ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ತನ್ನ ಪುತ್ರಂಗೆ ತಾನೆ ಗುರುವಾದೆನೆಂಬ ಗುರುದ್ರೋಹಿಯ ಮಾತ ಕೇಳಲಾಗದು. ಅವರಿಬ್ಬರನು ಹೊತ್ತಿಸಿ ನಂದಿಸಿ ಸುಡುವ ಕೂಡಲಚೆನ್ನಸಂಗಯ್ಯನವರ ಗುರುಶಿಷ್ಯತನವ.
--------------
ಚನ್ನಬಸವಣ್ಣ
ತೆರಹಿಲ್ಲದ ಮಹಾಘನ ಪರಿಪೂರ್ಣ ಲಿಂಗಭರಿತವೆಂದೇ ಭಾವಿಸಿ, ಪೂಜಿಸಿ, ಮರಳಿ ಬಿದ್ದಿತ್ತು ಕೆಡೆಯಿತ್ತು ಎಂಬ ಅಜಾÕನವ ನೋಡಾ ! ತೆರಹಿಲ್ಲದ ಪರಿಪೂರ್ಣ ಲಿಂಗವು, ಬೀಳಲಿಕ್ಕೆ ತೆರಹುಂಟೆ ? ಅರಿಯರು ಪ್ರಾಣಲಿಂಗದ ನೆಲೆಯನು. ಅರಿಯದೆ ಅಜಾÕನದಲ್ಲಿ ಕುರುಹು ಬಿದ್ದಿತ್ತೆಂದು ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗ? ನೋಡಾ ! ಅರದು ಕೂಡಿ ಸ್ವಯವಾಗಿರ್ದ ಲಿಂಗವು ಓಕರಿಸಿತ್ತೆಂದು ಆ ಲಿಂಗದೊಡನೆ ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗಳಿಗೆ ಅಘೋರ ನರಕ ತಪ್ಪದು ಕಾಣಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಮನ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ, ಕಂUಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ, ಘ್ರಾಣ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ, ಜಿಹ್ವೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ. ಅಹುದೆಂಬುದ ನಡೆಯ (ನುಡಿಯ?), ಅಲ್ಲೆಂಬುದ ನುಡಿಯ, ಬೇಕು ಬೇಡೆಂಬುದಿಲ್ಲ, ಸಾವಯವೆಂಬುದಿಲ್ಲ. ನಿರವಯದಲ್ಲಿ ಸಕಲಭೋಗಂಗಳ ಭೋಗಿಸುವನು,
--------------
ಚನ್ನಬಸವಣ್ಣ
ತನ್ನ ಲಿಂಗವ ಶಿಷ್ಯಂಗೆ ಬಿಜಯಂಗೈಸಿ ಕೊಟ್ಟು ಮುಂದೆ ತಾನೇನಾಗುವನೆಲವೊ ? ಅವನ ಧರ್ಮಕ್ಕೆ ಗುರುವಾದನಲ್ಲದೆ ಅವನ ಮನಕ್ಕೆ ಗುರುವಾದುದಿಲ್ಲ. ಹಿಂದಾದ ಮುಕ್ತಿಯ ಮಾರಿಕೊಂಡುಂಬ ಭಂಗಗಾರರ ತೋರದಿರಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ, ತಾವು ಗುರುವೆಂತಾದರೊ ! ಎಲ್ಲರಿಗೆಯೂ ಒಂದೇ ದೇಹ. ``ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ ಆತ್ಮಾಕಾಯಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಯಂ' ಎಂದುದಾಗಿ, ಗುರುವೆಂಬುದು ತಾನು ಪರುಷವು ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ, ಆ ಪರುಷವೆ ಆಗಲರಿಯವು_ ಅದು ಗುರುಸ್ಥಲವಲ್ಲ ನಿಲ್ಲು ಮಾಣು. ಗುರುವೆಂಬುದು ತಾನು ಸ್ವಯಂ ಜ್ಯೋತಿಪ್ರಕಾಶವು, ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು. ಅದಾವ ಜ್ಯೋತಿಯೆಂದಡೆ ಪಶ್ಚಿಮಜ್ಯೋತಿ. ಆ ಪಶ್ಚಿಮಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು. ನಾಲ್ಕು ವೇದಾರ್ಥ:ಅಜಪಗಾಯತ್ರಿ. ಅಜಪಗಾಯತ್ರಿಯರ್ಥ:ಪ್ರಾಣಾಯಾಮ. ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು. ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು. ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ
--------------
ಚನ್ನಬಸವಣ್ಣ
ತೆರಹಿಲ್ಲದ ಘನವು ಮನದೊಳಗೆ ನಿಂದು ನೆಲೆಗೊಂಡ ಬಳಿಕ, ಆ ಘನವ ತೆರೆಯ ಮರೆಯಲಡಗಿಸಿಹೆನೆಂದಡೆ ಅಡಗುವುದೆ ? ಹೇಮಗಿರಿಯ ಕದ್ದು ಭೂಮಿಯಲಡಗಿಸಿಹೆನೆಂದಡೆ ಆ ಕಳವು ಸಿಕ್ಕದೆ ಮಾಣ್ಬುದೆ ? ಕೂಡಲಚೆನ್ನಸಂಗನ ಶರಣ ಪ್ರಭುವಿನಲ್ಲಿ ಬೆರಸಿದ ಸುಖವ ಮರೆಸಿಹೆನೆಂದಡೆ ನಿನ್ನಳವೆ ಹೇಳಾ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ತನುವಿರಹಿತ ಪ್ರಾಣವಿಲ್ಲ, ಗುರುವಿರಹಿತ ಲಿಂಗವಿಲ್ಲ, ಕಂಗಳಸಂಗ ವಿರಹಿತವಾಗಿ ನೋಡಲಿಲ್ಲ. ಈ ಭೇದಸ್ಥಾನವನರಿಯಬೇಕು, ಕೂಡಲಚೆನ್ನಸಂಗಯ್ಯನನರಿವರೆ.
--------------
ಚನ್ನಬಸವಣ್ಣ
ತಿಳಿದುಪ್ಪ ಗಟ್ಟಿದುಪ್ಪಕ್ಕೆ ಭೇದವುಂಟೆ? ದೀಪಕ್ಕೆ ದೀಪ್ತಿಗೆ ಭಿನ್ನವುಂಟೆ ? ಆತ್ಮಕ್ಕೆಯೂ ದೇಹಕ್ಕೆಯೂ ಸಂದುಂಟೆ ? ಕ್ಷೀರಕ್ಕೆಯೂ ಸ್ವಾದಕ್ಕೆಯೂ ಭೇದವುಂಟೆ ? ಇದು ಕಾರಣ, ಸಾಕಾರವೆ ನಿರಾಕಾರವೆಂದರಿದು; ಅಂಗಲಿಂಗಸಂಬಂಧವಿಲ್ಲದವರ ಸಂಗ ಭಂಗವೆಂದು ಕೂಡಲಚೆನ್ನಸಂಗಯ್ಯನ ಶರಣರು ಮೆಚ್ಚರಯ್ಯಾ ಪ್ರಭುವೆ
--------------
ಚನ್ನಬಸವಣ್ಣ
ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ, ಇರುಳು ಹಗಲೆಂದು ಮನದಲ್ಲಿ ತಾಳದವ, ತಾಳೋಷ್ಠಸಂಪುಟಕ್ಕೆ ಬಾರದವ, ಭವಚ್ಛೇದ ಕಾಮಭಂಜನ ಕಾಯವಿಲ್ಲದವ, ಕಾಲನ ಗೆದ್ದವ, ಮಾಯವ ತೊರೆದವ, ಮತ್ತೊಂದನರಿಯದವ ನಮ್ಮ ಕೂಡಚೆನ್ನಸಂಗನನರಿದು ಸುಖಿಯಾದವ.
--------------
ಚನ್ನಬಸವಣ್ಣ
ತನ್ನ ಹೊದ್ದದಂತೆ ಮಾಡಿದ, ತನ್ನ ಸಾರದಂತೆ ಮಾಡಿದ. ಕಾಮವ ತಂದು ಕಣ್ಣಿಗೆ ತೋರಿದನು, ವಿಧಿಯ ತಂದು ಮುಂದೊಡ್ಡಿದನು ನೋಡಯ್ಯಾ. ಪ್ರಸಾದಸಾಧಕರಿಗೆ ಇದೇ ವಿಘ್ನವಯ್ಯಾ. ಕೂಡಲಚೆನ್ನಸಂಗಮದೇವಯ್ಯ ತನ್ನ ಹೊದ್ದದಂತೆ ಮಾಡಿದನಯ್ಯಾ
--------------
ಚನ್ನಬಸವಣ್ಣ
ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು, ವಿಷಯದೊಳಗಿದ್ದು ವಿಷಯಂಗಳ ಗೆದ್ದಳು, ಅಂಗಸುಖವ ತೊರೆದು ಭವವ ಗೆದ್ದಳು, ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ತನುವಿನ ಸೂತಕ, ಮನದ ಸಂಚಲ, ಜೀವನ ಕಳವಳ; ಹಿಂಗಿದುವಯ್ಯಾ ಗುರುಕರುಣವ ಪಡೆದೆನಾಗಿ, ಕೂಡಲಚೆನ್ನಸಂಗಮದೇವಾ ಎನ್ನ ಭಾವಭ್ರಾಂತಿಯಳಿಯಿತ್ತು ನೀವೆಂದರಿದೆನಾಗಿ !
--------------
ಚನ್ನಬಸವಣ್ಣ
ತನುಮುಟ್ಟಿ ಮನ ಮುಟ್ಟದೆ ದೂರವಾದರಯ್ಯಾ ಬೆಲೆವೆಣ್ಣಿನಂತೆ, ಸೂಳೆ ತನುಮುಟ್ಟಿ ಅಪ್ಪುವಳಲ್ಲದೆ ಮನಮುಟ್ಟಿ ಅಪ್ಪಳಾಗಿ. ಆಚಾರವರಿಯದ ಅರೆಮರುಳುಗಳು ಶಿವಸುಖವನೆತ್ತ ಬಲ್ಲರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನು, ಮನ, ಧನಕ್ಕೆ ಆಸೆಮಾಡುವಾತನ ಬಸವಣ್ಣನ ಸಂತತಿಯೆಂತೆನಬಹುದು? ವಧುವಿಂಗೆ ಆಸೆ ಮಾಡುವರನು ಬಲ್ಲಾಳನ ಸಂತತಿಯೆಂತೆನಬಹುದು? ಮಕ್ಕಳಿಗೆ ಆಸೆ ಮಾಡುವರ ಸಿರಿಯಾಳನ ಸಂತತಿಯೆಂತೆನಬಹುದು? ಎನಲಾಗದು, ಎನಿಸಿಕೊಳಲಾಗದು. ಎಂದಾತಂಗೆಯೂ ಎನಿಸಿಕೊಂಡಾತಂಗೆಯೂ ನರಕ ತಪ್ಪದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನ್ನನಿಕ್ಕಿ ನಿಧಾನವ ಸಾಧಿಸಲರಿಯದ ಹಂದೆಗಳಿದ್ದೇನು ಫಲ ? ಕಾಡಹಂದಿ ನರಿಯ ಹಿಂಡು ತರುವಿಂಧ್ಯದಲ್ಲಿ ಕೂಡಿರವೆ ? ತಮ್ಮ ತಮ್ಮ ತಮಂಧ ಕತ್ತಲೆ ಹರಿಯದನ್ನಕ್ಕ ಇದಿರಿಗೆ ಬುದ್ಧಿಯ ಹೇಳಿ ಉದರವ ಹೊರೆವ ಚದುರರೆಲ್ಲರು ಹಿರಿಯರಪ್ಪರೆ ? ಲೋಗರ ಮಕ್ಕಳನಿಕ್ಕಿ ನೆಲೆಯ ನೋಡಿಹೆನೆಂದಡೆ, ಅದೆಂದು ಸಾಧ್ಯವಪ್ಪನಯ್ಯಾ ನಮ್ಮ ಕೂಡಲಚೆನ್ನಸಂಗಮದೇವರು ?
--------------
ಚನ್ನಬಸವಣ್ಣ
ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ: ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ, ಪ್ರಾಣ ತಾನಲ್ಲ, ದಶವಾಯುಗಳು ತಾನಲ್ಲ, ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು ತಾನಲ್ಲ ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು, ತನ್ನ ನಿಜಸ್ವರೂಪ ತಾನೇ ನೋಡಿ ಕಂಡು; ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು, ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು ತನುವಿನ ಮೇಲೆ ಶಸ್ತ್ರವನಿಕ್ಕಿಕೊಂಬ ಶಿವದ್ರೋಹಿಯ ಮುಖವ ನೋಡಲಾಗದು, ಕಲುಕುಟಿಗ ಮುಟ್ಟಿ ಚಕ್ಕೇಳುವಾಗ, ಪ್ರಾಣಲಿಂಗ ಭಿನ್ನವಾಯಿತ್ತೆ ? ಭಾವಲಿಂಗ ಭಿನ್ನವಾಯಿತ್ತೆ ? ಪೂಜಾಲಿಂಗ ಭಿನ್ನವಾಯಿತ್ತಲ್ಲದೆ, ಇಂತೀ ನಿರಾಳದ ನೆಲೆಯ ಸೋಂಕನಾರೂ ಅರಿಯರು. ಇಷ್ಟಲಿಂಗ ಬಿದ್ದಿತ್ತೆಂಬ ಕಷ್ಟವ ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನ್ನ ಲಿಂಗಕ್ಕೆ ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬುದನೇಕ ನರಕ ! ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ ಜಂಗಮಕ್ಕೆ ನೀಡುವುದನೇಕ ನಾಯಕನರಕ. ಆ ಜಂಗಮವಾರೋಗಿಸಿ ಮಿಕ್ಕ ಪ್ರಸಾದ, ಎನ್ನ ಲಿಂಗಕ್ಕೆ ಬೋನವಾಯಿತ್ತು, ಎನಗೆ ಪ್ರಸಾದವಾಯಿತ್ತು. ಕೂಡಲಚೆನ್ನಸಂಗಯ್ಯಾ ಎನಗೆಯೂ ನಿನಗೆಯೂ ಜಂಗಮಪ್ರಸಾದ ಪ್ರಾಣವಾಯಿತ್ತು.
--------------
ಚನ್ನಬಸವಣ್ಣ
ತಮ್ಮ ನಿಧಾನವ ಸಾಧಿಸುವ ಭೇದವನರಿಯದ ಅಜ್ಞಾನಿಗಳು ಇದ್ದು ಫಲವೇನು ? ಕಾಡಹಂದಿ ನರಿಯಹಿಂಡು ತರುವಿಂಧ್ಯದಲ್ಲಿ ಕೂಡಿರವೆ ? ಹಿರಿಯಹಂದಿ ನಾಯವಿಂಡು ನರವಿಂಧ್ಯದಲ್ಲಿ ಕೂಡಿರುವೆ ? ತಮ್ಮ ತಮ್ಮ ಅಜ್ಞಾನ ಹಿಂಗದೆ ಇದಿರಿಗೆ ಬೋಧೆಯ ಹೇಳಿ ಉದರವ ಹೊರೆವ ಚದುರರೆಲ್ಲ ಹಿರಿಯರಪ್ಪರೆ ? ಲೋಗರ ಮಕ್ಕಳನಿಕ್ಕಿ ನೆಲೆಯ ನೋಡೇನೆಂದರೆ ಅದೆಂತು ಸಾಧ್ಯವಾಗುವುದಯ್ಯ ? ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ತ್ರಿವಿಧವಿರಹಿತಲಿಂಗ, ಆಗಮವಿರಹಿತ ಪ್ರಸಾದಿ, ಲಿಂಗವಿಲ್ಲದ ಜಂಗಮ ಜಂಗಮವಿಲ್ಲದ ಲಿಂಗ,_ ಇದ ಕೇಳಿ ಗುರುವಿಲ್ಲದ ಶಿಷ್ಯ, ಶಿಷ್ಯನಿಲ್ಲದ ಗುರು, ಇವೆಲ್ಲವ ಕಂಡು_ ಯುಕ್ತಿಯಿಲ್ಲದ ಭಕ್ತಿ, ಭಕ್ತಿಯಿಲ್ಲದ ಯುಕ್ತಿ ನೋಡಯ್ಯ ! ಇದು ಐಕ್ಯಸ್ಥಲವಲ್ಲ, ನಿಃಸ್ಥಲ ನಿರವಯ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ ಜಂಗಮ. ಭಾಷೆಗೆ ತಪ್ಪದಿರ್ದಡೆ ಮಾಹೇಶ್ವರ ಪ್ರಸಾದಿ, ವೇಷವ ತೋರದಿರ್ದಡೆ ಜಂಗಮ ಇಂದ್ರಿಯ ವಿಕಾರವಳಿದಡೆ ಪ್ರಸಾದಿ, ಮನವಳಿದಡೆ ಜಂಗಮ. ಪ್ರಾಣಸಂಚಾರಗೆಟ್ಟಡೆ ಪ್ರಾಣಲಿಂಗಿ, ಜೀವಭಾವಗೆಟ್ಟಡೆ ಜಂಗಮ. ಅರಿವಿನ ಭ್ರಾಂತಳಿದರೆ ಶರಣ, ಬೋಧೆಗೆಟ್ಟಡೆ ಜಂಗಮ. ತಾನಿಲ್ಲದಿರ್ದಡೆ ಐಕ್ಯ, ಏನೂ ಇಲ್ಲದಿರ್ದಡೆ ಜಂಗಮ_ ಇಂತೀ ಷಟ್‍ಸ್ಥಲದಲ್ಲಿ ನಿಜವನರಿದು ನೆಲೆಗೊಂಡಾತನೆ ಶ್ರೀಗುರು. ಇಂತಲ್ಲದೆ ನುಡಿಯಲ್ಲಿ ಅದ್ವೈತವನಾಡಿ ನಡೆಯಲ್ಲಿ ಅನಂಗವ ನಡೆವರ ಕಂಡಡೆ ಎನ್ನ ಮನ ನಾಚಿತ್ತು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನು ಕಾಮಿಯಾಗದೆ ಮನ ಕಾಮಿಯಾಗದೆ ಧನ ಕಾಮಿಯಾಗದೆ ಅಶನ ವಸನ ಕಾಮಿಯಾಗದೆ ಲಿಂಗ ಕಾಮಿಯಾದರೆ ಕೂಡಲಚೆನ್ನಸಂಗಯ್ಯನೆಂಬೆ.
--------------
ಚನ್ನಬಸವಣ್ಣ
ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ ಮೇಲಿಕ್ಕಿಕೊಂಡಿರ್ದಡೆ ಹಸಿವು ಹೋಗಿ ಅಪ್ಯಾಯನವಹುದೆ ? ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು ? ಅಂಗವೂ ಲಿಂಗವೂ ಕೂಡವ ಭೇದವನರಿಯದವರು ಗುರುತಲ್ಪಕರು, ಪಂಚಮಹಾಪಾತಕರು_ಅದೆಂತೆಂದಡೆ: ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಂ ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಕ್ತೇ ಸುಖಾವಹಂ ಮತ್ತೆಯೂ_ಅಂಗಾನಾಂ ಲಿಂಗಸಂಬಂಧೋ ಲಿಂಗಾನಾಮಂಗಸಂಯುತಿಃ ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ ಎಂದುದಾಗಿ, ಅಂಗದಲ್ಲಿ ಲಿಂಗ ಒಡಗಲಸಬೇಕು, ಲಿಂಗದಲ್ಲಿ ಅಂಗ ಒಡಗಲಸಬೇಕು. ಇದು ಕಾರಣ_ಎಲ್ಲರೂ ಅಂಗಸಂಬಂಧಿಗಳಲ್ಲದೆ ಲಿಂಗಸಂಬಂಧಿಗಳಪೂರ್ವ ಕಾಣಾ_ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನುವಿಡಿದು ನಡೆವ ತ್ರಿವಿಧ ಸಂಪತ್ತುಗಳು ಭಕ್ತ ಮಹೇಶ್ವರ ಪ್ರಸಾದಿ; ಮನ ವಿಡಿದು ನಡೆವ ತ್ರಿವಿಧ ಸಂಪತ್ತುಗಳು ಪ್ರಾಣಲಿಂಗಿ ಶರಣ ಐಕ್ಯ. ಈ ಉಭಯದನುಭವವಿಡಿದು `ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಎಂಬ, ಈ ಭೇದವ ಭೇದಿಸಬಲ್ಲಡೆ ಹಿಂದಿಲ್ಲ ಮುಂದಿಲ್ಲ, ಇಹ ಪರ ಒಂದೆ, ಕರ್ಮ ನಾಸ್ತಿ ಭವಂ ನಾಸ್ತಿ. ಕೂಡಲಚೆನ್ನಸಂಗ ಸ್ವಾಯತವಾದವಂಗೆ ಇದು ಸಹಜ.
--------------
ಚನ್ನಬಸವಣ್ಣ

ಇನ್ನಷ್ಟು ...