ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತ ಶುದ್ದವಾದಲ್ಲಿಯೆ ಮಜ್ಜನದ ಮಂಡೆ. ಆಂಗದಾಪ್ಯಾಯನವರತಲ್ಲಿಯೆ ಎಂಬುದಕ್ಕೆ ಬಾಯಿ. ಸಂದುಸಂಶಯ ಹರಿದಲ್ಲಿಯೆ ಲಿಂಗದ ಸಂಸರ್ಗ. ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ? ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ? ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು. ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು. ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ, ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು, ಬಂಗಾರವ ಕಳೆದು ಬಣ್ಣವ ನೋಡಬಾರದು. ಕುಸುಮವ ಕಳೆದು ಗಂಧವ ಕಾಣಬಾರದು. ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ? ಅಂಗವ ಕಳೆದು ಲಿಂಗವನರಿಯಬಾರದು. ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ? ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ. ಅಂಗವ ಕಳೆದು ಲಿಂಗವ ಕಂಡೆನೆಂಬುದು, ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಮರೆ ಹೇಳಾ. ತೃಷೆಯರತು ನೀರ ಕೊಳಬಹುದೆ ? ಆಪ್ಯಾಯನವನರತು ಓಗರವನುಣಬಹುದೆ ? ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ? ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಿನ್ನದ ಕುರುಹ ಒರೆದಲ್ಲದೆ ಅರಿಯಬಾರದು. ಚಂದನದ ಗುಣವ ಮರ್ದನಂಗೈದಲ್ಲದೆ ಗಂಧವ ಕಾಣಬಾರದು. ಇಕ್ಷುದಂಡದ ಪರಿಯ ಬಂಧಿಸಿದಲ್ಲದೆ ವಿಶೇಷವ ಕಾಣಬಾರದು. ನಾನಾ ರಸ ಗಂಧಂಗಳ ಗುಣವ ಸವಿದಲ್ಲದೆ ಕಾಣಬಾರದು. ಕ್ಷೀರದ ಘಟ್ಟಿಯ ಮಥನದಿಂದಲ್ಲದೆ ರುಚಿಸಬಾರದು. ಮಹಾತ್ಮರ ಸಂಗ ಮಹಾನುಭಾವದಿಂದಲ್ಲದೆ ಕಾಣಬಾರದು. ಇದು ಕಾರಣ, ಮಾತು ಮಾತಿಂಗೆಲ್ಲಕ್ಕೂ ಮಹದನುವುಂಟೆ ? ಲಿಂಗವ ಸೋಂಕಿದ ಮನಕ್ಕೆ ಅಂಗ ಭಿನ್ನವಾವುದೆಂದಡೆ, ಶೇಷನ ಅವಸಾನದಂತಿರಬೇಕು, ತ್ರಾಸಿನ ವಾಸದ ಭಾಷಾಂಗದಂತಿರಬೇಕು. ಹೀಂಗಲ್ಲದೆ ಸರ್ವಾನುಭಾವಿಗಳೆಂತಾದಿರಣ್ಣಾ. ಕೊಲ್ಲದ ಕೊಲೆಯ, ಗೆಲ್ಲದ ಜೂಜವ, ಬಲ್ಲತನವಿಲ್ಲದ ಬರಿವಾಯ ಮಾತಿನ ಗೆಲ್ಲ ಸೋಲಕ್ಕೆ ಹೋರಿದಡೆ, ವಲ್ಲಭ ನಿಃಕಳಂಕ ಮಲ್ಲಿಕಾರ್ಜುನನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಚಕ್ರಿಯ ಚಿತ್ತದಂತೆ, ಚಿತ್ರಜ್ಞನ ಕೈಯ ಲೆಕ್ಕಣಿಕೆಯಂತೆ, ಅಪ್ಪುವಿನ ಮಡುವಿನ ಮತ್ಸ್ಯದ ಪಥದಂತೆ, ಇಂತೀ ಭಕ್ತಿಜ್ಞಾನವೈರಾಗ್ಯ ನಿಃಪತಿಯಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ.
--------------
ಮೋಳಿಗೆ ಮಾರಯ್ಯ
ಚಂದ್ರಮಂಡಲದಲ್ಲಿ ನಿಂದಿರ್ಪ ಭೇದ[ವ], ಅದರಂಗದ ನಿಲುವೆಂತುಟೊ ? ಅಂಗಮಂಡಲದಲ್ಲಿ ಲಿಂಗವಿಪ್ಪ ಭೇದವ, ಸಂಗೊಳಿಸುವ ಪರಿಯಿನ್ನೆಂತುಟೊ ? ಈ ಭಂಗಿತವ ಮಾಡುವ ಇಂದ್ರಿಯ ಕರಣಂಗಳಲ್ಲಿ ನಿಂದಿಹ ಪರಿಯಿನ್ನೆಂತುಟೊ ? ಈ ಭೇದ, ರಸಫಲದಂಗ, ಬಸವಣ್ಣ ಮೊದಲಾದ ಪ್ರಮಥರು ಬಲ್ಲರು. ಇದನಾನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಚಿತ್ರದ ಹುಲಿ ಮನುಷ್ಯನ ಕಚ್ಚಬಲ್ಲುದೆ ? ಮತ್ರ್ಯದೊಳಗೆ ಈಶ್ವರನ ದರ್ಶನ ಹೊತ್ತವರಿಗೆಲ್ಲ ನಿತ್ಯತ್ವವುಂಟೆ ? ಇದರಚ್ಚೆಯ ಹೊರಲಾರದಿರ್ದಡೆ, ಮತ್ರ್ಯಕ್ಕೆ ಹೊರಗೆಂದ ನಿಚ್ಚಟ ಶರಣ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಿನ್ನದಲ್ಲಿ ಮಾಡಿದ ರೂಪು, ಮಣ್ಣಿನಲ್ಲಿ ಮಾಡಿದ ರೂಪು, ಕಲ್ಲಿನಲ್ಲಿ ಮಾಡಿ ರೂಪು ಪ್ರಳಯವಾಗಲು, ಸ್ಥೂಲವಳಿದಡೆ ಸೂಕ್ಷ್ಮಕ್ಕೆ ತರಬಹುದು. ಬಣ್ಣದ ರೂಪು ಚೆನ್ನುತನ ಹರಿದಲ್ಲಿ, ಅದ ನನ್ನಿಯ ಮಾಡಬಹುದೆ ? ಅದು ತನ್ನಲ್ಲಿಯೆ ಲೇಪ, ಅದು ಭಿನ್ನಕ್ಕೆ ಬಾರದು. ಇವ ಚೆನ್ನಾಗಿ ಹೇಳಾ, ಅಭಿನ್ನಮೂರ್ತಿ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಿತ್ತಶುದ್ಧವನರಿದು ನಡೆಯಬೇಕೆಂಬರು, ನಡೆದು ಹೊಡೆವಾಗ ಹೂಡಿದ ಬಂಡಿಯೆ, ಆಡುವ ವಿಧಾತನೆ ? ಈ ಭೇದವನರಿಯದೆ, ಗಾಜಿನ ಕುಪ್ಪಿಗೆಯಲ್ಲಿ ತೋರುವ ಪ್ರತಿಬಿಂಬದಂತೆ, ಅದ ಭೇದಿಸಿ ನೋಡಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಿಪ್ಪಿನ ಮಂದಿರದಲ್ಲಿ ಮುತ್ತು ಬೆಳೆದ ಭೇದದಂತೆ, ಮೃತ್ತಿಕೆಯ ಸಾರದಲ್ಲಿ ಹೊಮ್ಮಿದ ಹೊಂಗಳ ಪರಿಯಂತೆ, ಕಾಯದಲ್ಲಿ ಬೆಳಗಿ ತೋರುವ ಮಹದರಿವಿನ ಕೊನೆಯಲ್ಲಿ, ಪ್ರಜ್ವಲಿತ ಪ್ರಭಾಕರ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ