ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪನರ್ಪಿಸಿ ಫಲವೇನು, ರುಚಿಯನರ್ಪಿಸದನ್ನಕ್ಕ ? ರುಚಿಯನರ್ಪಿಸಿ ಫಲವೇನು ಪರಿಣಾಮವನರ್ಪಿಸದನ್ನಕ್ಕ ? ಪರಿಣಾಮವನರ್ಪಿಸಿ ಫಲವೇನು ತನ್ನನರ್ಪಿಸದನ್ನಕ್ಕ ? ತನ್ನನರ್ಪಿಸಿ ಫಲವೇನು, ಕೂಡಲಚೆನ್ನಸಂಗಯ್ಯನೆಂಬ ಭಾವ ಬರಿದಾಗದನ್ನಕ್ಕ ?
--------------
ಚನ್ನಬಸವಣ್ಣ
ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ ಸುಖಮರ್ಪಿತಂ ಉಭಯಾರ್ಪಿತ ವಿಹೀನಂ ಚ ಪೂಜನಂ ನಿಷ್ಫಲಂ ಭವೇತ್ ಇಂತೆಂಬ ಶ್ರುತಿಯನೊಲ್ಲೆ. ರುಚಿಯ ಬಲ್ಲನೆ ಪ್ರಸಾದಿ ತಾ ಲಿಂಗಭೋಗೋಪಭೋಗಿಯಾಗಿ ? ಸುಖವ ಬಲ್ಲನೆ ಭಕ್ತ ತಾ ಜಂಗಮಭೋಗೋಪಭೋಗಿಯಾಗಿ ? ರುಚಿಯನರ್ಪಿಸುವಾತ ಪ್ರಸಾದಿಯಲ್ಲ, [ಸುಖವ]ನರ್ಪಿಸುವಾತ ಭಕ್ತನಲ್ಲ, ಇದನರಿದ ಶರಣಂಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ರೂಪುವಿರಹಿತ ಲಿಂಗ ಕಂಡಾ ! ಗುರುವುಳ್ಳನ್ನಕ್ಕ ಶಿಷ್ಯನಲ್ಲಾ, ಲಿಂಗವುಳ್ಳನ್ನಕ್ಕ ಜಂಗಮವಲ್ಲಾ, ಪ್ರಸಾದವುಳ್ಳನ್ನಕ್ಕ ಭಕ್ತನಲ್ಲಾ. ಲಿಂಗೈಕ್ಯನಾದಡೆ; ಸ್ಥಾವರವಿರಹಿತ ಶರಣಭರಿತನಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದಡೆಯು ಉಂಟು ಆತ್ಮಸಾಹಿತ್ಯವಪೂರ್ವ ನೋಡಾ ! ಆಚಾರ[ಸಾಹಿತ್ಯ]ವೆ ಲೋಕ, ಅನಾಚರ[ಸಾಹಿತ್ಯ]ವೆ ಶರಣ ಇದು ಕಾರಣ ಕೂಡಲಚೆನ್ನಸಂಗಯ್ಯಾ ಅನಾಚಾರಗಲ್ಲದೆ ಪ್ರಸಾದವಿಲ್ಲ.
--------------
ಚನ್ನಬಸವಣ್ಣ
ರೂಪುರಹಿತ ಲಿಂಗದಲ್ಲಿ ಅರ್ಪಿತ, ಪ್ರಸಾದ, ಉಭಯ ನಾಸ್ತಿ. ಇಂತೀ ತ್ರಿವಿಧಸಂಚವ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ರವಿಯ ಕಿರಣಂಗಳ ರಮಿಸದೆ ಪಾಲಿಸದೆ ಆಲಿಸದೆ ಎಂದೂ ನಿಂದುದಾಗಿ, ಹಿಮಕರಾದಿಗ?ನು ಮನಸ್ತಂಭನೆಗೆ ತಾರದೆ ನಿಂದುದಾಗಿ, ದಿನಕರ ಅಬೋಧ ಸ್ತಂಭಗಳ ಅರ್ಪಿತವೆನ್ನದೆ ಆಯಿತ್ತಾಗಿ, ಘನಮನವೇದ್ಯ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಆನೆನ್ನದ ಪ್ರಸಾದಿ.
--------------
ಚನ್ನಬಸವಣ್ಣ
ರೂಪಚಕ್ರ ನಯನದಿಂದೆ ನಡೆವುದು; ಶಬ್ದಚಕ್ರ ಶ್ರೋತ್ರದಿಂದೆ ನಡೆವುದು. ¸õ್ಞರಭಚಕ್ರ ಘ್ರಾಣದಿಂದೆ ನಡೆವುದು, ರುಚಿಚಕ್ರ ಜಿಹ್ವೆಯಿಂದ ನಡೆವುದು,_ ಸ್ಪರ್ಶಚಕ್ರ ತ್ವಕ್ಕಿನಿಂದ ನಡೆವುದು, ಈ ಐದರಿಂದ ನಡೆವುದು ಲೋಕಾದಿಲೋಕಂಗಳೆಲ್ಲ. ರೂಹಿಗೆ ಕೆಟ್ಟು ಹೋದರು. ಈ ಐದರ ಕಥನದಲ್ಲಿ, ಈ ಸಂಸಾರವೆಂಬ ವಿಧಿಯ ಕೈಯಲ್ಲಿ ಹರಿಬ್ರಹ್ಮಾಸುರರು ಮೊದಲಾದವರೆಲ್ಲರು ಕೆಟ್ಟುಹೋದರು ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ರಚನೆ ರಂಜಕವ ನುಡಿವಾತ ಜಂಗಮವಲ್ಲ. ನರರ ಹೊಗಳಿ ಹಾಡಿ ಬೇಡುವಾತ ಜಂಗಮವಲ್ಲ. ನರರ ಕೈವಾರಿಸುವಾತ ಜಂಗಮವಲ್ಲ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೇ ಜಂಗಮ, ಬಸವಣ್ಣನೇ ಭಕ್ತ.
--------------
ಚನ್ನಬಸವಣ್ಣ
ರಜದ ನಿಜದ ಭುಜದ ಗಜದ ಸದದ ಇವೆಲ್ಲವನು ಕೊಂಡು ಹೋಗಿ, ಮಡಿವಾಳನೆಂದು ಒಗೆಯ ಹಾಕಿದೆನು. ಒಗೆಯ ಹಾಕಿದಡೆ, ಗುರುಮೂರ್ತಿಯ ನಷ್ಟವ ಬಿಳಿದು ಮಾಡಿದನು. ಲಿಂಗಸಾರಾಯಸ್ವರೂಪವ ಬಿಳಿದು ಮಾಡಿದನು, ಜಂಗಮಸಾರಾಯಸ್ವರೂಪವ ಬಿಳಿದು ಮಾಡಿದನು, ಅಗ್ನಿಯಿಲ್ಲದ ಪಾಕದ ಪದಾರ್ಥವ ಲಿಂಗವಿಲ್ಲದೆ ಅರ್ಪಿಸಿದನು; ಜಂಗಮವಿಲ್ಲದೆ ನೀಡಿದನು, ಪ್ರಸಾದವಿಲ್ಲದೆ ಗ್ರಹಿಸಿದನು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ, ಮಡಿವಾಳನೆಂಬ ಪ್ರಸಾದ ಎನಗಳವಟ್ಟಿತ್ತು.
--------------
ಚನ್ನಬಸವಣ್ಣ
ರೂಪನರ್ಪಿತವ ಮಾಡಿದ ಬಳಿಕ ರುಚಿಯನರ್ಪಿತವ ಮಾಡಲೇಬೇಕು, ರುಚಿಯನರ್ಪಿತವ ಮಾಡಿದ ಬಳಿಕ ಮುಟ್ಟಿದ ಕೈ ವ್ರತಗೇಡಿಯಾಗಲೇಬೇಕು. ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.
--------------
ಚನ್ನಬಸವಣ್ಣ
ರೂಪು ಶೂನ್ಯವಾಗಬೇಕು, ಶೂನ್ಯ ಅಂಕುರಿತವಾಗಬೇಕು. ಅಂಕುರಿತಕ್ಕೆ ಸಂದು ತೆರಹಿಲ್ಲದಿದ್ದರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ರೂಪಿಲ್ಲದ ರೂಪು, ನಿರ್ಣಯವಿಲ್ಲದ ನಿಷ್ಪತ್ತಿ ಸೀಮೆಯ ಮೀರಿದ ನಿಸ್ಸೀಮ, ಗಮನವಿಲ್ಲದ ಗಮ್ಯ, ನುಡಿಯುಡಿಗಿದ ನಿಃಶಬ್ದ, ಪರವನರಿಯದ ಪರಿಣಾಮಿ ಕೂಡಲಚೆನ್ನಸಂಗನ ಶರಣ ಪ್ರಭುದೇವರಿಗೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ರೂಪನರ್ಪಿಸಿ ನಿರೂಪಪ್ರಸಾದಿ, ತನ್ನನರ್ಪಿಸಿ ತಾನಿಲ್ಲದ ಪ್ರಸಾದಿ, ಇವೆಲ್ಲವನರ್ಪಿಸಿ ಬಯಲಪ್ರಸಾದಿ. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಮಹಾಪ್ರಸಾದಿಗಳು.
--------------
ಚನ್ನಬಸವಣ್ಣ
ರುಚಿವಿರಹಿತ ಪ್ರಸಾದ, ಸ್ಪರ್ಶವಿರಹಿತ ಅರ್ಪಿತ ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ ! ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದದಿಂದ ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ !
--------------
ಚನ್ನಬಸವಣ್ಣ
ರೂಪಾಗಿ ಬಂದುದ ಕಾಯದ ಕೈಯಲ್ಲಿ ಕೊಡುವುದು, ರುಚಿಯಾಗಿ ಬಂದುದ ಮನದ ಕೈಯಲ್ಲಿ ಕೊಡುವುದು, ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು, ಅರ್ಪಿಸುವ ತೆರನಿದು ಪ್ರಸಾದಿಗಯ್ಯಾ. ``ಇಷ್ಟಲಿಂಗಾರ್ಪಿತಂ ರೂಪಂ ರುಚಿಃ ಪ್ರಾಣಸಮರ್ಪಿತಾ ತೃಪ್ತಿರ್ಭಾವಸಮಾಯುಕ್ತಾ ಅರ್ಪಿತಂ ತ್ರಿವಿಧಾತ್ಮಕಂ '' _ಎಂದುದಾಗಿ, ರೂಪು ರುಚಿ ತೃಪ್ತಿಯ ಕೊಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿಯಯ್ಯಾ
--------------
ಚನ್ನಬಸವಣ್ಣ
ರುಂಡವ ಧರಿಸಿದಾತ ರುಂಡಾಭರಣನೆಂಬ ಗಣೇಶ್ವರನು. ಆಕಾಶವ ಧರಿಸಿದಾತ ಅಂಢಾಭರಣನೆಂಬ ಗಣೇಶ್ವರನು. ಭೂಮ್ಯಾಕಾಶವ ತಾಳವ ಮಾಡಿ ಒತ್ತಿದಾತ ಕ್ಷಿತಿವಿಯತ್ತಳನೆಂಬ ಗಣೇಶ್ವರನು. ಬ್ರಹ್ಮಾಂಡವ ಖಂಡಿಸಿದಾತ ಬ್ರಹ್ಮಾಂಡಖಂಡಿತನೆಂಬ ಗಣೇಶ್ವರನು. ತ್ರಿಪುರದಹನವ ಮಾಡಿದಾತ ಪಂಚವಿಕೃತನೆಂಬ ಗಣೇಶ್ವರನು. ಕಾಮದಹನವ ಮಾಡಿದಾತ ಅರ್ಧನಾರೀಶ್ವರನೆಂಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತ ಮಹಾರುದ್ರನೆಂಬ ಗಣೇಶ್ವರನು. ಸಿರಿಯಾರನ ಮಗನ ಭಿಕ್ಷವ ಬೇಡಿದಾತ ಬಹುಭಿಕ್ಷುಕನೆಂಬ ಗಣೇಶ್ವರನು. ಪರ್ವತಂಗಳ ಧರಿಸಿದಾತ ಪರ್ವತಾಭರಣನೆಂಬ ಗಣೇಶ್ವರನು. ಇಂತಿವರೆಲ್ಲರೂ ಕೂಡಲಚೆನ್ನಸಂಗಯ್ಯನ ಲೀಲೆಯ ತದರ್ಧಕರು.
--------------
ಚನ್ನಬಸವಣ್ಣ
ರೂಪುವಿಕಾರಿಗಳಿಗಿನ್ನಾಗದಯ್ಯಾ, ರುಚಿವಿಕಾರಿಗಳಿಗಿನ್ನಾಗದಯ್ಯಾ, ವಚನದ ರಚನೆಯ ನುಡಿವವರಿಗೆ ಪ್ರಸಾದ ವೇದ್ಯವಾಗದಯ್ಯಾ, ಈ ತ್ರಿವಿಧದ ಮೊದಲನರಿಯದ ಅಸಂಬಂಧಿಗಳಿಗೆ ಇನ್ನಾಗದಯ್ಯಾ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದ.
--------------
ಚನ್ನಬಸವಣ್ಣ
ರೂಪವೆಂತೆಂಬೆನಯ್ಯಾ ರೂಪಿಸಲಿಲ್ಲವಾಗಿ ? ಭಾವವೆಂತೆಂಬೆನಯ್ಯಾ ಭಾವಿಸಲಿಲ್ಲವಾಗಿ ? ಜ್ಞಾನವೆಂತೆಂಬೆನಯ್ಯಾ ಉಪಮಿಸಲಿಲ್ಲವಾಗಿ ? ಸಹಜಲಿಂಗದ ಬೆಳಗನಂಗವಿಸುವ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ನಿಲವು ವಿಪರೀತ.
--------------
ಚನ್ನಬಸವಣ್ಣ
ರುಚಿಯೆಂದರೆ ರೂಪಾಯಿತ್ತು, ಸವಿಯೆಂದರೆ ಸಂದಾಯಿತ್ತು. ರುಚಿಯೆನ್ನದ, ರೂಪೆನ್ನದ, ಸವಿಯೆನ್ನದ, ಸಂದಿಲ್ಲದ ಕೂಡಲಚೆನ್ನಸಂಗನ ಪ್ರಸಾದಿಗೆ ನಮೋ ನಮೋಯೆಂಬೆ.
--------------
ಚನ್ನಬಸವಣ್ಣ
ರುದ್ರಮುನಿಲಿಂಗವೆ ಸದ್ಭಕ್ತರನೆ ತೋರಿಸಯ್ಯಾ ಪ್ರಭುವೆ. ನಿಧಾನವನಗಿವೆನೆಂದು ಹೋದಡೆ, ವಿಘ್ನ ಬಪ್ಪುದು ಮಾಬುದೆ ಅಯ್ಯಾ ? ಸದಾಶಿವನ ಪೂಜಿಸಿಹೆನೆಂದು ಹೋದಡೆ ತರುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು ಎಡೆಭಂಗವಿಲ್ಲದೆ ನಿಲಬಲ್ಲಡೆ ಸದಮಲಸುಖವನೀವ ನಮ್ಮ ಕೂಡಲಸಂಗಮದೇವರು
--------------
ಚನ್ನಬಸವಣ್ಣ
ರೂಪು ಎಂದಡೆ ರುಚಿಯಾಯಿತ್ತು, ರುಚಿ ಎಂದಡೆ ಸವಿಯಾಯಿತ್ತು, ಸವಿ ಎಂದಡೆ ಸಂದಾಯಿತ್ತು. ರುಚಿ ಎಂದಡೆ, ರೂಪೆಂದಡೆ, ಭವ ಹಿಂಗದು ನೋಡಾ. ರೂಪೆನ್ನದೆ ರುಚಿಯೆನ್ನದೆ ಸವಿಯೆನ್ನದೆ ಸಂದೆನ್ನದೆ ಇದ್ದ ಪ್ರಸಾದಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ