಸಟೆಯ ಸಂಸಾರ. ಇದರಲ್ಲೇನೂ ಲೇಸಿಲ್ಲವೆಂದರಿದು ದೃಢವಿಡಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶ್ರೀಚರಣವನು.
--------------
ಸ್ವತಂತ್ರ ಸಿದ್ಧಲಿಂಗ
ಎಲೆ ಶಿವನೆ, ನಾ ನಿಮ್ಮನೊಂದೆ ಬೇಡಿಕೊಂಬೆನು: ನಿಮ್ಮ ಶರಣರ ಮೂರ್ತಿಯ ಕಂಡಡೆ, ನೀವೆಂದೆ ಕಾಬಂತೆ ಮಾಡಯ್ಯಾ. ನಿಮ್ಮ ಶರಣರ ನುಡಿಯ ಕೇಳಿದಡೆ, ನಿಮ್ಮ ನುಡಿಯೆಂದು ನಂಬುವಂತೆ ಮಾಡಯ್ಯಾ. ನಿಮ್ಮ ಶರಣರ ಸುಖವೆಲ್ಲ, ನಿಮ್ಮ ಸುಖವೆಂದು ತಿಳಿವಂತೆ ಮಾಡಯ್ಯಾ. ನಿಮ್ಮ ಶರಣರಾಡಿತೆಲ್ಲ, ನಿಮ್ಮ ಲೀಲೆಯೆಂದರಿವಂತೆ ಮಾಡಯ್ಯಾ ಎನಗೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಲುವಿಲ್ಲದ ನಾಲಗೆಯ ಪಡೆದೆವೆಂದು, ಹಲವು ಪರಿಯಲುಲಿವರಯ್ಯ ಮಾಯಾಮಲಿನ ದೇಹಿಗಳು. ಜಗದೀಶನವರ ಕೆಡಹದೆ ಮಾಣ್ಬನೆ ಅಘೋರ ಸಂಸಾರ ಕಗ್ಗೆಸರೊಳಗೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನಲ್ಲಿ ಭಕ್ತಿಯಿಲ್ಲದವರ?.
--------------
ಸ್ವತಂತ್ರ ಸಿದ್ಧಲಿಂಗ
ಎತ್ತನೇರಿ ನಡೆಸುವ ಅಣ್ಣಗಳಿರ, ಎತ್ತಿನವರೆಡು ಹಿಂಗಾಲು ಮುರಿದು, ಮುಂಗಾಲಲ್ಲಿ ನಡೆಸಬೇಕು. ಕೋಡೆರಡ ಕಿತ್ತುಹಾಕಿ ಬೋಳುಮಾಡಿ, ಹುಲ್ಲು ನೀರಿಲ್ಲದ ಮೇಹ ಹಾಕಿ ಸಲಹಬೇಕು. ಎತ್ತಿನಿಚ್ಚೆಯಲ್ಲಿ ಹೋಗದೆ, ಕಿರುವಟ್ಟೆಯ ಬಿಟ್ಟು, ಹೆಬ್ಬಟ್ಟೆಯಲ್ಲಿ ನಡೆಸಬೇಕು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನತ್ತ, ಅಭಿಮುಖವಾಗಿ ನಡೆಸಬೇಕು ಕೇಳಿರಣ್ಣ.
--------------
ಸ್ವತಂತ್ರ ಸಿದ್ಧಲಿಂಗ
ಎನ್ನ ಶ್ರೀಗುರು ಮಾಡಿದ ಕರುಣಕಿನ್ನಾವುದು ಕಡೆ, ಏನೆಂದುಪಮಿಸುವೆನಯ್ಯ? ಕಾಣಬಾರದ ಲಿಂಗವ ಕಾಣಿಸಿ ಕೊಟ್ಟನೆನ್ನ ಕರದಲ್ಲಿ. ತಿಳಿಯಬಾರದ ಜ್ಞಾನವ ತಿಳಿಸಿ, ಮನದಲ್ಲಿ ನೆಲೆಗೊಳಿಸಿದ. ಒಳಹೊರಗೆ ತಳವೆಳಗು ಮಾಡಿ, ಆಚಾರವನುಗೊಳಿಸಿ ಅಂಗದಲ್ಲಿ ಸ್ಥಾಪಿಸಿ ಹಿಂದ ಮರೆಸಿ, ಮುಂದ ತೋರಿದನಯ್ಯಾ. ಶ್ರೀಗುರು, ಕರುಣಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಎಲೆಯುದುರಿದ ವೃಕ್ಷ ಉಲಿಯಬಲ್ಲುದೆ? ಜಲವರತ ತಟಾಕ ಗೊರೆಗೊಳಬಲ್ಲುದೆ? ಸಲೆ ಶಿವನನರಿದು ತಾ ಶಿವನೊಳು ಕೂಡಿ ಮಾಡುವ ಕ್ರೀ ಫಲವ ಕೊಡಬಲ್ಲುದೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾಡುವ ಕ್ರೀ, ಹುರಿದ ಬೀಜದಂತೆ.
--------------
ಸ್ವತಂತ್ರ ಸಿದ್ಧಲಿಂಗ
ಎಲೆ ಅಯ್ಯಾ, ನೀವು ನಿರಾಕಾರವಾಗಿರ್ದಿರಾಗಿ, ಆ ನಿರಾಕಾರವೆ ಪಂಚಮದಲ್ಲಿ ನಿಂದಡೆ ನಾದ ತೋರಿತ್ತು. ಆ ನಾದದಲ್ಲಿ ಬಿಂದು ತೋರಿತ್ತು. ಆ ನಾದ ಬಿಂದುಗಳನೊಡೆದು ಮೂಡಿ, ನಿರುಪಾಧಿಕ ಜ್ಯೋತಿಯಂತೆ ಸಕಲ ನಿಃಕಲ ರೂಪಾದಿರಯ್ಯ. ರವಿಕೋಟಿ ತೇಜ ಪರಿಪೂರ್ಣ ಮೂಲಚೈತನ್ಯ ರೂಪು ನೀವು ಕಂಡಯ್ಯ. ಭೇದಿಸಬಾರದಭೇದ್ಯ ಸಾಧಿಸಬಾರದಸಾಧ್ಯ ನೀವು ಕಂಡಯ್ಯ. ನಿಮ್ಮ ಸಹಜದ ನಿಲವನಾರು ಬಲ್ಲರು? ನಿಮ್ಮಿಂದ ನೀವೇ ರೂಪಾದಿರಯ್ಯ. ನಿಮ್ಮ ಪರಿಣಾಮಪದದಲ್ಲೊಂದನಂತಕಾಲವಿರ್ದಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಲ್ಲೆಲ್ಲಿ ನೋಡಿದಡಲ್ಲಲ್ಲಿ ನೀನೆ ದೇವ. ಪಿಂಡಾಂಡಂಗಳೊಳಗೆಲ್ಲ ನೀನೆ ದೇವ. ಮಹದಾಕಾಶರೂಪ ನಿರುಪಾಧಿಕ ಪರಂಜ್ಯೋತಿ ನೀನೆ ದೇವ. ಉಪಮಾತೀತ ವಾಙ್ಮನಕ್ಕಗೋಚರ ನೀನೆ ದೇವ. ಸ್ವಾನುಭೂತಿ ಸ್ವರೂಪ ಶರಣಜನ ಮನೋವಲ್ಲಭ ನೀನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ