ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ ನಿಲವೆಂತಿಪ್ಪುದೆಂದರೆ, ಉರಿಯುಂಡ ಕರ್ಪುರದಂತೆ, ಶರಧಿಯ ಬೆರೆದ ಸಾರದಂತೆ, ನೀರೊಳಗೆ ಬಿದ್ದ ಆಲಿಯಂತೆ, ಉರಿಯ ಗಿರಿಯನೆಚ್ಚ ಅರಗಿನ ಬಾಣದಂತೆ, ಪರಿಮಳವನುಂಡ ಹರಿಯಂತೆ. ಇದರ ವಿವರವನರಿದರೆ, ಪರವ ಬಲ್ಲವ, ತನ್ನ ಬಲ್ಲವ, ಎಲ್ಲವು ತನ್ಮಯನಾಗಿರುವ. ಇಂತಪ್ಪ ಅಣುವಿಂಗಣುವಾಗಿ ನಿಂದ ಮಹಾಪ್ರಸಾದವ ನಾನೆತ್ತ ಬಲ್ಲೆನಯ್ಯಾ ? ಇದ ಬಲ್ಲ ಪ್ರಸಾದಿಗಳ ಸೊಲ್ಲಿನೊಳಗೆ ನಾನಡಗಿದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇಂದು ನಾಳೆ ಎಂಬ ಸಂದೇಹವ ಬಿಟ್ಟು, ನಿಂದ ನಿಜಾನಂದದಿಂದ ನೋಡಿ, ಹಿಂದು ಮುಂದು, ಕುಂದು ಹೆಚ್ಚು, ದಂದುಗ ಧಾವತಿಯ ಕೊಂದು ನಿಂದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಇತ್ತಲು ಪೃಥ್ವಿಯಿಂದ, ಅತ್ತಲು ಉತ್ತರಿಯ ಬೆಟ್ಟಕ್ಕೆ ಹತ್ತದ ಕಸ್ತೂರಿಯ ಮೃಗದ ವಿಸ್ತಾರವ ಹಸ್ತವಿಲ್ಲದೆ ಎಚ್ಚು, ಕಿಚ್ಚಿಲ್ಲದೆ ಸುಟ್ಟು, ಮಡಕೆಯಿಲ್ಲದೆ ಅಟ್ಟು, ಮನವಿಲ್ಲದುಂಡು, ನೆನಹಿಲ್ಲದಾಡಿ ಪಾಡುವ ಘನವೇ ಅಗಮ್ಯ ಅಗೋಚರ ಅಪ್ರಮಾಣ ಸುಪ್ರಭಾಕಳಾನಂದ ಪ್ರಾಣಲಿಂಗ ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವಾ.
--------------
ಹಡಪದ ಅಪ್ಪಣ್ಣ