ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು, ಅದು ಹುಸಿ, ನಿಲ್ಲು. ಇಹದಲ್ಲಿ ದುಃಖಿ, ಪರದಲ್ಲಿ ಪ್ರಕೃತಿಯೆಂದೆ. ಇಂತೀ ಇಹಪರವೆಂಬೆರಡು. ಲಕ್ಷ್ಮಿಯ ಮನೆಯ ತೊತ್ತಿನ ತೊತ್ತಾದವರಿಗೆ ಇನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು. ಇಲ್ಲದುದ ಇದ್ದುದೆಂದು ನೋಡಲಿಕಾಗಿ, ಇದ್ದಲ್ಲಿಯೆ ತಲ್ಲೀಯವಾಯಿತ್ತು ಇಂತು ಉಭಯವ ಕಡೆಗಾಣಿಸಲಾಗಿ, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಇದ್ದಿತ್ತು.
--------------
ಮೋಳಿಗೆ ಮಾರಯ್ಯ
ಇರಿವ ಅಸಿ, ನೋವ ಬಲ್ಲುದೆ? ಬೇಡುವಾತ ರುಜವ ಬಲ್ಲನೆ? ಕಾಡುವ ಕಾಳುಮೂಳರ ವಿದ್ಥಿ ಎನಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು. ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು. ಕಚ್ಚಿದ ವಿಷ ತಾಗಿ ಮತ್ತನಾಗಿ ಬಿದ್ದಿತ್ತು. ನಾಗಾಲಡಿಯಾಗಿ ಆನೆಯದೆ ತಾನುಳಿದ ಪರಿಯ ನೋಡಾ, ಈ ವಸ್ತುವನ್ನೇಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗವನರಿದು ಪೂಜೆಯ ಮಾಡಿ, ಪ್ರಾಣಲಿಂಗವನರಿದು ಪಥ್ಯದ ಕೊಂಡು, ಜಂಗಮವಾದೆವೆಂಬ ಮಿಥ್ಯತಥ್ಯದ ಅಣ್ಣಗಳು ಕೇಳಿರೊ. ಕೊಟ್ಟಾತಗುರು, ಕೊಂಡಾತ ಶಿಷ್ಯನೆಂದು ಜಗದಲ್ಲಿ ಅಂದಗಾರಿಕೆಯಲ್ಲಿ ನಡೆವ ಭಂಡರಿಗೇಕೆ ಲಿಂಗಾಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗವ ಹಿಡಿದು ಪೂಜೆಯ ಮಾಡುವಲ್ಲಿ, ಕಷ್ಟಗುಣಕ್ಕೆ ಬಾರದಿರಬೇಕು. ಪ್ರಾಣಲಿಂಗವನರಿದು ಭಾವಿಸಿದಲ್ಲಿ, ಜಾಗ್ರ ಸ್ವಪ್ನ ಸುಷುಪ್ತಿ ವಿಪತ್ತಿ ಲಯಕ್ಕೊಳಗಾಗದಿರಬೇಕು. ಹೀಂಗೆ ಉಭಯವನರಿದು ದಗ್ಧವಾದಂಬರದಂತೆ, ವಾರಿಯ ಕೂಡಿದ ಕ್ಷೀರದಂತೆ, ಭಾವಕ್ಕೆ ಭ್ರಮೆಯಿಲ್ಲದೆ, ಸಾಕಾರವ ಮರೆದು, ಪರತ್ರಯದ ತುತ್ತಿಂಗೆ ತುಚ್ಛನಾಗದೆ, ನಿಶ್ಚಯನಾದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗಸಂಬಂದ್ಥಿಗಳು ಭಕ್ತಿಸ್ಥಲವನರಿಯರು. ಪ್ರಾಣಲಿಂಗಸಂಬಂದ್ಥಿಗಳು ಮಾಹೇಶ್ವರಸ್ಥಲವನರಿಯರು. ಪ್ರಸಾದಲಿಂಗಸಂಬಂದ್ಥಿಗಳು ಪ್ರಾಣಲಿಂಗಸ್ಥಲವನರಿಯರು. ಶರಣಸ್ಥಲಭರಿತರು ಪ್ರಾಣಲಿಂಗಸಂಬಂಧವನರಿಯರು. ಐಕ್ಯ ನಿರ್ಲೇಪವಾದಲ್ಲಿ ಶರಣಸ್ಥಲ ನಿಂದಿತ್ತು. ಇಂತೀ ಐದು ಸ್ಥಲವ ಆರೋಪಿಸಿ, ಇದಿರಿಟ್ಟು ಕೂಡಿದಲ್ಲಿ ಆರುಸ್ಥಲವಾಯಿತ್ತು. ಆರುಸ್ಥಲ ವೇದ್ಥಿಸಿ ನಿಂದಲ್ಲಿ, ನೀ ನಾನೆಂಬ ಭಾವ, ಎಲ್ಲಿ ಅಡಗಿತ್ತು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನು ಕೇಳಿ ಅರಿದೆಹೆನೆಂಬಾಗ ಮುಂದಕ್ಕೆ ಮರವೆಯೆ? ಮುಂದನರಿದು ಹಿಂದೆ ಮರೆವಾಗ ಭೂತಕಾಯವೆ? ಹಿಂದಕ್ಕೂ ಮುಂದಕ್ಕೂ ಈ ದ್ವಂದ್ವ ಭೇದವ, ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗಕ್ಕವಿರ್ತದ ಭಾಜನದೆಂದು, ತುತ್ತ ನುಂಗವುದಕ್ಕೊಂದು ಮಿಥ್ಯದ ಭಾಜನದೆಂದು, ಈ ಅಚ್ಚುಗದಲ್ಲಿ ಬಿದ್ದು ಸಾವರಿಗೆತ್ತಣ ಲಿಂಗಾರ್ಪಿತ? ಮಜ್ಜನ ಮಲಿನ ಹೊದ್ದಿಹ ಸುಖ ಶೃಂಗಾರ, ಇವರೊಳಗೆ ವರ್ಜಿತವೆಂದ. ಲಿಂಗಕ್ಕೊಂದು ಹಂಗು, ತಾನುಂಬದಕ್ಕೆ ಒಂದು ಹಂಗು, ಇದರಂದವನರಿಯದೆ ಬೆಳದಿಂಗಳಲ್ಲಿ ನಿಂದು, ಹೆಂಡವ ಕೊಂಡವನಂತೆ ಲಿಂಗದ ಸಂದನೇನ ಬಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ? ಹಿರಿದಹ ಗಿರಿಯ ಹತ್ತಿ, ಬಿದಿರೆಲೆಯ ತರಿದ[ವ]ನಂತೆ, ಒಂದ ಬಿಟ್ಟೊಂದ ಹಿಡಿದಡೆ ಅದೆಲ್ಲಿಯ ಚಂದ? ಹಿಂಗುವುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗ ನಿದ್ರೆಯಲ್ಲಿ ಸೃಷ್ಟಿಯ ಮೇಲೆ ಬಿದ್ದು ಹೊರಳುವಾಗ, ನಿಷಾ*ವಂತರೆಂತಾದಿರೊ? ಅದು ನಿಮಗೆ ಇಷ್ಟಲಿಂಗವೊ, ಪ್ರಾಣಲಿಂಗವೊ? ಕಟ್ಟಿದವನ ಕೈಯ ಕೇಳಿಕೊಳ್ಳಿ. ಹೀಂಗಲ್ಲದೆ, ಬಟ್ಟಗುತ್ತತನಕ್ಕೆ ಹೋರುವ ಭ್ರಷ್ಟಭಂಡರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗದಂಗ ಭಕ್ತಿಸ್ಥಲ, ಭಾವಲಿಂಗದಂಗ ಮಹೇಶ್ವರಸ್ಥಲ, ಪ್ರಾಣಲಿಂಗದಂಗ ಪ್ರಸಾದಿಸ್ಥಲ, ಶರಣಸ್ಥಲದಂಗ ಐಕ್ಯಸ್ಥಲ. ಐಕ್ಯಸ್ಥಲದಂಗ ಅಭೇದ್ಯಸ್ಥಲದಂಗ. ಇಂತೀ ಉಭಯವಳಿದ ನಿರಂಗಂಗೆ ಸ್ಥಲ ಕುಳ ಲೇಪವಾಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇರಿ ಎಂಬುದಕ್ಕೆ ಮುನ್ನವೆ ಒಡಲು ಹರಿಯಿತ್ತೆ? ಮಾತನಾಡುವುದಕ್ಕೆ ಮುನ್ನವೆ ಮನ ಸಂದಿತ್ತೆ? ಕಲ್ಪತರುವಿನ ನಾಮವ ಹಡೆದ ದುತ್ತೂರದಂತೆ, ಭಕ್ತ ವಿರಕ್ತರೆಂದಡೆ ಸತ್ಯರಪ್ಪರೆ? ಅದು ನಿಶ್ಚಯವಲ್ಲ, ನಿಃಕಳಂಕ ಮಲ್ಲಿಕಾರ್ಜುನೊಪ್ಪದ ಮಾತು.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗದಲ್ಲಿ ಮುಟ್ಟುತಟ್ಟು ಬಲ್ಲವಂಗೆ ಕಷ್ಟನಿದ್ರೆರೆಯ ಮುಟ್ಟುವ ಭೇದವ, ತಟ್ಟುವ ಪರಿಯಿನ್ನೆಂತುಟೋ? ಇಂತಿವರು ಮುಟ್ಟರು, ಅರಿಯರು, ನಿಶ್ಚಯದ ನಿಜ ಏಕತ್ವವನರಿಯರು. ಇವರಿಷ್ಟಲಿಂಗವ ಮುಟ್ಟಿ ಪೂಜಿಸಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ, ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ. ಆ ವಾಯುವನಧೋಮುಖಕ್ಕೆ ತರಬಾರದೆಂದು, ಊಧ್ರ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ ಅಷ್ಟಾಂಗಕರ್ಮಿಗಳು ಕೇಳಿರೊ. ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ? ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ? ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ? ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ? ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ? ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ? ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ, ಕಂಡೆಹೆನೆಂಬ ಭ್ರಾಂತೆಲ್ಲಿಯದೊ? ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ ಕೆಟ್ಟರಲ್ಲ ಕರ್ಮಯೋಗಿಗಳು. ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ.
--------------
ಮೋಳಿಗೆ ಮಾರಯ್ಯ
ಇಂದ್ರಿಯಂಗಳ ಕಟ್ಟಿ ವಸ್ತುವನರಿಯದೆಹೆನೆಂದಡೆ, ಕರೆವ ಹಸುವಲ್ಲ. ಇಂದ್ರಿಯಂಗಳ ಬಿಟ್ಟು ವಸ್ತುವನರಿದೆಹೆನೆಂದಡೆ, ಬಿಡಾಡಿಯಲ್ಲ. ವಸ್ತುವನರಿವುದಕ್ಕೆ ಎರಡಳಿದು ಒಂದುಳಿಯಬೇಕು, ಆ ಸಂಧಿಯ ಬೆಸುಗೆಯಲ್ಲಿ ನಿಂದಿರ್ಪವನ ಅಂದವ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಕ್ಕುವುದಕ್ಕೆ ಮುನ್ನವೆ ಬಾಯಾರಿ, ಕೊಡುವುದಕ್ಕೆ ಮುನ್ನವೆ ಕೈಯಾಂತು ಮತ್ತೇಕೆ? ಮಾತಿನ ಮಾಲೆಯ ತೂತರುಗಳ ಕಂಡು, ನಿರ್ಜಾತನಡಗಿದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗಸಂಬಂಧ, ಭಾವಲಿಂಗಸಂಬಂಧ, ಪ್ರಾಣಲಿಂಗಸಂಬಂಧವೆಂದು ಭಾವಿಸಿ ಕಲ್ಪಿಸುವಾಗ, ಅಂಗದ ಮರೆಯ ಇಷ್ಟ, ಇಷ್ಟದ ಮರೆಯ ಭಾವ, ಭಾವದ ಮರೆಯ ಪ್ರಾಣ, ಪ್ರಾಣದ ಮರೆಯ ಜ್ಞಾನ, ಇಂತೀ ಗುಣಂಗಳ ಏಕವ ಮಾಡಿ, ಉಭಯ ದೃಷ್ಟಕ್ಕೆ ಒಡಲಿಲ್ಲದೆ ನಿಂದ ನಿಜ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತೀ ಗುರುಸ್ಥಲವ ಲಿಂಗಸ್ಥಲವ, ಅಂಗೀಕರಿಸಿ ನಿಂದ ಶರಣನ ಇರವು ವಾಯುವಿನ ಕೈಯ ಗಂಧದಂತೆ, ಸಾವಯ ನಿರವಯವೆ ಭೇದಿಸುವ ಸುನಾದದಂತೆ, ಅದ್ರಿಯ ಮುಸುಕಿದ ಮುಗಿಲ ರಂಜನೆಯ ಸಂದೇಹದ ನಿರಂಜನದಂತೆ, ಅಂಬುಧಿಯ ಚಂದ್ರನ ಪೂರ್ಣದ ಬೆಂಬಳಿಯಂತೆ. ಇಂತೀ ನಿಸ್ಸಂಗದಲ್ಲಿ ಸುಸಂಗಿಯಾದ ಐಕ್ಯಂಗೆ, ಬಂಧ ಮೋಕ್ಷ ಕರ್ಮಂಗಳೆಂದು ಸಂದೇಹವಿಲ್ಲ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗವನರ್ಚಿಸುವನ ಇರವು, ಹೇಮಾಚಲದ ಶಿಲೆಯಂತಿರಬೇಕು. ಕುಸುಮದ ಅಪ್ಪುವಿನ ಸ್ನೇಹದಂತಿರಬೇಕು, ಅಯಕಾಂತದ ಶಿಲೆ ಲೋಹದಂತಿರಬೇಕು, ಅಣುವಿನನೊಳಗಣ ನೇಣಿನಂತಿರಬೇಕು. ಇಷ್ಟಕ್ಕೂ ಪ್ರಾಣಕ್ಕೂ ತತ್ತುಗೊತ್ತಿಲ್ಲದ ಬೆಚ್ಚಂತಿರಬಲ್ಲಡೆ, ಆತನೇ ಇಷ್ಟ ಪ್ರಾಣ ತೃಪ್ತಿವಂತನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ