ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕಕ್ಕುಂಟೆ ಬಹುಶಾಖೆಯ ಸ್ಥಲ? ಪೂರ್ವದಲ್ಲಿ ಸ್ವಸ್ಥನಾಗಿ, ಉತ್ತರದಲ್ಲಿ ನಿಶ್ಚಯವಾದ ಮತ್ತೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏತದ ತುದಿಯಲ್ಲಿ ಕಟ್ಟಿದ ಮಡಕೆಯಂತೆ, ಅದ ನೀತಿವಂತರು ಮೆಟ್ಟಿ, ಧರೆ ಪಾತಾಳದ ಉದಕವ ತಂದು ಪಾತ್ರೆಗೆ ಹರಹಿದ ತೆರದಂತೆ, ಸರ್ವಮಯದಲ್ಲಿ ಒಪ್ಪಿಪ್ಪ ವಸ್ತುವನರಿಯದು, ನಿರ್ಜಾತನಾಗಬಲ್ಲಡೆ, ಆತ್ಮನ ಜೀವನ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕಜಲ ಬಹುಜಲವಾದ ಕ್ರಮವನರಿವುದು. ಅದಕ್ಕೆ ದೃಷ್ಟ; ಅನಾದಿಯ ಪ್ರಣವನರಿಯದೆ, ಹಾದಿಯ ಕಲ್ಲ ಪೂಜಿಸಿದರಯ್ಯಾ, ಸಂಸಾರಕ್ಕೆ ಬೋಧೆಗೆ ಸಿಕ್ಕಿರೆ ಅನಾಗತಸಿದ್ಧಿಯ ಹೋದ ಹೊಲಬನರಿಯದೆ ಕೆಟ್ಟರಯ್ಯಾ. ಅಂಧಕಂಗೆ ಚಂದಾದ ಮುಖವುಂಟೆ? ಶೃಂಗಾರ ಪಂಗುಳಂಗೆ ಯೋಜನದ ಸುದ್ದಿಯಿಲ್ಲ. ಲಿಂಗವನರಿಯದಂಗೆ ಜಗದ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕಾಕಾಶದಿಂದ ಅಂಬು ಸಂಭ್ರಮಿಸಿತ್ತು. ಬಹುವರ್ಣದ ಧರಿತ್ರಿಯಲ್ಲಿ, ಅವರವರ ವರ್ಣಛಾಯೆ ನಿಂದಿತ್ತು. ಕೂಡಿ ವೇಧಿಸಿ ಚರಿಸಲಾಗಿ, ಒಂದೆ ಗುಣ ನಿಂದಿತ್ತು. ಅದು ತಟಾಕದಲ್ಲಿ ಆಶ್ರಯಿಸಲಾಗಿ, ಸ್ತೋಮವಾಯಿತ್ತು. [ಕೀಳಿನಲ್ಲಿ] ನಿಂದು ಜಾಳಿಸಲಾಗಿ, ಸ್ತೋಮ ಬಿಟ್ಟಿತ್ತು. ಭಾವಿಸಿ ನೋಡಿಹೆನೆಂದಡೆ ಪ್ರಮಾಣವಿಲ್ಲ ಕಂಡಯ್ಯಾ. ಇಂತೀ ಪ್ರಕಾರದಲ್ಲಿ ಜನಿಸಿದ ಪಿಂಡ ಹಿಂಗುವ ಠಾವಿನ್ನಾವುದೊ? ಒಂದು ಚಕ್ರದಲ್ಲಿ ಜನಿಸಿದ ನಾನಾವರ್ಣದ ಕುಂಭಂಗಳಿಗೆ ಸ್ಥೂಲ ಸೂಕ್ಷ್ಮದ ಅನ್ಯವ ಕಲ್ಪಿಸಲುಂಟೇ ಒಂದೆ ಗುಣದ ಬಗೆಯಲ್ಲದೆ? ಅಡಗಿದ ತತ್ವಂಗಳ ತತ್ವಮುದ್ದೆಯ ತುತ್ತನೊಲ್ಲದೆ ನಿಶ್ಚಯವಾದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ