ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣ ಸಕಾಯನೆಂಬೆನೆ ಸಕಾಯನಲ್ಲ. ಅಕಾಯನೆಂಬೆನೆ ಅಕಾಯನಲ್ಲ. ಅದೇನು ಕಾರಣವೆಂದಡೆ; ಶಿವಕಾಯವಾದ ನಿಜಬೋಧವೆ ಕಾಯವಾದ ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು, ಪರಕಾಯರೂಪನು.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ, ಲಿಂಗನಿಷ್ಠಾಪರನಾಗಿ ಲಿಂಗಾರ್ಚನೆಯ ಮಾಡಿ, ಸಕಲಪದಾರ್ಥವ ಲಿಂಗಕ್ಕೆ ಕೊಟ್ಟು, ಲಿಂಗಪ್ರಸಾದವ ಕೊಂಡು, ಲಿಂಗಸುಖ ಸಂಪನ್ನರಾದ ಲಿಂಗಭೋಗೋಪಭೋಗಿಗಳಲ್ಲಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಸದಾ ಸನ್ನಿಹಿತನು.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀ ವಿಭೂತಿಯನೊಲಿದು ಧರಿಸಲು, ಸಕಲದುರಿತವ ನಿವಾರಣವ ಮಾಡಿ, ಘನಸುಖವ ಕೊಡುವುದು ನೋಡಾ. ಪ್ರಣವದ ಬೆಳಗು, ಪಂಚಾಕ್ಷರಿಯ ಕಳೆ, ಪರಮನಂಗಚ್ಛವಿ ಶ್ರೀವಿಭೂತಿ ನೋಡಾ. ಶಾಂತಿಯ ನೆಲೆವನೆ, ಸರ್ವರಕ್ಷೆಯ ತವರೆನಿಸಿ, ಸಮಸ್ತ ಕಾಮಿತ ಸುಖವೀವುದು ಶ್ರೀವಿಭೂತಿ ನೋಡಾ. ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಅಪಸ್ಮಾರ ಬಾಧೆಯ ಬಿಡಿಸಿ ನಿಜಸುಖವಿತ್ತು ಸಲಹುವುದು ಶ್ರೀ ವಿಭೂತಿ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದ, ವಿಭೂತಿ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವನೆಂದರಿದವಂಗೆ ತಾನೆಂಬುದಿಲ್ಲಾಗಿ ತನಗೊಂದನ್ಯವಿಲ್ಲ. ಘನದಿರವು ಇಂಬಾಗಿ ಚರಾಚರವು ತನ್ನಲ್ಲಿ ಅಡಗಿದಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಲಿಂಗವಾಗಿರ್ದನು.
--------------
ಸ್ವತಂತ್ರ ಸಿದ್ಧಲಿಂಗ
ಶ್ರೋತ್ರೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ಆಕಾಶವನು, ತ್ವಗಿಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ವಾಯುವನು, ನೇತ್ರೇಂದ್ರಿಯವನು ಈ ಇಂದ್ರಿಯದೊಡನೆ ಕೂಡಿದ ಅಗ್ನಿಯನು, ಜಿಹ್ವೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಅಪ್ಪುವನು, ನಾಸಿಕೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಪೃಥ್ವಿಯನು, ಈ ಭೂತಂಗಳು ಕೂಡಿ, ಸಕಲೇಂದ್ರಿಯ ಶಬ್ದಾದಿ ವಿಷಯಾರ್ಪಣವ ಮಾಡಿ, ಪ್ರಸಾದವ ಪಡೆದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮಪ್ರಸಾದಿಗಳು.
--------------
ಸ್ವತಂತ್ರ ಸಿದ್ಧಲಿಂಗ
ಶಮೆ ದಮೆ ವಿವೇಕ ವೈರಾಗ್ಯ ಪರಿಪೂರ್ಣಭಾವ ಶಾಂತಿ ಕಾರುಣ್ಯ ಶ್ರದ್ಧೆ ಸತ್ಯ ಸದ್ಭಕ್ತಿ ಶಿವಜ್ಞಾನ ಶಿವಾನಂದ ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ. ಆತನ ದರ್ಶನ ಸ್ಪರ್ಶನ ಸಂಭಾಷಣೆಯಿಂದ ಕೇವಲ ಮುಕ್ತಿಯುಪ್ಪುದು ತಪ್ಪದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವಭಕ್ತರಾದವರು, ಅಂಗದ ಮೇಲಣ ಲಿಂಗಕ್ಕೆ, ಅನ್ನ ಉದಕ ಗಂಧ ಪುಷ್ಪ ತಾಂಬೂಲ ವಸ್ತ್ರ ಮೊದಲಾದವ ಕೊಟ್ಟು ಕೊಳಲೇಬೇಕು. ``ರುದ್ರಭುಕ್ತಾನ್ನಂ ಭಕ್ಷಯೇತ್ ರುದ್ರಪೀತಂ ಜಲಂ ಪಿಬೇತ್ ರುದ್ರಾಘ್ರಾತಂ ಸದಾ ಜಿಘ್ರೇತ್' -ಎಂದುದಾಗಿ, ಶಿವಂಗೆ ಕೊಡದೆ ಕೊಂಡಡೆ ಅದು ಭಕ್ತಪಥವಲ್ಲ. ಆತಂಗೆ ಪ್ರಸಾದವಿಲ್ಲ. ವಿಶ್ವಾಸವಿಲ್ಲದವರ ಶಿವನೊಲ್ಲನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವಲಿಂಗ ಪೂಜೆಯಿಂದ ಭಕ್ತಿ ದೊರಕೊಂಬುದು, ಮುಕ್ತಿ ದೊರಕೊಂಬುದು. ಶಿವಲಿಂಗಪೂಜೆಗೆ ಸರಿಯೊಂದಿಲ್ಲವೆಂದು, ಪುರಾತನರು ಶಿವಲಿಂಗಪೂಜೆಯ ಮಾಡಿ ಶಿವನೊಳಗಾದರು. ಇದನರಿದು ಮತ್ತೇಕೆ ಮರೆವಿರಿ, ಮರುಳು ಮಾನವರುಗಳಿರ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪೂಜೆಯ ಮಾಡಿ ಬದುಕಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು ತೋರದಾಗಿ, ಅದೇನು ಕಾರಣವೆಂದಡೆ: ಆತನ ಮನ ಲಿಂಗದಲ್ಲಿ ಲೀಯವಾದ ಕಾರಣ. ಸೂರ್ಯಂಗೆ ಶೀತರುಚಿಗಳು ತೋರಿದರೂ, ಚಂದ್ರನಿಗೆ ಉಷ್ಣರುಚಿಗಳು ತೋರಿದರೂ, ಅಗ್ನಿ ತಲೆಕೆಳಕಾಗಿ ಉರಿದಡೆಯೂ, ತೋರುವ ನಾನಾ ಆಶ್ಚರ್ಯಂಗಳೆಲ್ಲ ಮಾಯಾವಿಲಾಸವೆಂದರಿದ ಶರಣಂಗೆ ಒಂದಾಶ್ಚರ್ಯವೂ ತೋರದಾಗಿ ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅರಿವಿನೊಳಗಡಗಿದನು.
--------------
ಸ್ವತಂತ್ರ ಸಿದ್ಧಲಿಂಗ
ಶಾಂತ ಸೂಕ್ಷ ್ಮ ಸರ್ವಜೀವ ಮನಃಪ್ರೇರಕ[ಸ್ವ]ನಾಥ ನಿತ್ಯ ಚಿನ್ಮಾತ್ರನಾದ ಶಿವಂಗೆ ಒಂದೂ ಸದೃಶವಿಲ್ಲದೆ ಹೆಸರಿಡಬಾರದಂಥ ಕುರುಹಿಲ್ಲದ, ಮರಹಿಲ್ಲದ, ಬಹಳ ಬ್ರಹ್ಮವೆನಿಸುವ ಶಿವನು ತನ್ನ ಶರಣರ ಸರ್ವಾಂಗಭರಿತನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು ಭಕ್ತನಾಗಬೇಕೆಂಬಿರಿ. ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೆ? ಇಲ್ಲವಾಗಿ. ``ಅಜ್ಞಾನಂ ಪೂರ್ವಮಿತ್ಯಾಕಹುರ್ಭವೋSನಾದಿಸ್ಥಲಾಶ್ರಯಃ| ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ಚಿತಾ' ಎಂದುದಾಗಿ, ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ. ಸಂಸಾರವಳಿದು, ನಿಜವುಳಿದು ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ. ಆತನು ಜೀವನ್ಮುಕನಾಗಿಹನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವಧ್ಯಾನದ ಕಡೆಯಲ್ಲಿ ಒಪ್ಪಿ ತೋರುವ ಸಂವಿತ್ತಿನ ತೃಪ್ತಿಯಂದ ತನ್ನ ಮರೆದ ಶರಣನು ಪರಮ ಪ್ರಕಾಶರೂಪನಾದ ಶಿವನ ಕೂಡಿ ಸರ್ವಜೀವರ ಹೃದಯದಲ್ಲಿದ್ದು, ಅವಕ್ಕೆ ಅರಿವ ಅರುಹಿಸಿ ಕೊಡುತ್ತ ಎಲ್ಲ ಕಡೆಯಲ್ಲಿ ಸುಖರಾಶಿಯಾದ ಚೈತನ್ಯಸ್ವರೂಪ ಪರಬ್ರಹ್ಮವೇ ತಾನಾಗಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ, ತನ್ನಲ್ಲಿ ಶಿವನಡಗಿ, ತಾನು ತಾನೇಕವಾದಾತಂಗೆ ಸಂದು ಸಂಶಯಂಗಳುಂಟೆ? ತೃಪ್ತಿ ಸಂಕೋಚವೆಂಬವಡಗಿದ ಬಳಿಕ ಮತ್ತೆ ಘನಕ್ಕೆ ಘನವಾದೆನೆಂಬ ನೆನಹುಂಟೆ? ನಿಜವೆಂತಿಪ್ಪುದಂತಿಪ್ಪನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ಶಿವನ ಶಿವಪ್ರಸಾದಿಯ ಉಭಯಸಂಬಂಧ ಸಹಭೋಗವೆಂತೆಂದೊಡೆ: ಶಿವ ತನ್ನ ನೇತ್ರಂಗಳನು ಪ್ರಸಾದಿಯ ನೇತ್ರದಲ್ಲಿ ಕೂಡಿ ರೂಪವನರಿವನು. ಶಿವ ತನ್ನ ಶ್ರೋತ್ರಂಗಳನು ಪ್ರಸಾದಿಯ ಶ್ರೋತ್ರದಲ್ಲಿ ಕೂಡಿ ಶಬ್ದವನರಿವನು. ಶಿವ ತನ್ನ ಘ್ರಾಣವನು ಪ್ರಸಾದಿಯ ಘ್ರಾಣದಲ್ಲಿ ಕೂಡಿ ಗಂಧವನರಿವನು. ಶಿವ ತನ್ನ ಜಿಹ್ವೆಯನು ಪ್ರಸಾದಿಯ ಜಿಹ್ವೆಯಲ್ಲಿ ಕೂಡಿ ರಸವನರಿವನು. ಶಿವ ತನ್ನ ಅಂಗವನು ಪ್ರಸಾದಿಯ ಅಂಗದಲ್ಲಿ ಕೂಡಿ ಸ್ಪರ್ಶವನರಿವನು. ಶಿವ ತಾನು ಬೇರೆ ಭೋಗಿಸಲೊಲ್ಲದೆ, ಪ್ರಸಾದಿಯ ಹೊಕ್ಕು ಭೋಗಿಸುವನಾಗಿ, ಸೋಹಂ ಎನ್ನದೆ ದೈತಾದ್ವೆತವ ಮೀರಿದ ಪ್ರಸಾದಿ ಸಂಗನಬಸವಣ್ಣನ ಸುಖಾತಿಶಯವನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅರ್ಧಾವಲೋಕನದಿಂದ ನಾಸಿಕಾಗ್ರದಲ್ಲಿ ಪ್ರಸಾದವ ಕಂಡುಂಡು, ಮುಕ್ತಿವನಿತೆಗೆ ಬೇಟವ ಮಾಡಿದಡೆ ಬೇಟಕ್ಕೆ ಮರುಳಾಗಿ ಕೂಡಿದಳಯ್ಯಾ. ಆರು ವನಿತೆಯರ ವಂಚಿಸಿ ಕೂಡಿದಳು, ಆರು ಒಗೆತನ ಕೆಟ್ಟಿತ್ತು. ಪುರುಷ ಸ್ತ್ರೀಯೊಳಗಡಗಿ, ಸ್ತ್ರೀ ಪುರುಷನೊಳಗಡಗಿ ಇಬ್ಬರೆನಿಸದೆ ಒಬ್ಬರಾದುದನು ಏನೆಂದುಪಮಿಸಬಹುದು ನಿರ್ವಿಕಲ್ಪಯೋಗವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾದ ಘನವನು?.
--------------
ಸ್ವತಂತ್ರ ಸಿದ್ಧಲಿಂಗ
ಶರಣನ ಸರ್ವಾಂಗವು ಲಿಂಗದಂಗವು. ಶರಣ ನಡೆವ ಗತಿ ಲಿಂಗದ ಗತಿ. ಶರಣ ನುಡಿದ ನುಡಿ ಲಿಂಗದ ನುಡಿ. ಶರಣನಿದ್ದ ಸ್ವಭಾವದಿರವೆ ಲಿಂಗದಿರವು. ಶರಣನಿದ್ದ ತೋರುವ ಜಾಗ್ರತ್ ಸ್ವಪ್ನಂಗಳೆಲ್ಲ ಲಿಂಗವಿಡಿದು ತೋರುವುವು. ಇದು ಕಾರಣ, ಜ್ಞಾನಿಯಲ್ಲಿ ತೋರುವ ಕ್ರಿಯೆಗಳು ಫಲದಾಯಕ ಕ್ರಿಯೆಗಳಲ್ಲ. ಅದೆಂತೆಂದಡೆ, ಘೃತ ಸೋಂಕಿದ ರಸನೆಗೆ ಘೃತ ಲೇಪವಿಲ್ಲದಂತೆ, ಶರಣಂಗೆ ಕರ್ಮಲೇಪವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಸ್ವತಂತ್ರ.
--------------
ಸ್ವತಂತ್ರ ಸಿದ್ಧಲಿಂಗ
ಶರಣನ ಸರ್ವಭಾವಂಗಳು ಶಿವಜ್ಞಾನದಲ್ಲಿ ಅಡಗಿ, ಶಿವರೂಪದಿಂದ ತೋರುತ್ತಿಹವಾಗಿ, ಸಂಕಲ್ಪ ವಿಕಲ್ಪವಳಿದು ತೃಪ್ತಿ ಸಂಕೋಚಗಳಡಗಿ, ಘನಕ್ಕೆ ಘನ ತಾನಾದ ಶಿವ ತಾನಾಗಿ, ಶಿವ ತಾನಾದನೆಂಬ ಭಾವವಿಲ್ಲದ ಸಹಜ ಸ್ವರೂಪನೇ ತೃಪ್ತನು. ಅಂಥ ತೃಪ್ತಂಗೆ ಅರಿಯಲು ಮರೆಯಲು ಒಂದಿಲ್ಲದೆ ಘನಪರಿಣಾಮಿಯಾಗಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು ಅಮೃತಮಯವಾಗಿಹವು ನೋಡಾ. ನರಚರ್ಮಾಂಬರವ ಹೊದ್ದಿಹ ಶರಣನ ಒಳಗು ಹೊರಗೆಂಬವೆಲ್ಲ ಮೋಕ್ಷರೂಪವಾಗಿಹವು ನೋಡಾ. ಆ ಶರಣನ ಮತ್ರ್ಯರೂಪನೆಂದು ತಿಳಿಯಬಾರದು. ಆತ ಚಿದ್ರೂಪಾಕಾರ ಪರಮಾತ್ಮನು ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂದೇ ತಿಳಿವುದು.
--------------
ಸ್ವತಂತ್ರ ಸಿದ್ಧಲಿಂಗ
ಶಿರ ಮುಖ ಹೃದಯ ಪಾದ ಬಾಹುಗಳೆಲ್ಲ ಶಿವನ ಅವಯವಂಗಳಾದವು. ಶ್ರೋತ್ರ ತ್ವಕ್ ನೇತ್ರ ಜಿಹ್ವೆ ಘ್ರಾಣವೆಂಬವೆಲ್ಲ ಶಿವನ ಇಂದ್ರಿಯಂಗಳಾದವು. ಮನ ಬುದ್ಧಿ ಚಿತ್ತ ಅಹಂಕಾರಗಳೆಲ್ಲಾ ಶಿವನ ಕರಣಂಗಳಾದವು. ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬವುಗಳಲ್ಲಿ ಶಿವನ ಚೈತನ್ಯವಿದ್ದುದಾಗಿ ಒಳಗಿದ್ದ ಚೇತನವು ನೀವೇ. ಒಳಗೆ ನೀವು, ಹೊರಗೆ ನೀವು:ನಾನೆಂಬುದಿಲ್ಲ. ನಾನೇನ ಮಾಡಿತ್ತೆಲ್ಲಾ ನಿಮ್ಮ ವಿನೋದ. ಎನ್ನ ಸರ್ವ ಭೋಗವೆಲ್ಲ ನಿಮ್ಮ ಭೋಗವಯ್ಯ. ಕರ್ತೃತ್ವ ನಿಮ್ಮದಾಗಿ, ಎನಗೆ ಕರ್ತೃತ್ವವಿಲ್ಲ. ನಾ ನಿಮ್ಮೊಳಗು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀಗುರುಕರುಣವ ಪಡೆಯಲೆಂದು ಹೋದಡೆ, ಗುರುವೆನ್ನ ಕಾಯವ ಶುದ್ಧವ ಮಾಡಿ, ಕಾಯದಲ್ಲಿ ಮಂತ್ರವನಿರಿಸಿ, ಮಂತ್ರಕಾಯನ ಮಾಡಿದನು. ಜೀವವ ಶುದ್ಧವ ಮಾಡಿ, ಜೀವದಲ್ಲಿ ಲಿಂಗವನಿರಿಸಿ, ಲಿಂಗಪ್ರಾಣಿಯ ಮಾಡಿದನು. ಶಿವಮಂತ್ರ ವಾಚ್ಯ ವಾಚಕ ಸಂಬಂಧವಾದ ಕಾರಣ, ಕಾಯವೇ ಜ್ಞಾನಕಾಯವಾಯಿತ್ತು, ಜೀವ ಶಿವನಾಯಿತ್ತು. ಇಂತು ಶ್ರೀಗುರುವಿನ ಕಾರುಣ್ಯದಿಂದ ನಾನು ಬದುಕಿದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶರಣನ ಶರೀರವ ಸೋಂಕಿದ ರವಿ ತನ್ನ ಮಂಡಲವ ಬಿಟ್ಟು ಶಿವಸಾಮೀಪ್ಯವ ಪಡೆಯದಿಪ್ಪನೆ ಅಯ್ಯಾ? ನರಜನ್ಮದಲ್ಲಿ ಹುಟ್ಟಿದವನು ಗುರುಹಸ್ತ ಸೋಂಕಿದ ಬಳಿಕ, ಹರನಾಗದಿಪ್ಪನೆ ಅಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
--------------
ಸ್ವತಂತ್ರ ಸಿದ್ಧಲಿಂಗ
ಶ್ರೀ ಗುರುವಿನ ಮಂತ್ರೋಪದೇಶವು ಶಬ್ದ ಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಹಸ್ತ ಮಸ್ತಕ ಸಂಯೋಗವು ಸ್ಪರ್ಶನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಕೃಪಾವಲೋಕನವು ಅವಲೋಕನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀಗುರುವಿನ ನಿರ್ಮಾಲ್ಯ ಗಂಧವು ಸದ್ಗುಣಗಂಧಪ್ರಸಾದಕ್ಕಾಶ್ರಯವಾಯಿತ್ತು. ಇಂತಪ್ಪ ಶ್ರೀಗುರುವಿನ ಪ್ರಸಾದವ ಪಡೆದಾತಂಗೆ ಭವಮಾಲೆಯುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಶರಣನ ಸುಜ್ಞಾನಾಗ್ನಿಯಿಂದ, ಸಂಸಾರಬೀಜ ರೂಪವಾದ ಅಹಂಕಾರಾಂಕುರವು ಸುಟ್ಟು, ಮಾಯಾವಾಸನೆಯಳಿದು, ಮಾನಸೇಂದ್ರಿಯ ಜೀವಶಕ್ತಿಗಳಿಲ್ಲದ ಮೂರ್ತಿಯೇ ಚಿಲ್ಲಿಂಗಕ್ಕಾಶ್ರಯವಾದುದಾಗಿ, ಚಿನ್ಮೂರ್ತಿಯಾದ ಶರಣನ ಜ್ಞಾನದಲ್ಲಿ, ಸಕಲ ಪ್ರಪಂಚುಗಳೆಲ್ಲ ಅಡಗಿದವಾಗಿ, ಆ ಶರಣನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ ಆಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಶಿರದೊಳಗೆ ಶಿರ, ಕರದೊಳಗೆ ಕರ, ಕರಣದೊಳಗೆ ಕರಣ, ಕಂಗಳೊಳಗೆ ಕಂಗಳು, ಕರ್ಣದೊಳಗೆ ಕರ್ಣ, ಘ್ರಾಣದೊಳಗೆ ಘ್ರಾಣ, ಜಿಹ್ವೆಯೊಳಗೆ ಜಿಹ್ವೆ, ದೇಹದೊಳಗೆ ದೇಹ, ಪಾದದೊಳಗೆ ಪಾದ ಕೂಡಿ, ಶರಣರೊಡನಾಡುವ ನಿಮ್ಮ ಬೆಡಗಿನ ಲೀಲೆಯನಾರು ಬಲ್ಲರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಲ್ಲದೆ?.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...