ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಉಟ್ಟರೆ ತೊಟ್ಟರೇನಯ್ಯ ? ನಟ್ಟುವರಂತೆ. ಕೊಟ್ಟರೆ ಕೊಂಡರೇನಯ್ಯ ? ವೇಶಿಯರಂತೆ. ಬಿಟ್ಟರೆ ಕಟ್ಟಿದರೇನಯ್ಯ ? ಬೈರೂಪನಂತೆ. ಇವಾವಂಗವ ಮಾಡಿದರೇನಯ್ಯ ? ಮುಟ್ಟಿ ನಮ್ಮ ಶರಣರೊಡನೆ ಒಡವೆರೆಯದಿದವರು ಉಟ್ಟಿದರೇನು, ಬಿಟ್ಟಿದ್ದರೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸದಿ ಕರಿಯ ಕೊಂದು ಹರಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಶಿರದ ಮೇಲೆ ನಿಂದ ಗಂಗೆಯ ಬೆಳಗಿನಲ್ಲಿ ನಿಂದ ಪ್ರಸಾದಿ. ಉರಮಧ್ಯದಲ್ಲಿಪ್ಪ ಪರಂಜ್ಯೋತಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಪೂರ್ವಪಶ್ಚಿಮ ಏಕವಾದ ಬೆಳಗಿನಲ್ಲಿ ನಿಂದ ಪ್ರಸಾದಿ. ಇಂತೀ ಘನವನೆಲ್ಲ ಒಳಕೊಂಡ ಮಹಾಬೆಳಗಿನಲ್ಲಿ ನಿಂದ ಪ್ರಸಾದಿ. ಅಯ್ಯಾ ಚೆನ್ನಮಲ್ಲೇಶ್ವರಾ, ಆ ಪ್ರಸಾದಿಯ ಪ್ರಸಾದವ ಕೊಂಡು ನಾ ಉರಿಯುಂಡ ಕರ್ಪುರದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಉದಯ, ಮಧ್ಯಾಹ್ನ ಅಸ್ತಮಯವೆಂಬ ತ್ರಿಕಾಲದಲ್ಲಿ ತ್ರಿವಿಧ ಪೂಜೆಯ ಮಾಡಬೇಕೆಂಬರು, ಈ ತ್ರಿವಿಧದ ನೆಲೆಯನರಿಯರು. ಲಿಂಗಲಿಂಗವೆಂದು ಲಿಂಗವನೆ ಅರ್ಚಿಸಿ, ಲಿಂಗವನೆ ಪೂಜಿಸಿ, ಅಂಗ ಭಿನ್ನವಾಯಿತ್ತು. ಆರಾರಿಗೆಂದರೆ, ಸ್ವರ್ಗ, ಮತ್ರ್ಯ, ಪಾತಾಳದವರೆಗೆ ಮೂರುಲೋಕವು ಸೆರೆಸೂರೆಹೋಯಿತ್ತು. ಗುರುಲಿಂಗಜಂಗಮ ತ್ರಿವಿಧವು ಏಕವಾದ ಭೇದವ ನಿಮ್ಮ ಶರಣರೇ ಬಲ್ಲರಲ್ಲದೆ, ಈ ಮರಣಬಾಧೆಗೊಳಗಾಗುವ ಮತ್ರ್ಯರೆತ್ತ ಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಉರಿಯೊಳಗೆ ಉರಿ ಹುಟ್ಟಿ, ಶರಧಿಯಾಪೋಷಣವಾಯಿತ್ತು. ಧರೆ ನಿಬ್ಬೆರಗಾಯಿತ್ತು , ಶರಧಿ ಬತ್ತಿತ್ತು, ಉರಿ ನಿಂದಿತ್ತು. ವಾಯು ನಾಶವಾಯಿತ್ತು, ಆಕಾಶ ಬಯಲಾಯಿತ್ತು. ಇದು ಕಾರಣ, ಆತ್ಮ ಕರ್ಪುರದ ಗಿರಿಯಂತೆ ನಿಂದಿತ್ತು. ಆತ್ಮ ಪರಂಜ್ಯೋತಿಯಂತೆ ಪ್ರಜ್ವಲಿಸಿತ್ತು. ಇದರ ಭೇದವನರಿದು ಮೂರು ಮುಟ್ಟದೆ, ಆರು ತಟ್ಟದೆ , ಬೇರೆ ಒಂದರ ಮೇಲೆ ನಿಂದು, ಸಂದಿಗೊಂದಿಯನೆಲ್ಲವ ಶೋಧಿಸಿ, ಬೆಂದ ನುಲಿಯ ಹಾಗೆ ಅಂದವಾಗಿಪ್ಪುದನೊಂದು ನೋಡುವರೆ ಸೇವೆಗೆ ಬಾರದು. ಇದರಂದವ ಲಿಂಗೈಕ್ಯರೆ ಬಲ್ಲರಲ್ಲದೆ, ಸಂದೇಹ ಭ್ರಮೆಯೊಳುಸಿಕ್ಕಿ ನೊಂದು ಬೆಂದು ಸಾವ ಹಂದಿಗಳೆತ್ತ ಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ