ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು. ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು. ಇವ ಮೂರರ ಕಾಳಿಕೆಯ ಕಳೆದು, ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು, ಅಂದವಳಿಯದೆ, ಬಿಂದು ತುಳುಕದೆ, ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈ ಜಗದೊಳಗಣ ಆಟವ ನೋಡಿದರೆ, ಎನಗೆ ಹಗರಣವಾಗಿ ಕಾಣಿಸುತ್ತಿದೆ. ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು, ಮುಂದಣ ಮುಕ್ತಿಯನರಿಯರು. ಬಂದ ಬಂಬ ಭವದಲ್ಲಿ ಮುಳುಗುತ್ತಲಿದ್ದಾರೆ. ನಾನಿದರಂದವನರಿದು, ದ್ವಂದ್ವವ ಹರಿದು, ಜಗದ ನಿಂದೆ ಸ್ತುತಿಯ ಸಮಗಂಡು, ಹಿಂದ ಹರಿದು ಮುಂದನರಿದು, ಸದಮಳಾನಂದದಲ್ಲಿ ನಿಂದು, ಸಚ್ಚಿದಾನಂದದಲ್ಲಿ ಐಕ್ಯವಾಗಿ, ಸತ್ಯಶರಣರ ಪಾದದಲ್ಲಿ ನಿರ್ಮುಕ್ತನಾದೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದಡೆ: ಪೃಥ್ವಿ ಪೃಥ್ವಿಯನೆ ಕೂಡಿ, ಅಪ್ಪು ಅಪ್ಪುವನೆ ಕೂಡಿ, ಅಗ್ನಿ ಅಗ್ನಿಯನೆ ಕೂಡಿ, ವಾಯು ವಾಯುವನೆ ಕೂಡಿ, ಆಕಾಶ ಆಕಾಶವನೆ ಕೂಡಿ, ಪಂಚತತ್ವವೆಲ್ಲ ಹಂಚುಹುರಿಯಾಗಿ, ಹಿಂಚುಮುಂಚು ಮಾಡುವ ಮನದ ಸಂಚಲವಡಗಿ, ಕರ್ಮದ ಗೊಂಚಲ ನಿಂದ ನಿಶ್ಚಿಂತ ನಿಜೈಕ್ಯಂಗೆ ನಮೋ ನಮೋ ಎನುತಿರ್ದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈಯನುವನರಿದು ಲಿಂಗವ ನೋಡಿ ಕೂಡಿಹೆನೆಂದರೆ, ಮನವನೆಲ್ಲವ ನಿಲಿಸಿ ಇರಬೇಕು. ಈ ಘನ ಪರಾಕ್ರಮವುಳ್ಳ ಭಕ್ತರ ತನುವೆ ಲಿಂಗ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈಡಾ ಪಿಂಗಳ ಸುಷುಮ್ನನಾಳದ ಗಾಢ ಅಗಮ್ಯವನರಿದು ನೋಡೆ, ಬ್ರಹ್ಮರಂಧ್ರವ ತಟಿ ಹಾಯ್ಯದು ಕೂಡಾಡಿ, ಪಶ್ಚಿಮದೋಳ್ಬೆರೆದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ