ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪು ಕುರೂಪುಗಳನು, ಲಿಂಗ ನೋಡಿದಡೆ ನೋಡುವನು, ಲಿಂಗ ನೂಕಿದಡೆ ತಾ ನೂಕುವನು. ಶಬ್ದಾಪಶಬ್ದಂಗಳನು ಲಿಂಗ ಕೇಳಿದಡೆ ಕೇಳುವನು, ಲಿಂಗ ತಾ ನೂಕಿದಡೆ ನೂಕುವನು. ಸುರಸ ಕುರಸಂಗಳನು ಲಿಂಗ ಸವಿದಡೆ ಸವಿವನು, ಲಿಂಗ ನೂಕಿದಡೆ ತಾ ನೂಕುವನು. ಗಂಧ ದುರ್ಗಂಧಗಳನು ಲಿಂಗ ವಾಸಿಸಿದಡೆ ವಾಸಿಸುವ, ಲಿಂಗ ನೂಕಿದಡೆ ತಾ ನೂಕುವನು. ಮೃದು ಕಠಿಣ ಶೀತೋಷ್ಣಂಗಳನು ಲಿಂಗ ಸೋಂಕಿದಡೆ ಸೋಂಕುವನು. ಲಿಂಗ ನೂಕಿದಡೆ ತಾ ನೂಕುವನು. ಲಿಂಗಮಧ್ಯಪ್ರಸಾದಿಯಾದ ಕಾರಣ ಲಿಂಗದೊಡನೆ ಕೂಡಿ ಅರಿದು ಭೋಗಿಸಿ ಸುಖಿಸುವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ ವಿವರಿಸಿ ತಿಳಿದು ನೋಡೆ, ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ ಶಿವ ಕಲಾ ರೂಪ ಚೈತನ್ಯ. ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ; ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ ತಾನಿದಿರೆಂಬುದ ಮರೆದು ಬ್ಥಿನ್ನವಿಲ್ಲದೆ ಶಿವಸುಖದೊಳಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ರೂಪು ಕುರೂಪು ವಿಕಾರಂಗಳು ಮುಕುರವ ನೋಡುವರ ಗುಣವಲ್ಲದೆ ಮುಕುರಕ್ಕೆ ವಿಕಾರಗುಣವುಂಟೆ? ಪಾಪಿಗಳು ಕೋಪಿಗಳು ಪರಿಭ್ರಷ್ಟರು ಅಸತ್ಯರು ಅಜ್ಞಾನಿಗಳು ಸಂಸಾರಿಗಳು ದುರ್ವಿಕಾರಿಗಳು ಲಂಡರು ಕೊಂಡೆಯರು ಕುಚಿತ್ತರು ಅನ್ಯಾಯಕಾರಿಗಳು ತಮ್ಮತಮ್ಮ ಗುಣದಂತೆ ತಿಳಿದು ನೋಡಿ ಮಾಡಿದರು, ಬಿತ್ತಿದ ಬೆಳೆಯನುಂಬಂತೆ. ನಿಂದಿಸಿದವರು ಪಾಪದ ಫಲವನನುಭವಿಸುವರು. ಸ್ತುತಿಸಿದವರು ಪುಣ್ಯದ ಫಲವನನುಭವಿಸುವರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಸತ್ಯಶರಣ ನಿತ್ಯಮುಕ್ತಂಗೆ, ನಿಂದೆ ಸ್ತುತಿಯೆಂಬೆರಡೂ ಇಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ರೂಪಾರ್ಪಣಕ್ಕೆ ಅಂಗವೇ ಆದಿ. ಆ ಪ್ರಸಾದಾಂಗಕ್ಕೆ ಪ್ರಾಣವೇ ಆದಿ. ಆ ಪ್ರಾಣಾಂಗವೇ ರುಚಿಯರ್ಪಣಕ್ಕಾದಿ. ರೂಪು ರುಚಿ ಉಭಯಾರ್ಪಣದ ಸುಖವೇ ಭಾವಾಪರ್ಣವು. ಅಂಗ ಪ್ರಾಣ ಭಾವಂಗಳಲ್ಲಿ, ರೂಪ ರುಚಿ ತೃಪ್ತಿಯನರಿದು ಕೊಟ್ಟು ಕೊಂಬಾತಂಗೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿತ್ಯ ಪ್ರಸಾದ ದೊರೆಕೊಂಬುದು.
--------------
ಸ್ವತಂತ್ರ ಸಿದ್ಧಲಿಂಗ