ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು. ಭಕ್ತನೆಂತಿಪ್ಪ ಭವಿಯೆಂತಿಪ್ಪನೆಂದರೆ, ಆರೂ ಅರಿಯರು. ಇದು ಬಲ್ಲವರು ತಿಳಿದು ನೋಡಿ. ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ, ಈ ಎರಡರ ಸಕೀಲಸಂಬಂಧವನರಿದರೆ, ಆತನೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಭಕ್ತ, ಮಹೇಶ್ವರ, ಪ್ರಸಾದಿ ಪ್ರಾಣಲಿಂಗಿ, ಸತ್ಯಶರಣರೈಕ್ಯರೆಂಬ ಇತ್ತತ್ತ ಗೊತ್ತ ಬಿಟ್ಟು, ನಿರ್ವಯಲ ಲಿಂಗದೊಳು ನಿಮ್ಮ ಭಕ್ತನಾದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಭಕ್ತನಾದರೆ ಎಂತಿರಬೇಕೆಂದರೆ, ಉಲುಹಡಗಿದ ವೃಕ್ಷದಂತಿರಬೇಕು. ಶಿಶು ಕಂಡ ಕನಸಿನಂತಿರಬೇಕು, ಗಲಭೆಗೆ ನಿಲ್ಲದ ಮೃಗದಂತಿರಬೇಕು. ತಾಯ ಹೊಲಬುದಪ್ಪಿದ ಎಳೆಗರುವಿನಂತೆ, ತ್ರಿಕಾಲದಲ್ಲಿಯು ಲಿಂಗವನೆ ನೆನೆವ ಶರಣರ ಎನಗೊಮ್ಮೆ ತೋರಯ್ಯಾ ಶಿವನೆ, ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಭಕ್ತಿಯ ಮಾಡಿಹೆನೆಂಬವರೆಲ್ಲ ಭಾಗ್ಯವಂತರಾದರು. ಮುಕ್ತಿಯ ಸಾಧಿಸಿಹೆನೆಂಬವರೆಲ್ಲ ಮೂವಿಧಿಗೊಳಗಾದರು. ತತ್ವವನರಿದಿಹೆನೆಂಬವರೆಲ್ಲ ತರ್ಕಿಗಳಾದರು. ವಿರಕ್ತಿಯ ಮಾಡಿಹೆನೆಂಬವರೆಲ್ಲ ವೈರಾಗಿಗಳಾದರು. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಶರಣರ ಪರಿ ಬೇರೆ.
--------------
ಹಡಪದ ಅಪ್ಪಣ್ಣ
ಭಕ್ತನಾದರೆ ಮುಕ್ತಿಪಥಗತಿಗೆ ನಿಲುಕದಂತಿರಬೇಕು. ಮಹೇಶ್ವರನಾದರೆ ಮನದಲ್ಲಿ ಮನ್ಮಥ ಹೊಗದಂತಿರಬೇಕು. ಪ್ರಸಾದಿಯಾದರೆ ತನ್ನ ಪ್ರಾಣವೇ ಅಗ್ನಿಸ್ವರೂಪವೆಯಾಗಿರಬೇಕು. ಪ್ರಾಣಲಿಂಗಿಯಾದರೆ ಪ್ರಾಣವ ನಿಲ್ಲಿಸಿ ಲಿಂಗಪ್ರಾಣಿಯಾಗಿರಬೇಕು. ಶರಣನಾದರೆ ತನ್ನ ಮರಣಬಾಧೆಯ ಗೆಲಿದಿರಬೇಕು. ಐಕ್ಯನಾದರೆ ಅನ್ನ ಪಾನಾದಿಗೆ ಇಚ್ಛೆ ಇಲ್ಲದಿರಬೇಕು. ನಿರ್ವಯಲಾದರೆ ಸರ್ವರ ಕಣ್ಣಿಗೆ ಬಯಲು ಬಯಲಾಗಿರಬೇಕು. ಈ ಷಟ್‍ಸ್ಥಲಸಂಪನ್ನತೆಯಲ್ಲಿ ಇರಬಲ್ಲಡೆ, ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಭಕ್ತನಾದರೆ ಪೃಥ್ವಿಸಾರದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ. ಮಹೇಶ್ವರನಾದರೆ ಅಪ್ಪುವಿನ ಸಾರದಿಂದ ಉದಕವ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ. ಪ್ರಸಾದಿಯಾದರೆ ಅಗ್ನಿಯಿಂದಾದ ಕಳೆಯ ಲಿಂಗಕ್ಕೆ ವೇದಿಸದ ಭಾಷೆ. ಪ್ರಾಣಲಿಂಗಿಯಾದರೆ ವಾಯುವಿನಿಂದಾದ ಧ್ಯಾನವ ಲಿಂಗದಲ್ಲಿ ನೋಡದ ಭಾಷೆ. ಐಕ್ಯನಾದರೆ ಆತ್ಮದಿಂದಾದ ಅಹಂ ಮಮತೆಯಲಿ ಲಿಂಗವ ಭಾವಿಸದ ಭಾಷೆ. ಇಂತೀ ಆರರಿಂದ ವಿೂರಿ ತೋರುವ ಘನವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ