ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಲೆ ಆತ್ಮನೆ ಪಾತಕದ ಪಾಕುಳದಲ್ಲಿ ಏಕೆ ಹುಟ್ಟಿದೆ? ಹಸಿದಡುಣಬೇಕು, ವಿಷಯವನನುಕರಿಸಬೇಕು, ಹುಸಿಯಬೇಕು. ಇವರೆಲ್ಲರು ಎಂದಂತೆ ಗಸಣೆಗೊಳಗಾದೆನೆನ್ನಸುವ ಕೊಂಡೊಯ್ಯೊ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ತನುವಿನಲ್ಲಿ ಗುರುಮೂರ್ತಿ ಸಂಗನಬಸವಣ್ಣನ ಕಂಡೆನು. ಎನ್ನ ಮನದಲ್ಲಿ ಲಿಂಗಮೂರ್ತಿ ಚನ್ನಬಸವಣ್ಣನ ಕಂಡೆನು. ಎನ್ನ ಭಾವದಲ್ಲಿ ಜಂಗಮಮೂರ್ತಿ ಸಿದ್ಧರಾಮಯ್ಯನ ಕಂಡೆನು. ಎನ್ನ ತೃಪ್ತಿಮುಖದಲ್ಲಿ ಪ್ರಸಾದಮೂರ್ತಿ ಮರುಳಶಂಕರದೇವರ ಕಂಡೆನು. ಎನ್ನ ಅರಿವಿನ ಮುಖದಲ್ಲಿ ನೈಷಿ*ಕಾಮೂರ್ತಿ ಮಡಿವಾಳಯ್ಯನ ಕಂಡೆನು. ಎನ್ನ ಹೃದಯಮುಖದಲ್ಲಿ ಜ್ಞಾನಮೂರ್ತಿ ಪ್ರಭುದೇವರ ಕಂಡೆನು. ಇಂತೀ ಷಟ್‍ಸ್ಥಲವ ಎನ್ನ ಸರ್ವಾಂಗದಲ್ಲಿ ಪ್ರತಿಷೆ*ಯ ಮಾಡಿ ತೋರಿದ ನಿಃಕಳಂಕ ಮಲ್ಲಿಕಾರ್ಜುನಾ, ನಿಮ್ಮ ಶರಣರ ಕಂಡು, ಪರಮಸುಖಿಯಾಗಿರ್ದೆನು.
--------------
ಮೋಳಿಗೆ ಮಾರಯ್ಯ
ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು. ಶ್ರೋತ್ರನಾಶದಲ್ಲಿ ಜಯಸ್ವರದ ಪಾಡಿದಂತಾಯಿತ್ತು. [ಬೆಳ್ಳ], ಹಣ್ಣಿಂಗೆ ತಾಳಿದ ದೃ[ಷ್ಟದಂ] ತಾಯಿತ್ತು. ನಾ ಬಂದ ಲೀಲೆಯನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ವಿಶ್ವಾಸದಿಂದ ನಿನ್ನ ನೋಡಿಹೆನೆಂದಡೆ, ನೀ ವಿಶ್ವಾಸಹೀನ. ನಿನ್ನ ವಿಶ್ವಾಸ ಎನ್ನಲ್ಲಿ ಕರಿಗೊಂಡು, ಎನ್ನ ಅದೃಢ, ನಿಮ್ಮ ಅದೃಢವಾಗಿ ನಿಂದಲ್ಲಿ, ಲಿಂಗ ಭಕ್ತ, ಭಕ್ತಲಿಂಗವೆಂಬ ಶ್ರುತಿ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು. ದಿಟಪುಟವನರಿದಡೂ ಗುರು ಕೊಟ್ಟ ನಿಟಿಲಲೋಚನನ ಘಟಿಸಬೇಕು. ಭಿತ್ತಿಯ ಮೇಲೆ ಚಿತ್ತಾರ ಒಪ್ಪವಿಟ್ಟಂತಿರಬೇಕು. ಗುರು ಕೊಟ್ಟ ಇಷ್ಟದ ಬೆಂಬಳಿಯ ದೃಷ್ಟವನರಿಯಬೇಕು. ಮೆಟ್ಟಿದುದು ಜಾರಿ, ಹಿಡಿದುದ ಮುರಿದ ಮತ್ತೆ, ಎರಡುಗೆಟ್ಟವಂಗೆ ಇನ್ನೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು. ಎನಗೆ ಲಿಂಗವಾಗಿ ಬಂದು, ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು. ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದ. ಭಕ್ತಿ ಜ್ಞಾನ ವೈರಾಗ್ಯವ ತುಂಬಿ, ಪಾದೋದಕ ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು. ಆ ಬಸವಣ್ಣನ ಶ್ರೀಪಾದವನರ್ಚಿಸಿ, ಪೂಜಿಸಿ, ನಮೋ ನಮೋ ಎಂದು ಸುಖಿಯಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ಅರಿವು ಮರಹು ಬಸವಣ್ಣಂಗರ್ಪಿತ. ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತ. ಎನ್ನ ಭಾವ ನಿರ್ಭಾವ ಬಸವಣ್ಣಂಗರ್ಪಿತ. ಎನ್ನ ಅಂತರಂಗ ಬಹಿರಂಗ ಬಸವಣ್ಣಂಗರ್ಪಿತ. ನಾ ನೀನೆಂಬುದು ಬಸವಣ್ಣಂಗರ್ಪಿತ. ಇಂತು ಎನ್ನನೆ ಬಸವಣ್ಣಂಗೆ ನಿಷೇಧಿಸಿ, ಆವ ಅವಲಂಬವು ಇಲ್ಲದೆ, ನಿರಾಲಂಬದಲ್ಲಿ ನಿಜನಿವಾಸಿಯಾಗಿರ್ದೆನು ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ಚಿತ್ತಕ್ಕೆ ನಕಾರವಾದನಯ್ಯಾ ಬಸವಣ್ಣನು. ಎನ್ನ ಬುದ್ಧಿಗೆ ಮಕಾರವಾದನಯ್ಯಾ ಬಸವಣ್ಣನು. ಎನ್ನ ಅಹಂಕಾರಕ್ಕೆ ಶಿಕಾರವಾದನಯ್ಯಾ ಬಸವಣ್ಣನು. ಎನ್ನ ಮನಕ್ಕೆ ವಕಾರವಾದನಯ್ಯಾ ಬಸವಣ್ಣನು. ಎನ್ನ ಜ್ಞಾನಕ್ಕೆ ಯಕಾರವಾದನಯ್ಯಾ ಬಸವಣ್ಣನು. ಎನ್ನ ಮತಿಗೆ ಓಂಕಾರವಾದನಯ್ಯಾ ಬಸವಣ್ಣನು. ಎನ್ನ ನಾದಕ್ಕೆ ಆಕಾರÀವಾದನಯ್ಯಾ ಬಸವಣ್ಣನು. ಎನ್ನ ಬಿಂದುವಿಗೆ ಉಕಾರವಾದನಯ್ಯಾ ಬಸವಣ್ಣನು. ಎನ್ನ ಕಳೆಗೆ ಮಕಾರವಾದನಯ್ಯಾ ಬಸವಣ್ಣನು. ಎನ್ನ ಭವವ ಕೊಂದೆಹೆನೆಂದು ಬಕಾರವಾದನಯ್ಯಾ ಬಸವಣ್ಣನು. ಎನ್ನ ಸಕಲಾಸೆಯ ಕೊಂದೆಹೆನೆಂದು ಸಕಾರವಾದನಯ್ಯಾ ಬಸವಣ್ಣನು. ಎನ್ನ ವಿಕಾರವ ಕೊಂದೆಹೆನೆಂದು ವಕಾರವಾದನಯ್ಯಾ ಬಸವಣ್ಣನು. ಎನ್ನ ಭಕ್ತಿಗೆ ಬಕಾರವಾದನಯ್ಯಾ ಬಸವಣ್ಣನು. ಎನ್ನ ಶಕ್ತಿಗೆ ಸಕಾರವಾದನಯ್ಯಾ ಬಸವಣ್ಣನು. ಎನ್ನ ವಚಸ್ಸಿಂಗೆ ವಕಾರವಾದನಯ್ಯಾ ಬಸವಣ್ಣನು. ಇಂತಪ್ಪ ಮಹಾಪ್ರಣಮಂಗಳೇ ಬಸವಣ್ಣನಾಗಿ, ಬಸವಣ್ಣನೇ ಮಹಾಪ್ರಣಮಂಗಳಾಗಿ, ತಮ್ಮ ಮಠಕ್ಕೆ ತಾವೇ ಬಂದು, ಭಕ್ತಿ ವಸ್ತುವನಿತ್ತಡೆ, ನಾನದ ನಿಃಕಳಂಕ ಮಲ್ಲಿಕಾರ್ಜುನನ ಶರಣರಿಗಿತ್ತು ಸುಖಿಯಾದೆನು.
--------------
ಮೋಳಿಗೆ ಮಾರಯ್ಯ
ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಕಂಗಳ ಮನೆಯ ಮಾಡಿಕೊಂಡಪ್ಪ ನಿತ್ಯದ ಬೆಳಗೆ. ಎನ್ನ ಧಾನ್ಯದೊಳಗಣ ದೃಢವೆ, ಎನ್ನ ಸುಖದೊಳಗಣ ಸುಗ್ಗಿಯೆ. ನಿಃಕಳಂಕ ಮಲ್ಲಿಕಾರ್ಜುನಾ. ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮೋಳಿಗೆ ಮಾರಯ್ಯ