ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಓದಲೇತಕ್ಕೆ ಪ್ರಾಣಲಿಂಗಿಗೆ ? ಹಾಡಲೇತಕ್ಕೆ ಶರಣಂಗೆ ? ನೋಡಿ ಕೂಡಲೇತಕ್ಕೆ ಐಕ್ಯಂಗೆ ? ಆರೂಢಿಯ ಕೂಟ ಅಜಡತ್ವಂಗೆ ಬಾಹ್ಯಾಂತರಂಗೆ. ಆಹ್ವಾನ ವಿಸರ್ಜನವೆಂದು ಭೇದಿಸದವನೆ ಪ್ರಾಣಲಿಂಗಿ, ಪ್ರಣವ ಸ್ವರೂಪಿ, ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಓದಿದರೇನಯ್ಯಾ? ಗಾದೆಯ ಮಾತಾಯಿತ್ತು. ಹಾಡಿದರೇನಯ್ಯಾ? ಹರಟೆಯ ಕಥೆಯಾಯಿತ್ತು. ನೋಡಿದರೇನಯ್ಯಾ? ಭೂತದಂತಾಯಿತ್ತು. ಇದರ ಭೇದಾದಿ ಭೇದವನರಿದು, ಲಿಂಗದಲ್ಲಿ ಸಾಧನೆಯ ಮಾಡುವ ಶರಣರ ಪಾದಕ್ಕೆರಗಿ ನಾನು ಬದುಕಿದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ? ಹಾಡಲೇಕೊ ಹರನ ಕಂಡಾತಂಗೆ? ಬೇಡಿ ಕಾಡಲೇಕೊ ನೋಡುವ ಕಂಗಳಿಗೆ ತೃಪ್ತಿಯಾದವಂಗೆ? ನೀಡಿ ಮಾಡಲೇಕೊ ಉಡುವಾತನು ಉಂಬುವಾತನು ಏಕವಾದ ಮೇಲೆ. ಮುಂದು ನೋಡುವರಾರುಂಟು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ