ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ. ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ | ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು || ಎಂದುದಾಗಿ, ಇದು ಕಾರಣ, ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಲಿಂಗನಯನದಲ್ಲಿ ನೋಡುತ್ತ , ಲಿಂಗಜಿಹ್ವೆಯಲ್ಲಿ ನುಡಿವುತ್ತ , ಲಿಂಗಹಸ್ತದಲ್ಲಿ ಮುಟ್ಟುತ್ತ , ಲಿಂಗನಾಸಿಕದಲ್ಲಿ ವಾಸಿಸುತ್ತ , ಲಿಂಗಸ್ತೋತ್ರದಲ್ಲಿ ಕೇಳುತ್ತ , ಲಿಂಗಪಾದದಲ್ಲಿ ನಡೆವುತ್ತ , ಸರ್ವಾಂಗಲಿಂಗಮಯವಾದ ಶರಣರ ಸಂಗಸುಖದೊಳಗೆ ಎನ್ನನಿರಿಸಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಲಿಂಗಪೂಜೆಯ ಮಾಡುತ್ತ ತಮ್ಮಂಗ ಸುಖದ ಸಲುವಾಗಿ ಹಂಪೆಯ ಕಂಗಳರ ಹಾಗೆ ಕೂಗುತ್ತ , ಅರಚುತ್ತ , ಸತಿಸುತರೊಳಗೆ ಹೊಡೆದಾಡುತಿಪ್ಪರಲ್ಲದೆ, ಆ ಲಿಂಗಕ್ಕೆ ತನಗೆ ಒಡೆಯರಾಗಿದ್ದ ಜಂಗಮ ಬಂದರೆ, ಎತ್ತಲೆಂದರಿಯರು. ಇಂತಪ್ಪ ಕತ್ತಲೆಮನುಜರು, ಲಿಂಗವ ಕಟ್ಟಿದರೇನು ? ಜಂಗಮಕಿಕ್ಕಿದರೇನು ? ಗುರುವಿಂಗೆ ಶರಣೆಂದರೇನು ? ತಮ್ಮ ಮರಣಬಾಧೆಯ ಗೆಲುವನಕ ಹುರುಳಿಲ್ಲ ಹುರುಳಿಲ್ಲ . ಮಾಡಿದ ಭಕ್ತಿ , ಅತ್ತಿಯ ಹಣ್ಣ ಬಿಚ್ಚಿದಂತೆ. ಅವರು ಹೊತ್ತಿಪ್ಪ ವೇಷ ದೊಡ್ಡದು. ಎಮ್ಮ ಸಮಯ ನಾನದನರಿದು, ನಿಮ್ಮಲ್ಲಿ ನಿರ್ಮುಕ್ತನಾದ ಬಳಿಕ, ಈ ಜಗವೇನಾದರೇನಯ್ಯ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ