ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರಾಡಿದಂತಾಡದಿರ್ದಡೆ ದೂರಿಹರೆನ್ನನು. ನಾಡಾಡಿದಂತಾಡದಿರ್ದಡೆ ಬೈದಹರೆನ್ನನು. ಕೆಸರೊಳಗೆ ಮುಳುಗಿ ಹೊಸಸೀರೆಯೆಂದಡೆ, ಅದರ [ಪಾಶ] ಕುಸುಕಿರಿ [ಯದೆ] ಮಾಣ್ಬುದೆ? ಈ ದೂಷಣೆ ಇನ್ನೇಸು ಕಾಲ? ಭವಪಾಶರಹಿತ ಓಸರಿಸುವಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ. [ಅದು] ಸಂದಿಗೆ ಸಾವಿರ ರೂಪು, ಕೊಂಬಿಗೆ ಹಿಂಗದ ವೆಜ್ಜ, ಅದರಂಗದ ಕಂಗಳು ಕಪ್ಪು. ಅದ ಕೊಂದವ[ರ] ತಂದು ಕೂಡಿದೆ ನನ್ನಂಗಳದಲ್ಲಿ. ಆ ಅಂಗಳ, ಅವರ ತಿಂದು ನುಂಗಿತ್ತು. ಮೂರು ಭುವನವ ನುಂಗಿದವರ ಕಂಡು, ಹಿಂಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೊಳಗಣ ಉಡು ಕೇರಿಯ ನುಂಗಿತ್ತು. ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತಹತಹತ್ತು. ಸಾರಬಂದ ಧೀರನ ಬಾರಿಕ ಕೊಂದ. ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು. ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ. ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು. ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ, ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ, ಹಿರಿಯರಸನ ಕೈಸೆರೆಯ ಬಿಡಿಸಿ, ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದ ಕೆಟ್ಟ ಅರಸು. ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ. ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ, ಅಲಗಿನ ಹಂಗೇಕೆ? ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರ ಗುಬ್ಬಿಯೂ ಕಾಡಗುಬ್ಬಿಯೂ ಕೂಡಿಕೊಡು, ಒಣಗಿಲ ಮೇವ ತೆರನಂತೆ, ಭಕ್ತ ಮಾಡುವ ಠಾವಿನಲ್ಲಿ ಗುರುಚರ ಕರ್ತೃಗಳೆಂದು ಪೂಜಿಸಿಕೊಂಡು, ತಮ್ಮ ಆತ್ಮತೇಜರ ತಥ್ಯಮಿಥ್ಯಕ್ಕೆ ಕಡಿದಾಡುತ್ತ, ಆಸನ ಪಙÂ್ತ, ವಾಹನ ವಿಶೇಷ ಭೋಗಂಗಳಿಗೆ ಕುಕ್ಕನೆ ಕುದಿದು, ಬಿಕ್ಕನೆ ಬಿರಿವ ದುರ್ಮತ್ತರಿಗೆ ವಿರಕ್ತಿಯ ಮಾತಿನ ನಿಹಿತ ಇಂತೀ ಹೊತ್ತು ವಿಸ್ತರಿಸಲಾರದೆ, ಭಕ್ತರಿಚ್ಛೆವನರಿಯದೆ ತನ್ನ ನಿತ್ಯಾನಿತ್ಯವ ತಿಳಿಯಲರಿಯದೆ, ತನ್ನ ಪ್ರಕೃತಿಮತ್ಸರಗುಣದಿಂದ ಭಕ್ತರಂತಿಂತೆಂದು ನುಡಿವ, ತಟ್ಟುವ ಭಂಡನ, ಇಂತಿವರ ಕಂಡು ಅರ್ಚಿಸಿ ಪೂಜಿಸಿ ಶರಣೆಂಬ ಮಿಟ್ಟೆಯ ಭಂಡನ, ಈ ಉಭಯದ ಗುಣವನೆತ್ತಲಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರ ಮುಂದೊಂದು ದೇವರ ಗುಡಿಯ ಕಂಡೆ. ದೇವರಿಲ್ಲದೆ ದೇಗುಲವಿದ್ದಿತ್ತು. ದೇಗುಲದೊಳಗಣ ತಮ್ಮಡಿ ಆರೈದು ನೋಡುತ್ತಿರ್ದ, ತನ್ನೋಗರದೊಡೆಯನ ಕಾಣದೆ. ಇದನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರಿಗೆ ಹೋ[ಹಾಗ] ಓಣಿಯ ಇಕ್ಕೆಲದ ದಾರಿಯಲ್ಲಿ ಕಟ್ಟಿದ ಕಳ್ಳರ ದಂಡೆ. ಅವರ ವರ್ಣ; ಒಬ್ಬ ಕಪೋತ, ಒಬ್ಬ ಕೃಷ್ಣ. ಕಪೋತನ ಕಾಲ ಹೊಯ್ದು, ಕೃಷ್ಣನ ಕುತ್ತಿ ಕೆಡಹಿ, ಮತ್ತೆ ಹೋಗುತ್ತಿರಲಾಗಿ, ಓಣಿಯ ತಪ್ಪಲ ತಲಹದಲ್ಲಿ ಕಟ್ಟಿದ್ದನೊಬ್ಬ ಕಳ್ಳ. ಅವನ ಕಂಡು ಕೂಗುವಡೆ ಬಾಯಿಲ್ಲ, ಹೊಯ್ವಡೆ ಕೈದಿಲ್ಲ. ಮೀರಿ ಹೋದಹೆನೆಂದಡೆ ಹಾದಿಗೆ ಹೊಲಬಿಲ್ಲ. ಇದು ಅವನ ಕೌತುಕವೋ? ಎನ್ನ ಭಾವದ ಭ್ರಮೆಯೋ? ಮುಂದಣವನ ಸುದ್ದಿ [ಯ] ಹಿಂಗಿ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೊಗಿದ್ದು ಊರು ಸುಡಬೇಕಲ್ಲದೆ, ಊರ ಹೊರಗಿದ್ದು ಸುಡಬಹುದೆ ಅಯ್ಯಾ? ಕ್ರೀಯೊಳಗದ್ದು ಕ್ರೀಯನರಿಯಬೇಕಲ್ಲದೆ, ಕ್ರೀ ಹೊರಗಾಗಿ ಜ್ಞಾನವುಂಟೆ ಅಯ್ಯಾ? [ಕೈದಟ್ಟುವ ಠಾವಿನಲ್ಲಿ ಕಾಳವಗಲ್ಲದೆ] ಕೈದಟ್ಟದ ಠಾವಿನಲ್ಲಿ ಕಾಳಗವುಂಟೆ ಅಯ್ಯಾ? ನಾ ನೀನಾದಡೆ ದೇವ, ನೀ ನಾನಾದಡೆ ದೇವ. ಉಭಯವ ವೇದಿಸಿದಲ್ಲಿ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ. ನೋಟದ ಸುಖವ ಕಲಿತ ಮತ್ತೆ ಬೇಟಕ್ಕೆ ದೃಷ್ಟ. ಬೇಟದ ಸುಖವ ಕಲಿತ ಮತ್ತೆ ಕೂಟಕ್ಕೆ ದೃಷ್ಟ. ಕೂಟದ ಸುಖವ ಕಲಿತ ಮತ್ತೆ ಜಗದಾಟಕ್ಕೆ ದೃಷ್ಟ. ಇಷ್ಟನರಿಯದೆ ನಿರ್ಜಾತನೆನಲೇಕೆ. ಇಷ್ಟಕ್ಕಂಜಿ ಈಸನ ಮರೆಯ ವೇಷವ ಬಿಟ್ಟು, ಎನ್ನಗಿನ್ನೇಸು ಕಾಲ ಆಸೆಯೆಂಬ ಕೋಳವೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ