ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ ? ಆರನರಿತು, ಮೂರ ತಿಳಿದು, ಬೇರೊಂದು ಇದೆಯೆಂದು ಲಕ್ಷಿಸಿದಲ್ಲಿ, ಆ ಲಕ್ಷ ನಿರ್ಲಕ್ಷ್ಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೋಡುವಂಗೆ ಚೋದ್ಯವಪ್ಪಂತೆ, ಈ ಉಭಯವನೊಡಗೂಡಿದ ಭೇದವ ನೋಡಾ. ಕೈಯಲ್ಲಿ ಅಡಗುವಾಗ ಕಲ್ಲಲ್ಲ. ಮನದಲ್ಲಿ ಒಡಗೂಡಿ ಸುಳಿವಾಗ ಗಾಳಿಯಲ್ಲ. ಏನೂ ಎನ್ನದೆ ಇಹಾಗ ಬಯಲಲ್ಲ. ಎಲ್ಲಿ ತನ್ನನರಿದಲ್ಲಿಯೆ ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಡುನೀರ ಮಧ್ಯದಲ್ಲಿ ಅಗಮ್ಯದ ಜ್ಯೋತಿ ಉರಿವುತ್ತಿದೆ. ಅಗಲದೆ ನೋಡಲಿಕೆ ನೀರಿನ ಮೇಲೆ ಉರಿವುತ್ತಿಪ್ಪುದು. ಹೊದ್ದಿ ನೋಡಲಿಕ್ಕೆ ನೀರಿನೊಳಗೆ ಮುಳುಗಿ ಉರಿವುತ್ತಿಪ್ಪುದು. ಅದು ಜ್ಯೋತಿಯ ಗುಣವೋ, ತನ್ನ ಭ್ರಾಂತಿನ ಗುಣವೋ ? ಎಂಬುದ ತಿಳಿದಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ನಾನೇಕೆ ಬಂದೆ ಸುಖವ ಬಿಟ್ಟು ? ಬಂದುದಕ್ಕೆ ಒಂದೂ ಆದುದಿಲ್ಲ. ಸಂಸಾರದಲ್ಲಿ ಸುಖಿಯಲ್ಲ, ಪರಮಾರ್ಥದಲ್ಲಿ ಪರಿಣಾಮಿಯಲ್ಲ. ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ. ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ, ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ. ಈ ಭಾಷೆ ಇನ್ನೇಸು ಕಾಲ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನೀನೊಳ್ಳಿಹನೆಂಬೆನೆ ಮನಧರ್ಮವನರಸಿಹೆ. ನಾನೊಳ್ಳಿಹನೆಂಬೆನೆ ನೀನೆಲ್ಲಿದ್ದಹನೆಂದರಸಿಹೆ. ಕೈದು ಕೈದು ಹಳಚಿದಲ್ಲಿ ಅಲಸಿದುದುಂಟೆ ? ಆ ಅಲಸಿ ಅಸುವಿಂಗಲ್ಲದೆ ಈ ದೆಶೆಯ ಹೇಳಾ, ಕುಶಲ ತನ್ಮಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿರುಪಾಧಿಭಕ್ತಂಗೆ ನಿರಂಜನ ಜಂಗಮ, ನಿರವಯ ಅಭೇದ್ಯ ಲಿಂಗ. ಆ ಲಿಂಗದ ಸ್ವರೂಪವು ಜಂಗಮ, ಆ ಜಂಗಮವೆ ಲಿಂಗ. ಆ ಲಿಂಗಜಂಗಮವ ಹೃತ್ಕಮಲ ಮಧ್ಯದಲ್ಲಿ ನಿಜಾನಂದಸ್ವರೂಪನಾಗಿ ಇಂಬಿಟ್ಟುಕೊಂಡಿಪ್ಪ ಮಹಾಭಕ್ತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನರಿದು ಕಂಡೆಹೆನೆಂದಡೆ ಸ್ವತಂತ್ರಿಯಲ್ಲ. ನಿನ್ನ ಭೇದಿಸಿ ಕಂಡೆಹೆನೆಂದಡೆ ವಿಶ್ವಾಸಿಯಲ್ಲ. ಈ ಉಭಯದ ತೆರನ ಹೇಳಾ. ಚಿತ್ತಶುದ್ಧವಾಗಿ ಕಂಡೆಹೆನೆಂದಡೆ, ಆ ಚಿತ್ತವ ಪ್ರಕೃತಿಗೊಳಗುಮಾಡಿದೆ. ನಿನ್ನನರಿದು ಭೇದಿಸಿ ಕಂಡೆಹೆನೆಂದಡೆ, ಅವರ ಮನದ ಧರ್ಮಕ್ಕೊಳಗಾದೆ. ಅಂಧಕ ಅಂಧಕನ ಕೈ ಹಿಡಿದಡೆ, ಅವರೆಲ್ಲಿಗೆ ಹೋಗುವರು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನೀರ ಹೊಳೆಯಲ್ಲಿ ಹೋಗುತ್ತಿರಲಾಗಿ, ಅಲ್ಲಿ ಒಬ್ಬ ಸತ್ತು, ಬೇವುತ್ತಿರ್ದ. ತಲೆ ಕಾಲು ಬೇಯದು, ಕೈ ಮುರುಟದು, ಕಪಾಲ ಸಿಡಿಯದು, ಕೂದಲು ಉಳಿಯಿತ್ತು. ಆ ಕೂದಲ ಮೊನೆಯಲ್ಲಿ ಮೂರು ಲೋಕ ಎಡೆಯಾಡುತ್ತದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ನಿನ್ನನರಿತು ಅರಿದೆನೆಂದಡೆ, ನಾ ಕುತ್ತದ ಕೊಮ್ಮೆ, ನೀ ಮದ್ದಿನ ಗುಳಿಗೆ. ನಿನ್ನನರಿತು ನೆರೆದಿಹೆನೆಂದಡೆ, ನೀ ಹೆಣ್ಣು, ನಾ ಗಂಡು. ಸಾಕು, ಬಲ್ಲಹರ ಮಾತು ಬಿಡು, ನಿನ್ನದು ನೀತಿಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು: ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ, ಕೊಂಬ ಮೀರುವ ಎಲೆಯಿಲ್ಲದೆ, ಎಲೆಯ ಮೀರುವ ಹೂವಿಲ್ಲದೆ, ಹೂವ ಮೀರುವ ಕಾಯಿಯಿಲ್ಲದೆ, ಇದು ಚೆನ್ನಾಗಿ ತಿಳಿದು ನೋಡಿ. ಆ ನೀರು ಬೇರ ನುಂಗಿ, ಬೇರು ವೃಕ್ಷವ ನುಂಗಿ, ಪರ್ಣ ಕುಸುಮವ ಕೊಂಡು, ಕುಸುಮ ಕಾಯವ ಕೊಂಡು, ಕಾಯಿ ಹಣ್ಣನು ಮೆದ್ದಲ್ಲಿ ಭಾವವಳಿಯಿತ್ತು. ಇದನಾರು ಬಲ್ಲರು ? ನಿಃಕಳಂಕ ಮಲ್ಲಿಕಾರ್ಜುನಾ, ನೀನೆ ಬಲ್ಲೆ.
--------------
ಮೋಳಿಗೆ ಮಾರಯ್ಯ
ನಾನರಿದು ಬಲ್ಲೆನೆಂದು ನುಡಿಯಲೇಕೆ ? ಸರಿಗುಡುಗನಾಡುವ ಬಾಲಕರಂತೆ, ನಾನೊಡವೆರಸಿ ಹೋಗಿ ಕೆಡಹಿದೆನೆಂಬತೆ, ಅರಿವಿಗೇಕೆ ಗೆಲ್ಲಸೋಲ ? ಆಕಾಶವ ನೋಡವುದಕ್ಕೆ ತಳ್ಳು ನೂಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನೆಟ್ಟ ಲಿಂಗವ ಪ್ರತಿಷೆ*ಯೆಂಬರು. ಹುಟ್ಟಿದ ಲಿಂಗವ ಸ್ವಯಂಭುವೆಂಬರು. ಈ ಉಭಯದಲ್ಲಿ, ಸ್ವಯಂಭು ಪ್ರತಿಷೆ*ಯನರಿವುತ್ತಿರ್ದವರ ಕಂಡು, ಮತ್ರ್ಯದ ಮಹಾಜನಂಗಳು ಹೊತ್ತುಹೋರಲೇಕೆ ? ಎನಗೆ ಇಷ್ಟವ ಕೊಟ್ಟ ಗುರು, ಬಟ್ಟೆಯ ಹೇಳಿದುದಿಲ್ಲ. ಪೃಥ್ವಿಯೊಳಗಣ ಮುತ್ತರದ ಅಚ್ಚಿಗವ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀತಿಗೆ ನೀತಿ, ಜಾತಿಗೆ ಜಾತಿ ಭೇದವನರಿದು, ಕೂಟಕ್ಕೆ ಕೂಟ, ಕ್ಷೀರಕ್ಕೆ ಕ್ಷೀರ ಕೂಡಿದಂತಿರಬೇಕು. ವಾರಿಯ ವಾರಿ ಕೂಡಿದಂತಿರಬೇಕು. ಇದು ಜ್ಞಾನಿಗಳ ಮಹಾಪ್ರಕಾಶದ ಕೂಟದ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನರಸುರ ಚೌರಾಸಿಗಳಿಗೆಲ್ಲಾ ನೀನಿತ್ತಲ್ಲದಿಲ್ಲ ನೋಡಯ್ಯಾ. ಬೊಮ್ಮ ಹರಿ ಸುರರಿಗೆಲ್ಲಾ ನೀನಿತ್ತಲ್ಲದಿಲ್ಲ ನೋಡಯ್ಯಾ. ನೀನಿದ್ದ ಶಿವಭಕ್ತರನು ಬಡವರೆಂಬ ಬಡಮತಿಗಳನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನಿಷೆ*ಯ ಹರಿದು ಭಕ್ತಿಯೆಂಬ ತೂರ್ಯದಲ್ಲಿ ಸಿಲ್ಕಿ ಸಾಯದೆ, ವಿರಕ್ತಿಯಿಂದ ಕರಿಗೊಂಡು ಮಾಡುವ ಸದಾನಂದನ ಇರವು ಹೇಂಗಿರಬೇಕೆಂದಡೆ : ಬಂದುದನೊಲ್ಲೆನ್ನದೆ, ಬಾರದುದಕ್ಕೆ ಬಯಸದೆ, ಮಾಟದಲ್ಲಿ ಮನ ಸಂದೇಹಿಸದೆ, ಜಗದಲ್ಲಿ ಸುಳಿವ ಆಟದವರ ನೋಡುತ್ತ, ಉಣಬಂದವರಿಗಿಕ್ಕಿ, ಬೇಡ ಬಂದವರಿಗೆ ಕೊಟ್ಟು, ಆರೂಢರನರಿದು ಶೋಧಿಸಿ ಮಾಡುವುದು. ನಿಷ್ಪತ್ತಿ ನಿರವಯ ಭಕ್ತನ ಯುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನರಿಯದಿರ್ದಡೆ ಜ್ಞಾನಿಗಳ ಸಂಭಾಷಣೆಯನರಸುತ್ತಿದ್ದೇನೆ. ಕಲಿಗಳೊಂದಿಗೆ ಹಂದೆ ಹೋಹಂತೆ, ಹೊಳೆಯಲ್ಲಿ ಹೋಹನ ಉಡಿಯ ಹಿಡಿದು ಹೋಹಂತೆ, ಅಂಧಕ ದೃಷ್ಟಿಯವನೊಡನೆ ನಡೆವಂತೆ, ಆನು ನಿಮ್ಮ ಶರಣರ ಬೆಂಬಳಿವಿಡಿದೆಯ್ದುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ. ನಿನ್ನನರಿತು, ಎನ್ನನರಿದಿಹೆನೆಂದಡೆ ಪ್ರತಿರೂಪನಾದೆ. ನಾನಿನ್ನೇತರಿಂದರಿವೆ ? ಅರಿವುದಕ್ಕೆ ಮೊದಲೆ ಅಪ್ರಮಾಣನಾದೆ. ನಾಮ ರೂಪಿಗೆ ಬಂದು ಒಡಲಾದೆ. ಒಡಲವಿಡಿದು ಕಂಡೆಹೆನೆಂದಡೆ ಅಗೋಚರ. ಒಡಲು ಹರಿದು ಕಂಡೆಹೆನೆಂದಡೆ ನಿರವಯಾಂಗ. ಇನ್ನೇವೆನಿನ್ನೇವೆ, ಸನ್ನರ್ಧ ಎನಗನ್ಯಭಿನ್ನನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿರವಯಲಿಂಗ ಲೀಲೆಗೆ ರೂಪಾಯಿತ್ತೆಂದು ನುಡಿವರು, ಬಯಲು ರೂಪಾದ ಪರಿಯಿನ್ನೆಂತೊ ? ಮೊದಲುಗೆಟ್ಟು ಲಾಭನರಸುವ ಪರಿಯಿನ್ನೆಂತೊ ? ರೂಪಿಂಗೆ ಬಂದುದು ನಿರೂಪವಾದ ಮತ್ತೆ ? ರೂಪಿಂಗೆ ಈಡಪ್ಪುದೆ ? ಇದು ಕಾರಣ, ತಮ್ಮಲ್ಲಿರ್ದ ಜ್ಞಾನವ ತಾವರಿಯದೆ, ತಾವು ಹಿಡಿದಿರ್ದ ಲಿಂಗದ ಆದಿ, ಅಳಿ ಉಳಿವ ಉಭಯವ ಭೇದಿಸಲರಿಯದೆ, ಜ್ಞಾನವ ಸಾಧಿಸಲರಿಯದೆ, ಸಾಧ್ಯರೆಂತಾದಿರೊ ? ಆ ಸಾಧ್ಯ, ನಿರುಪಮ ನಿರವಯ ಪರಂಜ್ಯೋತಿ ಲಿಂಗವ ಕುರುಹಿಡುವ ಪರಿಯಿನ್ನೆಂತೊ ? ಕುರುಹಿನ ಮರೆಯೊಳಗಿಪ್ಪ ವಸ್ತುವ ಕಾಬ ತೆರ ಇನ್ನಾವುದೊ ? ಇವೆಲ್ಲವೂ ಮರವೆಯ ಮಾತಲ್ಲದೆ, ಬರಿಯ ಹೋರಟೆಗೆ ಬಲ್ಲವರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನಾ ವರ್ಣವ ನೀರುಂಡು, ಆ ವರ್ಣ ನೀರೆರಡಿಲ್ಲದೆ ಅವಗವಿಸಿದಂತೆ, ನಿಃಕಳಂಕ ಮಲ್ಲಿಕಾರ್ಜುನಲಿಂಗನೊಡಗೂಡಿರಬೇಕು.
--------------
ಮೋಳಿಗೆ ಮಾರಯ್ಯ
ನಿರ್ಘಟದಲ್ಲಿ ಘಟ ಹುಟ್ಟಿ, ಪ್ರಕಟಿಸುವುದ ಕಂಡೆ. ನಿರ್ವಿಕಳತೆಯಲ್ಲಿ ವಿಕಳತೆ ಹುಟ್ಟಿ, ಉಭಯಗತಿ[ಗೆಟ್ಟವರ ಕಂಡೆ]. ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದವರ [ಕಂಡೆ]. |
--------------
ಮೋಳಿಗೆ ಮಾರಯ್ಯ
ನೂಲೆಳೆಯ ಗಾತ್ರದ ಮರದಲ್ಲಿ, ಬೆಟ್ಟದ ತೋರದ ಕಾಯಿ ಫಲವಾಯಿತ್ತು. ಅದು ಹಣ್ಣಾಗದು, ನೋಡಿರಯ್ಯಾ ಇನ್ನೆಂತೊ ? ಏರಬಾರದು ಮರನ, ಕೊಯ್ದು ಹಿಡಿಯಬಾರದು ಕಾಯ. ಈ ಭೇದವನರಿದು ಮರನನೇರದೆ, ಕಾಯ ಮುಟ್ಟದೆ, ಹಣ್ಣಿನ ರುಚಿಯ ಚೆನ್ನಾಗಿ ಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತನ್ನಲ್ಲಿ ನಿರ್ಲೇಪಸಂಬಂಧಿ.
--------------
ಮೋಳಿಗೆ ಮಾರಯ್ಯ
ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ. ಅವ ನಾನೊಲ್ಲದೆ ಒಂದ ಬ್ರಹ್ಮಂಗೆ ಕೊಟ್ಟೆ. ಒಂದ ವಿಷ್ಣುವಿಗೆ ಕೊಟ್ಟೆ, ಒಂದ ರುದ್ರಂಗೆ ಕೊಟ್ಟೆ. ಆ ಕೊಟ್ಟುದನು ಬ್ರಹ್ಮ ಬೆಗಡವನಿಕ್ಕಿ ಪವಣಿಸಿ ಕಟ್ಟಿದ. ಅದ ವಿಷ್ಣು ಕುಂದಣದಲ್ಲಿ ಕೀಲಿಸಿ ಮುಂಗೈಯಲ್ಲಿಕ್ಕಿದ. ಮತ್ತೊಂದವನಾ ರುದ್ರನೊಡೆದು ಬೆಳಗ ಬಯಲು ಮಾಡಿದ. ಇಂತೀ ಮೂವರು ರತ್ನದ ಹಂಗಿಗರಾದರು. ಅವರ ಹಂಗನೊಲ್ಲದೆ ಸಂದೇಹ ಬಿಡಲಾರದೆ, ಬಂದ ಬಂದ ಯೋನಿಯಲ್ಲಿ ಸಂದಿಲ್ಲದೆ ತಿರುಗಲಾರದೆ, ನೊಂದೆನಯ್ಯಾ. ಬ್ರಹ್ಮನ ಬಲೆಯಲ್ಲಿ ಸಿಲುಕಿ, ವಿಷ್ಣುವಿನ ಬಂಧನದಲ್ಲಿ ಕಟ್ಟುವಡೆದು, ರುದ್ರನ ಹಣೆಗಿಚ್ಚಿನಲ್ಲಿ ಉರಿಯಲಾರದೆ, ಹಾರಿದೆನಯ್ಯಾ ಕೇಡಿಲ್ಲದ ಪದವ. ಗುರುವಿನ ಹಂಗ ಬಿಟ್ಟೆ, ಅಡಿಗಡಿಗೆ ಏಳಲಾರದೆ. ಲಿಂಗದ ಹಂಗ ಬಿಟ್ಟೆ, ಮಜ್ಜನಕ್ಕೆರೆದ ಹಾವಸೆಗಾರದೆ. ಜಂಗಮದ ಹಂಗ ಬಿಟ್ಟೆ, ಸಂದೇಹದಲ್ಲಿ ಸಾಯಲಾರದೆ. ಇವರಂದ ಒಂದೂ ಚಂದವಿಲ್ಲ. ಅಭಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಂಗೆ.
--------------
ಮೋಳಿಗೆ ಮಾರಯ್ಯ
ನಾಣ್ಯವ ಹೊದ್ದಡೆ ಬೇಲಿಯ ಮೇಲೆ ಸಿಲ್ಕಿಸಿ ಸೀಳಬಹುದೆ ? ಭಾಳಾಂಬಕನ ಬಲ್ಲಡೆ ಕಾಳುಮತ್ರ್ಯರಲ್ಲಿ ಸತ್ಯವ ಹೇಳಬಹುದೆ ? ಇದು ಸತ್ಯದ ಆಳುತನಕ್ಕೆ ಭಂಗ. ಜಾಣನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...