ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ, ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ ಲಿಂಗದೇಹವು. ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ ತಾನೇ ಇಷ್ಟಲಿಂಗವು. ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ, ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು.
--------------
ಸ್ವತಂತ್ರ ಸಿದ್ಧಲಿಂಗ
ಊರೊಂದೆಸೆ, ಕಾಡೊಂದೆಸೆ. ನರರೊಂದೆಸೆ, ಸುರರೊಂದೆಸೆ, ಹಗಲೊಂದೆಸೆ, ಇರುಳೊಂದೆಸೆ. ಪುಣ್ಯವೊಂದೆಸೆ, ಪಾಪವೊಂದೆಸೆ. ಜ್ಞಾನವೊಂದೆಸೆ, ಅಜ್ಞಾನವೊಂದೆಸೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣರೊಂದೆಸೆ, ಲೋಕವೊಂದೆಸೆ.
--------------
ಸ್ವತಂತ್ರ ಸಿದ್ಧಲಿಂಗ
ಊರ ಮೇಗಡೆಯಲೊಂದು ನರಿ ಕೂಗಿಡಲು ಹರಡಿದ್ದವರೆಲ್ಲ ನೆರೆದು, ಇದೆಲ್ಲಿಯ ಕೂಗೆಂದು ವಿಚಾರಿಸಹೋದರೆ, ನೆರದವರನೆಲ್ಲರ ನರಿ ನುಂಗಲು, ಊರು ಹಾಳಾಯಿತ್ತು. ಹಾಳೂರೊಳಗಿದ್ದರಸು, ಪರಿವಾರವನರಸಲೆಂದು ಹೋದರೆ, ಆ ಅರಸನ ನುಂಗಿತ್ತು. ಆ ಅರಸನ ವಾಹನವ ನುಂಗಿ, ತನಗಾರೂ ಸರಿಯಿಲ್ಲವೆಂದು ಮೂರು ಮೊನೆಯ ಗಿರಿಯನೇರಿ ಬಟ್ಟಬಯಲಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಊಧ್ರ್ವಮುಖಮೂಲ ಅಧೋಶಾಖೆಯಾದ ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದಾನೆ. ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ. ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು ನಾನು ಬೆರಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ