ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೀಪದ ಕೊನೆಯ ಮೊನೆಯ ಮೇಲಿದ್ದುದು, ತಮವೋ, ಬೆಳಗೋ ? ಮನದ ಕೊನೆಯ ಮೇಲಿದ್ದುದು, ಅರಿವೊ, ಮರವೆಯೋ ? ಬೀಜದ ಕೊನೆಯ ಮೊನೆಯ ಮೇಲಿದ್ದುದು, ಮುಂದಕ್ಕದು ಬೀಜವೋ, ಸಂದೇಹವೋ ? ಅರಿವುದಕ್ಕೆ ತೆರಹಿಲ್ಲ, ಮರೆವುದಕ್ಕೆ ಒಡಲಿಲ್ಲ. ಅದರ ಹೂ ಮುಡಿಯಲ್ಲಿದ್ದು ಬಿಡುಗಡೆಯಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದ್ವೇಷವಿಲ್ಲದ ಭಕ್ತ, ಆಶೆಯಿಲ್ಲದ ವಿರಕ್ತ, ಸಂಸಾರಪಾಶವಿಲ್ಲದ ಗುರು. ಇಂತೀ ಮೂವರು ಈಶ್ವರ[ನ] ರೂಪವಲ್ಲ. ಸದಾಶಿವಮೂರ್ತಿಗಿಂದತ್ತ ನಿಃಕಳೆಯಾದ, ನಿಃಕಳಂಕ ಮಲ್ಲಿಕಾರ್ಜುನನು.
--------------
ಮೋಳಿಗೆ ಮಾರಯ್ಯ
ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ ದೋಷಕ್ಕಂಜಿ ಧರ್ಮವ ಮಾಡುವ, [ಬೇಡುವ] ಕಾಟಕ್ಕಂಜಿ, ತ್ರಿವಿಧವ ಕೊಡುವ ನಾಟರಿಗೇಕೊ ಸದ್ಭಕ್ತಿ ? ಜಗದ ಘಾತಕರ ಘಾತಿಸದೆ, ವಿಷಯವನರಿಯದೆ, ಆಶೆಯಲ್ಲಿ ಸುಳಿವ ಭ್ರಾಂತು ಮಾರಿಗಳನೇನೆಂದರಿಯದೆ, ವಸ್ತುವಿನಲ್ಲಿ ಓತಿರ್ಪ ಸಾತ್ವಿಕರನರಿದು ಸದ್ಭಕ್ತಿಯ ಮಾಡುವುದು. ಅರಿದುದಕ್ಕೆ ಇದೇ ಕುರುಹೆಂದು, ಮರೆಯೊಳಡಗಿ ಮೊರೆಯಿಡುತ್ತಿದ್ದೇನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ. ಮುಕ್ತಿಯೆ ಸತ್ಯಕ್ಕೆ ಬೀಜ, ಸತ್ಯವೆ ಫಲಕ್ಕೆ ಬೀಜ. ಫಲವೆ ಭವಕ್ಕೆ ಬೀಜ. ಇಂತೀ ಭೇದವ ಭೇದಿಸಿ ಶ್ರುತಿಸ್ಮøತಿತತ್ವಂಗಳಿಂದ ಬೇಡಿದವರಿಗೆ ಬಯಕೆಯ ಕೊಟ್ಟು, ಬೇಡದವರಿಗೆ ನಿಜವನಿತ್ತು, ಲೇಸು ಕಷ್ಟವೆಂಬುದ ಸಂಪಾದಿಸದೆ, ಉಭಯದ ತೆರನ ಸಂದನರಿದಿಪ್ಪ ಲಿಂಗಾಂಗಿಗೆ ಆತನಂಗಕ್ಕಿನ್ನಾವುದು ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದಳ್ಳುರಿಯಲ್ಲಿಗೆ ಹೋದಡೆ, ಮೆಲ್ಲನೆ ಮುಟ್ಟುವುದೆ ಅಯ್ಯಾ ? ಬಲ್ಲವ ಗೆಲ್ಲ ಸೋಲಕ್ಕೆ ಹೋರಿದಡೆ, ಕಲ್ಲುಹೃದಯಿ ಬಲ್ಲನೆ ಬಲ್ಲವನಿರವ ? ಇದೆಲ್ಲಕ್ಕೂ ಸಾಧ್ಯವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರುವಾದಲ್ಲಿ, ತ್ರಿವಿಧ ಕಾರಣಂಗಳನರಿತು, ಕರ್ಮ ಕ್ರೀ ಆಚಾರ ಸಂಬಂಧವ ಸಂಬಂಧಿಸಿ, ಮಾಡುವಲ್ಲಿ ದೀಕ್ಷಾಗುರು. ಆ ಕ್ರೀ ತಪ್ಪಿದಲ್ಲಿ ಬಂಧನವ ಮಾಡುವಲ್ಲಿ ಶಿಕ್ಷಾಗುರು. ಇಷ್ಟ ಕಾಮ್ಯ ಮೋಕ್ಷಂಗಳ ಗೊತ್ತ ಕೆಡಿಸಿ, ನಿಶ್ಚಿಯಿಸಿ ಮಾಡುವುದು ಮೋಕ್ಷಗುರು. ಇಂತೀ ಭೇದದ ಆಗನರಿತು, ಭಾಗೀರಥಿಯಂತೆ ಆಗಬಲ್ಲಡೆ, ಪರಮಗುರು ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದ್ರವ್ಯದ ಸಂಗದಿಂದ ಅರಸಿಕೊಂಬ ಅಪ್ಪು, ದ್ರವ್ಯವ ಕಳೆದುಳಿದು ಅರಸಿಕೊಂಬುದೆ ? ಅಂಗದಲ್ಲಿ ದ್ವಂದ್ವವಾದ ಆತ್ಮಬಂಧಕ್ಕೆ ಈಡಪ್ಪುದಲ್ಲದೆ ನಿರಂಗವ ಬಂಧಿಸಬಹುದೆ ? ಆ ನೀರು ಸಾರವ ಕೊಟ್ಟ ದ್ರವ್ಯಕ್ಕೆ ಮತ್ತೆ ತುಷಾರವಾಗಿ ಸಾರವನೆಯ್ದಿದಂತೆ, ವಸ್ತು ತ್ರಿವಿಧನಾಗಿ, ನಿತ್ಯಾನಿತ್ಯವ ಹೊತ್ತಾಡಿ ಭಕ್ತಿ ಕಾರಣವಾಗಿ, ಭಕ್ತಿ ಮುಕ್ತಿಯಾಗಿ, ಮುಕ್ತಿ ನಿಶ್ಚಯವಾದಲ್ಲಿ, ಪ್ರಾಣಲಿಂಗಸಂಬಂಧ. ಪ್ರಾಣ ಪ್ರಣವದಲ್ಲಿ ಲೇಪವಾದ ಮತ್ತೆ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ. ಭಾವದ ಭ್ರಮೆ ಉಳ್ಳನ್ನಕ್ಕ ಭಾವಲಿಂಗ ಸಂಬಂಧಿಯಲ್ಲ. ಪ್ರಾಣ ಪ್ರಳಯವನರಿವನ್ನಬರ ಪ್ರಾಣಲಿಂಗ ಸಂಬಂಧಿಯಲ್ಲ. ಭಾವ ಇಷ್ಟದಲ್ಲಿ ನಿಂದು, ಇಷ್ಟಕ್ಕೆ ಭಾವ ಚೇತನವಾಗಿ ರಜ್ಜು ತೈಲವ ಆಗ್ನಿಗೆ bs್ಞೀದಿಸಿಕೊಡುವಂತೆ, ಇಷ್ಟಭಾವದ ಸತ್ವ, ಆ ಉಭಯನಾಧರಿಸಿ ನಿಂದ ಒಡಲು ಸದ್ಭಾವವಂತನ ಕ್ರೀ. ಈ ಮೂರು ಏಕವಾಗಿ ವೇಧಿಸಿ, ಉದಯಿಸಿ ತೋರುವ ಬೆಳಗು, ಆ ಕಳೆಯನೊಳಕೊಂಡಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆ ಇಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೇ ಸುಖಿ. ನಿಧಾನಿಸಿ ಕೂಡಿದಲ್ಲಿಯೇ ತೃಪ್ತಿ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ದೀರ್ಘಕ್ಕೆ ದೀರ್ಘವನೈದಿಸಿ, ಸಾಗಿಸಿ ಮುರಿವನಂತೆ, ನಾದಕ್ಕೆ ಸುನಾದವನೈದಿಸಿ, ಭೇದಿಸಿ ಕಾಬವನಂತೆ, ನಿನ್ನೊಡನೈದಿ ನಿನ್ನ ಕಂಡ ಮತ್ತೆ ಎನಗಿನ್ನೇತರ ಸಾಧನ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ದೇವರು ಹುಟ್ಟುವಾಗ ಮಾಯೆ ಕವಳೀಕರಿಸಿ ಬಂ[ದುದೆ]ಂಬರು. ಅದು ಬಣ್ಣ ಬಚ್ಚಣಿಕೆಯ ಮಾತು. ದೇವಪದವಾದ ಬಳಿಕ ಮತ್ತೆ ದೇವರಿಗುಂಟೆ ಮೂರುಕುಲ ? ಅವ ಬೇಡಿದವರಿಗೀವ ಭಾವಜ್ಞನಾಗಿ. ಭಾವಕ್ಕೆ ಹೊರಗಾದಾತಂಗೆ ಲೀಲೆಯುಂಟೆ ? ಆ ಗುಣ ಚಿಪ್ಪು ಮುತ್ತಿನ ತೆರ. ಕಸ್ತೂರಿ ಶುಕ್ಲದ ತೆರ, ಕದಳಿ ಕರ್ಪುರದ ತೆರ. ಬಂದುದಕ್ಕೆ ಸಂದೇಹವ ಮಾಡಲಿಲ್ಲ. ನಿರಂಗ ನಿರುತ ಸುಸಂಗ ನಿಃಕಳಂಕ ಮಲ್ಲಿಕಾರ್ಜುನಾ, ಇದರಂಗವ ಹೇಳಾ.
--------------
ಮೋಳಿಗೆ ಮಾರಯ್ಯ