ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು, ಜಂಗಮವಾಗಬಲ್ಲನೆ ? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ. ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕುಲ ಚಲ ಮೊದಲಾದ ಅಷ್ಟಮದಂಗಳನರಿತು ದಾಸೋಹಕ್ಕೆಡೆಯಾಗಿರಬೇಕು. ಪೃಥುವ್ಯಾದಿ ಅಷ್ಟತನುಮದವೆಂಬ ಮಹಿಮೆಯೊಳಗಿರ್ದು ಲಿಂಗಾವಧಾನಿಯಾಗಿರಬೇಕು. ತೈಲಾಭ್ಯಂಜನ ವಸ್ತ್ರ ಆಭರಣ ಸುಗಂಧದ್ರವ್ಯ ಷಡುರಸಾನ್ನಾದಿ ಸತಿಸಂಗ ಸುಖ ದುಃಖಗಳ ಲಿಂಗಮುಖ ಮುಂತಾಗಿ ಪ್ರಸಾದಭೋಗಿಯಾಗಿರ್ಪುದು. ಯಮ ನಿಯಮಾದಿ ಅಷ್ಟಾಂಗ ಯೋಗದಲ್ಲಿ ನಿರತನಾದಡೇನು ? ದಾಸೋಹಕ್ಕೆ ಸ್ವಯವಾಗಿರಬೇಕು. ಗೃಹ ಅರಮನೆ ತೋಟ ಗೋಕುಲ ವಾಹನ ಪರಿಜನ ಕೀರ್ತಿಜನದೊಳಗಿರ್ದು ಶರಣರ ಮರೆದಿರಲಾಗದು. ಇಂದ್ರಾದಿ ದೇವತೆಗಳು ಅಷ್ಟದಿಕ್ಕಿನಲ್ಲಿ ಕರ್ತರಾಗಿ ನಿಮ್ಮ ನಿಜ ಭೃತ್ಯರಾಗಿರ್ದರು. ಇಂತೀ ಅಷ್ಟಸಂಪಾದನೆ ನಾಲ್ವತ್ತೆಂಟರಿಂದ ಕೂಡಲಚೆನ್ನಸಂಗಯ್ಯನ ಶರಣರು ಲೋಕಾಧಿಪತಿಗಳು
--------------
ಚನ್ನಬಸವಣ್ಣ
ಕಳಾಮುಖಿ ಬಿಂದುವನೊಗೆದನು, ಅಣುವಿನಾಧಾರವನೊಗೆದನು, ಪ್ರಣವದಾಧಾರದಲ್ಲಿ ಮಹೀತಳವನೊಗೆದನು, ಮಧ್ಯನಾದದಲ್ಲಿ ಮರೀಚಕನನೊಗೆದನು. (ಸುನಾದದಲ್ಲಿ ಬಸವಣ್ಣನನೊಗೆದನು) ನನ್ನನೇಕೆ ಬಿಳಿದು ಮಾಡನಯ್ಯಾ ತನ್ನ ಬಿಳಿದಿನೊಳಯಿಂಕೆ ? ಎನ್ನ ಕರೆದುಕೊಂಡು ತನ್ನಂತೆ ಮಾಡನು. ನಾನು ಪ್ರಸಾದಿಬಸವಣ್ಣನ ಪದಾರ್ಥ ಪ್ರಸಾದ-ಪದಾರ್ಥವೆಂಬೆರಡರ ಸಂದಿನಲ್ಲಿ ಕೂಡಲಚೆನ್ನಸಂಗನ ಶರಣನು ಮಡಿವಾಳಮಾಚಯ್ಯ.
--------------
ಚನ್ನಬಸವಣ್ಣ
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ಅವಾಙ್ಮನಸಗೋಚರ ಲಿಂಗವ, ಬೊಬ್ಬಿಡಲು ಎಡೆದೆರಹಿಲ್ಲದ ಪರಿಪೂರ್ಣಲಿಂಗವ, ಪರಾಪರಲಿಂಗವ, ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ ರಚ್ಚೆಯ ಭಂಡರ ನೋಡಾ ಕೂಡಲಚೆನ್ನಸಂಗದೇವಾ
--------------
ಚನ್ನಬಸವಣ್ಣ
ಕಾಯಕಲ್ಪಿತದಿಂದ ಭೋಗಾದಿ ಭೋಗಂಗಳ ಭೋಗಿಸಬಲ್ಲಡೆ ದೇವಲೋಕವೆ ಸರ್ವತಃ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಇಂತೀ ಚತುರ್ವಿಧವನೆ ಮೀರಿ ಶಿವನ ಶ್ರೀಪಾದದಲ್ಲಿ ಇರಬಲ್ಲಡೆ ಕೈಲಾಸವೆ ಕಲ್ಯಾಣ ಲಿಂಗವೆ ತಾನು, ತಾನೆ ಲಿಂಗವಾಗಿರಬಲ್ಲ ಅಸಮಯೋಗಿ ಸಿದ್ಧರಾಮಯ್ಯದೇವರ ಶ್ರೀಪಾದದಲ್ಲಿ ಎಂದಿಪ್ಪೆ ಹೇಳಾ ಪ್ರಭುವೆ ? ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಯಪಲ್ಲಟದ ಹೆಸರಲ್ಲಿ ಅನುಮಿಷನಲ್ಲಮನಾಗಿ ತನ್ನ ಲಿಂಗವ ತಾನೆ ಮತ್ರ್ಯಕ್ಕೆ ತಂದ. ಕಾಯಪಲ್ಲಟದ ಹೆಸರಲ್ಲದೆ ನಹೆಸರಲ್ಲಿಳಫ ¥õ್ಞಲಸ್ತ್ಯನು ಸಕಳೇಶ್ವರ ಮಾದಿರಾಜನಾಗಿ ತನ್ನ ಲಿಂಗವ ತಾನೆ ಮತ್ರ್ಯಕ್ಕೆ ತಂದ. ಕಾಯಪಲ್ಲಟದ ಹೆಸರಲ್ಲದೆನಹೆಸರಲ್ಲಿಳಫ ವಿಷ್ಣು ದಶಾವತಾರಕ್ಕೆ ಬಂದು ಸಿಕ್ಕಿದ ಸಿದ್ಧರಾಮಯ್ಯನಾಗಿ ತನ್ನ ದಿವ್ಯದೇಹವ ತಾನೆ ಮತ್ರ್ಯಕ್ಕೆ ತಂದ. ಇದು ಕಾರಣ_ ಕೂಡಲಚೆನ್ನಸಂಗಯ್ಯನಲ್ಲಿ ಶರಣನ ಉಪಮಿಸಬಾರದು, ಉಪಮಾತೀತನು
--------------
ಚನ್ನಬಸವಣ್ಣ
ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಂದೆ ತಾಯಿ ಯಾರು ? ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು. ಕಲಿಯುಗದೊಳು ಕಲ್ಲ ಲಿಂಗವಾದಡೆ ಇಕ್ಕಿದ ಓಗರವನುಣ್ಣದೇಕೋ ? ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ ? ಸಾಕ್ಷಿ : ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಇದು ಕಾರಣ ಕೂಡಲಚೆನ್ನಸಂಗಯ್ಯ ತಪ್ಪದೆ ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು. ಅನಂತ ಯುಗಂಗಳೊಳಗೆ ಜಂಗಮ ದೇವರೆ ಪ್ರಾಣವಾದರಾಗಿ
--------------
ಚನ್ನಬಸವಣ್ಣ
ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ ಮಕ್ಕಳು, ಹರಸಿಕೊಂಡು ಮಾಡುವರೆಲ್ಲಾ ಹಾದರಗಿತ್ತಿಯ ಮಕ್ಕಳು, ವರ್ಷಕ್ಕೊಂದು ತಿಥಿಯೆಂದು ಮಾಡುವರೆಲ್ಲಾ ವೇಶಿಯ ಮಕ್ಕಳು, ಆ ಕೂಟಕ್ಕೆ ಮಾಡದೆ, ಹರಸಿಕೊಂಡು ಮಾಡದೆ, ವರ್ಷಕ್ಕೊಂದು ತಿಥಿಯೆಂದು ಮಾಡದೆ, ಸಹಜದಲ್ಲಿ ಮಾಡುವರೆಲ್ಲಾ ಸಜ್ಜನ ಪತಿವ್ರತೆಯ ಮಕ್ಕಳು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕರುಣಜಲ ವಿನಯಜಲ ಸಮತಾಜಲ : ಕರುಣಜಲವೆ ಗುರುಪಾದೋದಕ: ವಿನಯಜಲವೆ ಲಿಂಗಪಾದೋದಕ; ಸಮತಾಜಲವೆ ಜಂಗಮಪಾದೋದಕ. ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ. ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ. ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ. ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ. ಇದು ಕಾರಣ- ಕೂಡಲಚೆನ್ನಸಂಗಮದೇವಾ ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ? ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ. ಈ ಆಸೆಯ ವೇಷವ ಕಂಡಡೆ ಕಾರಹುಣ್ಣಿಮೆಯ ಹಗರಣವೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಯ್ಯಾ. ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ ಅನಂತಕಾಲವಿರ್ದಿರಲ್ಲಾ ! ನಿಮ್ಮ ಆದ್ಯಂತವ ನೀವೇ ಅರಿವುತಿದ್ದಿರಲ್ಲಾ, ನಿಮ್ಮ ನಿಜದುದಯವ ನೀವೇ ಬಲ್ಲಿರಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡುವ ಭಕ್ತನ ಪಾದವ ತೋರಯ್ಯಾ, ನಿಮ್ಮ ಧರ್ಮ. ಅದೇಕೆಂದಡೆ; ಆತನ ತನು ಶುದ್ಧ ಆತನ ಮನ ಶುದ್ಧ. ಆತನ ನಡೆ ನುಡಿ ಪಾವನ. ಆತಂಗೆ ಉಪದೇಶವ ಮಾಡಿದ ಗುರು ನಿರಂಜನ ನಿರಾಮಯ. ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ. ಇಂತಿವರಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯ
--------------
ಚನ್ನಬಸವಣ್ಣ
ಕಾದನಂತೆ, ಕಣನೇರಲೇಕೊ ? ನಪುಂಸಕನಂತೆ, ಗಣಿಕಾಸ್ತ್ರೀಯೇಕೊ ? ನಡೆ ಹೆಣನಂತೆ, ನುಡಿಯಲೇಕೊ ? ಪುರಾತರು ನುಡಿದಂತೆ ನಡೆಯಲರಿಯದವರೆಲ್ಲ, ಹಾಳೂರೊಳಗೆ ನರಿ ಗುಳ್ಳೆಯ ತಿಂದು ಬಗುಳಿದಂತೆ ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಶ್ವೇತವರ್ಣ ಗೌರವರ್ಣವೆಂಬ ಸಪ್ತಧಾತುಗಳು. ಇವಕ್ಕೆ ವಿವರ : ಕಪಿಲವರ್ಣದ ಧಾತು ಪೃಥ್ವಿ ಅಂಶ, ದೇಹವ ಅಳುುಕುತ್ತಿಹುದು. ನೀಲವರ್ಣದ ಧಾತು ಅಪ್ಪುವಿನ ಅಂಶ, ದೇಹವ [ನಡುಗುತ್ತಿಹುದು]. ಮಾಂಜಿಷ್ಟವರ್ಣದ ಧಾತು ಅಗ್ನಿ ಅಂಶ, ದೇಹ ಕನಸ ಕಾಣುತಿಹುದು. ಪೀತವರ್ಣದ ಧಾತು ವಾಯು ಅಂಶ, ದೇಹವತ್ತರ ಒತ್ತುತ್ತಿಹುದು. ಕಪ್ಪವರ್ಣದ ಧಾತು ಆಕಾಶದ ಅಂಶ, ಎತ್ತರ ತತ್ತರಗೆಡಹುತಿಹುದು. ಶ್ವೇತವರ್ಣದ ಧಾತು ಚಂದ್ರನ ಅಂಶ, ದೇಹ ಕಳವಳಿಸುತಿಹುದು. ಗೌರವರ್ಣದ ಧಾತು ಸೂರ್ಯನ ಅಂಶ, ಶರೀರ ಸಂಚಲಿಸುತಿಹುದು. ಇಂತೀ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ ಲಿಂಗಾರ್ಚನೆಯ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುತಿಹನು
--------------
ಚನ್ನಬಸವಣ್ಣ
ಕಿರಿದಾದ ಬೀಜದಲ್ಲಿ ಹಿರಿಯ ತರುವಡಗಿದ ಪರಿಯಂತೆ, ಕರಗತವಾದ ಕನ್ನಡಿಯಲ್ಲಿ ಕರಿಗಿರಿಗಳು ತೋರುವ ಪರಿಯಂತೆ ಜಗದ್ವ್ಯಾಪಕವಾದ ಪರವಸ್ತುವು ಖಂಡಿತಾಕಾರಮಾದ ಶರೀರದಲ್ಲಿ ಅತಿ ಸೂಕ್ಷ್ಮ ಪ್ರಮಾಣದಲ್ಲಿರ್ಪಂತೆ, ಪರತರಶಿವಲಿಂಗವು ಸದ್ಭಕ್ತರನುದ್ಧರಿಪ ಸದಿಚ್ಛೆಯಿಂದ ಲಿಂಗಾಕಾರವಾಗಿ ನೆಲೆಗೊಂಡಿರ್ಪುದು. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಪರಬ್ರಹ್ಮರೂಪವಾದ ಲಿಂಗವು, ಮಹದ್ರೂಪದಿಂದ ಅಖಂಡವಾಗಿಯೂ ಅಣುರೂಪದಿಂದ ಖಂಡಿತವಾಗಿಯೂ ತೋರುವುದು. ಕೂಡಲಚೆನ್ನಸಂಗಮದೇವಾ ಇದು ನಿಮ್ಮ ದಿವ್ಯಲೀಲೆಯಯ್ಯಾ !
--------------
ಚನ್ನಬಸವಣ್ಣ
ಕ್ರೀಯಿಂದಾದುದು ಲಿಂಗವೆಂದೆಂಬರು, ಕ್ರೀಯಿಂದಾದುದು ಜಂಗಮವೆಂದೆಂಬರು. ಕ್ರೀಯಿಂದಾದುದು ಲಿಂಗವಲ್ಲ, ಜಂಗಮವಲ್ಲ, ಜಂಗಮವುಂಟು ಜಂಗಮವಲ್ಲ. ಜಂಗಮ ಸುನಾದರೂಪು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕ್ರಿಯಾದೀಕ್ಷೆಹೀನರಿಗೆ ಮಂತ್ರೋಪದೇಶವ ಹೇಳುವನೊಬ್ಬ ಲಿಂಗದ್ರೋಹಿ ನೋಡ ! ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕಲ್ಪಿಸಿ ಅರ್ಪಿಸಲಿಲ್ಲ, ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡನಳಿದನಾಗಿ. ಕಾಯದ ಕೈಗಳ ಕೈಯೆ, ಭಾವದ ಕೈಗಳ ಕೈಯೆ ಅರ್ಪಿಸುವನಲ್ಲ ! ಆತ ಅರ್ಪಿತ ತಾನಾಗಿ. ಅರ್ಪಿತ ಅನರ್ಪಿತವೆಂಬ ಸಂದೇಹವಳಿದುಳಿದನು. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಪ್ರಸಾದವೆ ಪ್ರಳಯವಾಯಿತ್ತು !
--------------
ಚನ್ನಬಸವಣ್ಣ
ಕೊಂಡಡಗಿದನೊಬ್ಬ, ಕೊಟ್ಟರಸಿದನೊಬ್ಬನು. ಈರೇಳು ಭುವನವರಿಯಲು ವೃಷಭನು ವಿಸ್ಮಯಗೊಂಡನು ! ಭೂಮಿಯ ಜಲಗುಗರ್ಚಿ ಹೇಮರಸವನರಸುವಂತೆ ಅರಸುತ್ತಿದ್ದನಯ್ಯಾ ಜಂಗಮದೊಳಗೆ ಲಿಂಗವನು, ಏಕೋನಿಷೆ*ಯ ಕಂಡಡೆ ಎತ್ತಿಕೊಂಡನಯ್ಯಾ ಶಿವನು ! ಜಪಸಮಾಧಿಯೊಳಗೆ ಅಡಗಿದ್ದಡೆ, ಲಿಂಗವಾಗಿ ಬಂದರೀ ಪ್ರಭುದೇವರು. ನಿಮ್ಮಡಿಗಳು ಅಸಂಖ್ಯಾತರಿಗೆ ಮಾಡಿದ ಸಯಧಾನವ ನೀನೊಬ್ಬನೆ ಆರಿಸಿಕೊಟ್ಟಂದು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗವೆಂದರಿದನಯ್ಯಾ ನಿಮ್ಮನು ನಮ್ಮ ಸಂಗನಬಸವಣ್ಣನು
--------------
ಚನ್ನಬಸವಣ್ಣ
ಕಾಯದಲ್ಲಿ ಲಿಂಗೈಕ್ಯವೇ ? ಅಲ್ಲ. ಜೀವದಲ್ಲಿ ಲಿಂಗೈಕ್ಯವೇ ? ಅಲ್ಲ. ಭಾವದಲ್ಲಿ ಲಿಂಗೈಕ್ಯವೇ ? ಅಲ್ಲ. ಇಂತೀ ತ್ರಿವಿಧ ಲಿಂಗೈಕ್ಯವೇ ? ಅಲ್ಲ. ಮತ್ತೆಯೂ ಲಿಂಗೈಕ್ಯವೇ ಬೇಕು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯವೆಂಬ ಕಣ್ಣಡವಿಲ್ಲ ಪ್ರಾಣವಿಲ್ಲಾಗಿ; ಮನವೆಂಬ ನೆನಹಿಲ್ಲ ಅನುಭಾವವಿಲ್ಲವಾಗಿ; ಅರುಹೆಂಬ ಕುರುಹಿಲ್ಲ ಪ್ರತಿಯಿಲ್ಲವಾಗಿ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ಕೃತಯುಗದಲ್ಲಿ ಓಂಕಾರಸತ್ಯರೂಪದೇವಾಂಗನೆಂಬ ಭಕ್ತನ ಮಾಡುವಲ್ಲಿ ಸ್ಥೂಲಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಕೇತಾರೇಶ್ವರ. ತ್ರೇತಾಯುಗದಲ್ಲಿ ಘಂಟಾಕರ್ಣನೆಂಬ ಭಕ್ತನ ಮಾಡುವಲ್ಲಿ, ಶೂನ್ಯಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ರಾಮೇಶ್ವರ. ದ್ವಾಪರದಲ್ಲಿ ವೃಷಭನೆಂಬ ಭಕ್ತನ ಮಾಡುವಲ್ಲಿ, ಅನಿಮಿಷನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ¸õ್ಞರಾಷ್ಟ್ರ. ಕಲಿಯುಗದಲ್ಲಿ ಬಸವನೆಂಬ ಭಕ್ತನ ಮಾಡುವಲ್ಲಿ ಪ್ರಭುವೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಶ್ರೀಶೈಲ. ಇಂತೀ ನಾಲ್ಕು ಯುಗಕ್ಕೆ ನಾಲ್ಕು ಜಂಗಮಸ್ಥಲ, ನಾಲ್ಕು ಯುಗಕ್ಕೆ ನಾಲ್ಕು ಲಿಂಗ (ಭಕ್ತ?) ಸ್ಥಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು, ವಶೀಕರಣವೆಂಬ ಸೇನಬೋವ ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ, ಈರೈದು (ಮನ್ನೆಯ) ನಾಯಕರು, ಇಪ್ಪತ್ತೈದು ಪ್ರಜೆ, ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ, ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_ ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು, ಅಜಾತನೆಂಬ ಶರಣ ಪ್ರಧಾನಿ ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು, ಅರಸು ಕೂಡಲಚೆನ್ನಸಂಗಯ್ಯನು, ಒಲಿದ ಕಾರಣ.
--------------
ಚನ್ನಬಸವಣ್ಣ
ಕುಳಿತಲ್ಲಿ ಎರಡು, ನಿಂದಲ್ಲಿ ನಾಲ್ಕು, ನಡೆನುಡಿಯಲ್ಲಿ ಎಂಟು, ಅರೆನಿದ್ದೆಯಲ್ಲಿ ಹದಿನಾರು. ರತಿಸಂಗದಲ್ಲಿ ಮೂವತ್ತೆರಡಂಗುಲ ರೇಚಕ, ತದರ್ದ ಪೂರಕ, ಹೊರಗು ಒಳಗಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಸಂಯೋಗ.
--------------
ಚನ್ನಬಸವಣ್ಣ
ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ ಅಕ್ಕಿ ತುಪ್ಪವನೀಸಿಕೊಂಬವನ ಕೇಡಿಂಗೆ ಇನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವನಿಗೆ ಕೊಟ್ಟು ತಾ ಹುಗೆನೆಂಬ ವ್ರತಗೇಡಿಯ ಇನ್ನೇನೆನಬಹುದಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಆ ಲಿಂಗವ ಮಾರಿಕೊಂಡುಂಬ ಭಂಗಕಾರರು ಕೆಟ್ಟಕೇಡನೇನೆಂಬೆನಯ್ಯಾ !
--------------
ಚನ್ನಬಸವಣ್ಣ

ಇನ್ನಷ್ಟು ...