ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಯುವ ಹಿಡಿದು, ದಂಡವ ಕೊಂಡು, ಸಾವರ ಹಿಡಿದು, ಸಂಕಲೆಯನಿಕ್ಕಿ, ಈ ವಿದ್ಥಿಯಲ್ಲಿ ಸಯಸಗೊಳ್ಳದೆ, ಭಾವವಾಡಿದಂತೆ ಭ್ರಮೆಗೊಳಗಾಗದೆ, ಮತ್ತಿವನೇನನೂ ಎನ್ನದಿರ್ಪುದೆ, ಸರ್ವಜ್ಞಾನದೊಳಗು. ಆ ನಿಜವಸ್ತು, ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ, [ಅ]ದ ಗಾರುಮಾಡಿ ಹೊಯ್ವರೆ ಮಿಡಿಯನು? ಮಾರಾರಿಯ ಶರಣರು ಮೀರಿ ಒಂದು ನುಡಿದಡೆ, ದೂರು ಮಾಡುವರೆ ? ನೀರರದ ಅಡಿಯೊಳಗಾದವನ ಸೂರೆಗೊಂಬವರುಂಟೆ? [ಲೇಸ] ತೋರುವರಯ್ಯಾ [ಐ]ದರ ಬೇಗೆಯಲಿ ಬೆಂದು ಗಾರಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಿರಳವಿಲ್ಲದ ಮಣಿಗೆ ದಾರದ ಹಂಗೇಕೆ ? ನಿರವಯಾಂಗಗೆ ಪರಿಭ್ರಮಣವೇತಕ್ಕೆ ? ನಿರಾಳದಲ್ಲಿ ನಿಂದ ಸುಖಿಗೆ ವಿರಾಳದಲ್ಲಿ ಸುತ್ತಿ ತಿರುಹಲೇಕೆ ? ಸಂಸಾರದ ಸುಖದುಃಖಮಂ ಮರೆದು, ಅಂಗ ಮೊದಲು, ಮನವೆ ಕಡೆಯಾಗಿ ಮನುಜರ ಹಂಗ ಬಿಟ್ಟವಂಗೆ ಮನೆಮನೆಯ ಹೊಗಲೇಕೆ ? ತಲೆಹುಳಿತ ದನವಿನಂತೆ ಗಳುವಿನಾಸೆಗಾಗಿ ಇವರಿಗೆ ಲಿಂಗದ ಅನುವಿನ ಆಸೆಯೇಕೆ ? ಘನಮಹಿಮಾ, ಅಲಸಿದೆ ಅಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ. ಇಲ್ಲ ಎಂದಡೆ ಸಮಯಕ್ಕೆ ದೂರ, ಉಂಟೆಂದಡೆ ಜ್ಞಾನಕ್ಕೆ ದೂರ. ಉಭಯವ ಸಂಪಾದಿಸುವದಕ್ಕೆ ಎನಗೆ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದಂಗಳ ಉತ್ತರದಲ್ಲಿ, ಶಾಸ್ತ್ರದ ಮಧ್ಯದಲ್ಲಿ, ಪುರಾಣದ ಮೊದಲಿನಲ್ಲಿ, ಪೂರ್ವ ಆದಿಯ ಇಷ್ಟದಲ್ಲಿ, ಮಧ್ಯಭಾವ ಆತ್ಮನಲ್ಲಿ, ಉತ್ತರ ತುತ್ತತುದಿಯಲ್ಲಿ, ಮೆಟ್ಟಿ ನೋಡಲಾಗಿ ಹಿಂದೆಸೆಯಲ್ಲಿ ಕಂಡೆ, ಸ್ಥೂಲಸೂಕ್ಷ್ಮಕಾರಣ ಈ ಮೂರ. ಮುಂದೆಸೆಯಲ್ಲಿ ಕಂಡೆ ಭೂತಭವಿಷ್ಯದ್ವರ್ತಮಾನವ. ಹಿಂದೆಸೆ ಮುಂದೆಸೆಯ ಬಿಟ್ಟು, ಊಧ್ರ್ವಾಂಗ ಅಭಿಮುಖವಾಗಿ ನೋಡಲಾಗಿ ಮಹದಾಕಾಶವ ಕಂಡೆ. ಮಹದಾಕಾಶದ ಮಧ್ಯದಲ್ಲಿ ಒಂದು ನಿಃಕಲತತ್ವ. ಆ ನಿಃಕಲತತ್ವದ ರೂಪು, ಆರೋಹ ಅವರೋಹವಾಗಿ ಎಡೆಯಾಡುತ್ತಿಪ್ಪುದು. ಅದು ಅಂಗಕ್ಕೆ ಲಿಂಗವಾಗಿ, ಆತ್ಮಂಗೆ ಅರಿವಾಗಿ, ಹಿಂದು ಮುಂದು ಒಂದೆಯಾಗಿಪ್ಪ ನಿಜ ನಿಂದ ನಿಲವು. ನಿಃಕಳಂಕ ಮಲ್ಲಿಕಾರ್ಜುನನು ದ್ವಂದ್ವವಳಿದ ನಿರಂಗ.
--------------
ಮೋಳಿಗೆ ಮಾರಯ್ಯ
ವೇಷಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆಯಿಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೆ ಸುಖಿ, ನಿಧಾನಿಸಿ ಕೂಡಿದಲ್ಲಿಯೆ ತೃಪ್ತ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ. ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ವರ್ಮವನೆತ್ತಿ ನುಡಿವಲ್ಲಿ ವರ್ಮಿಗನಲ್ಲದೆ ಕರ್ಮಕ್ಕೊಳಗಲ್ಲ. ತನ್ನ ಭಾಷೆಗೆ ತಾ ತಪ್ಪಿದಲ್ಲಿ ಅನ್ಯರಯೇರೇಕೆ ? ಅದು ತನ್ನ ತಾ ತಿಳಿವ ಯುಕ್ತಿ. ನಿಃಕಳಂಕ ಮಲ್ಲಿಕಾರ್ಜುನದೇವರಲ್ಲಿ ಮಿಥ್ಯವಿಲ್ಲದ ಸದ್ಭಕ್ತಿ.
--------------
ಮೋಳಿಗೆ ಮಾರಯ್ಯ
ವಸ್ತುವಿಪ್ಪ ಭೇದವೆಂತೆಂದಡೆ: ಪರ್ಣದೊಳಗಿಪ್ಪ ಪಚ್ಚೆಯಂತೆ, ಹೊನ್ನಿನೊಳಗಿಪ್ಪ ಬಣ್ಣದಂತೆ, ಶುಕ್ತಿಯೊಳಗಿಪ್ಪ ಅಪ್ಪುವಿನಂತೆ, ಅದು ಒಪ್ಪವಲ್ಲದೆ ನೆಪ್ಪಿಂಗೆ ಬಾರದು. ಆ ವಸ್ತುವನಪ್ಪುವರನಾರನೂ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಿಕಾರಿಗೇಕೊ ವ್ರತ ನೇಮ ? ವಿಶ್ವಾಸಹೀನಂಗೇಕೊ ಭಕ್ತಿಕೃತ್ಯ ? ವಂದಿಸಿ ನಿಂದಿಸುವಗೇಕೊ ಜಂಗಮಪೂಜೆ ? ಲಿಂಗವೆಂದು ಅರ್ಚಿಸಿ, ಸಂಗವನರಿಯದ ಲಿಂಗಿಗಳಿಗೆಲ್ಲಿಯದೊ ಶಿವಲಿಂಗಪೂಜೆ? ಆರಂಗವ ತೊರೆಯದೆ, ಮೂರಂಗವ ಮೀರದೆ, ತೋರಿಪ್ಪ [ಗುಣವ] ಜರೆಯದೆ, ಅರುವತ್ತುನಾಲ್ಕು ನೇಮವನರಿವ ಪರಿ ಇನ್ನೆಂತೊ ? ಇಂತೀ ಗುಣವನರಿಯರಾಗಿ ಶೀಲವಂತರಿಗೆ ನೇಮವಿಲ್ಲ. ಪಾತಕಂಗೆ ಭಕ್ತಿಯಿಲ್ಲ, ಪೂಜೆವಂತಂಗೆ ಲಿಂಗವಿಲ್ಲ. ತ್ರಿವಿಧವ ಮರೆಯದವಂಗೆ ಜಂಗಮವಿಲ್ಲ. ಇಂತೀ ಕಾಯಜೀವದ ಬೆಸುಗೆಯ ಬಿನ್ನಾಣವನರಿಯದವಂಗೆ ಪ್ರಾಣಲಿಂಗವಿಲ್ಲ. ಇಂತಿವರಂಗ ಒಂದೂ ಇಲ್ಲದವಂಗೆ ನೀನೂ ನಾನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಿರಕ್ತಿಯ ಹೇಳಿ ಹರಿದಾಡುವ ಹಿರಿಯರೆಲ್ಲರೂ ಕರಸ್ಥಲದಲ್ಲಿ ಲಿಂಗವ ಹಿಡಿದು, ಎರವಿನ ದ್ರವ್ಯ ಸ್ಥಿರವಲ್ಲವೆಂದು ಹೇಳಿ, ಅವರು ಕೊಡುವುದಕ್ಕೆ ಮೊದಲೆ, ತಾವು ಕೈಯಾಂತ ಬರುಕಪಿಗಳ ನೋಡಿ ಬೆರಗಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವರ್ತ[ನ] ಶುದ್ಧವಾದಲ್ಲಿ ಭಕ್ತಸ್ಥಲವಾಯಿತ್ತು. ಕ್ರೀಭಾವ ಶುದ್ಧವಾದಲ್ಲಿ ಮಾಹೇಶ್ವರಸ್ಥಲವಾಯಿತ್ತು. ನಡೆನುಡಿ ಶುದ್ಧವಾಗಲಾಗಿ ಪ್ರಸಾದಿಸ್ಥಲವಾಯಿತ್ತು. ಕಾಯ ಜೀವದ ಭೇದವನರಿಯಲಿಕ್ಕೆ ಪ್ರಾಣಲಿಂಗಿಸ್ಥಲವಾಯಿತ್ತು. ಸಕಲವನರಿದು ಹಿಡಿದು ಬಿಡುವಲ್ಲಿ ಶರಣಸ್ಥಲವಾಯಿತ್ತು. ಇಂತೀ ಐದರಲ್ಲಿ ಏರಿ ಭೇದವಿಲ್ಲದೆ ನಿರಾಕರಿಸಿ ನಿಂದಲ್ಲಿ ಐಕ್ಯಸ್ಥಲವಾಯಿತ್ತು. ಇಂತೀ ಆರುಸ್ಥಲವನರಿದು, ಮತ್ತಿವರೊಳಗಾದ ನಾನಾ ಸ್ಥಲಂಗಳ ತಿಳಿದು ನಿಂದ ಸಂಗನಬಸವಣ್ಣಂಗೆ, ಚೆನ್ನಬಸವಣ್ಣಂಗೆ, ಪ್ರಭು, ಮಡಿವಾಳಯ್ಯಂಗೆ, ನಮೋ ನಮೋ ಎನುತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ. ಲಿಂಗಕ್ಕೆ ಜಂಗಮ ವಿಶೇಷವೆಂದು, ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು, ಪ್ರಸಾದದಿಂದ ಸಮರ್ಪಣವ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಲಿಂಗ ಪ್ರಾಣ ಜಂಗಮವೆಂದು ಮಾಡಿ, ಮತ್ತಾ ಜಂಗಮ ಮನೆಗೆ ಬಂದಡೆ ಸಂದೇಹವ ಮಾಡಲೇಕೆ? ತನ್ನ ಪ್ರಾಣ ಲಿಂಗವೆಂದರಿದು, ಲಿಂಗದ ಪ್ರಾಣ ಜಂಗಮವೆಂದರಿದು, ಉಭಯಪ್ರಾಣ ತತ್ಪ್ರಾಣವಾದ ಮತ್ತೆ, ಭಕ್ತಿಗೆ ಅವಿಶ್ವಾಸವಾಗಲೇಕೆ ? ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು, ಮಣ್ಣ ಬೇಡಿದಡೆ ಬದ್ಧನೆಂದು, ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ, ಭಕ್ತಿಯ ವಾಸಿಗೆ ಹೋರಲೇಕೆ ? ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ. ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಿಶ್ವಾಸದ ಹರವರಿಯಲ್ಲಿ ವಿಶ್ವಮಯ ಸ್ಥಲಕುಳಂಗಳಾದವು. ಅದು ನಾನಾ ತಟಾಕಂಗಳಲ್ಲಿ ತೋರುವ ದಿನಕರನಂತೆ, ಹಲವುಮಯ ತೋರುವುದಲ್ಲಿಗಲ್ಲಿಗೆ ಒಲವರವಿಲ್ಲದೆ. ಆ ವರುಣನ ನೆಲೆ ಒಂದೆ ಹಲವು ಜಗಕ್ಕೆ ಹೊಲಬಾದಂತೆ ಸ್ಥಲಜ್ಞನಾದೆಯಲ್ಲಾ. ಸ್ಥಲಲೇಪ ಒಂದೆಂದರಿತಲ್ಲಿ, ಏಕಸ್ಥಲಮೂರ್ತಿ ನೀನೆ. ಏಕವು ಸಾಕೆಂದಲ್ಲಿ ನಿರಾಕಾರನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದವ ಕಲಿತು, ಶಾಸ್ತ್ರವನೋದಿ, ನಾನಾ ಪುರಾಣಂಗಳಲ್ಲಿ ಪರಿಣತೆಯಾದೆವೆಂದು ಶ್ರುತಿ ಸ್ಮøತಿಗಳಲ್ಲಿ ಪರತತ್ವವ ನೋಡಿ ಕಂಡೆಹೆವೆಂದು ಹೇಳುತ್ತಿರ್ಪ ಹಿರಿಯರೆಲ್ಲರೂ ಇಕ್ಕುವ ದಾತನ ಬಾಗಿಲ ಕಾಯ್ದು, ಚಿಕ್ಕಮಕ್ಕಳಾದರು. ದೃಷ್ಟವ ಬೋಧಿಸುವ ಹಿರಿಯರೆಲ್ಲರೂ ಕೆಟ್ಟರಲ್ಲಾ, ಉತ್ತರದ ಬಲೆಗೆ ಸಿಕ್ಕಿದ ಮೂಷಕನಂತೆ. ಇವರ ದೃಷ್ಟವ ಕಂಡು ಮತ್ತೆ ಹಿರಿಯರೆಂದು ಹೋರುತ್ತಿರ್ಪ ಮಿಟ್ಟೆಯ ಭಂಡರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಾಯುವಿನ ಬೆಂಬಳಿಯ ಗಂಧ, ಅದಾವ ಠಾವಿನಲ್ಲಿ ನಿಲುವುದು ? ವಾರಿಯ ಬೆಂಬಳಿಯ ತೆರೆ, ಅದಾವ ಠಾವಿನಲ್ಲಿ ಸೇರಿ ನಿಲುವುದು ? ಈ ಭೇದವನರಿದು ತಿಳಿದಲ್ಲಿ, ಅದು ಸ್ವಾನುಭಾವಸಿದ್ಧ ಐಕ್ಯಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ, ಅದು ತನ್ನ ನೆಲೆಯೋ? ಆತ್ಮನ ಭೇದವೋ? ಎಂಬುದ ತಾನರಿತಲ್ಲಿ, ಇಷ್ಟಲಿಂಗಕ್ಕೆ ದೃಷ್ಟವ ಕೊಟ್ಟು, ಆತ್ಮಲಿಂಗಕ್ಕೆ ತೃಪ್ತಿಯ ಕೊಟ್ಟು, ನಿಶ್ಚಯಿಸಿಕೊಂಡೆಹೆನೆಂಬುದು ಅದೇನು ಹೇಳಾ. ಉಭಯಭಿನ್ನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ ಎಂಬುದನರಿದಾಗವೆ ಭಕ್ತಸ್ಥಲ. ಮುತ್ತು ಜಲವ ನುಂಗಿತ್ತೋ, ಜಲವು ಮುತ್ತು ನುಂಗಿತ್ತೋ ಎಂಬುದನರಿದಾಗವೆ ಮಾಹೇಶ್ವರಸ್ಥಲ. ಪ್ರಭೆ ಪಾಷಾಣವ ನುಂಗಿತ್ತೋ, ಪಾಷಾಣ ಪ್ರಭೆಯ ನುಂಗಿತ್ತೋ ಎಂಬುದನರಿದಾಗವೆ ಪ್ರಸಾದಿಸ್ಥಲ. ವಹ್ನಿ ಕಾಷ*ವ ನುಂಗಿತ್ತೋ, ಕಾಷ* ವಹ್ನಿಯ ನುಂಗಿತ್ತೋ ಎಂಬುದನರಿದಾಗವೆ ಪ್ರಾಣಲಿಂಗಿಸ್ಥಲ. ಸಾರ ಬಲಿದು ಶರಧಿಯ ಕೂಡಿದಾಗವೆ ಶರಣಸ್ಥಲ. ವಾರಿ ಬಲಿದು ವಾರಿಧಿಯಂತಾದಾಗವೆ ಐಕ್ಯಸ್ಥಲ. ಹೀಂಗಲ್ಲದೆ ಷಟ್ಸ್ಥಲಬ್ರಹ್ಮಿಗಳೆಂತಾದಿರಣ್ಣಾ ? ಕರೆಯದೆ ಪಶುವಿಂಗೆ ತೃಣವ ಘಳಿಸುವನಂತೆ, ಒಲ್ಲದ ಸತಿಯರಲ್ಲಿ ರತಿಕೂಟವ ಬಯಸುವನಂತೆ, ಗೆಲ್ಲತನಕ್ಕೆ ಹೋರುವರಲ್ಲಿ ಬಲ್ಲತನವನರಸುವನಂತೆ, ಕೊಲ್ಲಿಯಾವಿನಲ್ಲಿ ಸ್ವಲೀಲೆಯನರಸುವನಂತೆ, ಬಲಿದ ವಂಶದಲ್ಲಿ ಕಳಿಲೆಯನರಸುವನಂತೆ, ಬರಿಮಾತಿಂಗೆಡೆಯಾದುದುಂಟೆ ? ಬಯಲ ಕೊಂಡ ಘನಕ್ಕೆ ಅವಧಿಗೊಡಲಿಲ್ಲ. ಉರಿಕೊಂಡ ಕರ್ಪುರಕ್ಕೆ ರೂಪಿಂಗೆಡೆಯಿಲ್ಲ. ಬಯಲ ಬಡಿವಡೆವಂಗೆ ಕೈಗೆ ಮೃದುವಿಲ್ಲ. ಮನ ಮಹದಲ್ಲಿ ನಿಂದವಂಗೆ ಆರನೆಣಿಸಲಿಲ್ಲ, ಮೂರ ಮುಟ್ಟಲಿಲ್ಲ. ಮೀರಿದ ತೋರಿದ ಘನ ತನ್ನಲ್ಲಿ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದಕ್ಕೆ ಹೋರುವಡೆ ವೇದಕ್ಕತೀತ, ಶಾಸ್ತ್ರಕ್ಕೆ ಹೋರುವಡೆ ಬಳಸಿನವನಲ್ಲ. ಪುರಾಣದಲ್ಲಿ ಹೋರುವಡೆ ರೂಹಿನವನಲ್ಲ. ಅರ್ಚಿಸಿ ಪೂಜಿಸಿ ಕಾಬುದಕ್ಕೆ ಹಕ್ಕಿ ಹಂಗನ ನಿಮಿತ್ತವೆ ? ಈ ಸಚ್ಚಿದಾನಂದನ ಸಂಗ ಬಚ್ಚಬಯಲು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಾದ್ಯವೊಂದರಲ್ಲಿ ಬಹುಸಂಚುಗಳ ಮುಟ್ಟಿ ತೋರುವುದು ಒಂದೋ, ಹಲವೋ ? ವೇಣು ಮುಹುರಿಗಳಲ್ಲಿ ಮೂವತ್ತೆರಡು ರಾಗಮಿಶ್ರಂಗಳ ಅರುವತ್ತುನಾಲ್ಕರಲ್ಲಿ ಕೂಡಿ ನುಡಿವುದು ಒಂದೋ, ಎರಡೋ ? ಅದರಂತೆ ಪರಿ ಭಿನ್ನವಾಗಿ, ಸ್ವಸ್ಥಾನಂಗಳಲ್ಲಿ ಮುಟ್ಟಿ, ವೇಧಿಸಿಕೊಂಬ ವಸ್ತು ಒಂದಾದಲ್ಲಿ, ಅದು ಖಂಡನೆಯ ಪತ್ರದ ಚಂಡಿಕಾ ಕಿರಣದಂತೆ. ಸಂಗವನರಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ಭಿನ್ನರೂಪನಲ್ಲ.
--------------
ಮೋಳಿಗೆ ಮಾರಯ್ಯ
ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ. ತನುವಿಂಗೆ ವ್ರತವೋ, ಮನಕ್ಕೆ ವ್ರತವೋ ? ಮಡಕೆಗೆ ವ್ರತವೆಂದು ಸಡಗರಿಸುತ್ತಿರ್ಪ ಗತಿಹೀನರ ಕಂಡು ನಾಚಿತ್ತೆನ್ನ ಮನ. ದಿಟದ ವ್ರತವ ಹೇಳಿಹೆ ಕೇಳಿರಣ್ಣಾ. ಹುಸಿ ಕಳವು ಪಾರದ್ವಾರ ಕೊಲೆ ಅತಿಚಾಂಡಾಲಮಂ ಬಿಟ್ಟು, ಪರದ್ರವ್ಯಕ್ಕೆ ಕೈಯಾನದೆ, ಪರರ ಬಾಗಿಲಲ್ಲಿ ನಿಂದು, ನೆರೆ ಹೊಲಬುಗೆಟ್ಟು, ಅರಿವುಳ್ಳವರು ನಾವೆಂದು ಬರಿದೆ ಹಲಬುತ್ತಿರ್ಪರ ಮಾತಿಗೆ ಒಡಲಪ್ಪುದೆ ಶೀಲ್ಞೂ? ತನ್ನ ಸುಬುದ್ಧಿಯಿಂದ, ಸುಕಾಯಕದಿಂದ, ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ, ಚಿತ್ತಶುದ್ಧನಾಗಿ ಅಚ್ಚೊತ್ತಿದಂತಿದ್ದುದೆ ಶೀಲವ್ರತ. ಹಾಂಗಲ್ಲದೆ ಜಾತಿಗಾರನ ಕೈಯ ದೀಹದಂತೆ, ಬಾಲೆಯರ ಮನದ ಸೋಲುವೆಯಂತೆ, ಇಂತಿವರಾಳವಾಡಿ ಸಿಕ್ಕಿಸುವ, ಸೋಲುಗಾರರಿಗೆಲ್ಲಿಯದೊ ಸತ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ವಸ್ತುವ ಕುರಿತು ಇಷ್ಟವ ನೋಡಬೇಕಲ್ಲದೆ, ಇಷ್ಟವ ಕುರಿತು ವಸ್ತುವ ನೋಡಬಹುದೆ? ಹಿಡಿತೆಯ ಹಿಡಿದು ಇರಿಯಬೇಕಲ್ಲದೆ, ಮೊನೆಯ ಹಿಡಿದು ಇರಿದವರುಂಟೆ? ನೆನಹ ರೂಪಿನಲ್ಲಿ ಅನುಕರಿಸಬಹುದಲ್ಲದೆ, ರೂಪ ನೆನಹಿನಲ್ಲಿ ಅನುಕರಿಸಬಹುದೆ? ತಿಟ್ಟವ ಲಕ್ಷಿಸುವುದು ಲೆಕ್ಕಣಿಕೆಯಿಲ್ಲದೆ, ಆ ತಿಟ್ಟ ಲೆಕ್ಕಣಿಕೆಯ ಲಕ್ಷಿಸಬಹುದೆ? ಇಂತೀ ದ್ವಂದ್ವವನರಿದು, ಉಭಯದ ಸಂದಿನ ಬೆಸುಗೆ ಒಂದೆಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ