ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂದ್ಥಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ. ಭಾನುತೇಜಕ್ಕೆ ನಾನಾಗುಣವೆಲ್ಲವೂ ಸರಿ. ಬೀಸುವ ವಾಯುವಿಂಗೆ ಸುಗುಣ ದುರ್ಗುಣವಿಲ್ಲ. ಇದು ಅಜಾತನ ಒಲುಮೆ. ಮಿಕ್ಕಿನ ಮಾತಿನ ಮಕ್ಕಳಿಗಿಲ್ಲಯೆಂದೆ, ಜಗದೀಶನ ಒಲುಮೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಂಗಮವೆಂದು ಮಾಡಿ ಪಙÂ್ತಯಲ್ಲಿ ವಿಂಗಡಿಸಿ, ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಿಯ ಸಂಗ ನೇಕೆಯ ಶಿಶುವಿನಂತಿರಬೇಕು. ಜ್ಞಾನಿಯ ಸಂಗ ಭಾನುವಿನ ಉದಯದಂತಿರಬೇಕು. ಜ್ಞಾನಿಯ ಸಂಗ ಸೌಖ್ಯದ ಆಲಯದ ಠಾವಿನಂತಿರಬೇಕು. ಹೀಂಗಲ್ಲದೆ ಮಾತಿಂಗೆ ಮಾತ ಕಾಳ್ಗೆಡವವರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಜಾಗ್ರದಲ್ಲಿ ಕಾಬುದು ಬ್ರಹ್ಮನಿರವು. ಸ್ವಪ್ನದಲ್ಲಿ ಕಾಬುದು ವಿಷ್ಣುವಿನಿರವು. ಸುಷುಪ್ತಿಯಲ್ಲಿ ಕಾಬುದು ರುದ್ರನಿರವು. ಇಂತೀ ಗುಣವನರಿಯದೆ, ಪರಮನ ಇರವನರಿವ ಪರಿಯೆಂತೊ ? ಭ್ರಾಂತರ ಭ್ರಮೆಗೆ ದೂರ, ಶಾಂತರ ವಿಶ್ರಾಂತಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ. ಬ್ರಹ್ಮಮೂರ್ತಿ ಗುರುವಾದ, ವಿಷ್ಣುಮೂರ್ತಿ ಲಿಂಗವಾದ, ರುದ್ರಮೂರ್ತಿ ಜಂಗಮವಾದ. ಇಂತೀ ಮೂವರು ಬಂದ ಭವವ ನೋಡಾ. ಇಷ್ಟಲಿಂಗವ ಕೊಟ್ಟು ಕಷ್ಟದ್ರವ್ಯಕ್ಕೆ ಕೈಯಾನುವ ಕಾರಣ, ಗುರುಬ್ರಹ್ಮನ ಕಲ್ಪಿತವ ತೊಡೆದುದಿಲ್ಲ. ಲಿಂಗ ಸರ್ವಾಂಗದಲ್ಲಿ ಸಂಬಂದ್ಥಿಸಿದ ಮತ್ತೆ, ಕಾಯದಲ್ಲಿ ಮೆಟ್ಟಿಸಿಕೊಂಬ ಕಾರಣ, ವಿಷ್ಣುವಿನ ಸ್ಥಿತಿ ಬಿಟ್ಟುದಿಲ್ಲ. ಜಂಗಮ ರುದ್ರನ ಪಾಶವ ಹೊತ್ತ ಕಾರಣ, ರುದ್ರನ ಲಯಕ್ಕೆ ಹೊರಗಾದುದಿಲ್ಲ. ಇಂತಿವರ ಗುರುವೆನಬಾರದು, ಲಿಂಗವೆನಬಾರದು, ಜಂಗಮವೆನಬಾರದು. ಪೂಜಿಸಿದಲ್ಲಿ ಮುಕ್ತಿಯಲ್ಲದೆ ನಿತ್ಯತ್ವವಿಲ್ಲ. ಸತ್ಯವನರಸಿ ಮಾಡುವ ಭಕ್ತ, ನಿತ್ಯಾನಿತ್ಯವ ವಿಚಾರಿಸಬೇಕು. ಸತ್ತು ಗುರುವೆಂಬುದ, ಚಿತ್ತು ಲಿಂಗವೆಂಬುದ, ಆನಂದ ಜಂಗಮವೆಂಬುದ [ಅರಿದು], ಇಂತೀ ತ್ರೈಮೂರ್ತಿಯಾಗಬೇಕು. ತಾನೆ ಗುರುವಾದಡೆ ಬ್ರಹ್ಮಪಾಶವ ಹರಿಯಬೇಕು. ತಾನೆ ಲಿಂಗವಾದಡೆ ಶಕ್ತಿಪಾಶವ ನಿಶ್ಚೆ ೈಸಬೇಕು. ತಾನೆ ಜಂಗಮವಾದಡೆ ರುದ್ರನ ಬಲೆಯ ಹರಿಯಬೇಕು. ಇಂತಿವರೊಳಗಾದವೆಲ್ಲವು ಪ್ರಳಯಕ್ಕೆ ಒಳಗು. ಗುರುವೆಂಬುದು ಬಿಂದು, ಲಿಂಗವೆಂಬುದು ಕಳೆ, ಜಂಗಮವೆಂಬುದು ಕಳಾತೀತ, ಜ್ಞಾನ ಜಂಗಮ. ಆ ವಸ್ತುವಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾಶಬದ್ಧನಲ್ಲ, ವೇಷಧಾರಿಯಲ್ಲ, ಗ್ರಾಸಕ್ಕೋಸ್ಕರವಾಗಿ ಭಾಷೆಯ ನುಡಿವನಲ್ಲ. ಈಶಲಾಂಛನವ ಹೊತ್ತು, ಕಾಸಿಂಗೆ ಕಾರ್ಪಣ್ಯಬಡುವನಲ್ಲ. ಮಹದಾಶ್ರಯವನಾಶ್ರಯಿಸಿದನಾಗಿ, ಮನೆಯ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪನಾದ ಶರಣ.
--------------
ಮೋಳಿಗೆ ಮಾರಯ್ಯ
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು, ಇಲ್ಲವೆಂದು ನುಡಿವುತ್ತಿಹರು ಆಧ್ಯಾತ್ಮಯೋಗಿಗಳು. ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ? ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ. ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ? ನಾನಾ ಸುಖಂಗಳ ಸುಖಿಸಬಲ್ಲುದೆ ? ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ, ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ. ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು. ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು. ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಂಗಮಭಕ್ತಿಯ ಮಾಡಿಹೆನೆಂದು ಮಹಾಮನೆಯ ಕಟ್ಟಿದ ಮತ್ತೆ, ಹಗೆ ಕಪಟವಂ ತಾಳ್ದು, ಶಿವರೂಪಿನಲ್ಲಿ ಬಂದು ಇರಿದಡೆ, ಅಂಗವ ಕೊಡದಿದ್ದಡೆ ಭಕ್ತಂಗದೆ ಭಂಗ. ಕಪಟದಿಂದ ಸತಿಯ ಹಿಡಿದಡೆ, ಗದಕದಲ್ಲಿದ್ದೇನೆಂದಡೆ, ತನ್ನ ಸತ್ಯಕ್ಕೆ ಭಂಗ. ಆಶೆಯಿಂದ ಬಂದು, ವೇಷವ ತಾಳಿ, ರಾಶಿಯ ಹೊನ್ನ ಬೇಡಿದಡೆ, ಮನದಲ್ಲಿ ಆಶೆದೋರಿದಡೆ, ತಾ ಪೂಜಿಸುವ ಈಶ್ವರಂಗೆ ಭಂಗ. ಇದಿರಾಶೆಯ ಬಿಡದೆ ಮಾಡುವನ ಭಕ್ತಿ, ಕೂಸು ಸತ್ತು ಹೇತದ ನಾತ ಬಿಡದಂತೆ, ಅವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಂಗಮಕ್ಕೆ ಇಕ್ಕಿದಲ್ಲದೆ ಒಲ್ಲೆವೆಂಬ ಭಕ್ತರು ಕೇಳಿರೊ. ಆ ಜಂಗಮ ಮುಂದೆ ಬಂದು ನಿಂದಿರಲು, ತಾ ಕುಳಿತಿದ್ದು, ಏನು ಬಂದಿರಯ್ಯಾ ಎಂದು, ಉದಾಸೀನ ಪಕ್ಷಿತನಾಗಿ, ಆಸನವ ತೊಲಗದೆ, ಲೇಸ ನುಡಿಯದೆ, ವಾಸಿವಟ್ಟಕ್ಕೆ ಕೂಳನಿಕ್ಕುವ ದಾತರಿಗೆಲ್ಲಿಯದೊ, ಜಂಗಮಲಿಂಗದ ಪೂಜೆ ? ಮನವೊಲಿದು ಮಾಡುವ ಭಕ್ತನ ಸ್ಥಲ, ತಾ ಹೋಹಲ್ಲಿ, ಜಂಗಮ ಬಾಹಲ್ಲಿ ಇದಿರೇಳಬೇಕು. ಮೆಟ್ಟಡಿಯಂ ಕಳೆದು, ಬಟ್ಟೆಯಂ ತೊಲಗಿ, ಸಾಷ್ಟಾಂಗವೆರಗಿ, ಪ್ರತಿಶಬ್ದವಿಲ್ಲದೆ ಕೈಕೊಂಡು, ತ್ರಿಕರಣಶುದ್ಧನಾಗಿ ಕೊಡುವುದ ಕೊಟ್ಟು, ತನಗೆ ಬೇಕಾದುದ ಕೇಳಿಕೊಂಡು, ಭಾವಿಸಬಲ್ಲಡೆ, ಅದೇ ಸದ್ಭಕ್ತಿ, ಅದೇ ಜೀವನ್ಮುಕ್ತಿ. ಇಷ್ಟವನರಿಯದೆ, ಕಾಬವರ ಕಂಡು, ಮಾಡುವರ ನೋಡಿ ಮಾಡುವ ಮಾಟ, ರಾಟಾಳದ ಕಂಭದ ಪಾಶದಂತೆ. ಆಶೆಕರನೊಲ್ಲೆನೆಂದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಂಗಮ ಸುಳಿದಡೆ ವಸಂತ ಗಾಳಿಯಂತೆ ಸುಳಿವ. ಬಿರುಗಾಳಿಯಂತೆ ಸುಳಿವನೆ ? ಸುಳಿಯ. ಜಂಗಮಸ್ಥಲವೆಂತೆಂದಡೆ, ಮಳಲೊಳಗಣ ಅಗ್ಘಣಿಯಂತೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಕದಡ ಚೆಲ್ಲಿ, ತಿಳಿಯ ಕೊಳಬಲ್ಲಡೆ ಜಂಗಮವೆಂಬೆ. ಇಂತಲ್ಲದಿರ್ದಡೆ ಭೂತಪ್ರಾಣಿಯೆಂಬೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಯೋತಿಯ ಬೆಳಗಿನಲ್ಲಿ [ನೋಡಿ] ಜ್ಯೋತಿಯ ಪಟವ ಕಾಬಂತೆ, ಕಣ್ಣಿನಿಂದ ಕನ್ನಡಿಯ ನೋಡಿ ಕಣ್ಣ ಕಲೆಯ ಕಾಬಂತೆ, ತನ್ನಿಂದ ತಾ ನೋಡಿ ತನ್ನನರಿಯಬೇಕು. ತನ್ನನರಿಯದವ ನಿಮ್ಮನೆತ್ತಬಲ್ಲನೋ ? ತನ್ನನರಿವುದಕ್ಕೆ ದೃಷ್ಟವ ಕೈಯಲ್ಲಿ ಕೊಟ್ಟು ಕಾಣದುದಕ್ಕೆ ಚಿತ್ತವ ನೆನಹಿಂಗಿತ್ತ. ಚಿತ್ತ ಇಷ್ಟದಲ್ಲಿ ಅಚ್ಚೊತ್ತಿದ ಮತ್ತೆ ದೃಷ್ಟವ ಕಾಬುದಿನ್ನೇನೋ ? ಉರಿಯೊಳಗಣ ಕರ್ಪುರ, ಅನಿಲನೊಳಗಣ ಪಾವಕ, ಶಿಲೆಯುಂಡ ಎಣ್ಣೆ ಅಳತೆ[ಗೆ ಉ]ಂಟೇ ಅಯ್ಯಾ. ಲಿಂಗವ ಮೆಚ್ಚಿದ ಅಂಗಕ್ಕೆ ಜಗದ ಹಂಗಿಲ್ಲ. ಅನಂಗ, ಅತೀತ ನಿಃಕಳಂಕ ಮಲ್ಲಿಕಾರ್ಜುನಲಿಂಗವೇ ತಾನಾದ ಶರಣಂಗೆ.
--------------
ಮೋಳಿಗೆ ಮಾರಯ್ಯ
ಜಪವೇಕೊ ಅಪ್ರಮಾಣಂಗೆ ? ತಪವೇಕೊ ಚತುರ್ವಿಧಪ[ಥೆ]ಕ್ಕೆ ಹೊರಗಾದಾತಂಗೆ ? ನೇಮವೇಕೊ ನಿತ್ಯತೃಪ್ತಂಗೆ ? ನಿತ್ಯವೇಕೊ ಅಷ್ಟವಿಧಾರ್ಚನೆ ಷೋಡಶೋಪಚಾರಭರಿತಂಗೆ ? ಜಪಕ್ಕೊಳಗಾದ ರುದ್ರ, ತಪಕ್ಕೊಳಗಾದ ವಿಷ್ಣು, ನೇಮಕ್ಕೊಳಗಾದ ಬ್ರಹ್ಮ, ನಿತ್ಯಕ್ಕೊಳಗಾದ ಈಶ್ವರ, ಉಪಚರಣೆಗೊಳಗಾದ ಸದಾಶಿವ. ಇಂತಿವರೆಲ್ಲರೂ ಸೃಷ್ಟಿಯ ಮೇಲಣ ತಪ್ಪಲಿಲ್ಲಿರ್ದರೇಕೆ, ಎಲ್ಲಾ ಬೆಟ್ಟವನೇರಿ ? ಇಂತಿವರ ಬಟ್ಟೆಯ ಮೆಟ್ಟದೆ ನಿಶ್ಚಯವಾದ ಶರಣ, ಇಹದವನಲ್ಲ, ಪರದವನಲ್ಲ. ಆ ಶರಣ ಉಡುವಲ್ಲಿಯೂ ತಾನೆ, ತೊಡುವಲ್ಲಿಯೂ ತಾನೆ, ಕೊಡುವಲ್ಲಿಯೂ ತಾನೆ, ಮುಟ್ಟುವಲ್ಲಿಯೂ ತಾನೆ, ತಟ್ಟುವಲ್ಲಿಯೂ ತಾನೆ ಬೇರೊಂದಿಲ್ಲವಾಗಿ. ಕ್ಷೀರವ ಕೂಡಿದ ಜಲವ ಭೇದಿಸಬಹುದೆ ಅಯ್ಯಾ ? ವಾರಿಧಿಯ ಕೂಡಿದ ಸಾರವ ಬೇರೆ ರುಚಿಸಲುಂಟೆ ಅಯ್ಯಾ ? ಆರಡಿ ಕೊಂಡ ಗಂಧವ ಬೇರು ಮಾಡಿ ಮುಡಿಯಲಿಲ್ಲ. ತೋರಲಿಲ್ಲದ ರೂಪಿಂಗೆ ಆರಾಧಿಸುವುದಕ್ಕೆ ಬೇರೆ ಒಡಲಿಲ್ಲ. ಸಾಕಾರಕ್ಕೆ ಆರೈಕೆಯಿಲ್ಲದೆ ಸತ್ತು ರೂಪಾದಲ್ಲಿಯೆ, ಇ[ಹದ]ಲ್ಲಿ ಪರದಲ್ಲಿ ಪರಿಣಾಮಿಗಳಾಗಲಿ, ಇಂತಿವಕ್ಕೆ ದೂರವಾಗಿ ಬಾಳುಗೆಟ್ಟು ಜಾಳಾದೆ, ಹೇಳಹೆಸರಿಲ್ಲದಂತಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ, ಬೈಚಿಟ್ಟಿ ನೆಲೆಯಂತಿರ್ದಡೇನು ಭೋಗಿಸಲರಿಯನಾಗಿ, ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ ? ಇವರಂಗವ ನೋಡಾ. ಕೆಳಗೆ ನಿಂದು ಚಪ್ಟಿರಿದಡೆ ತೊಟ್ಟು ಬಿಟ್ಟಿತ್ತೇ ಹಣ್ಣು ? ಅದರ ಒಲುಮೆ ಈ ಪರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಲ ಅನಲ ಮಣ್ಣು ಕೂಡಿ ಬಲಿದ ಮತ್ತೆ ಜಲ ಅನಲನಿಗುಂಟೆ ? ಕ್ರೀವ್ಯಾಪಾರ ಜ್ಞಾನವ ಕೂಡಿದ ಮತ್ತೆ ಪ್ರಳಯ ಉಂಟೆ ? ಹಾಕಿದೆ ಮುಂಡಿಗೆಯ, ಶಿವನಾಣೆ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸತ್ಯವಂತರೆತ್ತಿರಣ್ಣಾ.
--------------
ಮೋಳಿಗೆ ಮಾರಯ್ಯ
ಜಿಹ್ವೆಯ ಲಂಪಟಕ್ಕಾಗಿ ಅನ್ಯರ ಬೋಧಿಸಲೇಕೆ ? ಗುಹ್ಯದ ವಿಷಯಕ್ಕಾಗಿ ಮನುಷ್ಯರೊಳು ದೈನ್ಯಬಡಲೇಕೆ ? ಅಂಗದ ಇಂದ್ರಿಯಕ್ಕಾಗಿ ನಿಜಲಿಂಗವ ಹಿಂಗಲೇಕೆ ? ಮನುಷ್ಯರ ಹಂಗ ಬಿಟ್ಟು ನಿಜಾಂಗವಾದ ಮಹಾತ್ಮಂಗೆ ಇದಿರಿಡಲಿಲ್ಲ. ಇದಿರಿಂಗೆ ತಾನಿಲ್ಲ. ಉಭಯವಳಿದ ಮತ್ತೆ ಏನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ ಚೋರತನವ ಕಂಡು ಅಂಜಿದೆನಯ್ಯಾ. ಮನೆಯ ಕೂಡಿಕೊಂಡು ಅನ್ನವನಿಕ್ಕಿದಲ್ಲಿ ಸುಳಿವ ಚೋರರ ಕಂಡು ಗುರುವೆನಲಾರೆ. ಅದೆಂತೆಂದಡೆ : ಮಹತ್ತರವಪ್ಪ ಜ್ಯೋತಿರ್ಲಿಂಗವ ಕೈಯಲ್ಲಿ ಕೊಟ್ಟು, ಪಾತಕವಪ್ಪ ಫಲಭೋಗಂಗಳ ಕೈಯಲ್ಲಿ ಕೊಟ್ಟು, ಅಜಾತರೆಂದಡೆ ನಾಚಿದೆನಯ್ಯಾ. ಇಂತೀ ಭ್ರಾಂತರ ಕಂಡು ವಂದಿಸಲಾಗದು, ತನ್ನ ರೋಗಕ್ಕೆ ನಿರ್ವಾಹವ ಕಾಣದೆ, ಇದಿರ ರೋಗವ ಮಾಣಿಸಿಹೆನೆಂದು, ಮದ್ದಿನ ಚೀಲವ ಹೊತ್ತು ಸಾವ ಕದ್ದೆಹಕಾರನಂತೆ, ಕ್ಷುದ್ರಜೀವಿಗೆಲ್ಲಿಯದು ಸದ್ಗುರುಸ್ಥಲ ? ಸದ್ಗುರುವಾದಡೆ ಅವ ಬದ್ಧನಾಗಿರಬೇಕು. ತಂತ್ರದಲ್ಲಿ ಹೋಹ ಮಂತ್ರದಂತಿರಬೇಕು. ಮಂದಾರದಲ್ಲಿ ತೋರುವ ಸುಗಂಧದಂತಿರಬೇಕು. ಇಂತಿಪ್ಪ ಗುರುವಿಂಗಿಹವಿಲ್ಲ, ಪರವಿಲ್ಲ, ಭಾವಕ್ಕೆ ಭ್ರಮೆಯಿಲ್ಲ. ಆ ಗುರುವಿನ ಕೈಯಲ್ಲಿ ಬೋಧಿಸಿಕೊಂಡ ಶಿಷ್ಯಂಗೆ ತುಪ್ಪವನಿಕ್ಕಿದ ಚಿತ್ತೆಯಂತೆ ಸ್ಫಟಿಕವ [ಸಾರಿ] ದ [ಒರತೆ ]ಯಂತೆ. ಹೀಂಗಲ್ಲದೆ, ಗುರುಶಿಷ್ಯಸಂಬಂಧವಾಗಬಾರದು. ಇದನರಿಯದಿರ್ದಡೆ ಅಂಧಕನ ಕೈಯ ಅಂಧಕ ಹಿಡಿದಂತೆ, ಪಂಗುಳ[ನ]ಲ್ಲಿ ಚಂದವನರಸುವನಂತೆ, ಸ್ವಯಾನಂದಭರಿತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಲಿಂಗದ ಆದಿ ಅಂತ್ಯವನರಿವಡೆ, ಈ ಗುಣ ಸಾ[ಧಿ]ಸಿಯಲ್ಲದೆ ಯೋಗಿಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜೀವವ ಕಡಿದವಂಗಿಲ್ಲದ ಪಾಪ, ಕತ್ತಿಗುಂಟೆ ಎಲೆದೇವಾ ? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ? ಕೊಲಿಸಿದ ಅರಸಿದ್ಧಂತೆ ಬಂಟಂಗೆ ಮುನಿವರೆ ? ಎಲೆ ದಿವ್ಯಜ್ಞಾನವೆ, ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನನಿದ್ದಂತೆ, ಎನ್ನನೇಕೆ ಕಾಡಿಹೆ ?
--------------
ಮೋಳಿಗೆ ಮಾರಯ್ಯ
ಜ್ಞಾನಾರೂಢನಾದಲ್ಲಿ ಮಾನವರಲ್ಲಿ ಅಶ್ರಯಿಸಲಾಗದು. ಮಾನವರಿಚ್ಫೆಯ ನುಡಿಯಲಾಗದು. ಪೂಜೆಗೆ ಸಿಲ್ಕಿ ಬಾಧಿಸಿಕೊಳಲಾಗದು. ಸಾಧನೆಯ ಹೇಳಿ ಸಾವಂತೆ ಮಾಡಲಾಗದು. ಸಾವಧಾನದಿಂದ ಸೋಹೆಯ ತಿಳಿದು, ಏನೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಕ್ಕೆ ಲೇಪವಾದವನಿರವು, ತುಪ್ಪವ ನಂಬಿದ ಬತ್ತಿಯಂತೆ, ಕಾದ ಲೋಹದ ಜಲದಿರವಿನಂತೆ, ನಾದವ ನುಂಗಿದ ಬಯಲಿನಂತೆ, ಚೋದ್ಯವ ಕಂಡ ಕನಸಿನಂತೆ, ಇದಾರಿಗೆ ಭೇದಕ ? ಇದ ಶೋಧಿಸಬೇಕು. ಲಿಂಗದಾದಿಯ ಅಂತುವನರಿದಡೆ, ಗುಣಸಂಗಿಯಲ್ಲದೆ ಯೋಗಿಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾತೃಚಕ್ಷುವಿನಿಂದ ಜಗದ ರೂಪ ಕಾಬಲ್ಲಿ, ಜ್ಞಾನಚಕ್ಷುವಿನಲ್ಲಿ ಕಾಬ ಸ್ವಪ್ನಂಗಳು, ಜ್ಞೇಯಚಕ್ಷುವಿನಲ್ಲಿ ಕೂಡಿ ಕಾಬ ಸುಖಂಗಳು. ಇಂತೀ ತ್ರಿವಿಧ ದೃಷ್ಟಂಗಳ ಕಾಬುದೆಲ್ಲ ಜ್ಞಾತೃವಿನಲ್ಲಿ ಉಪದೃಷ್ಟ, ಜ್ಞಾನದಲ್ಲಿ ಸ್ವಪ್ನದೃಷ್ಟ, ಜ್ಞೇಯದಲ್ಲಿ ಕೂಟದೃಷ್ಟವಾಗಿ ಕಾಬುದು ತನುತ್ರಯದ ಭೇದವೋ, ಆತ್ಮತ್ರಯದ ಭೇದವೋ ? ಆತ್ಮನೊಂದೆಂದಡೆ ಘಟ ಪರಿಕರಂಗಳಾಗಿ ತೋರುತ್ತಿಹವಾಗಿ, ಆತ್ಮನ ಏಕವೆನಬಾರದು. ಆತ್ಮನ ಹಲವೆಂದಡೆ, ಮೃದು ಕಠಿನ ಶೀತ ಉಷ್ಣಾದಿಗಳಲ್ಲಿ ಹೆಚ್ಚುಕುಂದಿಲ್ಲದೆ, ಆತ್ಮಂಗೆ ಒಂದೆ ಭೇದವಾಗಿ ತೋರುತ್ತಿಹವಾಗಿ, ಆತ್ಮನ ಹಲವೆನಬಾರದು. ಇಂತೀ ಘಟಭೇದವನರಿತು, ಆತ್ಮನ ಸುಖದುಃಖವನರಿತು, ಭಕ್ತಿಗೆ, ಸತ್ಯ ವಿರಕ್ತಿಗೆ, ಮಲತ್ರಯದೂರ ಸರ್ವಜೀವಕ್ಕೆ ಹೆಚ್ಚುಕುಂದಿಲ್ಲದೆ ನಿಶ್ಚಯವಾಗಿ ನಿಂದ ನಿಶ್ಚಿಂತನಂಗವೆ ಷಟ್ಸ್ಥಲ. ಬ್ರಹ್ಮವೇ ಸರ್ವಸ್ಥಲಭರಿತ ಸರ್ವಾಂಗಲಿಂಗಿ, ಆತ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ