ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು. ಗುರುವೆಂಬ ಅಂಜನ, ಶಿಷ್ಯನೆಂಬ ಪಾಯಾಳು, ಲಿಂಗವೆ ಕಡವರ, ಆಚಾರವೆ ದಿಗ್ಭಂಧನ, `ಭಕ್ತಕಾಯೋ ಮಮಕಾಯ' ಎಂದುದು ಕೂಡಲಚೆನ್ನಸಂಗಯ್ಯನವಚನ.
--------------
ಚನ್ನಬಸವಣ್ಣ
ಐಕ್ಯಂಗೆ ಆತ್ಮನೆ ಅಂಗ, ಆ ಅಂಗಕ್ಕೆ ಸದ್ಭಾವವೇ ಹಸ್ತ; ಆ ಹಸ್ತಕ್ಕೆ ಮಹಾಸಾದಾಖ್ಯ, ಆ ಸಾದಾಖ್ಯಕ್ಕೆ ಚಿಚ್ಛಕ್ತಿ. ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ; ಆ ಕಲೆಗೆ ಹೃದಯೇಂದ್ರಿಯವೆ ಮುಖ, ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು ರೂಪು ರುಚಿ ತೃಪ್ತಿಯನರಿದು ಸಮರಸಭಕ್ತಿಯಿಂದರ್ಪಿಸಿ, ಆ ಸುಪರಿಣಾಮಪ್ರಸಾದವ ಭೋಗಿಸಿ ಸುಖಿಸುತ್ತಿಹನು, ಕೂಡಲಚೆನ್ನಸಂಗಾ, ನಿಮ್ಮ ಲಿಂಗೈಕ್ಯನು.
--------------
ಚನ್ನಬಸವಣ್ಣ