ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಾಸಿಯ ಸಂಗ ಎರಡನೆಯ ಪಾತಕ, ವೇಶಿಯ ಸಂಗ ಮೂರನೆಯ ಪಾತಕ. ಮೀಸಲಳಿದ ಪರಸ್ತ್ರೀಯರ ಸಂಗ ಪಂಚಮಹಾಪಾತಕ. ಇನಿಸು ಶಿವಭಕ್ತರಿಗೆ ಸಲ್ಲವು. ಇವನರಿದರಿದು ಮಾಡಿದನಾದರೆ, ಯಮಪಟ್ಟಣವೆ ವಾಸವಾಗಿಪ್ಪರಲ್ಲದೆ, ಈ ದೇಶಕ್ಕೆ ಮರಳಿ ಬರಲಿಲ್ಲ ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ದಿವ್ಯಾನಂದ ಗುರುವೆ, ದೇದೀಪ್ಯಮಯ ಗುರುವೆ, ಆನಂದ ಪ್ರಸಾದಮಯ ಗುರುವೆ, ದೀಕ್ಷಾನಂದ ಗುರುವೆ, ಶಿಕ್ಷಾ ಸಾಮಥ್ರ್ಯ ಗುರುವೆ, ಮೋಕ್ಷಸಾಧನ ಗುರುವೆ, ಈಕ್ಷಿಸಿದಕ್ಷಿಯಲ್ಲಿ ನಿಕ್ಷೇಪಿಸಿದ ಗುರುವೆ, ಅವಧಾನಿ ಗುರುವೆ. ಆನಂದ ಪ್ರಸಾದಮಯ ಗುರವೆ, ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ, ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ, ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು. ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ. ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ ? ಭಕ್ತನಾದರೆ ಎಂತಿರಬೇಕೆಂದರೆ, ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ, ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ. ಮಾಡಿದ ಭಕ್ತಿಯ ಕೈಕೊಂಡು, ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ, ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ, ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ. ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ. ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ .
--------------
ಹಡಪದ ಅಪ್ಪಣ್ಣ
ದೀಕ್ಷಾಗುರು, ಶಿಕ್ಷಾಗುರು, ಮೋಕ್ಷಗುರುವೆಂದು ಹೆಸರಿಟ್ಟುಕೊಂಡು ನುಡಿವಿರಿ. ದೀಕ್ಷಾಗುರುವಾದಡೆ, ಮಲತ್ರಯಂಗಳ ತಾ ಮುಟ್ಟದೆ, ಆ ಶಿಷ್ಯನ ತಟ್ಟಲೀಯದೆ, ಅಂಗಕ್ಕೆ ಆಚಾರವನಳವಡಿಸಿಕೊಟ್ಟು, ಪ್ರಾಣಕ್ಕೆ ಅರಿವ ತೋರಿ ಪ್ರಸಾದಕಾಯವ ಮಾಡಿದರೆ, ಆತನೇ ದೀಕ್ಷಾಗುರುವೆಂಬೆ. ಶಿಕ್ಷಾಗುರುವಾದಾತ ಶೂರಧೀರನಾಗಿ ಪಟುಭಟನಾಗಿ, ಪರಸಮಯಕ್ಕೆ ಪರಂಜ್ಯೋತಿಯಂತಾಗಿ, ಅರಗಳಿಗೆ ಆರ್ಭಟಿಸುವ ಸಿಂಹದಂತಾಗಿ, ತನ್ನ ಸ್ವಯಂಮಕ್ಕೆ ಸ್ವಯಂಜ್ಯೋತಿಯಂತೆ ಇರಬಲ್ಲರೆ, ಶಿಕ್ಷಾಗುರುವೆಂಬೆ. ಮೋಕ್ಷಗುರುವೆಂತಿರಬೆಕೆಂದಡೆ, ತನ್ನ ನಂಬಿದ ಸಜ್ಜನ ಭಕ್ತರ, ವಿರಕ್ತರ ತನ್ನಂತೆ ಮಾಡಿಕೊಂಬುದು. ಅವರ ತನುತ್ರಯ, ಮನತ್ರಯ, ಧನತ್ರಯದ ನೆಲೆಯನರುಹಿ, ಇಂತೀ ತ್ರಿವಿಧವನು ತ್ರಿವಿಧಕ್ಕೆ ಮುಖವ ಮಾಡಿ, ತ್ರಿವಿಧದಲ್ಲಿ ತಾನಡಗಿ, ತನ್ನೊಳಗವರಡಗಿದಡೆ ಮೋಕ್ಷಾಗುರುವೆಂಬೆ. ಇಂತಾದರೆ ತ್ರಿವಿಧವು ಒಂದಂಗ. ಇಂತೀ ಸ್ಥಲದ ನಿರ್ಣಯವನರಿಯದಿದ್ದರೆ, ಆ ಮೂವರನು ಮುಂದುಗೆಡಿಸಿ ಮೂಗ ಕೊಯ್ದು, ಇಟ್ಟಿಗಿಯಲದ್ದಿ, ದರ್ಪಣವ ತೋರಿ, ಆವರ ದರ್ಪವ ಕೆಡಿಸುವನಲ್ಲದೆ ಅವರ ಮೆರೆವನಲ್ಲ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ