ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಮ್ಮ ಶರಣರು ಗುರುಸ್ಥಲ ನಾಸ್ತಿಯಾಯಿತ್ತೆಂಬರು, ಅದೇನು ಕಾರಣವೆಂದರೆ ತಮ್ಮ ಗುಣ ಅವಗುಣವಿಲ್ಲವಾಗಿ. ಲಿಂಗಸ್ಥಲ ನಾಸ್ತಿಯಾಯಿತ್ತೆಂಬರು, ಅಂಗಗುಣವಳಿಯಿತ್ತಾಗಿ. ಜಂಗಮಸ್ಥಲ ನಾಸ್ತಿಯಾಯಿತ್ತೆಂಬರು, ಅದೇನು ಕಾರಣ ? ಭಾವಬಯಲಾಯಿತ್ತಾಗಿ. ಪ್ರಸಾದಿಸ್ಥಲ ನಾಸ್ತಿಯಾಯಿತ್ತೆಂಬರು, ಪರವು ತಮ್ಮಲ್ಲಿ ನಿಂದ ಕಾರಣ. ಇಂತೀ ಸರ್ವಾವಧಾನಿಗಳೆಲ್ಲರು ನಮ್ಮ ಶರಣರು. ಇಂತು ಸರ್ವಾಚಾರಸಂಪನ್ನರಯ್ಯ ನಮ್ಮ ಶರಣರು. ಇಂತು ಸರ್ವಾಂಗಲಿಂಗಿಗಳಯ್ಯ ನಮ್ಮ ಶರಣರು. ಇಂತಪ್ಪ ಶರಣ ಸನ್ನಹಿತ ಚೆನ್ನಮಲ್ಲೇಶ್ವರನ ಪಾದವ ನಂಬಿದ ಕಾರಣ, ನಾ ಹೋದ ಹಾದಿಯನಾರೊ ಅರಿಯರಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ ? ಕಡೆ ನಡುವೆಂದೇನೊ ಮೃಡನ ಹಾಡುವಂಗೆ ? ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ ? ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ ? ಕಲಿಯುಗದ ಕತ್ತಲೆಯ ದಾಂಟಿದವಂಗೆ, ನಿಮ್ಮ ನೆಲೆಯನರಿದ ಶರಣಂಗೆ ಇನ್ನು ಸ್ಥಲನೆಲೆ ಆವುದುಂಟು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ