ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊಧ್ರ್ವಬಿಂದು ನಾದ ಮುಟ್ಟಲಿಕೆ ಜಂಗಮ, ಮಧ್ಯಬಿಂದು ಊಧ್ರ್ವ ಮುಟ್ಟಲಿಕೆ ಸ್ಥಾವರ, ಸ್ಥಾವರಬಿಂದು ಸ್ಥಾವರವಾದ ಊಧ್ರ್ವ ಮುಟ್ಟಲಿಕೆ ಭಕ್ತ, (ಭಕ್ತಿ?) ಬಿಂದು ನಾದ ಮುಟ್ಟಲಿಕೆ ಭವಿ. ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ, ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ ಭಕ್ತಂಗೆ ಕೊಡಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ.
--------------
ಚನ್ನಬಸವಣ್ಣ
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಊಹಿಸಲರಿಯೆ, ಉತ್ತರವನರಿಯೆ, ದೇವನನರಿಯೆ, ದೇಹಿಕನನರಿಯೆ, ನಾನೆನ್ನಲರಿಯೆ, ನೀನೆನ್ನಲರಿಯೆ, ಕೂಡಲಚೆನ್ನಸಂಗಮದೇವ ಎನ್ನಲರಿಯೆ !
--------------
ಚನ್ನಬಸವಣ್ಣ