ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ ಫಲವಿಲ್ಲದ ಹಣ್ಣಿನ ರುಚಿಯ ತಲೆಯೆ ಬಾಯಾಗುಣಬಲ್ಲರೆ, ನೆಲ ಬೆಂದಿತ್ತು, ತಲೆ ಸತ್ತಿತ್ತು. ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಏನನೋದಿದರೇನಯ್ಯಾ? ಏನಕೇಳಿದರೇನಯ್ಯಾ? ಏನಹಾಡಿದರೇನಯ್ಯಾ? `ಓದಿ ಮರುಳಾದೆಯೋ ಕೂಚಿಭಟ್ಟ'ರೇ! ಎಂದು. ಗಿಣಿಯೋದಿ ತನ್ನ ಹೇಲ ತಾ ತಿಂದಂತೆ, ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ ಸಿದ್ಧಾಂತ ನಿರ್ಣಯವಿಲ್ಲದೆ, ಮಾತಿಗೆ ಮಾತುಕಲಿತು ನುಡಿಗೆ ನುಡಿಯ ಕಲಿತು ತರ್ಕಮರ್ಕಟರಂತೆ ಹೋರುವ ಬಯಲಸಂಭ್ರಮದ ತರ್ಕಿಗಳ ಕಂಡರೆ, ಮಾಗಿಯ ಕೋಗಿಲೆಯಂತೆ ಮುಖ ಮುನಿಸಾಗಿರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಏನುಯೇನೂ ಇಲ್ಲದ ಠಾವಿನಲ್ಲಿ ನಾನೀನೆಂಬುದು ಇದೇನು ಕಾರಣವೋ?. ಇದು ನಿನ್ನ ವಿನೋದಾರ್ಥಕಾರಣವೆಂಬುದು ಮಾನವರಿಗೆ ತಿಳಿಯಬಾರದು ನೋಡಾ. ತಾ ಹುಟ್ಟಿದಲ್ಲಿಯೆ ಮೂರುಲೋಕ ಹುಟ್ಟಿತ್ತು. ತಾನಳಿದಲ್ಲಿಯೆ ಮೂರುಲೋಕವಳಿಯಿತ್ತು. ನಾ ನೀನೆಂಬುದಳಿದಲ್ಲಿಯೆ ನಿನ್ನ ನೆಲೆ ಸ್ವಯಂಭುವಾಯಿತ್ತು. ಸ್ವಯಂಭುವಳಿದು ಶೂನ್ಯವಾಯಿತ್ತು. ಮೂಲವಸ್ತುವೆಂದು ಬೇರುಂಟೆ ತಾನಲ್ಲದೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಏಳುಪೀಠದೊಳಗೆ ಸಾವಿರದೈವತ್ತೆರಡು ಮನೆ ಮಾಡಿಪ್ಪುದ ಕಂಡೆನಯ್ಯ. ಒಂದೇ ಜ್ಯೋತಿ ಸಾವಿರದೈವತ್ತೆರಡು ಜ್ಯೋತಿಯ ಬೆಳಗುತ್ತಿದೆ ನೋಡಯ್ಯ. ಏಳುಪೀಠದೊಳಗೆ ಏಕಾಕಾರ ಅಖಂಡಪರಿಪೂರ್ಣವಾಗಿಪ್ಪುದಯ್ಯ. ಆ ಪರಿಪೂರ್ಣ ಪರಾಪರವೇ ತಾನೆಂದರಿದು ಸಮರಸವನೆಯ್ದಬಲ್ಲಾತನಲ್ಲದೆ ಶಿವೈಕ್ಯನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು